ಇವರ ಹೆಸರು ನಿತೇಶ್ ರಾಣೆ. ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಮೀನುಗಾರಿಕೆ ಮತ್ತು ಬಂದರು ಖಾತೆಯ ಸಚಿವ. ಕ್ಯಾಬಿನೇಟ್ ದರ್ಜೆಯ ಮಿನಿಸ್ಟರ್. ಇವರು ಮೊದಲು ಕಾಂಗ್ರೆಸ್‌ನಲ್ಲಿದ್ದರು. ನರೇಂದ್ರ ಮೋದಿಯವರನ್ನು, ಗುಜರಾತ್ ಮಾದರಿಯನ್ನು ಕಟುವಾಗಿ ಟೀಕಿಸಿಸುತ್ತಿದ್ದರು. ಬ್ರಿಟಿಷರಲ್ಲಿ ಕ್ಷಮೆ ಕೇಳಿದ ಸಾವರ್ಕರ್ ಎಂದು ಗೇಲಿ ಮಾಡಿದ್ದರು. ಆರ್‌ಎಸ್‌ಎಸ್‌ನವರನ್ನು ‘ಅರ್ಧ ಚಡ್ಡಿವಾಲಾಗಳು’ ಎಂದು ಛೇಡಿಸಿದ್ದರು. ಆದರೆ ಬಿಜೆಪಿ ಸೇರಿದ ಮೇಲೆ ಸಂಪೂರ್ಣ ಬದಲಾದರು. ಸರಣಿ ದ್ವೇಷ ಭಾಷಣಗಳನ್ನು ಮಾಡಿದ ರಾಣೆಗೆ ಸಚಿವ ಸ್ಥಾನ ಸಿಕ್ಕಿತು. ಇವರ ತಂದೆ ನಾರಾಯಣ ರಾಣೆ…

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.