ಆಗ ನಮಗೆ ಯಾವ ನಾಯಕರೂ ಇರಲಿಲ್ಲ. ಯಾರ ನಡುವೆಯೂ ನಾಯಕತ್ವದ ಸಮಸ್ಯೆಯೂ ಇರಲಿಲ್ಲ. ಎಲ್ಲರೂ ಸಮಾನರು. ಸಿದ್ಧಾಂತವೇ ನಮ್ಮ ನಾಯಕ. ಪದಾಧಿಕಾರತ್ವ ಏನಿದ್ದರೂ ಸಮನ್ವಯದ ಕಾರಣಕ್ಕಾಗಿ ಮಾತ್ರ. (ಮುಂದುವರಿದ ಭಾಗ) ಹೋರಾಟದ ದಿನಗಳು: ದಲಿತ ಸಂಘರ್ಷ ಸಮಿತಿಯ ಆರಂಭದ ದಿನಗಳ ಕಷ್ಟಗಳನ್ನು ಹೇಳಬೇಕು. ನಮಗೆ ಹೊಟ್ಟೆಗೆ ಹಿಟ್ಟಿರಲಿಲ್ಲ. ಮೈಗೆ ಬಟ್ಟೆ ಇರಲಿಲ್ಲ. ತಲೆಗೆ ಎಣ್ಣೆ ಇರಲಿಲ್ಲ. ಕಾಲಿಗೆ ಚಪ್ಪಲಿ ಇರಲಿಲ್ಲ. ಕರಪತ್ರಗಳನ್ನು ಪ್ರಿಂಟ್ ಮಾಡಿಸಲು ದುಡ್ಡು ಇರುತ್ತಿರಲಿಲ್ಲ. ನಾವೆಲ್ಲ ಹಾಸ್ಟೆಲ್‌ನಲ್ಲಿ ಕುಳಿತು ಕಾಂಪಿಟೇಷನ್ ಮೇಲೆ ಕರಪತ್ರಗಳನ್ನು ಕಾಪಿ…

ಇಂದೂಧರ ಹೊನ್ನಾಪುರ
ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನರಾದ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ದಲಿತ ಚಳವಳಿಯನ್ನು ಕಟ್ಟಿದವರಲ್ಲಿ ಒಬ್ಬರು. ದಲಿತ ಚಳವಳಿಯ ಭಾಗವಾಗಿದ್ದ 'ಪಂಚಮ' ಪತ್ರಿಕೆಯನ್ನು ಮುನ್ನಡೆಸಿದರು. 'ಪ್ರಜಾವಾಣಿ'ಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ಸಂವಾದ' ಮಾಸಿಕದ ಸಂಪಾದಕರಾಗಿದ್ದಾರೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿವೆ.