ಡಾ.ಬಿ.ಆರ್. ಅಂಬೇಡ್ಕರ್ ಎಂದರೆ ಅರಿವು, ಜ್ಞಾನ ಸಾಗರ. ಅವರು ಬರೆದ ಪುಸ್ತಕಗಳೇ ನಮಗೆಲ್ಲ ದಾರಿದೀವಿಗೆ. ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ 30ಕ್ಕೂ ಹೆಚ್ಚು ಕೃತಿಗಳನ್ನು ಬರೆದವರು. ಕೆಲವು ಕೃತಿಗಳು ಅವರ ನಿಧನಾನಂತರ ಪ್ರಕಟವಾದವು. ಪ್ರಕಟಿತ ಅನೇಕ ಬರಹಗಳು ಅಪೂರ್ಣ ಸ್ಥಿತಿಯಲ್ಲೇ ಇವೆ. ಬಹುಶಃ ಬಾಬಾಸಾಹೇಬರು ಇದ್ದಾಗಲೇ ಅವು ಮುದ್ರಣ ಕಂಡಿದ್ದರೆ ಮತ್ತಷ್ಟು ತೀಕ್ಷ್ಣವಾಗಿರುತ್ತಿದ್ದವು. ಮತ್ತೊಂದೆಡೆ ಅವರ ಬಿಡಿಬಿಡಿ ಬರಹ ಮತ್ತು ಭಾಷಣಗಳೇ ಮಹತ್ವದ ಕೃತಿಗಳಾಗಿ ಪ್ರಕಟವಾಗಿವೆ. ಅಂಬೇಡ್ಕರ್ ಅವರು ತೆರೆದಿಟ್ಟ ಇತಿಹಾಸವನ್ನು, ಅವರ ಬಹುಮುಖಿ ವ್ಯಕ್ತಿತ್ವವನ್ನು ಅವರ…

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.