ಕಳೆದ 50 ವರ್ಷಗಳು ಕನ್ನಡ ಚಿತ್ರರಂಗದ ಪಾಲಿಗೆ ಬಹಳ ಮಹತ್ವದ ವರ್ಷಗಳು. 1956ರಲ್ಲಿ ಮೈಸೂರು ರಾಜ್ಯದ ಉದಯವಾದಾಗ, ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವುದಕ್ಕೆ ಸಾಕಷ್ಟು ಕಷ್ಟಪಡುತ್ತಿದ್ದ ಕನ್ನಡ ಚಿತ್ರರಂಗ, ಮುಂದಿನ 17 ವರ್ಷಗಳಲ್ಲಿ ಕರ್ನಾಟಕವೆಂದು ಮರುನಾಮಕರಣವಾಗುವ ಹೊತ್ತಿಗೆ ದೊಡ್ಡ ಪ್ರಗತಿಯನ್ನು ಸಾಧಿಸಿತ್ತು. 70ರ ದಶಕವಂತೂ ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣ ಯುಗವಾಗಿತ್ತು. ಕರ್ನಾಟಕಕ್ಕೆ ಈಗ 50ರ ಸಂಭ್ರಮ. ಆ ಸುವರ್ಣ ಯುಗದಿಂದ ಸುವರ್ಣ ಕರ್ನಾಟಕದವರೆಗೆ ಕನ್ನಡ ಚಿತ್ರರಂಗವು ಎಷ್ಟು ಪ್ರಗತಿ ಸಾಧಿಸಿದೆ, ಇವತ್ತಿನ ಚಿತ್ರರಂಗದ ಸ್ಥಿತಿ-ಗತಿ ಹೇಗಿದೆ ಎಂಬುದರ…

ಚೇತನ್ ನಾಡಿಗೇರ್
ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್ ನಾಡಿಗೇರ್ ಅವರು, 'ಉದಯವಾಣಿ', 'ರೂಪತಾರಾ', 'ಕನ್ನಡ ಪ್ರಭ', 'ವಿಜಯವಾಣಿ' ಮತ್ತು 'ವಿಜಯ ಕರ್ನಾಟಕ' ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್ ಅರವಿಂದ್ ಅವರ 'ಖುಷಿಯಿಂದ ರಮೇಶ್' ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ 'ಸ್ಕ್ರೀನ್ ಶಾಟ್- ದಾಖಲಾಗದ ದಾಖಲೆಗಳು' ಎಂಬ ಪುಸ್ತಕವನ್ನು ಬರೆದಿದ್ದಾರೆ.