ಇದೀಗ ಸಾಂಸ್ಕೃತಿಕ ವಸಾಹತುಶಾಹಿ ವಿಜೃಂಭಿಸುತ್ತಿದೆ. ಇದು ಏಕಾಏಕಿ ಸಂಭವಿಸಿದ ಸಂಗತಿಯಲ್ಲ. ಇದಕ್ಕೆ ಅನೇಕ ದಶಕಗಳ ಚರಿತ್ರೆ ಇದೆ. ಬಹು ವೇಗವಾಗಿ ನಮ್ಮ ಸಾಂಸ್ಕೃತಿಕ ಚಹರೆಗಳು ಪರಾಸ್ತವಾಗುತ್ತಲೇ ಇವೆ. ಕಳಕೊಂಡದ್ದಾದರೂ ಏನು ಎಂಬುದೂ ಶೂದ್ರ ಸಮೂಹಗಳಿಗೆ ಗೊತ್ತಾಗುತ್ತಿಲ್ಲ. ಈ ನಾಡಿನ ಜನಸಂಖ್ಯೆಯ ಶೇಕಡಾ 62ರಷ್ಟಿರುವ ಹಿಂದುಳಿದ ವರ್ಗಗಳು ತಮ್ಮ ಸಾಂಸ್ಕೃತಿಕ ಚಹರೆಗಳನ್ನು ಕಳೆದುಕೊಂಡಿರುವ ಕಾರಣಕ್ಕೆ ತಮಗೆ ನ್ಯಾಯವಾಗಿ ದೊರಕಬೇಕಾಗಿರುವ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪ್ರಾತಿನಿಧ್ಯದಿಂದ ವಂಚಿತವಾಗಿವೆ. ಸಂವಿಧಾನ, ಅಕ್ಷರ, ಆರ್ಥಿಕತೆಗಳು ದೊರಕಿಸಿಕೊಡಬೇಕಾಗಿದ್ದ ಸಾಮಾಜಿಕ ರಾಜಕೀಯ ಪ್ರಾತಿನಿಧ್ಯವನ್ನು ಸಾಂಸ್ಕೃತಿಕ ರಾಜಕಾರಣದ…

ಎಸ್. ನಟರಾಜ ಬೂದಾಳು
ಎಸ್.ನಟರಾಜ ಬೂದಾಳು ಅವರು ಕನ್ನಡದ ಪ್ರಮುಖ ಚಿಂತಕರಲ್ಲಿ ಒಬ್ಬರು. ಬೌದ್ಧತಾತ್ವಿಕತೆಯ ನೆಲೆಗಳನ್ನು ಮನಮುಟ್ಟುವಂತೆ ಓದುಗರಿಗೆ ಒದಗಿಸಿಕೊಟ್ಟ ಅಗ್ರಗಣ್ಯ ಬರಹಗಾರರು. ಶ್ರಮಣ ಪರಂಪರೆಗಳ ಚರ್ಚೆಗೆ ಹೊಸ ಆಯಾಮ ಒದಗಿಸಿಕೊಟ್ಟ ಇವರು, 'ಸರಹಪಾದ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಕಾವ್ಯಮೀಮಾಂಸೆ, ನಾಗಾರ್ಜುನನ ಮೂಲಮಧ್ಯಮಕಕಾರಿಕಾ, ನಾಗಾರ್ಜುನ ಅಲ್ಲಮಪ್ರಭು, ಪ್ರತ್ಯೇಕ ಬುದ್ಧ ಅಲ್ಲಮಪ್ರಭು, ಹಿಂದಣ ಹೆಜ್ಜೆಯನ್ನರಿತಲ್ಲದೆ, ಪ್ರಜ್ಞಾ ಪಾರಮಿತ ಹೃದಯ ಸೂತ್ರ, ಬೌದ್ಧ ಮಧ್ಯಮ ವರ್ಗ, ಪ್ರತೀತ್ಯಾ ಸಮುತ್ಪಾದ, ಮಾತಿನ ಮೊದಲು, ದಾವ್ ದ ಚಿಂಗ್, ಈ ಕ್ಷಣದ ಶಕ್ತಿ ಮನ ಮಗ್ನತೆ ಮೊದಲಾದ ಕೃತಿಗಳನ್ನು ಬರೆದಿದ್ದಾರೆ.