ಈ ಲೇಖನ ಬರೆಯುವ ಸಂದರ್ಭದಲ್ಲಿ ಎರಡು ಪ್ರಮುಖ ಸಂಗತಿಗಳು ಹೊರಬಂದಿವೆ. ಒಂದು, ಐಎಂಎಫ್‌ನ ಮುಖ್ಯಸ್ಥೆ ಕ್ರಿಸ್ಟಲಿನಾರವರು ಹೇಳಿದಂತೆ ವಿವಿಧ ದೇಶಗಳ ಆರ್ಥಿಕತೆ ಕುಸಿಯುತ್ತಿದೆ. ಭಾರತದ ಆರ್ಥಿಕತೆ ಹೆಚ್ಚು ಕುಸಿಯಲು ಕಾರ್ಮಿಕರ ಮತ್ತು ಮಾಲೀಕರ ನಡುವಿನ ಸಂಬಂಧದಲ್ಲಿನ ಸಮಸ್ಯೆಗಳು, ವೇತನ, ಸವಲತ್ತುಗಳಲ್ಲಿನ ಕೊರತೆ, ವಲಸೆ ಕಾರ್ಮಿಕರ ಸಮಸ್ಯೆಗಳು ಮತ್ತು ಇಳಿಯುತ್ತಿರುವ ಸರಾಸರಿ ಜೀವಾವಧಿ, ಕುಸಿಯುತ್ತಿರುವ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳು ಪ್ರಮುಖ ಕಾರಣವೆಂದು ತಿಳಿಸಿದ್ದಾರೆ. ಎರಡನೇ ಸಂಗತಿ: ಹಸಿವಿನ ಸೂಚ್ಯಂಕದ್ದು. ಈ ವಿಚಾರದಲ್ಲಿ 127 ದೇಶಗಳ ಪೈಕಿ ಭಾರತವು…

ಎಸ್. ವರಲಕ್ಷ್ಮಿ
ವರಲಕ್ಷ್ಮಿಯವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಎಂಬ ಊರಿನವರು. ವಯಸ್ಕರ ಶಿಕ್ಷಣ ಯೋಜನೆಯಡಿ ಪಾಠ ಮಾಡುತ್ತಿದ್ದ ಅವರು ಜೀವನೋಪಾಯಕ್ಕಾಗಿ ಗಾರ್ಮೆಂಟ್ಸ್ ಸೇರಿದರು. ಅಲ್ಲಿ ವೇತನ ತಾರತಮ್ಯ ಪ್ರಶ್ನಿಸಿ ಹೋರಾಟ ನಡೆಸಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡರು. ನಂತರ 1994ರಲ್ಲಿ ಅಂಗನವಾಡಿ ನೌಕರರ ಸಂಘ ಸ್ಥಾಪಿಸಿದ ಅವರು ಸದ್ಯ 128 ತಾಲ್ಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರ ಹೋರಾಡುತ್ತಿದ್ದಾರೆ. ಸಿಐಟಿಯು ಕಾರ್ಮಿಕ ಸಂಘಟನೆಯ ನಾಯಕಿಯಾಗಿರುವ ಅವರು 2 ದಶಕಕ್ಕೂ ಹೆಚ್ಚು ಕಾಲ ಹತ್ತಾರು ಯಶಸ್ವಿ ಹೋರಾಟಗಳನ್ನು ಮುನ್ನಡೆಸಿದ್ದಾರೆ.