ಕರ್ನಾಟಕ ರಾಜ್ಯದ ಕೃಷಿಯನ್ನು ಅವಲೋಕಿಸುವಾಗ ಅಭಿವೃದ್ಧಿ ಮಾನದಂಡಗಳ ಜೊತೆಗೆ ಕಳೆದೈದು ದಶಕಗಳಲ್ಲಿ ಕೈಗೊಂಡ ಮಹತ್ವದ ಸುಧಾರಣೆ, ನೀತಿ, ಕಾರ್ಯಯೋಜನೆಗಳತ್ತ ಗಮನ ಕೂಡ ಅಗತ್ಯ. ಕರ್ನಾಟಕದಂತಹ ರಾಜ್ಯವೊಂದರ ಕೃಷಿ ವ್ಯವಸ್ಥೆಯ ಮೇಲೆ 90ರ ನಂತರದ ಉದಾರೀಕರಣ, ಜಾಗತೀಕರಣ ನೀತಿಗಳ ಪರಿಣಾಮಗಳನ್ನು ಬದಿಸರಿಸಿ ನೋಡಲು ಸಾಧ್ಯವೇ ಇಲ್ಲ. ಇವೆಲ್ಲವುದಕ್ಕೂ ನೇರವಾಗಿ ತಳುಕು ಹಾಕಿಕೊಂಡಿರುವ ರಾಜ್ಯದ ರೈತಾಪಿ ವರ್ಗದ ಸ್ಥಿತಿಗತಿಗಳತ್ತ ಗಮನ ಹರಿಸಿದರಂತೂ ಆತಂಕಕಾರಿ ವಿಚಾರಗಳು ಹೊರಹೊಮ್ಮುವವು. ಮಾರುಕಟ್ಟೆ ಶಕ್ತಿಗಳು, ಕಾರ್ಪೊರೇಟ್ ವಲಯ ‘ರಾಜ್ಯಶಕ್ತಿ’, ಸರ್ಕಾರಗಳ ಮೇಲೆ ಹತೋಟಿ ಅಧಿಕಗೊಳಿಸುತ್ತಿರುವ ಜೊತೆಗೆ…

ಡಾ ಪ್ರಕಾಶ್ ಕಮ್ಮರಡಿ
ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿಯವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ (ಕೆಎಪಿಸಿ) ಅಧ್ಯಕ್ಷರೂ ಆಗಿದ್ದರು. ಅವರು ಈಗ ಕೃಷಿ ಅರ್ಥಶಾಸ್ತ್ರ, ಸುಸ್ಥಿರ ಮತ್ತು ಸಾವಯವ ಕೃಷಿ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಿಗೆ ಖಾಸಗಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜವಾದಿ ಚಿಂತನೆ ಹಾಗೂ ಚಳವಳಿಯಲ್ಲಿ ದಶಕಗಳಿಂದ ಸಕ್ರಿಯರು.