ದೇಶದ ಜನತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಒಂದಾದ ಚುನಾವಣಾ ಆಯೋಗದ ತಳಪಾಯವನ್ನು ಆತಂಕದ ಆಳಕ್ಕೆ ದುರ್ಬಲಗೊಳಿಸಲಾಗಿದೆ. ಆಯೋಗ ನೇರದಾರಿಗೆ ಸದ್ಯ ಭವಿಷ್ಯದಲ್ಲಿ ಮರಳುವ ಸೂಚನೆಗಳು ಕಾಣುತ್ತಿಲ್ಲ. ಸ್ವತಂತ್ರ ಮತ್ತು ಸ್ವಾಯತ್ತ ಚುನಾವಣಾ ಆಯೋಗ ಕುರಿತು 1919ರ ಜೂನ್ ತಿಂಗಳಲ್ಲಿ ಸಂವಿಧಾನಸಭೆ ಚರ್ಚಿಸಿದ್ದ ಹೊತ್ತು. ಭಾರತದ ಜನತಂತ್ರ ಮತ್ತು ಚುನಾವಣಾ ಆಯೋಗದ ವ್ಯವಹಾರಗಳಲ್ಲಿ ಕಾರ್ಯಾಂಗ ಮೂಗು ತೂರಿಸುವ ವಿರುದ್ಧ ಬಾಬಾಸಾಹೇಬ ಅಂಬೇಡ್ಕರ್ ಎಚ್ಚರಿಕೆ ನೀಡಿದ್ದರು. ಚುನಾವಣಾ ಆಯುಕ್ತರ ನೇಮಕದಲ್ಲಿ ಹಸ್ತಕ್ಷೇಪ ಮಾಡುವ ವಿಶೇಷಾಧಿಕಾರ ಕಾರ್ಯಾಂಗಕ್ಕೆ ಇರಬೇಕೆಂದು ಸಂವಿಧಾನ ನಿರ್ಮಾಪಕರು…

ಡಿ ಉಮಾಪತಿ
ಹಿರಿಯ ಪತ್ರಕರ್ತರು