ನಾವು ಯಾವ ಕಾರಣಕ್ಕೂ ಗಮನಿಸದೇ ಇರಲಾಗದ ಸಮಸ್ಯೆಯೊಂದು ನಮ್ಮನ್ನು ಆವರಿಸಿದೆ ಎಂಬುದನ್ನು ವಿವರಿಸಲು ಇಂಗ್ಲಿಷಿನ ನುಡಿಗಟ್ಟೊಂದಿದೆ? Elephant in the room ಅಂತ. ನಮ್ಮ ಮನೆಯ ಕೊಠಡಿಯೊಂದರಲ್ಲಿ ಆನೆ ಬಂದು ಕೂತಿದ್ದಾಗಲೂ ನಾವು ಅಂಥದ್ದೇನೂ ಆಗಿಲ್ಲ ಎಂಬಂತೆ ಇರಲಾಗದು. ದೆಹಲಿಯ ಒಕ್ಕೂಟ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯಕ್ಕೆ ಈ ವಿಚಾರ ಸೊಗಸಾಗಿ ಅನ್ವಯವಾಗುತ್ತದೆ. ಹಾಗೆ ನೋಡಿದರೆ, ಅದನ್ನು ಯಾರೂ ಗಮನಿಸಿಲ್ಲ ಎಂದೇನಲ್ಲ. ಆ ರೀತಿ ಗಮನಿಸಿ ಮಾತನಾಡುತ್ತಿರುವ ನಾಲ್ಕೈದು ಪ್ರಮುಖರ ಅನಿಸಿಕೆಗಳ ಮೂಲಕವೇ ಈ ಅನ್ಯಾಯವನ್ನು ಕಟ್ಟಿಕೊಡುವ…

ಡಿ ಉಮಾಪತಿ
ಹಿರಿಯ ಪತ್ರಕರ್ತರು