ಏಕೀಕರಣವು ಲೇಖಕರು, ರಾಜಕಾರಣಿಗಳು, ವ್ಯಾಪಾರಿಸಂಘಗಳು, ಕನ್ನಡ ಸಂಘಟನೆಗಳು, ಸಂಸ್ಥೆಗಳು, ವಿದ್ಯಾರ್ಥಿಗಳು, ಪತ್ರಿಕೆಗಳು, ಜಾತಿಸಮುದಾಯಗಳು ಭಾಗವಹಿಸಿದ ಒಂದು ಸಾಮೂಹಿಕ ಹೋರಾಟ. ಅದು ಸಮಾನಮನಸ್ಕ ಶಕ್ತಿಗಳಿಂದ ಮಾತ್ರವಲ್ಲದೆ, ಪರಸ್ಪರ ವಿರುದ್ಧವಾದ ಹಿತಾಸಕ್ತಿಯುಳ್ಳ ಚಾರಿತ್ರಿಕ ಶಕ್ತಿಗಳಿಂದ ರೂಪುಗೊಂಡ ವಿದ್ಯಮಾನವೂ ಆಗಿತ್ತು. ಈ ವೈರುಧ್ಯದ ಕೆಲವು ಅಂಶಗಳು, ನಂತರ ಸಂಭವಿಸಿದ ಬೆಳವಣಿಗೆಗಳ ಜತೆ ಸೇರಿಕೊಂಡು, ಕರ್ನಾಟಕದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ನೆಲೆಗಳನ್ನು ರೂಪಿಸಿದವು. ಈ ನೆಲೆಗಳು ಒಂದಾದ ಮೇಲೆ ಒಂದು ಬರಲಿಲ್ಲ. ಒಟ್ಟೊಟ್ಟಿಗೇ ಕೂಡ ಸಂಭವಿಸಿದವು. ಪ್ರಭುತ್ವೀಕರಣ, ಧಾರ್ಮೀಕರಣ, ಮತೀಕರಣ, ಕೇಂದ್ರೀಕರಣ,…

ರಹಮತ್ ತರೀಕೆರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ’ಕತ್ತಿಯಂಚಿನ ದಾರಿ’, ’ಅಂಡಮಾನ್ ಕನಸು’, ಕದಳಿ ಹೊಕ್ಕು ಬಂದೆ’ ಇವರ ಪ್ರಮುಖ ಕೃತಿಗಳು. ಕರ್ನಾಟಕದ ಸೂಫಿಗಳು, ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ರಹಮತ್ ಮಹತ್ವದ ಕೆಲಸ ಮಾಡಿದ್ದಾರೆ.