ಜನವರಿ 13ನೇ ತಾರೀಕಿನಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಂದು ವಿದ್ಯಮಾನ ನಡೆಯಿತು. ತಮಿಳುನಾಡಿನ ದಲಿತ ರಾಜಕೀಯ ಪಕ್ಷವಾದ ಆತಿ ತಮಿಳರ್ ಕಚ್ಚಿಯ ಸದಸ್ಯರು ಬಿಜೆಪಿ ಕಚೇರಿ ಬಳಿ ಗೋಮಾಂಸವನ್ನು ಬಿಸಾಡಿ, ಪ್ರತಿರೋಧಿಸಿದರು. ಒಂದು ಮಟ್ಟದ ಉದ್ವಿಗ್ನತೆಯೂ ಸೃಷ್ಟಿಯಾಯಿತು. ನಗರದ ದೇವಾಲಯವೊಂದರ ಬಳಿ ಇದ್ದ ಗೋಮಾಂಸದ ಅಂಗಡಿಗೆ ಬಿಜೆಪಿಯ ಪದಾಧಿಕಾರಿಗಳ ಆಕ್ಷೇಪಕ್ಕೆ ಪ್ರತಿಯಾಗಿ ದಲಿತರು ಇಂತಹದ್ದೊಂದು ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಕಚೇರಿಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ವಿಕೆಕೆ ಮೆನನ್ ರಸ್ತೆಯಲ್ಲಿ ಪ್ರತಿಭಟನೆ ನಡೆದಿತ್ತು. ಅದೇ ರಸ್ತೆಯಲ್ಲಿರುವ ಎಂಡಿಎಂಕೆ ಕಚೇರಿಯ…

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.