(ಮುಂದುವರಿದ ಭಾಗ…) ನಕ್ಸಲೈಟ್ ಚಳವಳಿ: ಕರ್ನಾಟಕದ ನಕ್ಸಲೈಟ್ ಚಳವಳಿ ಮೇಲಿನ ನಾಲ್ಕು ಚಳವಳಿಗಳಷ್ಟು ವಿಸ್ತಾರ ಹೊಂದಿದ್ದ ಚಳವಳಿಯಲ್ಲ. ಆದರೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಕರ್ನಾಟಕದ ಚಳವಳಿಗಳಲ್ಲಿ ಅದರ ಪಾತ್ರವೂ ಇದೆ. 70, 80, 90ರ ದಶಕಗಳಲ್ಲಿ ನೆರೆಯ ಆಂಧ್ರ ಮತ್ತು ಇಂದಿನ ತೆಲಂಗಾಣ ಭಾಗಗಳಲ್ಲಿ ಬಿರುಸಾಗಿ ನಡೆಯುತ್ತಿದ್ದ ನಕ್ಸಲೈಟ್ ಚಳವಳಿಯ ಪ್ರಭಾವ ಕರ್ನಾಟಕದ ಮೇಲೂ ಇತ್ತು. ವಿಶೇಷವಾಗಿ ದಲಿತ ಚಳವಳಿ ಇದರಿಂದ ಸಾಕಷ್ಟು ಪ್ರಭಾವಿತಗೊಂಡಿತು. ಜನನಾಟ್ಯ ಮಂಡಳಿಯ ಹಲವು ಕ್ರಾಂತಿಕಾರಿ ಹಾಡುಗಳು ಕನ್ನಡಕ್ಕೂ ಅನುವಾದಗೊಂಡವು. 90ರ ದಶಕದಲ್ಲಿ…

ನೂರ್ ಶ್ರೀಧರ್
ಚಿತ್ರದುರ್ಗದ ಇಂಜಿನಿಯರಿಂಗ್ ವಿದ್ಯಾರ್ಥಿ ನೂರ್ ಜುಲ್ಫೀಕರ್, ನೂರ್ ಶ್ರೀಧರ್ ಆಗಿದ್ದು ಭೂಗತ ಕ್ರಾಂತಿಕಾರಿ ಚಳವಳಿಯ ಪೂರ್ಣಾವಧಿ ಕಾರ್ಯಕರ್ತನಾಗಿದ್ದರಿಂದ. ಭಾರತದ ಸಂದರ್ಭದಲ್ಲಿ ಈ ರೀತಿಯ ಭೂಗತ ಸಶಸ್ತ್ರ ಚಳವಳಿಯಿಂದ ಕ್ರಾಂತಿ ಮಾಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ತೀವ್ರ ವೈಚಾರಿಕ ಸಂಘರ್ಷ ನಡೆಸಿ, 2014ರಿಂದ ಮುಖ್ಯವಾಹಿನಿ ಪ್ರಜಾತಾಂತ್ರಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕ ಜನಶಕ್ತಿ ಮತ್ತು ಎದ್ದೇಳು ಕರ್ನಾಟಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಇವರು 'ನನ್ನೊಳಗಿನ ಸೂಫಿ’ ಹಾಗೂ 'ಭಾರತದ ಕ್ರಾಂತಿ ಮತ್ತು ಮಾವೋವಾದಿ ಚಳವಳಿ' ಎಂಬ ಕೃತಿಗಳನ್ನು ರಚಿಸಿದ್ದಾರೆ.