6 ದಶಕಗಳ ಸೌಹಾರ್ದಕ್ಕೆ ಬಿಜೆಪಿ ತಿಲಾಂಜಲಿ; ಮುಸ್ಲಿಮರು ಆರಂಭಿಸಿದ ಕೃಷ್ಣ ಜನ್ಮಾಷ್ಟಮಿ ಈಗ ಹಿಂದೂಗಳಿಗೆ ಮಾತ್ರ!

Date:

ಧರ್ಮದ ಗಡಿ ಮೀರಿ ಜನರನ್ನು ಒಗ್ಗೂಡಿಸುತ್ತಿದ್ದ ಹಬ್ಬವೊಂದು ಈ ಬಾರಿ ಧರ್ಮದ ಆಧಾರದ ಮೇಲೆಯೇ ಪ್ರತ್ಯೇಕಗೊಳ್ಳುತ್ತಿದೆ. ಕೋಲ್ಕತ್ತಾದ ಮೊಮಿನ್‌ಪುರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಂದ ಶುರುವಾದ ಶ್ರೀಕೃಷ್ಣ ಜನ್ಮಾಷ್ಟಮಿಯ ಈ ಬಾರಿಯ ಉಸ್ತುವಾರಿ ಸಂಪೂರ್ಣವಾಗಿ ಹಿಂದೂಗಳ ಕೈ ಸೇರಿದೆ. ಸಂಘಟನಾ ಸಮಿತಿಯ ಮುಸ್ಲಿಂ ಸದಸ್ಯರನ್ನು ಹೊರಗಿಟ್ಟು ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದಾಗಿ ಬಿಜೆಪಿ ನಾಯಕರೊಬ್ಬರು ಘೋಷಿಸಿದ್ದಾರೆ. ಇದರಿಂದ ದಶಕಗಳಿಂದ ನಡೆದುಕೊಂಡು ಬಂದಿದ್ದ ಸೌಹಾರ್ದದ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಂತಾಗಿದೆ.

- Advertisement -

ಕೋಲ್ಕತ್ತಾದ ಸೌಹಾರ್ದ ಸಂಸ್ಕೃತಿಯ ಪ್ರತೀಕವೆಂದೇ ಪರಿಗಣಿಸಲಾಗುತ್ತಿದ್ದ ಮೊಮಿನ್‌ಪುರದ ಭೂಕೈಲಾಶ್-ಹುಸೇನ್ ಶಾ ರಸ್ತೆ ಜಂಕ್ಷನ್‌ನಲ್ಲಿನ ಈ ಜನ್ಮಾಷ್ಟಮಿ ಆಚರಣೆಗೆ ಇದೀಗ ಧರ್ಮ ಹಾಗೂ ರಾಜಕೀಯದ ಕೆಸರು ಮೆತ್ತಿಕೊಂಡಿದೆ. ವಿವಿಧ ಧರ್ಮ, ಸಮುದಾಯಗಳು ಪರಸ್ಪರರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಐತಿಹಾಸಿಕ ಪರಂಪರೆ ಹೊಂದಿರುವ ಕೋಲ್ಕತ್ತಾದಂತಹ ಭಾಗದಲ್ಲೇ ಈ ಬೆಳವಣಿಗೆ ನಡೆಯುತ್ತಿರುವುದು ಗಮನ ಸೆಳೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಕೃಷ್ಣ ಜನ್ಮಾಷ್ಟಮಿ ಆಚರಣೆ ಸುಮಾರು 58 ವರ್ಷಗಳ ಹಿಂದೆ ಮುಸ್ಲಿಂ ಸಮಾಜ ಸೇವಕ ಮೊಹಮ್ಮದ್‌ ಕಾಶಿಮ್‌ ಅವರಿಂದ ಮೊದಲುಗೊಂಡಿತ್ತು. ಕಾಲಕ್ರಮೇಣ ಆಚರಣೆ ಕ್ಷೀಣಿಸಿತ್ತು. ಬಳಿಕ 2011ರಲ್ಲಿ ತೃಣಮೂಲ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಯುವಕರ ಮತ್ತೊಂದು ಗುಂಪು ಉತ್ಸವವನ್ನು ಪುನರುಜ್ಜೀವನಗೊಳಿಸಿತ್ತು. ನಂತರ ಹಲವು ವರ್ಷಗಳ ಕಾಲ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಟ್ಟಾಗಿ ಜನ್ಮಾಷ್ಟಮಿ ಆಚರಣೆಯ ಜವಾಬ್ದಾರಿ ಹೊತ್ತಿದ್ದರು. ಜನ್ಮಾಷ್ಟಮಿ ಆಚರಣೆಯನ್ನು ನೋಡಿಕೊಳ್ಳುತ್ತಿದ್ದ ಸಮಿತಿಯಲ್ಲಿದ್ದ ಅರ್ಧದಷ್ಟು ಮಂದಿ ಮುಸ್ಲಿಮರಾಗಿದ್ದರು. ಎರಡೂ ಸಮುದಾಯದ ಸದಸ್ಯರು ಒಟ್ಟಾಗಿ ಪೆಂಡಾಲ್‌ ನಿರ್ಮಾಣ, ಪೂಜಾ ಕಾರ್ಯಕ್ರಮ, ಪ್ರಸಾದ ವಿತರಣೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ನಿರ್ವಹಿಸುತ್ತಿದ್ದರು.

Advertisements

ಸ್ಥಳೀಯರ ಪ್ರಕಾರ, ಈ ಕಾರ್ಯಕ್ರಮವನ್ನು ಎರಡೂ ಸಮುದಾಯದವರು ಆಯೋಜಿಸುವುದರ ಜತೆಗೆ, ಯಾವುದೇ ಭೇದವಿಲ್ಲದೆ ಕಾರ್ಯಕ್ರಮದಲ್ಲಿ ಕೈಜೋಡಿಸಿ ಸಹೋದರರಂತೆ ಸಂಭ್ರಮಿಸುತ್ತಿದ್ದರು. ಕೋಲ್ಕತ್ತಾದ ಬಹುಸಾಂಸ್ಕೃತಿಕ ಸ್ವಭಾವ ಮತ್ತು ಹಿಂದೂ-ಮುಸ್ಲಿಂ ಸೌಹಾರ್ದದ ಉದಾಹರಣೆಯಾಗಿ ಈ ಹಬ್ಬ ಗುರುತಿಸಿಕೊಂಡಿತ್ತು. ಆದರೆ ಈ ವರ್ಷ ಹಿಂದಿನ ಸಮಿತಿಯಲ್ಲಿದ್ದ ಮುಸ್ಲಿಂ ಸದಸ್ಯರನ್ನು ಹೊರಗಿಟ್ಟು, ಜನ್ಮಾಷ್ಟಮಿ ಆಚರಣೆಯ ನಿರ್ವಹಣೆಯನ್ನು ಹಿಂದೂ ಸದಸ್ಯರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಈ ಬದಲಾವಣೆಯ ಹಿಂದಿರುವ ಸ್ಥಳೀಯ ಬಿಜೆಪಿ ನಾಯಕ ರಾಕೇಶ್‌ ಸಿಂಗ್‌, ಜನ್ಮಾಷ್ಟಮಿ ಹಿಂದೂಗಳ ಹಬ್ಬವಾಗಿದ್ದು, ಅದರ ಧಾರ್ಮಿಕ ಆಚರಣೆಗಳನ್ನು ಹಿಂದೂಗಳೇ ನಿರ್ವಹಿಸಬೇಕು ಎಂದು ಘೋಷಿಸಿದ್ದಾರೆ.

“ಇತರ ಧರ್ಮದವರು ಪೆಂಡಾಲ್‌ಗೆ ಭೇಟಿ ನೀಡುವುದಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಧಾರ್ಮಿಕ ಚಟುವಟಿಕೆಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಜನ್ಮಾಷ್ಟಮಿ ಹಿಂದೂಗಳ ಹಬ್ಬವಾಗಿರುವುದರಿಂದ ಅದನ್ನು ಹಿಂದೂಗಳೇ ಆಚರಿಸಬೇಕು” ಎಂಬುದು ಅವರ ವಾದ. ಈ ನಿಲುವು ಕಳೆದ 6 ದಶಕಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಕೊಳ್ಳಿ ಇಟ್ಟಂತಾಗಿದೆ.

ಹಿಂದಿನ ಸಂಘಟನಾ ಸಮಿತಿಯೊಂದಿಗೆ ಕೆಲಸ ಮಾಡಿದ್ದ ಮೊಹಮ್ಮದ್‌ ಆಲಂ, ವರ್ಷಗಳಿಂದ ಹಿಂದೂ-ಮುಸ್ಲಿಮರು ಒಟ್ಟಾಗಿ ಜನ್ಮಾಷ್ಟಮಿ ಆಚರಿಸುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ. 2011ರಿಂದ ಸ್ಥಳೀಯ ಮುಸ್ಲಿಂ ಯುವಕರು ಉತ್ಸವದ ಆಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಸಮಿತಿಯಲ್ಲಿ ಸುಮಾರು 20 ಮಂದಿ ಇದ್ದು, ಅವರಲ್ಲಿ ಅರ್ಧದಷ್ಟು ಮುಸ್ಲಿಮರೇ ಆಗಿದ್ದರು. ಎಲ್ಲರೂ ಸೇರಿ ಆಚರಣೆ ನಡೆಸಿ, ಪ್ರಸಾದ ಹಂಚಿ, ಧಾರ್ಮಿಕ ವಿಧಿವಿಧಾನಗಳ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಈ ವರ್ಷ ಸಮಿತಿಯಿಂದ ಮುಸ್ಲಿಂ ಸದಸ್ಯರನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ ಎಂದು ಹೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಹಿಂದೂಗಳ ಹಬ್ಬವಾಗಿದ್ದರೂ ಅದರ ಆಯೋಜನೆ ಮತ್ತು ಸಾಮಾಜಿಕ ಆಚರಣೆಯಲ್ಲಿ ಮುಸ್ಲಿಮರೂ ಪಾಲ್ಗೊಳ್ಳುತ್ತಿದ್ದರು. ಪೂಜೆ ಯಾರಿಗಾಗಿ ಎಂಬುದಕ್ಕಿಂತ ಒಂದು ಪ್ರದೇಶದ ಜನರು ಹಬ್ಬವನ್ನು ಹೇಗೆ ಒಟ್ಟಾಗಿ ಆಚರಿಸುತ್ತಾರೆ ಎಂಬುದೇ ಮೊಮಿನ್‌ಪುರದ ಈ ಪರಂಪರೆಯ ವಿಶೇಷತೆಯಾಗಿತ್ತು. ಹಿಂದೂ-ಮುಸ್ಲಿಂ ಸದಸ್ಯರು ಒಟ್ಟಾಗಿ ವ್ಯವಸ್ಥೆಗಳನ್ನು ನೋಡಿಕೊಂಡರೂ, ಜನ್ಮಾಷ್ಟಮಿಯ ಧಾರ್ಮಿಕ ವಿಧಿವಿಧಾನಗಳ ಸ್ವರೂಪದಲ್ಲಿ ಬದಲಾವಣೆ ಆಗಿರಲಿಲ್ಲ ಎಂದು ಹಿಂದಿನ ಆಯೋಜಕರು ಹೇಳಿದ್ದಾರೆ.

ಜನ್ಮಾಷ್ಟಮಿ ಹಿಂದೂಗಳ ಹಬ್ಬ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಸಾರ್ವಜನಿಕ ಆಯೋಜನೆಯಲ್ಲೂ ಇತರ ಸಮುದಾಯಗಳಿಗೆ ಸ್ಥಾನ ಇರಬಾರದು ಎಂಬ ವಾದದೊಂದಿಗೆ ಒಂದಿಡೀ ಸಮುದಾಯವನ್ನು ಹೊರಗಿಟ್ಟಿರುವುದು ಚರ್ಚಿಸಬೇಕಾದ ವಿಚಾರ. ಮೊಮಿನ್‌ಪುರದ ವಿವಾದದ ಮೂಲ ಇರುವುದೇ ಇಲ್ಲಿ.

ರಾಕೇಶ್‌ ಸಿಂಗ್‌ ಅವರ ವಾದದ ಪ್ರಕಾರ, ಇತರ ಧರ್ಮದವರು ಪೆಂಡಾಲ್‌ಗೆ ಬಂದು ಹಬ್ಬದಲ್ಲಿ ಪಾಲ್ಗೊಳ್ಳಬಹುದು, ಆದರೆ ಧಾರ್ಮಿಕ ಚಟುವಟಿಕೆಗಳನ್ನು ನಿರ್ವಹಿಸುವುದು ಮತ್ತು ಅದರ ಪಾವಿತ್ರ್ಯವನ್ನು ಕಾಪಾಡುವುದು ಹಿಂದೂಗಳ ಜವಾಬ್ದಾರಿ. ಆದರೆ ದಶಕಗಳ ಕಾಲ ಮೊಮಿನ್‌ಪುರದಲ್ಲಿ ಈ ಎರಡರ ನಡುವೆ ಅಂತಹ ಗಡಿಯೇನೂ ಇರಲಿಲ್ಲ. ಇದು ಹಿಂದೂಗಳ ಹಬ್ಬ ಎಂಬ ಕಾರಣ ನೀಡಿ ಬದಲಾವಣೆ ತರಲಾಗುತ್ತಿರುವ ಇದೇ ಆಚರಣೆಯ ಇತಿಹಾಸದಲ್ಲಿ ಮುಸ್ಲಿಮರ ಕೊಡುಗೆಯೂ ಇದೆ ಎಂಬುದನ್ನು ನಿರ್ಲಕ್ಷಿಸಲಾಗದು.

ಸಿಂಗ್‌ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪೋರ್ಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಫಿರ್ಹಾದ್ ಹಕೀಂ ವಿರುದ್ಧ ಭಾರೀ ವ್ಯತ್ಯಾಸದಲ್ಲಿ ಸೋತಿದ್ದರು. 2024ರ ಮತದಾರರ ಅಂಕಿಅಂಶಗಳ ಪ್ರಕಾರ ಪೋರ್ಟ್‌ ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರ. ಇಲ್ಲಿ ಸುಮಾರು 51.8% ಮುಸ್ಲಿಂರಿದ್ದರು. ಈ ಕ್ಷೇತ್ರದಲ್ಲಿ ಗಾರ್ಡನ್‌ ರೀಚ್‌, ಮೆಟಿಯಾಬ್ರೂಜ್‌, ಖಿದಿರ್‌ಪುರ ಮುಂತಾದ ಪ್ರದೇಶಗಳಿವೆ. ಬಂದರು ಮತ್ತು ಡಾಕ್‌ ಕೆಲಸಗಳಿಗೆ ಸಂಬಂಧಿಸಿದಂತೆ ಹಲವು ದಶಕಗಳಲ್ಲಿ ವಿವಿಧ ಪ್ರದೇಶಗಳಿಂದ ವಲಸೆ ಬಂದ ಕುಟುಂಬಗಳು ಇಲ್ಲಿ ನೆಲೆಸಿದ್ದು, ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಮುಸ್ಲಿಂ ಸಮುದಾಯನ್ನು ಗುರಿಯಾಗಿಸಿ ಈ ಬದಲಾವಣೆಗೆ ಮುಂದಾಗಿದ್ದಾರೆ ಹಾಗೂ ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುವ ಬಿಜೆಪಿ ನಾಯಕರ ಸಾಲಿಗೆ ಈಗ ಸಿಂಗ್‌ ಸೇರಿದ್ದಾರೆ ಎನ್ನುವ ಟೀಕೆಗಳೂ ಕೇಳಿಬರುತ್ತಿವೆ.

ದೇಶದ ವಿವಿಧೆಡೆ ಧಾರ್ಮಿಕ ಹಬ್ಬಗಳಲ್ಲಿ ಇತರ ಸಮುದಾಯಗಳ ಭಾಗವಹಿಸುವಿಕೆಯನ್ನು ಪ್ರಶ್ನಿಸುವ, ನಿರ್ಬಂಧಿಸುವ ಘಟನೆಗಳು ಕಳೆದೊಂದು ದಶಕದಲ್ಲಿ ಹೆಚ್ಚಾಗಿವೆ. ಇದೇ ವರ್ಷ ಜನವರಿಯಲ್ಲಿ ಉಡುಪಿಯಲ್ಲಿ ಮುಸ್ಲಿಂ ಸೌಹಾರ್ದ ಸಮಿತಿ, ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಲು ಮುಂದಾಗಿತ್ತು. ನೀರು ವಿತರಿಸುವುದು ಸೇರಿದಂತೆ ಸಹಕಾರ ನೀಡುವುದಾಗಿ ಸಮಿತಿ ಹೇಳಿತ್ತು. ಆದರೆ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ, ಅಧಿಕೃತ ಅನುಮತಿ ನೀಡಿಲ್ಲ ಎಂದು ಹೇಳಿ, ಇಂತಹ ಕ್ರಮಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು ಎಂದು ಆಕ್ಷೇಪಿಸಿದ್ದರು.

ಇದನ್ನೂ ಓದಿ: ʼವಿವಿಗಳು ಪ್ರಶ್ನಿಸುವ ತಾಣವಾಗಲಿ; ನ್ಯಾಯಾಂಗವೇನೂ ವಿಮರ್ಶೆಗೆ ಹೊರತಲ್ಲʼ: ನ್ಯಾ ಭುಯಾನ್‌ ಹೀಗಂದದ್ದು ಯಾಕೆ?

ಫೆಬ್ರವರಿಯಲ್ಲಿ ಮಧ್ಯ ಭಾರತದ ಒಂದು ಹಿಂದೂ ಧಾರ್ಮಿಕ ಉತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಹೊರಗಿಡಲಾಗಿದೆ ಎಂಬ ವರದಿ ಪ್ರಕಟವಾಗಿತ್ತು. ಕೆಲವು ಮುಸ್ಲಿಂ ವ್ಯಾಪಾರಿಗಳ ಪ್ರಕಾರ, ಉತ್ಸವದ ಪ್ರದೇಶದಲ್ಲಿ ಧಾರ್ಮಿಕ ಗುರುತಿನ ಆಧಾರದ ಮೇಲೆ ಹೆಸರುಗಳನ್ನು ಪರಿಶೀಲಿಸಿ ಅವರನ್ನು ವ್ಯಾಪಾರದಿಂದ ದೂರವಿಡಲಾಗಿತ್ತು. ನವರಾತ್ರಿ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ಮುಸ್ಲಿಮರು ಗರ್ಬಾ ಕಾರ್ಯಕ್ರಮಗಳಿಗೆ ಬರಬಾರದು ಎಂಬ ಪೋಸ್ಟರ್‌ಗಳು/ಅಭಿಯಾನಗಳು ವಿವಾದಕ್ಕೆ ಕಾರಣವಾಗಿದ್ದವು. ಕೆಲವೆಡೆ ಪ್ರವೇಶಕ್ಕೂ ಮುನ್ನ ಗುರುತಿನ ಪರಿಶೀಲನೆ ನಡೆಸುವ ವಿಚಾರವೂ ಚರ್ಚೆಗೆ ಬಂದಿತ್ತು. 2014ರಲ್ಲಿ ಬಲಪಂಥೀಯ ಹಿಂದೂ ಸಂಘಟನೆಯೊಂದು ಹಿಂದೂ ಧಾರ್ಮಿಕ ಹಬ್ಬದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಭಾಗವಹಿಸಬಾರದು ಎಂದು ಸಾರ್ವಜನಿಕವಾಗಿ ಕರೆ ನೀಡಿದ್ದ ವರದಿಯೂ ಇದೆ. ಆ ಸಂದರ್ಭದಲ್ಲಿ ಇದನ್ನು ಭಾರತದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಪ್ರತ್ಯೇಕತೆಯ ಮತ್ತೊಂದು ಉದಾಹರಣೆಯಾಗಿ ವರದಿ ಮಾಡಲಾಗಿತ್ತು.

ಸೌಹಾರ್ದ ಎಂದರೆ ಎಲ್ಲ ಧರ್ಮಗಳ ಆಚರಣೆಗಳೂ ಒಂದೇ ಆಗಬೇಕು ಎಂದಲ್ಲ. ಹಾಗೆಯೇ, ಒಂದು ಧರ್ಮದ ಹಬ್ಬದಲ್ಲಿ ಮತ್ತೊಂದು ಧರ್ಮದವರು ಭಾಗವಹಿಸಿದರೆ ಆ ಹಬ್ಬದ ಧಾರ್ಮಿಕ ಗುರುತು ಅಳಿದುಹೋಗುತ್ತದೆ ಎಂದೂ ಅಲ್ಲ. ಬದಲಾಗಿ, ಮತ್ತೊಬ್ಬರ ನಂಬಿಕೆಯನ್ನು ಗೌರವಿಸುತ್ತಾ ಅವರ ಸಂತೋಷದಲ್ಲಿ ಪಾಲ್ಗೊಳ್ಳುವುದು ಬಹುಸಾಂಸ್ಕೃತಿಕ ಸಮಾಜದ ಸಹಜ ಗುಣ. ಮೊಮಿನ್‌ಪುರದ ಹಿಂದಿನ ಆಚರಣೆಯ ವಿಶೇಷತೆಯೂ ಇದೇ ಆಗಿತ್ತು. ಹಿಂದೂಗಳ ಹಬ್ಬವನ್ನು ಹಿಂದೂಗಳು ಆಚರಿಸುವುದಕ್ಕೂ, ಅದನ್ನು ಹಿಂದೂಗಳಿಗಷ್ಟೇ ಸೀಮಿತಿಗೊಳಿಸುವುದಕ್ಕೂ ವ್ಯತ್ಯಾಸವಿದೆ. ಹಬ್ಬದ ಧಾರ್ಮಿಕ ಗುರುತನ್ನು ಉಳಿಸಿಕೊಂಡೇ ಅದನ್ನು ಸಾಮಾಜಿಕ ಸೌಹಾರ್ದದ ವೇದಿಕೆಯನ್ನಾಗಿ ಮಾಡಬಹುದು. ಆದರೆ, ಮಾಡುವ ಇಚ್ಛಾಶಕ್ತಿ ಇದೆಯೇ ಎಂಬುದು ಮುಖ್ಯ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ ಲಾರೆನ್ಸ್ ಬಿಷ್ಣೋಯ್‌ವರೆಗೆ!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ...

CJP ನಾಯಕರ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರ ಮನವಿ; ಮ್ಯಾಜಿಸ್ಟ್ರೇಟ್ ಮುಂದೆ ಹಾಜರು

CJP ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಸೋಮವಾರ...