SIR | ರಾಜ್ಯದಲ್ಲಿ 43.82 ಲಕ್ಷ ನೋಟಿಸ್ ವಿಚಾರಣೆ ಪೂರ್ಣ; ಅಕ್ಟೋಬರ್ 27ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ: ಸಿಇಒ

Date:

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಅಂತಿಮ ಹಂತ ತಲುಪಿದೆ. ರಾಜ್ಯಾದ್ಯಂತ ಒಟ್ಟು 43.82 ಲಕ್ಷಕ್ಕೂ ಅಧಿಕ ನೋಟಿಸ್‌ಗಳ ವಿಚಾರಣೆ ಸಂಪೂರ್ಣಗೊಂಡಿದೆ. ಅಕ್ಟೋಬರ್ 27ರಂದು‌ ಅಂತಿಮ‌ ಮತದಾರರ‌ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ತಿಳಿಸಿದೆ.

- Advertisement -

ಎಸ್‌ಐಆರ್ ಪ್ರಕ್ರಿಯೆ ಕುರಿತು ಆಯೋಗವು ಪತ್ರಿಕಾ‌ ಪ್ರಕಟಣೆ ಪ್ರಕಟಿಸಿದೆ. “ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಿಂದಿನ ಮತದಾರರ ಪಟ್ಟಿಯೊಂದಿಗೆ ಹೆಸರುಗಳನ್ನು ನಿಖರವಾಗಿ ಹೊಂದಾಣಿಕೆ ಮಾಡಲು ಸಾಧ್ಯವಾಗದ (ಅನ್‌ಮ್ಯಾಪಿಂಗ್) ಮತ್ತು ವಿವರಗಳಲ್ಲಿ ತಾರ್ಕಿಕ ವ್ಯತ್ಯಾಸಗಳು ಕಂಡುಬಂದ (ಅನಾಮಲಿ) ಮತದಾರರನ್ನು ಗುರ್ತಿಸಿ ನೋಟಿಸ್‌ಗಳನ್ನು ನೀಡಲಾಗಿತ್ತು. ರಾಜ್ಯಾದ್ಯಂತ ಒಟ್ಟು 43,82,824 ನೋಟಿಸ್‌ಗಳನ್ನು ಸೃಷ್ಟಿಸಿ ಸಂಬಂಧಪಟ್ಟ ಮತದಾರರಿಗೆ ತಲುಪಿಸಲಾಗಿತ್ತು. ಪ್ರಸ್ತುತ ಆ ಎಲ್ಲ ನೋಟಿಸ್‌ಗಳಿಗೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ” ಎಂದು‌ ಚುನಾವಣಾಧಿಕಾರಿ‌ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

“ಜೂನ್ 16ರಿಂದ ಅಕ್ಟೋಬರ್ 22ರವರೆಗಿನ ಅವಧಿಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಒಟ್ಟು 25,87,461 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಹೊಸ ಮತದಾರರ ನೋಂದಣಿಗಾಗಿ 10,42,863 ಫಾರ್ಮ್ 6 ಅರ್ಜಿಗಳು, ವಿದೇಶದಲ್ಲಿ ವಾಸಿಸುವ ಭಾರತೀಯ ಮತದಾರರ ನೋಂದಣಿಗೆ 4,840 ಫಾರ್ಮ್ 6ಎ ಅರ್ಜಿಗಳು, ಹೆಸರು ಸೇರ್ಪಡೆಗೆ ಆಕ್ಷೇಪಣೆ ಅಥವಾ ಪಟ್ಟಿಯಿಂದ ಹೆಸರು ತೆಗೆದುಹಾಕಲು ಕೋರಿ 2,28,917 ಫಾರ್ಮ್ 7 ಅರ್ಜಿಗಳು ಹಾಗೂ ವಿಳಾಸ ಬದಲಾವಣೆ ಅಥವಾ ವಿವರಗಳ ತಿದ್ದುಪಡಿಗಾಗಿ 13,10,841 ಫಾರ್ಮ್ 8 ಅರ್ಜಿಗಳು ಸ್ವೀಕೃತವಾಗಿವೆ. ಸೆಪ್ಟೆಂಬರ್ 23ರವರೆಗೆ ಸ್ವೀಕರಿಸಲಾದ ಎಲ್ಲ ಫಾರ್ಮ್ 7 ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಲಾಗಿದೆ” ಎಂದು ಸಿಇಒ ಕಚೇರಿ ಹೇಳಿದೆ.

“ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದುಹಾಕುವುದು ಮತ್ತು ವಿವರಗಳ ತಿದ್ದುಪಡಿ ಮಾಡುವುದು ಒಂದು ನಿರಂತರ ಪ್ರಕ್ರಿಯೆಯಾಗಿದೆ. ಅರ್ಹರು ಆನ್‌ಲೈನ್ ಮೂಲಕ ಚುನಾವಣಾ ಆಯೋಗದ ‘ECINET’ ಆ್ಯಪ್ ಅಥವಾ ‘voters.eci.gov.in’ ಪೋರ್ಟಲ್ ಬಳಸಿಕೊಂಡು ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ಆಫ್‌ಲೈನ್ ಮೂಲಕ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ), ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು (ಎಇಆರ್‌ಒ) ಅಥವಾ ಮತದಾರರ ನೋಂದಣಿ ಅಧಿಕಾರಿಗಳ (ಇಆರ್‌ಒ) ಕಚೇರಿಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ” ಎಂದು‌ ತಿಳಿಸಿದೆ.

ಅಂದಹಾಗೆ, ರಾಜ್ಯದಲ್ಲಿ‌ ಎಎಸ್‌ಡಿಡಿಒ ಅಡಿಯಲ್ಲಿ 1.8 ಕೋಟಿ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಲಾಗಿದೆ. ಜೊತೆಗೆ, ಈಗ ನೋಟಿಸ್ ನೀಡಲಾಗಿದ್ದ 43 ಲಕ್ಷ ಮತದಾರರಲ್ಲಿಯೂ‌ ಅನೇಕರ‌ ಹೆಸರುಗಳು ಡಿಲೀಟ್ ಆಗುವ ಸಾಧ್ಯತೆ ಇದೆ.

ಒಂದೆಡೆ, ಎಸ್‌ಐಆರ್ ಪ್ರಕ್ರಿಯೆ‌ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು‌ ಚುನಾವಣಾಧಿಕಾರಿ‌ ಕಚೇರಿ ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು‌ ಪ್ರತಿಭಟನೆಗಳು‌ ನಡೆಯುತ್ತಿವೆ. ಅಲ್ಲದೆ, ಅರ್ಹ ಮತದಾರರ ಹೆಸರು ಅಳಿಸಿಹಾಕಲು ಅಕ್ರಮವಾಗಿ ಫಾರ್ಮ್-7 ಅರ್ಜಿ ಸಲ್ಲಿಸಿದವರ ವಿರುದ್ಧ‌ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು‌ ನಾಗರಿಕ ಸಂಘಟನೆಗಳು ಒತ್ತಾಯಿಸಿವೆ.

ಶುಕ್ರವಾರ ಕೂಡ, ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು, ಮತಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ವಿವಿಧ ಜನಪರ ಸಂಘಟನೆಗಳು ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | KSRTC ಬಸ್‌ನ ಟಯರ್ ಸ್ಫೋಟ; ಅನಾಹುತ ತಪ್ಪಿಸಿದ ಚಾಲಕ

ಶಿವಮೊಗ್ಗ ತಾಲೂಕಿನ ಕೊಮ್ಮನಾಳು ಬಳಿ KSRTC ಬಸ್‌ನ ಮುಂಭಾಗದ ಟಯರ್ ಬ್ಲಾಸ್ಟ್...

ಸ್ಟಿಂಗ್ ಪ್ರಕರಣ: ಸ್ವಪಕ್ಷೀಯರು ಭಾಗಿ – ಸಚಿವ ಯತೀಂದ್ರ; ಪಾರದರ್ಶಕ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ...

ಕತ್ತಲಲ್ಲಿ ಗುರುಗ್ರಾಮ್: ವಿದ್ಯುತ್‌ ಬಿಕ್ಕಟ್ಟಿನಿಂದ 1,800 ಕೈಗಾರಿಕೆಗಳ ಕೆಲಸ ಸ್ಥಗಿತ, ನೀರಿಗಾಗಿ ಜನರ ಪರದಾಟ

ಹರಿಯಾಣ ವಿದ್ಯುತ್ ಇಲಾಖೆಯ ನೌಕರರು ನಡೆಸುತ್ತಿರುವ ಮೂರು ದಿನಗಳ ಮುಷ್ಕರದಿಂದ ‌ಗುರುಗ್ರಾಮ್...

ದೆಹಲಿಯಲ್ಲಿ ಭುಗಿಲೆದ್ದ ಆಕ್ರೋಶ: ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರು

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಉದ್ದೇಶಪೂರ್ವಕವಾಗಿ...