ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡಿ ಇಲ್ಲ ಅಂದ್ರೆ ಭಯೋತ್ಪಾದಕ ಸಂಘಟನೆ ಘೋಷಿಸಿ ಎಂಬ ಕೂಗು ಈಗ ಕೆನಡಾದಿಂದ ಕೇಳಿ ಬರ್ತಾ ಇದೆ. ಹಾಗಾದ್ರೆ ಆರ್‌ಎಸ್‌ಎಸ್ ಅನ್ನ ಯಾಕೆ ಬ್ಯಾನ್ ಮಾಡಬೇಕು? ಬ್ಯಾನ್ ಮಾಡಿ ಅಂತ ಹೇಳ್ತಾ ಇರೋದಾದ್ರೂ ಯಾರು? ಆರ್‌ಎಸ್‌ಎಸ್‌ನಿಂದ ಅವರಿಗೆ ಏನ್ ಸಮಸ್ಯೆ ಆಗ್ತಾ ಇದೆ ಅನ್ನೋದರ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ.
ಈ ಹಿಂದೆ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮೇಲೆ 2022ರಲ್ಲಿ ಕೇಂದ್ರ ಸರ್ಕಾರ ನಿಷೇಧ ಹೇರಿತು. ಪಿಎಫ್‌ಐಅನ್ನು ನಿಷೇಧಿಸಿದಂತೆ ಆರ್‌ಎಸ್‌ಎಸ್‌ಅನ್ನೂ ಸಹ ಬ್ಯಾನ್ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಹಾರದ ಲಾಲು ಪ್ರಸಾದ್ ಮತ್ತು ಕೇರಳದ ರಮೇಶ್ ಚೆನ್ನಿತಲಾ ಅವರಂತಹ ಹಲವಾರು ರಾಜಕೀಯ ನಾಯಕರು ಆರ್‌ಎಸ್‌ಎಸ್ಅನ್ನೂ ನಿಷೇಧಿಸಬೇಕು ಈ ಹಿಂದೆಯೇ ಒತ್ತಾಯಿಸಿದ್ದರು. ಗಮನಾರ್ಹವಾಗಿ ಈಗಾಗಲೇ ಆರ್‌ಎಸ್‌ಎಸ್‌ಅನ್ನು 3 ಬಾರಿ ನಿಷೇಧಿಸಿ, ಬಳಿಕ ನಿಷೇಧವನ್ನು ತೆರವುಗೊಳಿಸಲಾಗಿದೆ.

ಮಹಾತ್ಮ ಗಾಂಧಿಯವರ ಹತ್ಯೆಯ ನಂತರ, 1948ರಲ್ಲಿ ಮೊದಲ ಬಾರಿಗೆ RSS ನಿಷೇಧವಾಗಿತ್ತು. ಮಹಾತ್ಮ ಗಾಂಧಿಯವರನ್ನು ನಾಥೂರಾಂ ಗೋಡ್ಸೆ ಕೊಂದಾಗ RSS ಎಲ್ಲ ಶಾಖೆಗಳಲ್ಲೂ ಸಿಹಿ ಹಂಚಿ ಸಮಾರಂಭಗಳನ್ನು ಮಾಡಿತ್ತು. ಹೀಗಾಗಿ ಫೆಬ್ರವರಿಯಲ್ಲಿ ಹಿಂದೂ ಮಹಾಸಭಾದ ಮುಖ್ಯಸ್ಥ ಸಾವರ್ಕರ್ ಅವರನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲ ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ಫೆಬ್ರವರಿ 4,1948 ರಂದು RSS ನಿಷೇಧಿಸಿ ಅದರ ಸರಸಂಘಚಾಲಕ ಗೋಳ್ವಾಲ್ಕರ್ ಅವರ ಜೊತೆ ಹಲವಾರು RSS ಕಾರ್ಯಕರ್ತರನ್ನು ಬಂಧಿಸಿತ್ತು. “ದೇಶದಲ್ಲಿ ಅಶಾಂತಿ, ದ್ವೇಷ ಹರಡಿದ್ದು, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡೋ ಶಕ್ತಿಗಳನ್ನು ಬೇರುಸಹಿತ ಕಿತ್ತೆಸೆಯಲು RSS ಮೇಲೆ ನಿಷೇಧವನ್ನು ಹೇರಲಾಗುತ್ತಿದೆ” ಎಂದು ಅಂದಿನ ಸರ್ಕಾರ ಹೇಳಿತ್ತು. ನಂತರ ಜುಲೈ 11, 1949 ರಂದು ನಿಷೇಧವನ್ನು ತೆಗೆದುಹಾಕಲಾಗಿತ್ತು.

ತುರ್ತು ಪರಿಸ್ಥಿತಿಯ ಸಮಯದಲ್ಲೂ ಕೂಡ RSSಅನ್ನು ಬ್ಯಾನ್ ಮಾಡಲಾಗಿತ್ತು. ಇಂದಿರಾಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದ ಈ ವೇಳೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಈ ಸಂದರ್ಭದಲ್ಲಿ RSS ಮೇಲೆ ಹಿಡಿತ ಸಾಧಿಸಲು ಇಂದಿರಾಗಾಂಧಿ ನೇತೃತ್ವದ ಸರ್ಕಾರ ದಿಟ್ಟ ಹೆಜ್ಜೆ ಇರಿಸಿತ್ತು. RSSನ ಕಾರ್ಯ ಚಟುವಟಿಕೆಗಳನ್ನು ಮೊಟಕುಗೊಳಿಸುವ ಉದ್ದೇಶದಿಂದ 1975ರಲ್ಲಿ RSSಅನ್ನ ಬ್ಯಾನ್ ಮಾಡಲಾಗಿತ್ತು. ತುರ್ತು ಪರಿಸ್ಥಿತಿ ಕೊನೆಗೊಂಡಾಗ ಮಾರ್ಚ್ 22, 1977 ರಂದು RSS ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕಲಾಯಿತು.

ಬಾಬರಿ ಮಸೀದಿ ಧ್ವಂಸಗೊಳಿಸಿದಾಗ RSS ಮೇಲೆ ಮೂರನೇ ಬಾರಿಗೆ ನಿಷೇಧ ಹೇರಲಾಗಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಸಂಭವಿಸಿತ್ತು. ಈ ಪ್ರಕರಣ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಈ ವೇಳೆ ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದರು. ಶಂಕರರಾವ್ ಬಲವಂತರಾವ್ ಚವಾಣ್ ಅವರು ಅಂದಿನ ಗೃಹ ಸಚಿವರಾಗಿದ್ದರು. ಈ ವೇಳೆ RSS ಅನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ನಂತರ ಜೂನ್ 4, 1993 ರಂದು ಮೂರನೇ ನಿಷೇಧವನ್ನು ತಿಂಗಳೊಳಗೆ ತೆಗೆದುಹಾಕಿತು.
ಈಗಾಗಲೇ ಮೂರು ಬಾರಿ ನಿಷೇಧಗೊಂಡಿದ್ದ RSS ಅನ್ನ ಮತ್ತೆ ನಿಷೇಧ ಮಾಡಬೇಕು. ಇಲ್ಲವೇ, RSSಗ ಒಂದು ಭಯೋತ್ಪಾದಕ ಪಡೆ ಎಂದು ಘೋಷಿಸಬೇಕು ಎಂದು ಕೆನಡಾದ ಎನ್ಡಿಪಿ ಸಂಸದರು ಆಗ್ರಹಿಸಿದ್ದಾರೆ. ಕೆನಡಾ ಸಂಸತ್ತಿನಲ್ಲಿ ನಡೆದ ‘ವಿದೇಶಿ ಹಸ್ತಕ್ಷೇಪ’ ವಿಷಯದ ಬಗೆಗಿಗ ತುರ್ತು ಚರ್ಚೆಯಲ್ಲಿ ಮಾತನಾಡಿದ ಎನ್‌ಡಿಪಿ ಸಂಸದರು, ಬಿಜೆಪಿಯನ್ನು ಜನಾಂಗೀಯವಾದಿಗಳು ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಜನಾಂಗೀಯ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಪಕ್ಷ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಜೊತೆ ಮಾಹಿತಿ ಹಂಚಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಕೆನಡಾದಿಂದ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಕ್ಟೋಬರ್ 21ರಂದು ರಾತ್ರಿ ಕೆನಡಾದ ‘ಹೌಸ್ ಆಫ್ ಕಾಮನ್ಸ್’ನಲ್ಲಿ ನಡೆದ ಚರ್ಚೆ ವೇಳೆ ಎನ್‍ಡಿಪಿ ಮುಖಂಡರು, ಸಿಖ್ಖರು ಭಯಭೀತರಾಗಿರುವ ಬಗ್ಗೆ ಅವರು ಮಾತನಾಡಿದ್ದಾರೆ. ಮನೆಗಳಲ್ಲೇ ಹತ್ಯೆಗಳಾಗುತ್ತಿವೆ. ಭದ್ರತೆಯ ಮೇಲೆಯೇ ಸಾವಿರಾರು ಡಾಲರ್ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಕ್ರಿಮಿನಲ್ ಗ್ಯಾಂಗ್‍ಗಳಿಂದ ಅಪಾಯ ಇರೋದ್ರಿಂದ ಹೋಟೆಲ್‍ಗಳಲ್ಲಿ ವಾಸಿಸಬೇಕಾದ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೆನಡಾದ ಲಿಬರಲ್ ಸಂಸದೆ ರೂಬಿ ಸಹೋತಾ, “ಭಾರತದ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ನಿಂದ ಬೆದರಿಕೆ ಕರೆಗಳು ಬರುತ್ತಿರುವುದನ್ನು ನೊಡಿದ್ದೇನೆ. ಇದು ಹೇಗೆ ನಡೆಯತ್ತೆ? ಜೈಲಿನಲ್ಲಿರುವ ಕೈದಿಗಳು ಸ್ಥಳೀಯ ಗ್ಯಾಂಗ್‍ಸ್ಟರ್‌ಗಳ ನೆರವಿನೊಂದಿಗೆ ನಮ್ಮ ದೇಶದ, ನಮ್ಮ ಕ್ಷೇತ್ರದ ವ್ಯಕ್ತಿಗಳನ್ನು ಸುಲಿಗೆಗಾಗಿ ಹೇಗೆ ಸಂಪರ್ಕಿಸಲು ಸಾಧ್ಯವಾಗತ್ತದೆ” ಅಂತ ಪ್ರಶ್ನಿಸಿದ್ದರು. “ಇದರಲ್ಲಿ ವಿದೇಶಿ ಹಸ್ತಕ್ಷೇಪ ಇದೆ. ಮಾನವ ಹಕ್ಕುಗಳನ್ನು ಉಲ್ಲಂಘಿಸುವವರಿಗೆ ದೇಶದಲ್ಲಿ ವಾಸಿಸಲು ಅವಕಾಶ ನೀಡಬಾರದು” ಎಂದೂ ಆಗ್ರಹಿಸಿದ್ದಾರೆ.
ನ್ಯೂ ಡೆಮಾಕ್ರಟಿಕ್ ಪಾರ್ಟಿ ಸಂಸದ ಹೀಥರ್ ಮೆಕ್‍ಪೆರ್ಸನ್, ಲಿಬರಲ್ ಸಂಸದ ರಣದೀಪ್ ಸರಾಯ್, ಜಗಮೀತ್ ಸಿಂಗ್, ಕನ್ಸರ್ವೇಟಿವ್ ಸಂಸದ ಜಸರಾಜ್ ಸಿಂಗ್ ಹೆಲೆನ್ ಮತ್ತಿತರರು ಇದಕ್ಕೆ ಧ್ವನಿಗೂಡಿಸಿದ್ದರು. ಲಿಬರಲ್ ಸಂಸದ ರಣದೀಪ್ ಸರಾಯ್, “ಭಾರತ ಸರ್ಕಾರದ ಏಜೆಂಟರು ಅನೇಕ ಕೊಲೆಗಳು ಮತ್ತು ಸುಲಿಗೆಗಳಲ್ಲಿ ಭಾಗಿಯಾಗಿದ್ದಾರೆ” ಎಂದು ಹೇಳಿಕೆ ಕೊಟ್ಟಿದ್ದಾರೆ. NDP ನಾಯಕ ಜಗ್ಮೀತ್ ಸಿಂಗ್, “ಆರ್‌ಎಸ್‌ಎಸ್ ಅಂತ ಹಿಂಸಾತ್ಮಕ, ಉಗ್ರಗಾಮಿ, ಬಲಪಂಥೀಯ ಸಂಘಟನೆಯಿದೆ. ಇದು ಕೆನಡಾ ಸೇರಿದಂತೆ ಪ್ರಪಂಚದಾದ್ಯಂತ ಶಾಖೆಗಳನ್ನು ಹೊಂದಿದೆ. ಅದನ್ನು ನಿಷೇಧಿಸುವ ಅಗತ್ಯವಿದೆ” ಎಂದು ಆಗ್ರಹಿಸಿದ್ದಾರೆ.
ಈಗ ಸಿಖ್ಖರು, ಭಾರತ, ಕೆನಡಾ ಇದೊಂದು ತ್ರಿಕೋನ ಸ್ಟೋರಿ. ಇದು ಖಲಿಸ್ತಾನಿ ಹೋರಾಟದೊಂದಿಗೆ ಎಣೆದುಕೊಂಡಿದೆ. ಪಾಕಿಸ್ತಾನ ಮತ್ತು ಭಾರತದಲ್ಲಿ ಎರಡೂ ರಾಷ್ಟ್ರಗಳಿಯೂ ಪಂಜಾಬ್ ಇದೆ. ಈ ರಾಜ್ಯಗಳಲ್ಲಿ ಸಿಖ್ಖರ ಪ್ರಾಬಲ್ಯವೇ ಹೆಚ್ಚು. ಈಗಾಗಿಯೇ, ಪಾಕ್ ಪಂಜಾಬ್ ಮತ್ತು ಭಾರತದ ಪಂಜಾಬ್‌ಅನ್ನು ಒಗ್ಗೂಡಿಸಿ ‘ಖಲಿಸ್ತಾನ’ ರಾಷ್ಟ್ರ ನಿರ್ಮಿಸಬೇಕೆಂದು ಖಲಿಸ್ತಾನಿಗಳು ಒತ್ತಾಯಿಸುತ್ತಿದ್ದಾರೆ. ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟಿದ್ದಾರೆ. ಖಲಿಸ್ತಾನಿ ಹೋರಾಟಗಾರರ ಈ ವಾದವನ್ನು ಭಾರತದ ರಾಜತಾಂತ್ರಿಕರು ಮೊದಲಿನಿಂದಾನೂ ವಿರೋಧಿಸುತ್ತಿದ್ದಾರೆ.

ಗಮನಾರ್ಹವಾಗಿ, 1930ರಿಂದಾನೇ ಖಲಿಸ್ತಾನಿ ಹೋರಾಟಗಾರರು ಪ್ರತ್ಯೇಕ ರಾಷ್ಟ್ರದ ಬೇಡಿಕೆಯೊಂದಿಗೆ ಹೋರಾಟ ಆರಂಭಿಸಿದ್ದರು. ಆದರೆ, ಆಗ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದರಿಂದ ಈ ಹೋರಾಟ ಗಂಭೀರತೆ ಪಡೆದುಕೊಂಡಿರಲಿಲ್ಲ. ಸ್ವಾತಂತ್ರ್ಯ ನಂತರ, ಖನಿಸ್ತಾನಿ ಹೋರಾಟ ಮತ್ತೆ ಮುನ್ನೆಲೆ ಬಂದಿತು. ಖನಿಸ್ತಾನಿ ಹೋರಾಟದ ಮುಖಂಡರು ಭಾರತದಲ್ಲಿದ್ದುಕೊಂಡು ಖಲಿಸ್ತಾನಿ ಹೋರಾಟಕ್ಕೆ ಸಿಖ್ಖರನ್ನ ಪ್ರೇರೇಪಿಸುವುದಕ್ಕೆ ಆಗುವುದಿಲ್ಲವೆಂದು ಬೇರೆ ದೇಶಗಳಲ್ಲಿ ಕುಳಿತು ಹೋರಾಟವನ್ನು ನಿಯಂತ್ರಿಸಲು ಮುಂದಾಗಿದ್ದಾರೆ.
ಈ ಖಲಿಸ್ತಾನಿ ನಾಯಕರು ಕೆನಡಾ ದೇಶದಲ್ಲಿ ಕುಳಿತುಕೊಂಡು ಅಲ್ಲೇ ಒಂದು ಪಕ್ಷವನ್ನೂ ಕಟ್ಟಿಕೊಂಡಿದ್ದಾರೆ. ಕೆನಡಾದ ರಾಜಕೀಯದಲ್ಲೂ ಕೂಡ ಇವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೆನಡಾದಲ್ಲಿ ಕುಳಿತುಕೊಂಡು ಭಾರತದಲ್ಲಿ ಖಲಿಸ್ತಾನಿ ಅನ್ನೋ ಬೇರೆ ದೇಶ ಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ. ಖಲಿಸ್ತಾನಿ ಪ್ರತ್ಯೇಕ ರಾಷ್ಟ್ರದ ಹೋರಾಟಕ್ಕೆ ಯಾರೆಲ್ಲಾ ಬೆಂಬಲ ಕೊಡ್ತಿದ್ದಾರೆ, ಯಾರೆಲ್ಲಾ ಕುಮ್ಮಕ್ಕು ಕೊಡ್ತಿದ್ದಾರೋ ಅಂತವರನ್ನು ಗುರುತಿಸಿ ಅವರನ್ನು ಭಯೋತ್ಪಾದಕರೆಂದು ಭಾರತ ಸರ್ಕಾರ ಘೋಷಿಸುತ್ತಿದೆ.
ಇತ್ತೀಚೆಗೆ, ಖಲಿಸ್ತಾನಿ ಹೋರಾಟಗಾರರನ್ನ ಕೆನಡಾ ಅಥವಾ ವಿದೇಶಗಳಲ್ಲಿ ಕೊಲೆ ಮಾಡೋ ಪ್ರವೃತ್ತಿ ಕೂಡ ನಡೀತಾ ಇದೆ. ‘ಈ ಕೊಲೆಗಳನ್ನ ಭಾರತದ ದೇಶವೇ ಸುಪಾರಿ ಕೊಟ್ಟು ಮಾಡಿಸುತ್ತಿದೆ. ಭಾರತದ ರಾಜತಾಂತ್ರಿಕತೆ, ಆರ್‌ಎಡಬ್ಲ್ಯೂ ಹಾಗೂ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ಗಳನ್ನ ಬಳಸಿಕೊಂಡು ವಿದೇಶದಲ್ಲಿರುವ ಖಲಿಸ್ತಾನಿ ಹೋರಾಟಗಾರರನ್ನ ಭಾರತದ ಕೊಲೆ ಮಾಡಿಸುತ್ತಿದೆ’ ಎಂದು ಕೆನಡಾ ಆರೋಪಿಸಿದೆ. ಅಮೆರಿಕಾ ಕೂಡ ಭಾರತದವನ್ನ ಪ್ರಶ್ನೆ ಮಾಡಿದೆ. ಇದೇ ಕಾರಣಕ್ಕೆ ಭಾರತ ಹಾಗೂ ಕೆನಡಾ ನಡುವೆ ಬಿಕ್ಕಟ್ಟು ಬಿಗಡಾಯಿಸಿದೆ.

ಖಲಿಸ್ತಾನಿ ಮುಖಂಡ ಹರ್ದಿಪ್ ಸಿಂಗ್ ನಿಜ್ಜರ್ ನನ್ನ ಸಿಖ್ ಮಂದಿರದಿಂದ ಹೊರ ಬರುತ್ತಿದ್ದಾಗ ಆತನನ್ನು ಗುಂಡಿಟ್ಟು ಕೊಲೆ ಮಾಡಲಾಯಿತು. ಆ ಕೊಲೆಯನ್ನ ಕೆನಡಾದಲ್ಲಿರೋ ಭಾರತದ ರಾಯಭಾರಿ ಸಂಜಯ್ ಕುಮಾರ್ ವರ್ಮಾ ತಮ್ಮ ಏಜೆಂಟ್‌ಗಳನ್ನ ಬಳಿಸಿಕೊಂಡು ಮಾಡಿಸಿದ್ದಾರೆ ಅಂತ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೂ ಆರೋಪಿಸಿದ್ದರು. ಕೆನಡಾದಲ್ಲಿರೋ ಭಾರತದ ರಾಜತಾಂತ್ರಿಕ ಅಧಿಕಾರಿಗಳ ತನಿಖೆಗೆ ಕೆನಡಾ ಸರ್ಕಾರ ಮುಂದಾಗಿತ್ತು. ಆದರೆ, ನಿಜ್ಜರ್ ಹತ್ಯೆಗೂ ಭಾರತಕ್ಕೂ ಸಂಬಂಧವಿಲ್ಲವೆಂದು ಭಾರತ ಸರ್ಕಾರ ಹೇಳಿತು. ಭಾರತದ ರಾಜತಾಂತ್ರಿಕರನ್ನು ತನಿಖೆಗೆ ಒಳಪಡಿಸುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಇದೇ ಟೈಮ್‌ನಲ್ಲಿ ಭಾರತದ 6 ರಾಜತಾಂತ್ರಿಕ ಅಧಿಕಾರನ್ನ ಕೆನಡಾ ಸರ್ಕಾರ ಗಡಿಪಾರು ಮಾಡಿತು. ಭಾರತ ಕೂಡ ಇದಕ್ಕೆ ಸೆಡ್ಡು ಹೊಡೆದು, ತನ್ನಲ್ಲಿರೋ ಕೆನಡಾದ 6 ರಾಜತಾಂತ್ರಿಕರನ್ನ ದೇಶ ತೊರೆಯುವಂತೆ ಹೇಳಿತು.
ಇದಿಷ್ಟು ಕೆನಡಾ ಹಾಗೂ ಭಾರತದ ರಾಜತಾಂತ್ರಿಕತೆ ನಡುವಿನ ಬಿಕ್ಕಟ್ಟಿಗೆ ಕಾರಣ. ಆದರೆ, 2020ರಲ್ಲಿ ಭಾರತದ ಹರ್ದೀಪ್ ಸಿಂಗ್ ನಿಜ್ಜರ್ ಮತ್ತು ಗುರುಪಂತ್ವನ್ ಸಿಂಗ್‌ನನ್ನ ಭಯೋತ್ಪಾದಕರು ಎಂದು ಉಲ್ಲೇಖಿಸಿತು. ಈ ಗುರುಪಂತ್ವನ್ ಸಿಂಗ್ ಅಥವಾ ಪನ್ನು ಅನ್ನೋನು ನಿಜ್ಜರ್ ಹತ್ಯೆಗಾಗಿ ಭಾರತದ ಮೇಲೆ ಸೇಡು ತೀರಿಸಿಕೊಳ್ಳಬೇಕು ಅಂತ ಬೆದರಿಕೆ ಕೂಡ ಹಾಕಿದ್ದ. ಈ ಗುರುಪಂತ್ವನ್ ಸಿಂಗ್ ಹತ್ಯೆಗೆ ಭಾರತ ಯತ್ನಿಸಿದೆ ಎಂದು ಅಮೆರಿಕ ಹೇಳಿಕೆ ಕೊಟ್ಟಿತ್ತು.
ಆದರೆ, ಇದನ್ನು ಭಾರತ ತಿರಸ್ಕರಿಸಿತು. ಇಷ್ಟೆಲ್ಲ ಆಗುತ್ತಿರುವ ಸಮಯದಲ್ಲಿ ಭಾರತದ ಆರ್‌ಎಸ್‌ಎಸ್‌ಅನ್ನು ಉಗ್ರ ಸಂಘಟನೆ ಅಂತ ಗುರುತಿಸಬೇಕು. ಭಾರತದ ಮೇಲೆ ದಿಗ್ಭಂಧನ ವಿಧಿಸಬೇಕು ಅಂತ ಕೆನಡಾದ ಎನ್ಡಿಪಿ ಸಂಸದರು ಆಗ್ರಹ ಮಾಡಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯನ್ನ ಜನಾಂಗೀಯವಾದಿಗಳು ಎಂದೂ ಕರೆದಿದ್ದಾರೆ. ಭಾರತದ ಆರ್‌ಎಸ್‌ಎಸ್ ಕೆನಡಾದಲ್ಲೂ ಸಕ್ರಿಯವಾಗಿದೆ. ಹಾಗಾಗಿ ಕೆನಡಾದಲ್ಲಿ ಆರ್‌ಎಸ್‌ಎಸ್ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ, ನಿಷೇಧಿಸಬೇಕೆಂದು ಕೆನಡಾ ಸಂಸದರು ಒತ್ತಾಯಿಸಿದ್ದಾರೆ.
ಕೆನಡಾದಲ್ಲಿ ಆರ್‌ಎಸ್‌ಎಸ್‌ಅನ್ನ ನಿಷೇಧ ಮಾಡಬೇಕು ಅನ್ನೋ ಕೂಗು ಮುನ್ನೆಲೆಯಲ್ಲಿರುವ ಸಮಯದಲ್ಲೇ, ಭಾರತದಲ್ಲಿಯೂ ಆರ್‌ಎಸ್‌ಎಸ್‌ಅನ್ನ ನಿಷೇಧ ಮಾಡಬೇಕು ಎನ್ನುವ ಕೂಗು ಕೂಡ ಕೇಳಿಬಂದಿದೆ. ಪಿಎಫ್‌ಐ ಅನ್ನ ನಿಷೇಧಿಸಿದ ರೀತಿಯಲ್ಲಿಯೇ ಆರ್‌ಎಸ್‌ಎಸ್ ಅನ್ನೂ ಕೂಡ ನಿಷೇಧ ಮಾಡಲೇಬೇಕು ಎಂಬ ಆಗ್ರಹಗಳು ಕೂಡ ಕೇಳಿ ಬಂದಿತ್ತು.