ಬಿಜೆಪಿಯಿಂದ ಉಚ್ಚಾಟಿತರಾದ ನೂಪುರ್ ಶರ್ಮಾ ಅವರು ಭಕ್ತ ಪಡೆಯ ಸ್ಮೃತಿ ಪಟಲದಿಂದ ಅಳಿಸಿ ಹೋಗಿರಬಹುದೇನೋ. ಧಾರ್ಮಿಕ ವಿಷಕಾರಿ ಮಾತುಗಳನ್ನಾಡುತ್ತಾ ಸದಾ ಮೇಲುಗೈ ಸಾಧಿಸಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್, ಪ್ರವಾದಿ ಮಹಮ್ಮರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ, ಸಿಕ್ಕಿಬಿದ್ದಾಗ ಬಿಜೆಪಿ ಅಕ್ಷರಶಃ ಅಲುಗಾಡಿತ್ತು. ಕತಾರ್, ಕುವೈತ್, ಯುಎಇ, ಸೌದಿ ಅರೇಬಿಯಾದಂತಹ ಬಲಿಷ್ಠ ಗಲ್ಫ್ ರಾಷ್ಟ್ರಗಳು ಪ್ರತಿಕ್ರಿಯಿಸಿದಾಗ, ಭಾರತದ ಆರ್ಥಿಕ ವಲಯ ಆಪತ್ತಿಗೆ ಸಿಲುಕುವ ಸನ್ನಿವೇಶ ಸೃಷ್ಟಿಯಾಗಿತ್ತು. ನೂಪುರ್ ಅವರನ್ನು ನೆಪಮಾತ್ರಕ್ಕಾದರೂ ಪಕ್ಷದಿಂದ ಹೊರದಬ್ಬುವುದು ಬಿಜೆಪಿಗೆ ಅನಿವಾರ್ಯವಾಗಿತ್ತು. ಲೋಕಸಭೆ, ವಿಧಾನಸಭೆಗಳ…

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.