ಭಾರತ ಕೃಷಿ ಪ್ರಧಾನವಾದ ದೇಶವಾದರೂ ಕೈಗಾರಿಕಾಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದ ಕೈಗಾರಿಕೆಗಳು ಭಾರತ ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸಿವೆ. ಮೈಸೂರನ್ನಾಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಅವರು ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಿದರು. ವಿಶ್ವೇಶ್ವರಯ್ಯನವರ ಘೋಷವಾಕ್ಯ, ‘ಕೈಗಾರಿಕೀಕರಣ ಇಲ್ಲವೇ ನಾಶ’ ಎಂಬುದು ಬಹಳಷ್ಟು ಕೈಗಾರಿಕೆಗಳ ಸ್ಥಾಪನೆಗೆ ನಾಂದಿಯಾಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳು (PSUs) ಸೀಮಿತ ಸಂಖ್ಯೆಯಲ್ಲಿ ಪ್ರಾರಂಭವಾದರೂ ಆರ್ಥಿಕಾಭಿವೃದ್ಧಿಗೆ ತಮ್ಮದೇ…

ಸುರೇಶ್ ಕುಮಾರ್ ಜೈನ್
ಮೈಸೂರು ವಲಯ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಸುರೇಶ್ ಕುಮಾರ್ ಜೈನ್, ಕರ್ನಾಟಕ ಸಣ್ಣ ಕೈಗಾರಿಕಾ ಸಂಘಕ್ಕೆ ಜಂಟಿ ಕಾರ್ಯದರ್ಶಿಯಾಗಿ, ಲಘು ಉದ್ಯೋಗ ಭಾರತಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1975ರಿಂದಲೂ ಸಣ್ಣ ಕೈಗಾರಿಕೋದ್ಯಮ ನಡೆಸುತ್ತಿದ್ದಾರೆ. ಎಂಎಸ್ಎಂಇ ಕೌನ್ಸಿಲ್ಗೆ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ತು) ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ರಾಜ್ಯದ ಬಜೆಟ್ ಮುನ್ನ ಪ್ರಸ್ತಾವನೆಗಳನ್ನು ನಿರಂತರ ಸಲ್ಲಿಸುತ್ತಾ ಬಂದಿದ್ದಾರೆ. ವಿದ್ಯುತ್ ದರ ಪರಿಷ್ಕರಣೆಯಲ್ಲಿ ಕೆಇಆರ್ಸಿ ಮುಂದೆ ನಿರಂತರ ವಾದ, ಅಹವಾಲು ಮಂಡನೆ ಮಾಡುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಕೈಗಾರಿಕಾ ನೀತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಮಾಲಿಕತ್ವದ ಜೈನ್ ಕೈಗಾರಿಕೆಗೆ ಕರ್ನಾಟಕ ಸರ್ಕಾರ 1995ರಲ್ಲಿ ಅತ್ಯುತ್ತಮ ಸಣ್ಣ ಕೈಗಾರಿಕಾ ಪ್ರಶಸ್ತಿ ನೀಡಿದೆ.