ದೆಹಲಿಯು ಕರ್ನಾಟಕವನ್ನು ಹೇಗೆ ಕಂಡಿದೆ ಎಂಬುದರಷ್ಟೇ ಮುಖ್ಯವಾದದ್ದು, ಕರ್ನಾಟಕ ದೆಹಲಿಯನ್ನು ಹೇಗೆ ಕಂಡಿದೆ ಎಂಬುದು. ನಡುಬಗ್ಗಿಸಿದವರ ಮೇಲೆ ಸವಾರಿ ಮಾಡುತ್ತ ಬಂದಿದೆ ದೆಹಲಿ. ಕರ್ನಾಟಕ ಕೂಡ ಸವಾರಿಗೆ ತನ್ನ ನಡುವನ್ನು ದೆಹಲಿಗೆ ಬಿಟ್ಟುಕೊಟ್ಟ ಅಲ್ಪತೃಪ್ತ ರಾಜ್ಯ. ಬಾಯಿ ಇದ್ದವರು ಬಡಾಯಿ ಕೊಚ್ಚಿಕೊಳ್ಳುವವರು ದೆಹಲಿಯ ಗಮನ ಸೆಳೆಯುತ್ತಾರೆ. ರಾಷ್ಟ್ರೀಯ ಪಕ್ಷಗಳನ್ನೇ ಸಾಕಿ ಸಲಹಿ, ಲೋಕಸಭೆ-ರಾಜ್ಯಸಭೆಗಳಲ್ಲಿ ತಮ್ಮ ಪಕ್ಷಗಳ ಪರವಾಗಿ ಕೈ ಎತ್ತುತ್ತ ಬಂದಿರುವ ಕರ್ನಾಟಕ ಇಲ್ಲಿ ಒಂದು ಪೇಲವ ನೆರಳು ಮಾತ್ರ. ಅವಿಭಜಿತ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗೇರಿದ್ದ ಸಿದ್ದವ್ವನಹಳ್ಳಿ…

ಡಿ ಉಮಾಪತಿ
ಹಿರಿಯ ಪತ್ರಕರ್ತರು