ನಿರುದ್ಯೋಗ ಬಡತನ ಹೆಚ್ಚಿದೆ.. ಹಾಗಿದ್ದರೆ ಬಿಜೆಪಿ ಹೇಳುವ ಅಭಿವೃದ್ಧಿಯ ಅರ್ಥವೇನು? ಏರಿಕೆಯಾದ ನಿರುದ್ಯೋಗದ ಸ್ಥಿತಿಯು ಯುವಜನಾಂಗವನ್ನು ಕಂಗೆಡಿಸಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಹಾಗೂ ಭಾಷಣಗಳಲ್ಲಿ ಹತ್ತು ವರ್ಷದಲ್ಲಿ ಒಟ್ಟು 25 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಔಪಚಾರಿಕ ವಲಯಗಳ (EPFO ಇತ್ಯಾದಿ) ಸಮೀಕ್ಷೆ ಮೂಲದ ಅಂಕಿಗಳನ್ನು ಬಳಸಿಕೊಂಡು ಸರ್ಕಾರವು ಪ್ರತಿ ವರ್ಷ 1.5 ಕೋಟಿ ಉದ್ಯೋಗಗಳನ್ನು ಒದಗಿಸಿದೆ ಎಂದಿದೆ 2019ರ ಬಿಜೆಪಿಯ ಪ್ರಗತಿ ವರದಿ. ಅಂತೆಯೇ, ಕೇಂದ್ರ ಕಾರ್ಮಿಕ ಸಚಿವರಾದ ಮನ್‌ಸುಖ್ ಮಾಂಡವೀಯ…

ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು