ಮಧ್ಯಕಾಲೀನ ಸಾಹಿತ್ಯದ ಬಹುದೊಡ್ಡ ದಾರ್ಶನಿಕನಾದ ಅಲ್ಲಮಪ್ರಭು ಭಾಷೆಯ ಬಗೆಗೆ ಬರೆದಿರುವ ಈ ವಚನವು ಗಮನ ಸೆಳೆಯುತ್ತದೆ. ಧರ್ಮಗಳು ಮಾತ್ರವೇ ಬಹು ದೊಡ್ಡ ಉಪಾಧಿಗಳೆಂದು ನಂಬುವ ಸಮಾಜದಲ್ಲಿ ಜಪ, ತಪ, ನೇಮ, ನಿತ್ಯಗಳು ಆಚಾರ ಸಂಹಿತೆಗಳಾಗಿ ಮೀರಲಾಗದ ತತ್ವಗಳಾಗಿ ನಿಲ್ಲುತ್ತವೆ. ಇವುಗಳ ಅನುಸರಣೆಯಿಂದಲೇ ಎಲ್ಲ ಬಗೆಯ ಕಷ್ಟ-ಕಾರ್ಪಣ್ಯಗಳಿಂದ ವಿಮೋಚನೆ. ಇವುಗಳ ಪಾಲನೆಯಿಂದಲೇ ಪರಮ ಸಾಫಲ್ಯ. ಆದ್ದರಿಂದ ಈ ತತ್ವಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಪರಮ ಪದವಿಗೆ ಏರಬಹುದು ಎಂದೇ ಜನರು ನಂಬುತ್ತಾರೆ ಅಥವಾ ನಂಬಿಸಲ್ಪಡುತ್ತಾರೆ. ಹೀಗಾಗಿ ಈ…

ಡಾ. ಮೀನಾಕ್ಷಿ ಬಾಳಿ
ಪ್ರಾಧ್ಯಾಪಕರಾದ ಮೀನಾಕ್ಷಿ ಬಾಳಿಯವರು ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ ಹಾಗೂ ಚಿಂತಕರೆಂದೇ ಖ್ಯಾತರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರು. ‘ಮಡಿವಾಳಪ್ಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ದಾರೆ. ‘ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ. ಇತ್ತೀಚೆಗೆ ನಿಜ ವಚನ ದರ್ಶನ ಪುಸ್ತಕ ರಚಿಸಿದ್ದಾರೆ. ಇವರಿಗೆ ಕದಳಿಶ್ರೀ ಪ್ರಶಸ್ತಿ ದೊರಕಿದೆ.