ತುಮಕೂರು ವಿವಿಯ ಆಡಂಬರದ ಘಟಿಕೋತ್ಸವ: ವಿದ್ಯಾರ್ಥಿಗಳಿಗಿಲ್ಲ ಚಿನ್ನದ ಪದಕ

Date:

ಅತ್ಯುನ್ನತ ಶೈಕ್ಷಣಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ತುಮಕೂರು ವಿಶ್ವವಿದ್ಯಾನಿಲಯದ ಇತ್ತೀಚಿನ ಘಟಿಕೋತ್ಸವವು ಸಂಭ್ರಮದ ದಿನವಾಗುವ ಬದಲಿಗೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ನೋವಿನ ಮತ್ತು ತಾರತಮ್ಯದ ಕಹಿ ನೆನಪಾಗಿ ಉಳಿಯುವಂತಾಗಿದೆ.

- Advertisement -

ಹಗಲಿರುಳು ಕಷ್ಟಪಟ್ಟು ಓದಿ, ಇಡೀ ವಿಶ್ವವಿದ್ಯಾನಿಲಯಕ್ಕೆ ಕೀರ್ತಿ ತಂದ ರ‍್ಯಾಂಕ್ ವಿಜೇತರಿಗೆ ಅರ್ಹವಾಗಿ ಸಿಗಬೇಕಿದ್ದ ಚಿನ್ನದ ಪದಕಗಳನ್ನು ನಿರಾಕರಿಸಿರುವ ವಿವಿ ಆಡಳಿತ ಮಂಡಳಿ, ಮತ್ತೊಂದೆಡೆ ಕೇವಲ ಕೆಲವು ಗಂಟೆಗಳ ಕಾರ್ಯಕ್ರಮಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ದುಬಾರಿ ‘ಜರ್ಮನ್ ಟೆಂಟ್‌’ಗಳನ್ನು ಅಳವಡಿಸಿರುವುದು ಈಗ ಸಾರ್ವಜನಿಕರ ಮತ್ತು ವಿದ್ಯಾರ್ಥಿ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದ, ಕೃಷಿ ಹಿನ್ನೆಲೆಯ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದವರಾಗಿದ್ದಾರೆ. ಕೂಲಿ ಮಾಡಿ, ಸಾಲ ಸೂಲ ಮಾಡಿ ಮಕ್ಕಳನ್ನು ಓದಿಸಿದ ಪೋಷಕರಿಗೆ, ತಮ್ಮ ಮಗ ಅಥವಾ ಮಗಳು ವಿಶ್ವವಿದ್ಯಾನಿಲಯದ ವೇದಿಕೆಯ ಮೇಲೆ ಚಿನ್ನದ ಪದಕ ಸ್ವೀಕರಿಸುವ ಆ ಒಂದು ಕ್ಷಣವೇ ಬದುಕಿನ ಅತ್ಯಂತ ದೊಡ್ಡ ಸಾರ್ಥಕತೆಯಾಗಿರುತ್ತದೆ. ಲಜ್ಜೆಗೆಟ್ಟ ನೆಪಗಳನ್ನು ಒಡ್ಡಿ ವಿದ್ಯಾರ್ಥಿಗಳಿಗೆ ಕೇವಲ ಕಾಗದದ ಪ್ರಮಾಣಪತ್ರಗಳನ್ನು ಕೈಗಿಟ್ಟು ಕಳುಹಿಸಿದೆ. ವರ್ಷಗಟ್ಟಲೆ ಕಷ್ಟಪಟ್ಟು ರ್ಯಾಂಕ್ ಪಡೆದ ಬಡ ವಿದ್ಯಾರ್ಥಿಗಳ ಶ್ರಮಕ್ಕೆ ವಿಶ್ವವಿದ್ಯಾನಿಲಯ ಕೊಟ್ಟ ಬೆಲೆ ಇದೇನಾ? ಹಣದ ಕೊರತೆಯ ನೆಪ ಹೇಳಿ ಪ್ರತಿಭಾವಂತರ ಹಕ್ಕನ್ನು ಕಸಿದುಕೊಳ್ಳುವುದು ಅಕ್ಷರಶಃ ಶೈಕ್ಷಣಿಕ ವಂಚನೆಯಾಗಿದೆ.

1003405630 1

ಘಟಿಕೋತ್ಸವದ ವೇದಿಕೆಯನ್ನು ನೋಡಿದ ಯಾರಿಗಾದರೂ ಅರ್ಥವಾಗುತ್ತದೆ. ಇಡೀ ಕಾರ್ಯಕ್ರಮಕ್ಕಾಗಿ ವಿದೇಶಿ ಮಾದರಿಯ, ಅತ್ಯಂತ ದುಬಾರಿ ಬೆಲೆಯ ಜರ್ಮನ್ ಟೆಂಟ್‌ಗಳು ಮತ್ತು ರಾಜವೈಭವದ ಅಲಂಕಾರಗಳನ್ನು ಮಾಡಲಾಗಿತ್ತು. ಕೇವಲ ಒಂದು ದಿನದ ಪ್ರದರ್ಶನಕ್ಕಾಗಿ, ವಿಐಪಿಗಳ ಸೌಕರ್ಯಕ್ಕಾಗಿ ಮತ್ತು ಆಡಳಿತ ಮಂಡಳಿಯ ಹಮ್ಮು-ಬಿಮ್ಮು ಪ್ರದರ್ಶಿಸಲು ಲಕ್ಷಾಂತರ ರೂಪಾಯಿಗಳನ್ನು ನೀರಂತೆ ಹರಿಸಲಾಗಿದೆ.

ಕಟು ವಾಸ್ತವದ ಪ್ರಶ್ನೆ ಏನೆಂದರೆ, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಅತಿಥಿಗಳಿಗೆ ನೆರಳು ನೀಡಲು ಕೋಟಿ ಕೋಟಿ ಖರ್ಚು ಮಾಡಿ ಜರ್ಮನ್ ಟೆಂಟ್ ಹಾಕಿಸಲು ವಿಶ್ವವಿದ್ಯಾನಿಲಯದ ಬಳಿ ಹಣವಿರುತ್ತದೆ. ಆದರೆ, ಅದೇ ಸಂಸ್ಥೆಯ ಅಸ್ತಿತ್ವಕ್ಕೆ ಕಾರಣರಾದ, ಹಗಲಿರುಳು ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಕೆಲವು ಗ್ರಾಂ ಚಿನ್ನದ ಪದಕ ನೀಡಲು ಹಣವಿರುವುದಿಲ್ಲವೇ? ಇದು ವಿವಿ ಆಡಳಿತದ ತಲೆಕೆಳಗಾದ ಆದ್ಯತೆಗಳನ್ನು ಮತ್ತು ಬಡವರ ವಿರೋಧಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಇಲ್ಲಿ ಪ್ರಶ್ನೆ ಇರುವುದು ಚಿನ್ನದ ಮೌಲ್ಯದ್ದಲ್ಲ, ಬದಲಿಗೆ ವಿದ್ಯಾರ್ಥಿಗಳ ಮತ್ತು ಅವರ ಹೆತ್ತವರ ಆತ್ಮಗೌರವದ್ದು. ಬಡ ತಂದೆ-ತಾಯಿಗಳು ತಮ್ಮ ದಿನದ ಕೂಲಿಯನ್ನು ಕಳೆದುಕೊಂಡು, ಸಾಲ ಮಾಡಿ ಹೊಸ ಬಟ್ಟೆ ಧರಿಸಿ ಘಟಿಕೋತ್ಸವಕ್ಕೆ ಬರುವುದು ತಮ್ಮ ಮಗುವಿನ ಕೊರಳಲ್ಲಿ ಆ ಪದಕ ಮಿಂಚುವುದನ್ನು ನೋಡಲು. ವೇದಿಕೆಯ ಮೇಲಿನ ಆ ಗೌರವ ಮುಂದಿನ ಅವರ ಉದ್ಯೋಗ ಮತ್ತು ಭವಿಷ್ಯದ ಬದುಕಿಗೆ ದೊಡ್ಡ ಸ್ಪೂರ್ತಿಯಾಗಿರುತ್ತದೆ.

1003405579 1

ಆದರೆ, ವೇದಿಕೆಯ ಮೇಲೆ ಅತಿಥಿಗಳಿಗೆ ನೀಡಿದ ಆಡಂಬರದ ಸತ್ಕಾರಗಳು, ದುಬಾರಿ ಶಾಲುಗಳು ಮತ್ತು ಐಷಾರಾಮಿ ವ್ಯವಸ್ಥೆಗಳ ನಡುವೆ, ವಿದ್ಯಾರ್ಥಿಗಳನ್ನು ಕೇವಲ ಕಾಗದದ ತುಂಡು ನೀಡಿ ಮೂಲೆಗೆ ತಳ್ಳಲಾಯಿತು. ಈ ತಾರತಮ್ಯವನ್ನು ಕಂಡು ಪೋಷಕರು ಕಣ್ಣೀರು ಹಾಕಿದ್ದಾರೆ. ಇದು ವಿಶ್ವವಿದ್ಯಾನಿಲಯವು ಬಡ ವಿದ್ಯಾರ್ಥಿಗಳಿಗೆ ಮಾಡಿದ ದ್ರೋಹವಲ್ಲದೆ ಮತ್ತೇನು?

ತುಮಕೂರು ವಿವಿಯ ಈ ದ್ವಂದ್ವ ನೀತಿಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಮತ್ತು ಶಿಕ್ಷಣ ತಜ್ಞರು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಾಗುತ್ತಿದ್ದಾರೆ.

“ನಿಮ್ಮ ಐಷಾರಾಮಿ ಜರ್ಮನ್ ಟೆಂಟ್‌ಗಳು ನಮಗೆ ಬೇಡ, ಸರಳವಾದ ಪೆಂಡಾಲ್ ಹಾಕಿದರೂ ಸಾಕಿತ್ತು. ಆದರೆ ಆ ಹಣವನ್ನು ಉಳಿಸಿ ನಮಗೆ ಸಿಗಬೇಕಾದ ಪದಕಗಳನ್ನು ನೀಡಬೇಕಿತ್ತು” – ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿ ಈದಿನ ಡಾಟ್ ಕಾಮ್ ಗೆ ಪ್ರತಿಕ್ರಿಯಿಸಿದರು

ಘಟಿಕೋತ್ಸವದ ಹೆಸರಿನಲ್ಲಿ ಟೆಂಟ್, ಊಟ ಹಾಗೂ ಅಲಂಕಾರಕ್ಕೆ ಖರ್ಚು ಮಾಡಲಾದ ಹಣದ ಆಡಿಟ್ ಆಗಬೇಕು ಮತ್ತು ಬಡ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಶಿಕ್ಷಣ ಸಂಸ್ಥೆಗಳು ಜ್ಞಾನ ಮತ್ತು ಸಮಾನತೆಯ ಕೇಂದ್ರಗಳಾಗಬೇಕೇ ಹೊರತು ಆಡಂಬರ ಮತ್ತು ಬಡವರ ಶೋಷಣೆಯ ವೇದಿಕೆಗಳಾಗಬಾರದು. ತುಮಕೂರು ವಿಶ್ವವಿದ್ಯಾನಿಲಯವು ತಕ್ಷಣವೇ ತನ್ನ ತಪ್ಪನ್ನು ಒಪ್ಪಿಕೊಂಡು, ದುಬಾರಿ ವೆಚ್ಚಗಳಿಗೆ ಬ್ರೇಕ್ ಹಾಕಿ, ನೊಂದ ಎಲ್ಲಾ ಅರ್ಹ ಬಡ ವಿದ್ಯಾರ್ಥಿಗಳಿಗೆ ಗೌರವಪೂರ್ವಕವಾಗಿ ಚಿನ್ನದ ಪದಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಬೇಕಿದೆ. ಇಲ್ಲದಿದ್ದರೆ, ಈ ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಮರಣಾನಂತರ ದೇಹದಾನಕ್ಕೆ ಮುಂದಾದ ಮೂವರು ಶಿಕ್ಷಕರು, ಸಾಹಿತಿ

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮರಣಾನಂತರ ತಮ್ಮ...

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ: ಸಿಎಂ ಡಿ ಕೆ ಶಿವಕುಮಾರ್

"ಮುಂದಿನ ಬಜೆಟ್‌ನಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಸೂಕ್ತ ಅನುದಾನ ಮೀಸಲಿಡಲಾಗುವುದು. ಅರಣ್ಯ...

ಹವಾಮಾನ ವರದಿ | ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಅ.22ರವರೆಗೆ ಮಳೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ...

ತುಮಕೂರು | ಜಾಗತೀಕರಣದ ನಡುವೆ ಪ್ರಾದೇಶಿಕ ಅಸ್ಮಿತೆ ಉಳಿಸುವ ಶಕ್ತಿ ರಂಗಭೂಮಿಗಿದೆ : ರಂಗನಿರ್ದೇಶಕ ಲಕ್ಷ್ಮಣ್ ಕೆ.ಪಿ.

 ಜಾಗತೀಕರಣದ ಪ್ರಭಾವದಿಂದ ಪ್ರಾದೇಶಿಕ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಗಳು ಅಳಿಸಿಹೋಗುವ ಆತಂಕ...