ಹೊಸ ಸರ್ಕಾರದ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆಗೆ?

Date:

ಡಿಕೆಶಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಪ್ರಬಲ ಒಕ್ಕಲಿಗ ಸಮುದಾಯದ ಮತಪೆಟ್ಟಿಗೆಗೆ ಕಾಂಗ್ರೆಸ್ ಕೈ ಹಾಕಿದೆ. ಇತ್ತ ಕರಾವಳಿ ಮೂಲದವರಾದ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಾರೆ. ಈ ಸಮೀಕರಣಗಳನ್ನು ಬಿಜೆಪಿ ಹೇಗೆ ನೋಡುತ್ತದೆ?

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತ ಡಿಕೆಶಿ ಅವರಿಂದ ತೆರವಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ನೂತನ ಸಾರಥಿಯಾಗಿ ಬಿ.ಕೆ.ಹರಿಪ್ರಸಾದ್ ಆಯ್ಕೆಯಾಗಿದ್ದಾರೆ. ಹೊಸ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಇದೇ ಹೊತ್ತಿನಲ್ಲಿ ರಾಜ್ಯ ಬಿಜೆಪಿಯಲ್ಲೂ ನಾಯಕತ್ವ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬಂದಿವೆ.

- Advertisement -

ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರ ತಂದುಕೊಟ್ಟ ಮೊದಲಿಗರೆಂದರೆ ‘ಬಿ.ಎಸ್.ಯಡಿಯೂರಪ್ಪ’. ಎರಡು ದಶಕಗಳಿಂದಲೂ ರಾಜ್ಯ ಬಿಜೆಪಿಯ ಮೇಲೆ ಅವರ ಹಿಡಿತ ಇದ್ದೇ ಇದೆ. ಮೊದಲ ಸಲ ಆಪರೇಷನ್ ಕಮಲ ಮಾಡಿ ಆಡಳಿತ ನಡೆಸಿದ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರ ಮಾಡಬೇಕಾದ ಸನ್ನಿವೇಶ ಬಂದಾಗ ಇರಬಹುದು, ಎರಡನೇ ಸಲ ಆಪರೇಷನ್ ನಡೆಸಿ ಅಧಿಕಾರ ಹಿಡಿದು, ಎರಡು ವರ್ಷಗಳ ಬಳಿಕ ಸ್ಥಾನ ಬಿಟ್ಟುಕೊಡುವ ಸಂದರ್ಭ ಎದುರಾದಾಗ ಇರಬಹುದು- ಯಡಿಯೂರಪ್ಪನವರ ಉತ್ತರಾಧಿಕಾರಿಗಳೇ ಸರ್ಕಾರವನ್ನು ಮುನ್ನಡೆಸಿದ್ದಾರೆ. ಪ್ರಭಾವಿ ಲಿಂಗಾಯತ ಸಮುದಾಯದ ಮತಗಳು ಬಿಜೆಪಿಯ ಜೊತೆ ಇರುವುದಕ್ಕೂ ಯಡಿಯೂರಪ್ಪನವರೇ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ. ಹೀಗಾಗಿಯೇ ಪಕ್ಷದ ಆಂತರಿಕ ಬೇಗುದಿಯನ್ನೆಲ್ಲ ದಾಟಿ ಯಡಿಯೂರಪ್ಪನವರ ಪುತ್ರ ಬಿ.ವೈ. ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಯಿತು. ಆದರೆ ಪಕ್ಷದೊಳಗೆ ಆಂತರಿಕ ಸಂಘರ್ಷ ಇದ್ದೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಕುಟುಂಬ ರಾಜಕಾರಣವನ್ನು ಮಾಡಬೇಡಿ ಎನ್ನುವ ಬಿಜೆಪಿ, ಕರ್ನಾಟಕದಲ್ಲಿ ಮಾತ್ರ ಯಡಿಯೂರಪ್ಪನವರ ಕುಟುಂಬದ ಪ್ರಭಾವಳಿಯಲ್ಲೇ ಪಕ್ಷ ಸಂಘಟನೆ ಮಾಡುತ್ತಿರುವುದು ರಾಜಕೀಯ ವ್ಯಂಗ್ಯವೇ ಸರಿ. ಆದರೆ ರಾಜ್ಯ ಬಿಜೆಪಿಯೊಳಗೆ ಬಿಎಸ್ವೈ ಕುಟುಂಬ ಮೇಲುಗೈ ಸಾಧಿಸುವುದು ಅಷ್ಟು ಸುಲಭ ಸಂಗತಿಯೂ ಅಲ್ಲ. ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪದ ಘಟನಾನುಘಟಿಗಳೇ ಇದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆ ವಿಷಯವು ಆಗಾಗ್ಗೆ ಸುದ್ದಿಯಾಗುತ್ತದೆ.

ಯಡಿಯೂರಪ್ಪನವರ ಹಿಡಿತ ತಪ್ಪಿಸಿ, ಬ್ರಾಹ್ಮಣರ ನಾಯಕತ್ವವನ್ನು ಬೆಳೆಸಲು ದಶಕಗಳಿಂದಲೂ ಪ್ರಯತ್ನಗಳು ನಡೆದಿವೆ. ಮೊದಲೆಲ್ಲ ಯಡಿಯೂರಪ್ಪ ವರ್ಸಸ್ ಅನಂತಕುಮಾರ್ ಎಂದು ಚರ್ಚಿಸಲಾಗುತ್ತಿತ್ತು. ಅನಂತಕುಮಾರ್ ನಿಧನರಾದ ಬಳಿಕ ಬ್ರಾಹ್ಮಣರ ಅಧಿಪತ್ಯ ಸಾಧಿಸುವ ಪ್ರಯತ್ನ ಬಿ.ಎಲ್. ಸಂತೋಷ್ ಅವರಿಂದಾಯಿತು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಸಂತೋಷ್ ಅವರೊಂದಿಗೆ ಒಂದು ಗುಂಪು, ಯಡಿಯೂರಪ್ಪನವರ ಕುಟುಂಬದೊಂದಿಗೆ ಒಂದು ಗುಂಪು ಗುರುತಿಸಿಕೊಂಡಿರುವುದು ಹಳೆಯ ಕಥೆ. ಬಿಎಸ್‌ವೈ ಫ್ಯಾಮಿಲಿ ಹಿಡಿತ ತಪ್ಪಿಸಲು ಸಂತೋಷ್ ಬಣ ಮೊದಲಿನಿಂದಲೂ ಪ್ರಯತ್ನಿಸುತ್ತಲೇ ಬಂದಿದೆ.

ನಿತಿನ್ ನಬೀನ್ ಅವರು ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಇದು ನಾಯಕತ್ವ ಬದಲಾವಣೆಯ ಮುನ್ಸೂಚನೆ ಎಂದೇ ಬಿಂಬಿತವಾಯಿತು. ಬಿಜೆಪಿ ಸಂವಿಧಾನದ ಪ್ರಕಾರ, ಪಕ್ಷದ ಯಾವುದೇ ಮಟ್ಟದ ಪದಾಧಿಕಾರಿಗಳ (ರಾಷ್ಟ್ರೀಯ ಅಧ್ಯಕ್ಷರು ಅಥವಾ ರಾಜ್ಯ ಘಟಕಗಳ ಅಧ್ಯಕ್ಷರು) ಅಧಿಕೃತ ಅಧಿಕಾರಾವಧಿ 3 ವರ್ಷಗಳು. ಬಿ.ವೈ. ವಿಜಯೇಂದ್ರ ಅವರು 2023ರ ನವೆಂಬರ್ 10ರಂದು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಮುಂಬರುವ ನವೆಂಬರ್ಗೆ ಅವರ ಜವಾಬ್ದಾರಿಗೆ ಮೂರು ವರ್ಷಗಳು ತುಂಬುತ್ತಿವೆ. ಈ ಸಂದರ್ಭದಲ್ಲಿ ಪಕ್ಷದ ಸಾಧನೆಗಳ ಮೌಲ್ಯಮಾಪನ ನಡೆಯದೇ ಇರುವುದಿಲ್ಲ.

2024ರ ಲೋಕಸಭಾ ಚುನಾವಣೆಯ ವೇಳೆಗೆ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ಈ ಮೈತ್ರಿಯ ಸಮನ್ವಯತೆಗೆ ಧಕ್ಕೆಯಾಗದಂತೆ ಮುನ್ನಡೆಯುವುದು ವಿಜಯೇಂದ್ರ ಅವರ ಹೆಗಲ ಮೇಲಿತ್ತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಕ್ಕಮಟ್ಟಿಗೆ ಗೆಲುವನ್ನೂ ಪಡೆಯಿತು. ಆದರೆ ನಂತರ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವೇ ಮೇಲುಗೈ ಸಾಧಿಸಿದೆ. ಇದನ್ನು ಬಿಜೆಪಿಯ ಹೈಕಮಾಂಡ್ ಹೇಗೆ ನೋಡುತ್ತದೆ ಎಂದು ಕಾದು ನೋಡಬೇಕು.

ಯಡಿಯೂರಪ್ಪನವರು ಮೂರು ಬಾರಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ, ಒಟ್ಟು ಏಳು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಿ.ಬಿ. ಶಿವಪ್ಪ, ಕೆ.ಎಸ್. ಈಶ್ವರಪ್ಪ ಅವರು ತಲಾ ಐದು ವರ್ಷ ರಾಜ್ಯಾಧ್ಯಕ್ಷರಾಗಿದ್ದರು. ನಳಿನ್ ಕುಮಾರ್ ಕಟೀಲ್ 4 ವರ್ಷ ಪಕ್ಷವನ್ನು ಮುನ್ನಡೆಸಿದರು. ಕಟೀಲ್ ನಂತರ ವಿಜಯೇಂದ್ರ ಬಂದರು. ಈಗ ಆಡಳಿತರೂಢ ಕಾಂಗ್ರೆಸ್‌ನ ಅಧಿಕಾರ ಸೂತ್ರ ಬದಲಾಗಿದೆ. ಡಿಕೆಶಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಪ್ರಬಲ ಒಕ್ಕಲಿಗ ಸಮುದಾಯದ ಮತಪೆಟ್ಟಿಗೆಗೆ ಕಾಂಗ್ರೆಸ್ ಕೈ ಹಾಕಿದೆ. ಇತ್ತ ಕರಾವಳಿ ಮೂಲದವರಾದ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಾರೆ. ಈ ಸಮೀಕರಣಗಳನ್ನು ಬಿಜೆಪಿ ಹೇಗೆ ನೋಡುತ್ತದೆ? ತನ್ನ ಸಾಂಪ್ರದಾಯಕ ಭದ್ರಕೋಟೆಯಾಗಿರುವ ಲಿಂಗಾಯತರ ಮತಗಳನ್ನು ಉಳಿಸಿಕೊಳ್ಳಲು ವಿಜಯೇಂದ್ರ ನಾಯಕತ್ವವೇ ಅಂತಿಮ ಎಂದು ಭಾವಿಸುತ್ತದೆಯೇ? ಅಥವಾ ವಿಜಯೇಂದ್ರ ನಾಯಕತ್ವವನ್ನು ಒಪ್ಪದ ಲಿಂಗಾಯತ ಗುಂಪಿನಿಂದಲೇ ಬೇರೊಬ್ಬರನ್ನು ನೋಡುತ್ತದೆಯೇ? ಅಥವಾ ಸಾಂಪ್ರದಾಯಿಕವಾಗಿ ಬಿಜೆಪಿ ಜೊತೆ ಇಲ್ಲದ ಸಮುದಾಯಗಳನ್ನು ಸೆಳೆಯುವ ಕಸರತ್ತು ಮಾಡುತ್ತದೆಯೇ? ಕರಾವಳಿ ಕರ್ನಾಟಕದಿಂದ ಹೊಸ ಮುಖವನ್ನೇನಾದರೂ ಪರಿಚಯಿಸುತ್ತದೆಯೇ? ನಾಯಕತ್ವದ ವಿಚಾರ ಬಂದಾಗ ಈ ಎಲ್ಲ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ.

ಆರ್‌ಎಸ್ಎಸ್ ವಿರುದ್ಧ ನೇರಾನೇರಾ ವಾಗ್ದಾಳಿ ನಡೆಸಬಲ್ಲ ಹರಿಪ್ರಸಾದ್, ಕರಾವಳಿ ಭಾಗದ ಬಿಲ್ಲವರನ್ನು ಕಾಂಗ್ರೆಸ್ ಸೆಳೆಯಬಲ್ಲರೇ ಎಂಬ ಲೆಕ್ಕಾಚಾರಗಳು ಶುರುವಾಗುತ್ತವೆ. ಸಂಘಪರಿವಾರದ ಭದ್ರನೆಲೆಯಾಗಿರುವ ಕರಾವಳಿ ಕರ್ನಾಟಕದಲ್ಲಿ ಹೊಸ ಜಾತಿ ಸಮೀಕರಣಗಳಿಗೆ ಹರಿಪ್ರಸಾದ್ ನಾಂದಿ ಹಾಡುತ್ತಾರೆಂದು ಸದ್ಯಕ್ಕೆ ಹೇಳಲಾಗದು. ಆದರೆ ಕಠಿಣ ಶ್ರಮ ಹಾಕಿದರೆ, ಸ್ಪಷ್ಟ ಸೈದ್ಧಾಂತಿಕ ರಾಜಕಾರಣವನ್ನು ನಡೆಸಿದರೆ ಯಾವುದಾದರೂ ಬದಲಾವಣೆ ಕಂಡು ಬರಬಹುದು!

ಆದರೆ ಇವೆಲ್ಲವೂ ಕೇವಲ ಲೆಕ್ಕಾಚಾರಗಳಷ್ಟೇ ಎನ್ನುತ್ತವೆ ಬಿಜೆಪಿ ಮೂಲಗಳು. “ರಾಜಕೀಯ ಚರ್ಚೆಗಳು ಏನೇ ಬಂದರೂ ವಿಜಯೇಂದ್ರ ಅವರೇ ನಾಯಕತ್ವದಲ್ಲಿ ಮುಂದುವರಿಯುತ್ತಾರೆ. ನಾಯಕತ್ವ ಬದಲಾವಣೆಯ ಚರ್ಚೆಗಳು ಪಕ್ಷದೊಳಗೆ ನಡೆದಿಲ್ಲ. ಮಾಧ್ಯಮಗಳಿಗೆ ಸ್ವತಂತ್ರವಿದೆ. ಅವುಗಳ ರಾಜಕೀಯ ಚರ್ಚೆಗಳನ್ನು ತಪ್ಪೆನ್ನಲಾಗದು” ಎನ್ನುತ್ತಾರೆ ಕೆಲ ಬಿಜೆಪಿ ಮುಖಂಡರು.

“ಬಿಎಸ್‌ವೈ ಅವರು ತಮ್ಮ ಇಡೀ ಜೀವನವನ್ನು ಈ ಪಕ್ಷಕ್ಕೆ ನೀಡಿದ್ದಾರೆ. ತಮ್ಮ ರಕ್ತ, ಬೆವರು ಮತ್ತು ಕಣ್ಣೀರಿನಿಂದ ಪಕ್ಷವನ್ನು ನಿರ್ಮಿಸಿದ್ದಾರೆ. ಆ ಪರಂಪರೆಯನ್ನು ನಾವು ಹೇಗೆ ಮರೆಯಲು ಸಾಧ್ಯ? ಇತ್ತೀಚೆಗೆ ನಡೆದ ಯಡಿಯೂರಪ್ಪ ಅಭಿನಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು. ಮೋದಿ-ಶಾ ನಾಯಕತ್ವವು ಯಡಿಯೂರಪ್ಪ ಕುಟುಂಬದ ಮೇಲೆ ವಿಶ್ವಾಸ ಇಟ್ಟಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ?” ಎಂದು ಕೆಲವು ಕಾರ್ಯಕರ್ತರು ಪ್ರಶ್ನಿಸುತ್ತಾರೆ.

ಆದರೆ, ಪಕ್ಷದೊಳಗಿನ ಕೆಲ ನಾಯಕರು ವಿಜಯೇಂದ್ರ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದೂ ಹೇಳಲಾಗುತ್ತದೆ. ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರೊಂದಿಗೆ ಸ್ನೇಹಪರ ಸಂಬಂಧ ಇಟ್ಟುಕೊಂಡಿದ್ದಾರೆ, ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಈ ಅಸಮಾಧಾನದ ಧ್ವನಿ ದೆಹಲಿಗೂ ತಲುಪಿದೆ ಎನ್ನಲಾಗುತ್ತಿದೆ.

ವಿಜಯೇಂದ್ರ ಅವರನ್ನು ಬದಲಿಸುವ ವಿಚಾರದಲ್ಲೂ ಹಲವು ಹೆಸರುಗಳು ಚರ್ಚೆಗೆ ಬರುತ್ತಿವೆ. ಪ್ರಹ್ಲಾದ್ ಜೋಶಿ, ಬಿ.ಎಲ್. ಸಂತೋಷ್ ಹೆಸರುಗಳು ಕೇಳಿಬಂದರೂ ಸಮುದಾಯದ ಸಮೀಕರಣದ ಕಾರಣದಿಂದ ಈ ಸಾಧ್ಯತೆ ಕಡಿಮೆ ಎಂದು ನಂಬಲಾಗಿದೆ. ವಿ. ಸೋಮಣ್ಣ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ಅರವಿಂದ ಬೆಲ್ಲದ್ ಹೆಸರುಗಳೂ ಚರ್ಚೆಯಲ್ಲಿವೆ. ಆದರೆ, ಯಡಿಯೂರಪ್ಪನವರ ಕುಟುಂಬದಷ್ಟು ಭಾವನಾತ್ಮಕ ಹಾಗೂ ಮತದಾರರ ಸಂಪರ್ಕ ಇನ್ನಾರಿಗೂ ಇಲ್ಲ ಎನ್ನುವುದು ಪಕ್ಷದ ಒಂದು ವಲಯದ ಅಭಿಪ್ರಾಯ.

2028ರ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಯನ್ನೂ ಬಿಜೆಪಿ ನಾಯಕತ್ವ ಗಂಭೀರವಾಗಿ ಪರಿಗಣಿಸುತ್ತಿದೆ. ಜೆಡಿಎಸ್ ಬಳಿ ಈಗಾಗಲೇ ಹೆಚ್.ಡಿ. ಕುಮಾರಸ್ವಾಮಿ ಎಂಬ ಸಿಎಂ ಮುಖವಿದೆ. ಹೀಗಾಗಿ ಬಿಜೆಪಿ ಕೂಡ ಮುಂದಿನ ಚುನಾವಣೆಗೆ ಸ್ಪಷ್ಟ ನಾಯಕತ್ವ ತಂತ್ರ ರೂಪಿಸಿಕೊಳ್ಳುವ ಅಗತ್ಯವೂ ಇದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕುರಿತು ಅಂತಿಮ ನಿರ್ಧಾರ ನವೆಂಬರ್ ವೇಳೆಗೆ ಹೊರಬರಬಹುದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಬಲೇಶ್ವರ ನಾಕಾ ರಸ್ತೆ ಕಾಮಗಾರಿ ವಿಳಂಬಕ್ಕೆ ಆಪ್ ಆಕ್ರೋಶ; ಪಾಲಿಕೆಗೆ ಒಂದು ವಾರ ಗಡುವು

ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಬಬಲೇಶ್ವರ ನಾಕಾದಿಂದ ನಾಯರಾ ಪೆಟ್ರೋಲ್ ಪಂಪ್‌ವರೆಗಿನ ರಸ್ತೆಯ...

ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ...

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...