ಅದೃಷ್ಟ ಒಲಿದರೆ 50% ತೆರಿಗೆ: ಇದು ನಿರ್ಮಲಕ್ಕನ ತೆರಿಗೆ ಭಯೋತ್ಪಾದನೆ!

Date:

Advertisements

ಕೇರಳದ ಬಹು ನಿರೀಕ್ಷಿತ ತಿರು ಓಣಂ ಬಂಪರ್ ಲಾಟರಿಯನ್ನು ಖರೀದಿಸಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಅಲ್ತಾಫ್ ಪಾಷಾಗೆ ₹25 ಕೋಟಿ ಬಹುಮಾನ ಒಲಿದಿದೆ. ಅಲ್ತಾಫ್ ಪಾಷಾ ಕೈಗೆ ಸಿಗುವ ಮೊತ್ತವೆಷ್ಟು? ಸರ್ಕಾರದ ಪಾಲು ಎಷ್ಟು ಎಂಬುದರ ಬಗ್ಗೆ ಪುಟ್ಟ ವಿಶ್ಲೇಷಣೆ.

ಮಂಡ್ಯದ ಮೆಕ್ಯಾನಿಕ್ ಅಲ್ತಾಫ್ ಕೇರಳದ ₹25 ಕೋಟಿ ಬಹುಮಾನದ ಲಾಟರಿ ಗೆದ್ದಿದ್ದಾನೆ. ಶ್ರಮಜೀವಿಗೆ ಅದೃಷ್ಟ ಒಲಿದಿದೆ. ಆದರೆ, ಈ ಅದೃಷ್ಟ ಜೀಯವರ ಹಾಗೂ ನಿರ್ಮಲಕ್ಕನ ಕಣ್ಣು ಕುಕ್ಕಲಿದೆ. ಹಾಗಾಗಿ ಅದೃಷ್ಟದ ಮೇಲೂ ತೆರಿಗೆ ವಿಧಿಸಲಾಗಿದೆ.

ಈಗ ಈ ಅದೃಷ್ಟದ ಮೇಲೆ ನಿರ್ಮಲಕ್ಕನ ತೆರಿಗೆ ಭಯೋತ್ಪಾದನೆ ಯಾವ ಲೆವೆಲಿನದ್ದು ಎಂದರೆ, ₹25 ಕೋಟಿಯ ಬಹುಮಾನವಾದರೆ, ಅದರ ಶೇ.10 ಏಜೆಂಟ್ ಕಮಿಷನ್, ಅಂದರೆ ₹2.5 ಕೋಟಿ ಅಲ್ಲೋಯ್ತು. ಆಮೇಲೆ 30% ತೆರಿಗೆ, ಅಂದರೆ ₹6.75 ಕೋಟಿ.

Advertisements

ಹೀಗೆ ಏಜೆಂಟ್ ಕಮಿಷನ್ ಹಾಗೂ ತೆರಿಗೆ ಕಳೆದಾಗ ಉಳಿಯುವುದು ₹15.75 ಕೋಟಿ. ಅಲ್ಲಿಗೆ ಮುಗಿಯಲ್ಲ. ಬಹುಮಾನದ ಮೊತ್ತ ₹5 ಕೋಟಿಗಿಂತ ಹೆಚ್ಚಿದ್ದರೆ, 37% ಹೆಚ್ಚುವರಿ ಸರ್‌ರ್ಚಾರ್ಜ್ ಬೇರೆ ಇದೆ. ಅದಕ್ಕೆಂದು ₹2.4 ಕೋಟಿ ಹೋಯ್ತು. ಇಷ್ಟಾಗುವಾಗ ಎಲ್ಲಾ ತೆರಿಗೆ ಎಂದು ಒಟ್ಟು ₹9.24 ಕೋಟಿ ಢಮಾರ್!.

Capture 10

ಉಸ್ಸಪ್ಪಾ! ಎಲ್ಲಾ ಮುಗಿದೋಯ್ತು ಎನ್ನಬಹುದೇ? ಇಲ್ಲ!. ಮತ್ತೆ ಬಹುಮಾನದ ಮೊತ್ತದಿಂದ ಕಳೆದ ಒಟ್ಟು ತೆರಿಗೆಯ ₹9.24 ಕೋಟಿ ಮೇಲೆ ಇನ್ನೊಂದು 4% ಶಿಕ್ಷಣ ಹಾಗೂ ಆರೋಗ್ಯ ಸೆಸ್ ಬೇರೆ ಇದೆ. ಅದು ₹36,99,000. ಅಂದರೆ ತೆರಿಗೆಯ ಮೇಲೆ ತೆರಿಗೆ. ಹೇಗೆ ನಮ್ಮ ‘ಜೀ’ಯವರ ಆಟ?

ಅಲ್ಲಿಗೆ ₹25 ಕೋಟಿ ರೂಪಾಯಿಯ ಲಾಟರಿ ಗೆದ್ದರೆ, ₹12.11 ವಿವಿಧ ತೆರಿಗೆ ಕಳೆದು ಕೊನೆಗೆ ಕೈಗೆ ಬರುವುದು ₹12.88 ಕೋಟಿ. ಅಂದರೆ ಅಲ್ಲಿಗೆ ಸುಮಾರು 50% ತೆರಿಗೆ.

ಇನ್ನೂ ಭಯಾನಕವೆಂದರೆ, ಅಲ್ತಾಫ್ ಪಾಷಾ ತಾನು ಖರೀದಿಸಿದ ಐನೂರು ರೂಪಾಯಿಯ ಲಾಟರಿಯ ಟಿಕೆಟ್ ಮೇಲೆ 28% ಜಿಎಸ್‌ಟಿ ಬೇರೆ ಕಟ್ಟಿರುತ್ತಾನೆ. ಯಾಕೆಂದರೆ ಅದು ಹೊರ ರಾಜ್ಯದ ಲಾಟರಿ. ಇನ್ನು ಲಾಟರಿ ಏಜೆಂಟ್ ತಾನು ಗಳಿಸಿದ ಕಮಿಷನ್ ಮೇಲೆ ಪ್ರತ್ಯೇಕ ಆದಾಯ ತೆರಿಗೆ ಬೇರೆ ಕೊಡಬೇಕು. ಅಲ್ಲಿಗೆ ಸರ್ಕಾರದ ಬಾಯಿಗೆ ಎಲ್ಲಾ ಮೂಲಗಳಿಂದಲೂ ತುಪ್ಪ.

ಇದನ್ನು ಓದಿದ್ದೀರಾ? ಮಂಡ್ಯ | ಕೇರಳದ ಓಣಂ ಲಾಟರಿಯಲ್ಲಿ ₹25 ಕೋಟಿ ಗೆದ್ದ ಪಾಂಡವಪುರದ ಬೈಕ್ ಮೆಕ್ಯಾನಿಕ್!

ಹಾಗಾಗಿ ಲಾಟರಿ ಗೆದ್ದಿರೋದು ಅಲ್ತಾಫ್ ಅಲ್ಲ. ಆತ ಪಾಪ ಐನೂರು ರುಪಾಯಿ ಕೊಟ್ಟು ಖರೀದಿಸಿದ್ದು. ಆ ಐನೂರು ರೂಪಾಯಿಯ ಮೇಲೂ ತೆರಿಗೆ ಕಟ್ಟಿದ್ದಾನೆ ಆತ. ನಿಜವಾದ ಲಾಟರಿ ಗೆದ್ದಿರೋದು ಸರ್ಕಾರ. ಒಂದೂ ಪೈಸೆ ಖರ್ಚಿಲ್ಲದೆ ಸುಮಾರು ಹತ್ತು ಕೋಟಿ ಸರ್ಕಾರಕ್ಕೆ! ವ್ಹಾ ಎಂಥಾ ಅದೃಷ್ಟ ಸರ್ಕಾರದ್ದು ಅಲ್ವಾ? ಜೀ ಇದ್ದರೆ ಜೀವನ ಇಲ್ಲ!. ಇದನ್ನು ಭಯೋತ್ಪಾದನೆ ಅನ್ನದೆ, ಇನ್ನೇನೆನ್ನಬೇಕು ಹೇಳಿ?

?s=150&d=mp&r=g
ಅಲ್ಮೇಡ ಗ್ಲಾಡ್ಸನ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X