ಧರ್ಮವೆಂಬ ಮರಕ್ಕೆ ದಯೆಯೇ ಬೇರು ಅಂದ ಬಸವಣ್ಣ, ನಿರಂಕುಶಮತಿಗಳಾಗಿ ಎಂದ ಕುವೆಂಪು ಇಬ್ಬರೂ ಕನ್ನಡ ಪ್ರಜ್ಞೆಯನ್ನು ಹೇಗೆ ರೂಪಿಸಿದ್ದಾರೆ ಎಂದು ಪರಿಶೀಲಿಸುವ ಅವಕಾಶವನ್ನು ದೆಹಲಿಯ ಶರಣಸಾಹಿತ್ಯ ಪರಿಷತ್ ಒದಗಿಸಿತು. ಇವರಿಬ್ಬರೂ ಕನ್ನಡದ ಪ್ರಜ್ಞೆ ಸ್ವಸ್ಥವಾಗಿ ರೂಪುಗೊಳ್ಳಲು ಬೇಕಾದ ಬೌದ್ಧಿಕ ಪರಿಕರಗಳನ್ನು ನಿರ್ಮಿಸಿದ ದೊಡ್ಡ ಜೀವಗಳು. ಆ ಪರಿಕರಗಳನ್ನು ನಾವು ಸೂಕ್ತವಾಗಿ ಬಳಸಿದ್ದಿದ್ದರೆ ನಮ್ಮ ಈ ಹೊತ್ತಿನ ಸಾಮೂಹಿಕ ಬದುಕು ಹೀಗಿರುತ್ತಿರಲಿಲ್ಲ ಅನ್ನುವ ನೋವಿನಲ್ಲೇ ಈ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ವಿಚಾರಗಳಿಗೆ ಕಾಲದ ಹಂಗಿಲ್ಲ, ದೇಶದ ಗಡಿಗಳಿಲ್ಲ, ಹಾಗೇ…

ಓ.ಎಲ್. ನಾಗಭೂಷಣ ಸ್ವಾಮಿ
ನಿವೃತ್ತ ಪ್ರಾಧ್ಯಾಪಕರಾದ ಓಎಲ್‌ಎನ್ ಅವರು, ಅನುವಾದ ಹಾಗೂ ವೈಚಾರಿಕ ಬರಹಗಳಿಂದ ಕನ್ನಡ ಸಾಹಿತ್ಯ ಪ್ರಜ್ಞೆಯನ್ನು ವಿಸ್ತರಿಸಿದವರು. ನನ್ನ ಹಿಮಾಲಯ (ಪ್ರವಾಸ ಕಥನ,) ನಮ್ಮ ಕನ್ನಡ ಕಾವ್ಯ (ಸಂಪಾದನೆ), ಕನ್ನಡ ಶೈಲಿ ಕೈಪಿಡಿ, ಅಲ್ಲಮ ವಚನ ಸಂಗ್ರಹ, ತತ್ವಪದಗಳು (ಪ್ರಾತಿನಿಧಿಕ ಸಂಕಲನ), ಇಂದಿನ ಹೆಜ್ಜೆ (ವಚನಗಳನ್ನು ಕುರಿತ ವಿಮರ್ಶಾ ಲೇಖನಗಳು), ಏಕಾಂತ ಲೋಕಾಂತ (ಅಂಕಣ ಬರಹ), ಮತ್ತೆ ತೆರೆದ ಬಾಗಿಲು (ಕೆ.ಎಸ್. ನರಸಿಂಹಸ್ವಾಮಿ ಅವರನ್ನು ಕುರಿತ ವಿಮರ್ಶಾ ಲೇಖನಗಳು)- ಮುಖ್ಯ ಕೃತಿಗಳು. ಯುದ್ಧ ಮತ್ತು ಶಾಂತಿ (ಟಾಲ್‌ಸ್ಟಾಯ್ ಕಾದಂಬರಿ), ಅಕ್ಕ ತಂಗಿಯರು (ಚೆಕಾವ್ ನಾಟಕ), ಕನ್ನಡಕ್ಕೆ ಬಂದ ಕವಿತೆ (ಬೇರೆ ಭಾಷೆಗಳಿಂದ ಆಯ್ದ ಕವಿತೆಗಳು), ಪ್ರೀತಿಯೆಂದರೇನು (ಜೆ.ಕೆ) ಮೊದಲಾದ ಕೃತಿಗಳನ್ನು ಅನುವಾದಿಸಿದ್ದಾರೆ.