ಉಚಿತ ಕೊಡುಗೆಗಳ ಬಗ್ಗೆ ಅನುಮಾನವಿರಲಿ; ನಿಮ್ಮ ಮೆದುಳು ವಸಾಹತು ಕಾಲೋನಿಯಾಗದಿರಲಿ…

Date:

Advertisements
ನನಗೆ ಸೇವೆ ಬಿಟ್ಟು ಬೇರಾವುದೇ ಉದ್ದೇಶವಿಲ್ಲವೆಂದು ಉದ್ಧಾತ್ತ ಮಾತುಗಳು ಶುರುವಾದವೆಂದರೆ ಅಲ್ಲೊಂದು ಉಪಾಯವಿದೆ, ಬಹು ದೊಡ್ಡ ಸಂಚಿದೆ, ದಶಕಗಳಾದ ಮೇಲೆ ನಿಜರೂಪ ದರ್ಶನ ಮಾಡಿಸುವ ವ್ಯಾಘ್ರನಿದ್ದಾನೆ ಎಂಬುದನ್ನು ಅರಿಯದೆ ಹೋದರೆ... ನಿಮ್ಮ ಮೆದುಳು ಮತ್ತೊಂದು ವಸಾಹತು ಕಾಲೋನಿಯಾಗುವುದರಲ್ಲಿ ಅನುಮಾನವೇ ಇಲ್ಲ...

ನನ್ನ ಕಾಲೇಜು ದಿನಗಳಲ್ಲಿ ನನ್ನ ಆತ್ಮೀಯ ಗೆಳೆಯನೊಬ್ಬ ಪೇಪರ್ ಹಾಕುತ್ತಿದ್ದ. ನಾನು ಕೂಡ ಅವನ ಜೊತೆ ಹೋಗುತ್ತಿದ್ದೆ. ಅವನಿಗೆ ಅದು ಹೊಟ್ಟೆ ಪಾಡಾದರೆ ನನಗೆ ಹೊಸ ವಿಷಯವೊಂದನ್ನು ತಿಳಿಯುವ ಹಂಬಲ, ಜಗವೇ ಎದ್ದಿರದ ಗಳಿಗೆಗಳಲ್ಲಿ, ಖಾಲಿ ರಸ್ತೆಗಳಲ್ಲಿ ಸೈಕಲ್ ತುಳಿಯುವ ಸಂಭ್ರಮ.

ಎಲ್ಲರ ಮನೆಗೂ ‘ಪ್ರಜಾವಾಣಿ’ ಮಾತ್ರ ತರಿಸಿಕೊಳ್ಳುತ್ತಿದ್ದ ದಿನಗಳವು. ಶುಕ್ರವಾರದಂದು ‘ಉದಯವಾಣಿ’ ಎಲ್ಲೆಡೆ ಕಾಣಿಸಿಕೊಳ್ಳುತ್ತಿತ್ತು. ಸೆಟ್ಟೇರಿದ ಚಲನ ಚಿತ್ರಗಳ, ತೋಪದ ಮತ್ತು ಸೂಪರ್ ಹಿಟ್ ಆದ ಚಿತ್ರಗಳ, ನಾಯಕ ನಾಯಕಿಯರ ಬಿಸಿ ಬಿಸಿ ಚಿತ್ರಗಳ, ಗಾಸಿಪ್ಪುಗಳ ವರದಿಗಳು ಶುಕ್ರವಾರದ ‘ಉದಯವಾಣಿ’ಯಲ್ಲಿ ಸಿಗುತ್ತಿದ್ದವು. ಅಲ್ಲಿ ಪ್ರಕಟವಾದ ನಾಯಕಿಯರ ಚಿತ್ರಗಳು ನಮ್ಮ ರೂಮಿನ ಗೋಡೆಯ ಮೇಲೆ ರಾರಾಜಿಸುತ್ತಿದ್ದವು. ಆ ನಾಯಕಿಯರೋ ಗೋಡೆಯ ಮೇಲಿಂದ ನೇರ ನಮ್ಮ ಹೃದಯಗಳಿಗೆ ಲಗ್ಗೆಯಿಡುತ್ತಿದ್ದರು. ಕನಸುಗಳಲ್ಲಿ ಕಾಡುತ್ತಿದ್ದರು. ಹೀಗಿದ್ದ ಈ ಎರಡು ವಾಣಿಗಳ ಪ್ರಾಬಲ್ಯಕ್ಕೆ ಸವಾಲೆಸೆಯಲು ಮತ್ತೊಂದು ದಿನಪತ್ರಿಕೆ ಮಾರುಕಟ್ಟೆಗೆ ಬಂದಿತ್ತು.

ಆ ದಿನ ನೆನಪಿದೆ ನನ್ನ ಗೆಳೆಯ ‘ಪ್ರಜಾವಾಣಿ’ಯ ಜೊತೆಗೆ ಮತ್ತೊಂದು ದಿನಪತ್ರಿಕೆಯನ್ನು ಸುತ್ತಿಡುತ್ತಿದ್ದ. “ಏನೋ ಇದು ಆ ದಿನಪತ್ರಿಕೆಯನ್ನು ಜನ ಕೊಂಡುಕೊಳ್ಳೋಕೆ ಶುರು ಮಾಡಿದ್ದಾರಾ? ಅದರ ಹೆಸರೇ ಕೇಳಿಲ್ವಲ್ಲೋ” ಎಂದು ಅಚ್ಚರಿ ವ್ಯಕ್ತಪಡಿಸಿದ್ದೆ. “ಇಲ್ಲ ಮಗ, ಈ ಪತ್ರಿಕೆಯನ್ನು ಕೆಲ ದಿನ ಫ್ರೀ ಆಗಿ ಪ್ರಜಾವಾಣಿ ಜೊತೆಗೆ ಹಂಚಬೇಕಂತೆ” ಎಂದಷ್ಟೇ ಅವ ಮುಗ್ಧನಂತೆ ಉತ್ತರಿಸಿದ್ದ. ಮುಂದೆ ಫ್ರೀ ಇದ್ದ ಪತ್ರಿಕೆ ಒಂದು ರೂಪಾಯಿಯಾಯಿತು. ಅದರ ಓದುಗರು ಕೂಡ ನಿಧಾನವಾಗಿ ಹೆಚ್ಚಾಗ ತೊಡಗಿದ್ದರು.

Advertisements

ಇದಾದ ಹಲವು ವರ್ಷಗಳ ನಂತರವೇ ನನಗೆ ತಿಳಿದದ್ದು ಆ ದಿನಪತ್ರಿಕೆಯನ್ನು ರಾಜ್ಯದ ಪ್ರಖ್ಯಾತ ಉದ್ಯಮಿಯೊಬ್ಬರು ಶುರು ಮಾಡಿದ್ದರು ಎಂದು. ಅದರಲ್ಲೊಂದು ಪೊಲಿಟಿಕಲ್ ಅಜೆಂಡಾ ಇತ್ತೆಂದು. ಆ ದಿನಪತ್ರಿಕೆಯಲ್ಲಿ ಸಾಹಿತ್ಯ, ಕ್ರೀಡೆ, ವ್ಯಾಪಾರ, ವಿದೇಶ ಸುದ್ದಿಯ ಜೊತೆಗೆ ಕೆಲ ಅಂಕಣಕಾರರು ಒಂದು ಇಂಟೆಂಟ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರೆಂದು. ಬಲು ನಯವಾಗಿ ಹಗೆಯನ್ನು ಓದುಗರ ನರನಾಡಿಗಳಲ್ಲಿ ಇಂಜೆಕ್ಟ್ ಮಾಡುತ್ತಿದ್ದರೆಂದು. ಈ ಅಂಕಣಕಾರರು ಮುಂದೆ ಸಂಸದರಾದರು, ಸಂಪಾದಕರಾದರೆಂದು! ಆ ದಿನಪತ್ರಿಕೆ ಕರ್ನಾಟಕದ ರಾಜಕಾರಣವನ್ನೇ ಬದಲಾಯಿಸಿತೆಂದು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಣಿಪುರದ ನಾಗಾ, ಕುಕಿಗಳೂ ಬುಡಕಟ್ಟು ಜನರು ಎಂದು ಪ್ರಧಾನಿಗೆ ನೆನಪಿಸಬೇಕಿದೆ

ವಸಾಹತುಶಾಹಿ ಅನುಭವಗಳಿಗೆ ಒಳಗಾದ ದೇಶಗಳ ಜನರಿಗೆ ಈ ಉಚಿತ ಕೊಡುಗೆಗಳ, ಉದ್ದಾತ್ತ ಮಾತುಗಳ ಕುರಿತು ಸಹಜವಾಗಿಯೇ ಅನುಮಾನವಿರಬೇಕಿತ್ತು. ಆದರೆ ನಮ್ಮ ಜನರಿಗೆ ನಿಜ ಅನುಮಾನದಿಂದ ಹುಟ್ಟುವ ಸತ್ಯಶೋಧನೆಗಿಂತ ಸುಲಭವಾಗಿ ಅರಗುವ ರುಚಿಯಾದ ಅಂಧಭಕ್ತಿ, ನಂಬಿಕೆಗಳೇ ಪ್ರಿಯವಾದವು. ಅವರಿಗೆ ಫ್ರೀ ಆಗಿ ಹಂಚಿಕೆಯಾದ ದಿನಪತ್ರಿಕೆಯೊಂದು ರಾಜ್ಯದ ರಾಜಕಾರಣವನ್ನೇ ಹೇಗೆ ಬದಲಾಯಿಸಿತು ಎಂದು ಎಂದಿಗೂ ಅರ್ಥವಾಗಲಾರದು. ಅದೇ ರೀತಿ ಜಿಯೋ ಫ್ರೀ ಸಿಮ್ ಹಂಚಿಕೆಯಿಂದ ಆಡಳಿತದಲ್ಲಿರುವ ಪಕ್ಷಕ್ಕಾದ ಲಾಭವೇನು ಅನ್ನೋದು ಎಂದಿಗೂ ತಿಳಿಯಲಾರದು. ಇನ್ಸ್ಟಾಗ್ರಾಂ, ಫೇಸ್ಬುಕ್ ಏಕೆ ಉಚಿತ ಸೌಲಭ್ಯ ನೀಡುತ್ತಿವೆ ಎಂದು ಮುಗ್ಧ ಜನರು ಎಂದಿಗೂ ಪ್ರಶ್ನಿಸಿಕೊಳ್ಳಲಾರರು. ಕಾಲೋನೈಸೇಷನ್ ಅನ್ನುವುದೊಂದು ಸುದೀರ್ಘ ಪ್ರಕ್ರಿಯೆ. ಅದು ಮಾವಿನ ಸಸಿ ನೆಡುವ ಪ್ರಕ್ರಿಯೆ, ಫಲ ಸಿಗೋಕೆ ದಶಕಗಳೇ ಹಿಡಿಯುತ್ತೆ. Colonisers, businessman can wait to fulfill there agendas all the while claiming not to have driven by an agenda. They initially call there limitless greed for power as selfless service to nation or language.

ಅಮೆರಿಕದ ಮೂಲ ನಿವಾಸಿಯಾದ ರೆಡ್ ಜಾಕೆಟ್ ಬಿಳಿಯ ಕಾಲೋನೈಸರ್ಸ್ ಅವರನ್ನು ಕುರಿತು ಹೇಳುತ್ತಾನೆ- “ಅವರು ಕುಳಿತುಕೊಳ್ಳಲು ಪುಟ್ಟ ಆಸನ ಒಂದನ್ನು ಕೇಳಿದರು. ಕನಿಕರದಿಂದ ಅವರು ಕೇಳಿದ ಆಸನ ಕೊಟ್ಟೆವು, ಅವರು ನಮ್ಮ ನಡುವೆ ಕುಳಿತರು. ನಾವು ಅವರಿಗೆ ತಿನ್ನಲು ಮಾಂಸ ಮತ್ತು ರೊಟ್ಟಿ ನೀಡಿದೆವು ಬದಲಿಗೆ ಅವರು ನಮಗೆ ವಿಷವನ್ನೇ ಉಣಿಸಿದರು- They asked for a small seat. We took pity on them, granted their request, and they sat down amongst us. We gave them corn and meat. They gave us poison in return.”

Colonisers ತಮ್ಮ ವಸಾಹತುಗಳನ್ನು ಬಿಟ್ಟು ಹೋಗಿರಬಹುದು ಆದರೆ ಅವರ ಕಲೆ, ತಮಗೆ ಸೇರದ ಜಾಗಗಳಲ್ಲಿ ತಳ ಊರುವ ನಿಪುಣತೆ, ಜನರನ್ನು ನಿಧಾನವಾಗಿ ಮೋಡಿ ಮಾಡುವ rhetoric ಎಲ್ಲವನ್ನೂ ಅಲ್ಲಿನ ಆಳುವ ವರ್ಗಗಳಿಗೆ ಕಲಿಸಿಕೊಟ್ಟು ಹೋಗಿದ್ದಾರೆ. (ಅಥವಾ ಆಳುವ ವರ್ಗ ಅದನ್ನು ಬಿಳಿಯರನ್ನು ಗಮನಿಸುತ್ತಾ ಮೈಗೂಡಿಸಿಕೊಂಡಿದೆ ಎಂದರೆ ಹೆಚ್ಚು ಸೂಕ್ತ ಅನಿಸುತ್ತೆ.) ನಮ್ಮಂತಹ ದೇಶದ ಆಳುವ ವರ್ಗ ಕೆಲಸ ಮಾಡುವ ವಿಧಾನ colonisers ವಿಧಾನಗಳಿಗಿಂತ ಭಿನ್ನವಾಗಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಇಲ್ಲಿನ ಆಳುವ ವರ್ಗ colonisers ಚಾಣಾಕ್ಷತನವನ್ನೇ ಬಳಸಿ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ. ಮೋಡಿ ಮಾಡುತ್ತದೆ.

ಒಂದು ದಿನಪತ್ರಿಕೆ ಉಚಿತವಾಗಿ ಹಂಚಿಕೆಯಾಗುತ್ತಿದೆ ಅಥವಾ ಸಿಮ್ ಕಾರ್ಡ್ ಉಚಿತವಾಗಿ ಕೊಡುತ್ತಿದ್ದಾರೆ ಅಥವಾ ಪ್ರಕಾಶಕರೊಬ್ಬರು ಎಲ್ಲರ ಪುಸ್ತಕಗಳನ್ನು ಮುದ್ರಿಸುತ್ತಾ ಇದ್ದಾರೆ, ಯಾವುದೇ ಲಾಭವಿಲ್ಲದೆ ಸಾಹಿತ್ಯ ಕೃಷಿ, ಪತ್ರಿಕೋದ್ಯಮ ನಡೆಸುತ್ತಾ ಇದ್ದಾರೆ ಅಂದ್ರೆ ನನ್ನ ಮನದ ಕನ್ನಡಿಯ ಮೇಲೆ ಮೊದಲು ಫ್ಲಾಶ್ ಆಗೋದು “ಕಿಲ್ಲಿಂಗ್ ದ ಫ್ಲವರ್ ಮೂನ್” ಮತ್ತು “ದೇರ್ ವಿಲ್ ಬೀ ಬ್ಲಡ್”ನಂತಹ ಅದ್ಭುತ ಚಿತ್ರಗಳು ಮಾತ್ರ! ನಂಬಿ ನಶಿಸಿ ಹೋದ ಆಸ್ಟ್ರೇಲಿಯನ್ ಅಬ್ ಆರಿಜಿನ್ಸ್ ಅಥವಾ ಅಮೆರಿಕ ಒಸಾಜ್ ಜನಾಂಗದವರು ಮಾತ್ರ.

ಉಚಿತ ಕೊಡುಗೆ1 1

ನನಗೆ ಸೇವೆ ಬಿಟ್ಟು ಬೇರಾವುದೇ ಉದ್ದೇಶವಿಲ್ಲವೆಂದು ಉದ್ಧಾತ್ತ ಮಾತುಗಳು ಶುರುವಾದವೆಂದರೆ ಅಲ್ಲೊಂದು ಉಪಾಯವಿದೆ, ಬಹು ದೊಡ್ಡ ಸಂಚಿದೆ, ದಶಕಗಳಾದ ಮೇಲೆ ನಿಜರೂಪ ದರ್ಶನ ಮಾಡಿಸುವ ವ್ಯಾಘ್ರನಿದ್ದಾನೆ ಎಂಬುದನ್ನು ನನಗೆ ನನ್ನ ಓದು ತಿಳಿಸಿಕೊಟ್ಟಿದೆ. ನನಗಷ್ಟೇ ಅಲ್ಲ ಕೊಂಚವಾದರು ಓದಿಕೊಂಡವರಿಗೆ ಇದೆಲ್ಲವೂ ಸ್ಪಷ್ಟವಾಗಿ ಗೋಚರಿಸಿರುತ್ತದೆ ಕೂಡ. ಆದರೆ ಸ್ವಾರ್ಥವೆಂಬ ನಶೆ, ಜನಪ್ರಿಯತೆಯ ತವಕ, ಜಾಣ ಕುರುಡು ಎಲ್ಲವನ್ನು ಸಹ್ಯಗೊಳಿಸುತ್ತದೆ. ತಮ್ಮ ಪುಸ್ತಕ ಹತ್ತಾರು ಮುದ್ರಣ ಕಾಣಬೇಕೆಂದುಕೊಂಡವರಿಗೆ, ಜನಪ್ರಿಯತೆಯ ಅಫೀಮು ಸೇವಿಸಿದವರಿಗೆ ದೂರದೃಷ್ಟಿ ಇಲ್ಲವಾಗುತ್ತದೆ. ಇನ್ನು ಮುಗ್ಧ ಜನರಿರುವ ಭ್ರಮೆಯ ಅರಗಿನ ಮನೆ ಸತ್ಯದ ತಾಪಕ್ಕೆ ಕರಗಿ ಹೋಗುವ ಹೊತ್ತಿಗೆ ಕಾಲ ಮಿಂಚಿ ಹೋಗಿರುತ್ತೆ.

ಈ ದುರಿತ ಕಾಲದಲ್ಲಿ ಬುದ್ಧಿಜೀವಿಗಳನ್ನು, ಪ್ರಗತಿಪರರನ್ನು ನಂಬದೆ ನಮ್ಮ ವಿವೇಕದ ಮೇಲೆ ಅವಲಂಬಿತರಾಗುವುದೊಂದೇ ಸರಿಯಾದ ದಾರಿಯಾಗಿದೆ. ಯಾರನ್ನೂ ತೀರಾ ನಂಬದೆ, ಐಡಿಯಲೈಸ್ ಮಾಡಿಕೊಳ್ಳದೆ ನಮ್ಮ ವಿವೇಕ ನಮ್ಮದಾಗಿ ಉಳಿಸಿಕೊಳ್ಳುವುದೇ ಒಳಿತೆನಿಸುತ್ತದೆ. ಉದ್ಧಾತ್ತ ಮಾತುಗಳನ್ನು ಅನುಮಾನದಿಂದ ಕಾಣಿ. ನಿಮ್ಮ ಮೆದುಳು ಮತ್ತೊಂದು ವಸಾಹತು ಕಾಲೋನಿಯಾಗದಿರಲಿ … Nothing is beyond suspicion.

ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X