ನಿರ್ಭೀತ ಪತ್ರಿಕೋದ್ಯಮಕ್ಕೆ ಜಾಗತಿಕವಾಗಿ ಮಾದರಿಯಾಗಿದ್ದ ಅಮೆರಿಕದಲ್ಲಿ ಮಾಧ್ಯಮಗಳು ಇಂದು ಅಧಿಕಾರದ ದರ್ಪದಲ್ಲಿ ಮೆರೆಯುತ್ತಿರುವ ನಿರ್ಲಜ್ಜ ಬಂಡವಾಳಶಾಹಿಗಳಿಗೆ ಶರಣಾಗುತ್ತಿರುವುದು ಅಲ್ಲಿಯ ನಾಗರಿಕರು ಹೆಮ್ಮೆಪಡುತ್ತಿದ್ದ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಅಪಾಯದಲ್ಲಿರುವುದನ್ನು ಸೂಚಿಸುತ್ತಿದೆ. 1972ರಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ರಿಚರ್ಡ್ ನಿಕ್ಸನ್ ಅವರ ಮರು ಆಯ್ಕೆಯ ಪ್ರಚಾರ ತಂಡದಲ್ಲಿದ್ದ ಐವರು, ವಾಟರ್ಗೇಟ್ ಹೋಟೆಲ್ನಲ್ಲಿದ್ದ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಕೇಂದ್ರ ಕಚೇರಿಯೊಳಗೆ ನುಸುಳಿ ಅಲ್ಲಿಯ ರಹಸ್ಯ ದಾಖಲೆಗಳನ್ನು ಕದ್ದು ಟಿಲಿಫೋನ್ ಕದ್ದಾಲಿಸುವ ಸಾಧನಗಳನ್ನು ಅಳವಡಿಸುವ ಪ್ರಯತ್ನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದರು. ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದ ರಿಚರ್ಡ್…

ಪ್ರೊ.ಡಿ.ಎಸ್. ಪೂರ್ಣಾನಂದ
ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.
Comments are closed.