ಒಂದು ವ್ಯವಸ್ಥೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಅಧ್ಯಯನ ಮಾಡುವಾಗ ಸಮಗ್ರವಾದ ದೃಷ್ಟಿಕೋನ ಅತ್ಯಗತ್ಯ. ಸಮಾಜದ ಒಟ್ಟು ವ್ಯವಸ್ಥೆ; ಅಂದರೆ, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳು ಶಿಕ್ಷಣದ ಬೆಳವಣಿಗೆ ಮತ್ತು ಏಳು-ಬೀಳುಗಳನ್ನು ಪ್ರಭಾವಿಸುತ್ತವೆ. ಶಿಕ್ಷಣ ಮಾನವನ ಮೂಲಭೂತ ಹಕ್ಕು, ಶಿಕ್ಷಣ ಸಮಕಾರಿ (Equaliser), ಸಾಮಾಜಿಕ ಒಳಿತಿನ ಸಾಧನ, ಸಾಮಾಜಿಕ ಪರಿವರ್ತನೆಯ ಅಸ್ತ್ರ ಇತ್ಯಾದಿ ಮೂಲಭೂತ ತತ್ವಗಳನ್ನು ಒಪ್ಪುತ್ತಲೇ, ಶಿಕ್ಷಣ ಆಯಾ ಸಮಾಜಗಳಲ್ಲಿನ ನೀಳ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕತೆ ವ್ಯವಸ್ಥೆಯ ಕೂಸಾಗಿದ್ದು, ಶಿಕ್ಷಣದ ಸಂರಚನೆ, ಸ್ವರೂಪ…

ನಿರಂಜನಾರಾಧ್ಯ ವಿ ಪಿ
ಅಭಿವೃದ್ಧಿ ಶಿಕ್ಷಣ ತಜ್ಞ