(ಮುಂದುವರಿದ ಭಾಗ..) ಕಾವೇರಿ, ಉರ್ದು ವಾರ್ತೆ ಗಲಭೆಗಳು: 1991ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ಮಧ್ಯಂತರ ತೀರ್ಪನ್ನು ನೀಡಿ ಪ್ರತಿವರ್ಷ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶಿಸಿತ್ತು. ಇದರ ವಿರುದ್ಧ ಡಿಸೆಂಬರ್ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್ ಹಿಂಸೆಗೆ ತಿರುಗಿತು. ಬೆಂಗಳೂರಿನಲ್ಲಿ ವ್ಯಾಪಕವಾದ ಗಲಭೆಗಳು ನಡೆದವು. ಅಧಿಕೃತವಾಗಿ 16 ಮಂದಿ ಈ ಗಲಭೆಯಲ್ಲಿ ಮೃತಪಟ್ಟರು. ಸಾವಿರಾರು ಪ್ರಕರಣಗಳು ದಾಖಲಾದವು. ತಮಿಳರು, ಕನ್ನಡಿಗರು ಗಲಭೆಯಲ್ಲಿ ಅಪಾರವಾದ ನಷ್ಟಕ್ಕೆ ಈಡಾದರು. ಹಲವಾರು ತಮಿಳು ಕುಟುಂಬಗಳು ತಮಿಳುನಾಡಿಗೆ ವಾಪಾಸ್…

ದಿನೇಶ್ ಕುಮಾರ್ ಎಸ್.ಸಿ.
ದಿನೂ ಎಂದೇ ಪರಿಚಿತರಾದ ದಿನೇಶ್ ಕುಮಾರ್ ಎಸ್ ಸಿ ಮೂಲತಃ ಸಕಲೇಶಪುರದವರು. ಸಾಮಾಜಿಕ ಕಾಳಜಿ ಬೆರೆತ ಪತ್ರಿಕೋದ್ಯಮವನ್ನು ಮಾಡುತ್ತಾ, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಇಂದು ಸಂಜೆ ಎಂಬ ಸಂಜೆ ಪತ್ರಿಕೆಯ ಸಂಪಾದಕರಾಗಿ ಹೆಸರು ಮಾಡಿದರು. ನಂತರ ಕರವೇ ನಲ್ನುಡಿಯ ಸಂಪಾದಕರಾಗಿ, ಕನ್ನಡ ಚಳವಳಿಯ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡರು. ತಮ್ಮ ಚುರುಕಾದ ತೀಕ್ಷ್ಣ ಬರಹಗಳಿಂದ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧರಾದ ಅವರು, ಕನ್ನಡ ಚಳವಳಿಯೊಳಗೆ ಸಾಮಾಜಿಕ ನ್ಯಾಯದ ಮತ್ತು ಬ್ರಾಹ್ಮಣಶಾಹಿ ವಿರುದ್ಧದ ಆಲೋಚನೆಗಳನ್ನೂ ಪಸರಿಸಿದವರಲ್ಲಿ ಪ್ರಮುಖರು. ಸದ್ಯ ಕನ್ನಡ ಪ್ಲಾನೆಟ್ ವೆಬ್‌ಸೈಟ್‌ನ ಪ್ರಧಾನ ಸಂಪಾದಕರಾಗಿದ್ದಾರೆ.