ಪೊಲೀಸ್ ಠಾಣೆ ಮುಂದೆ ವಯಸ್ಸಾದ ದಂಪತಿಗಳು ಭಯ, ಆತಂಕದ ಮಡುವಿನಲ್ಲಿ ಕೂತಿದ್ದರು. 18 ವರ್ಷದ ಮಗ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಠಾಣೆಯಲ್ಲಿ ಕೂರಿಸಿಕೊಂಡಿದ್ದರು. ಬಡವರು, ಅನಕ್ಷರಸ್ಥರಾದ್ದರಿಂದ ಇವರಿಗೆ ಕಾಯ್ದೆ ಕಾನೂನುಗಳು ಗೊತ್ತಿಲ್ಲ. ಪೊಲೀಸರು ಕೂಡ ಹೇಳುವುದಿಲ್ಲ. ಒಳಗೆ ಹೋಗಲು ಧೈರ್ಯವಿಲ್ಲ. ಠಾಣೆಯ ಕಾಂಪೌಂಡ್ ಪಕ್ಕ ಕೂತು ಅಳುತ್ತಿದ್ದಾರೆ. ಕೊನೆಗೆ ಪೇದೆ ಬಂದು, `20 ಸಾವ್ರಕ್ಕೆ ಸಾಹೇಬ್ರಿಗೊಪ್ಸಿದೀನಿ, ರೆಡಿ ಮಾಡ್ಕಂಡ್ ಬನ್ನಿ’ ಎಂದಿದ್ದಾರೆ. 20 ಸಾವಿರ ಎಂದಾಕ್ಷಣ, ಬಡದಂಪತಿಗಳ ಕಿವಿಗೆ ಕಾದ ಸೀಸ ಬಿದ್ದಂತಾಗಿದೆ. ಆ…

ಲೇಖಕ, ಪತ್ರಕರ್ತ