ಧರ್ಮಸ್ಥಳ ಗ್ರೌಂಡ್ ರಿಪೋರ್ಟ್ | SITಯ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಕಂಡಿದ್ದಿಷ್ಟು..

Date:

Advertisements
ತನಿಖೆಯಂತೂ ಬಿರುಸಿನಿಂದ ಸಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಗುರುವಾರದ ಕಾರ್ಯಾಚರಣೆಯು ಪ್ರಕರಣಕ್ಕೆ ತಿರುವು ನೀಡಬಹುದೇ ಎಂಬ ನಿರೀಕ್ಷೆಗಳಿವೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಸ್ವಚ್ಛತಾ ಕಾರ್ಮಿಕ ಕೊಟ್ಟಿರುವ ದೂರಿನ ಆಧಾರದಲ್ಲಿ ರಚನೆಯಾಗಿರುವ ವಿಶೇಷ ತನಿಖಾ ತಂಡವು ತನಿಖೆಯನ್ನು ಚುರುಕುಗೊಳಿಸಿದೆ. ದೂರುದಾರನಿಂದ ಸ್ಥಳಗಳನ್ನು ಗುರುತಿಸಿದ ಬಳಿಕ ಮಂಗಳವಾರ ನಿಗದಿತ ಸ್ಥಳಗಳಲ್ಲಿ ಅಸ್ಥಿಪಂಜರಗಳನ್ನು ಹುಡುಕುವ ಕಾರ್ಯ ಆರಂಭಿಸಲಾಗಿದ್ದು, ಬುಧವಾರ ಸಂಜೆ 5 ಗಂಟೆಯ ತನಕ ಕಾರ್ಯಾಚರಣೆ ನಡೆಯಿತು.

ಧರ್ಮಸ್ಥಳದಲ್ಲಿನ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 13 ಸ್ಥಳಗಳನ್ನು ದೂರುದಾರ ಗುರುತಿಸಿದ್ದು ಒಂದೊಂದು ಸ್ಥಳಕ್ಕೂ ನಂಬರ್ ನೀಡಲಾಗಿದೆ. ಒಂದೊಂದು ಸ್ಥಳವನ್ನು ಕ್ರಮಬದ್ಧವಾಗಿ ಅಗೆದು ಅಸ್ಥಿಪಂಜರಗಳನ್ನು ಹುಡುಕುವ ಕೆಲಸ ಭರದಿಂದ ಸಾಗಿದೆ.

ಸ್ನಾನಘಟ್ಟದ ಬಳಿ ಇರುವ ಬಂಗ್ಲೆ ಗುಡ್ಡದಲ್ಲಿನ ಮೊದಲ ಸ್ಥಳದಲ್ಲಿ ಮಂಗಳವಾರ ಕಾರ್ಯಾಚರಣೆ ಶುರುಮಾಡಲಾಯಿತು. ಹದಿಮೂರು ಕಾರ್ಮಿಕರ ಸಹಾಯದಿಂದ ಗುದ್ದಲಿ, ಪಿಕ್ಕಾಸು ಬಳಸಿ ಸ್ಥಳವನ್ನು ಅಗೆಯಲಾಯಿತು. ಆದರೆ ಪಕ್ಕದಲ್ಲೇ ನೇತ್ರಾವತಿ ನದಿ ಹರಿಯುತ್ತಿರುವುದರಿಂದ ಗುಂಡಿಯೊಳಗೆ ನೀರು ತುಂಬಿಕೊಳ್ಳಲು ಶುರುವಾಯಿತು. ನಂತರ ಹಿಟಾಚಿ ಬಳಸಿ ಎಂಟು ಅಡಿ ಆಳದವರೆಗೆ ಸ್ಥಳವನ್ನು ಅಗೆದರೂ ಯಾವುದೇ ಅಸ್ತಿಪಂಜರ ಸಿಗಲಿಲ್ಲ. ಆದರೆ ಸ್ಥಳದಲ್ಲಿ ಒಂದು ಕೆಂಪು ರವಿಕೆ, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್, ಒಂದು ಬ್ಯಾಗ್ ಸಿಕ್ಕಿರುವುದಾಗಿ ತಿಳಿದುಬಂದಿದೆ. ಆ ವಸ್ತುಗಳು ಮೂರು ಅಡಿಯೊಳಗೆ, ಅಂದರೆ ಮೇಲ್ಮಟ್ಟದಲ್ಲಿಯೇ ಸಿಕ್ಕಿದ್ದರಿಂದ ಸದರಿ ಪ್ರಕರಣಕ್ಕೂ ಈ ವಸ್ತುಗಳಿಗೂ ಯಾವುದೇ ಸಂಬಂಧ ಇಲ್ಲವೆಂದು ಮೇಲು ನೋಟಕ್ಕೆ ಕಾಣುತ್ತಿರುವುದಾಗಿ ಎಸ್‌ಐಟಿ ಮೂಲಗಳು ‘ಈದಿನ’ಕ್ಕೆ ಖಚಿತಪಡಿಸಿವೆ.

Advertisements
d1

“ಸ್ನಾನಘಟ್ಟಕ್ಕೆ ಯಾತ್ರಿಕರು ಬರುತ್ತಾರೆ. ಈ ವಸ್ತುಗಳು ಸಾಮಾನ್ಯವಾಗಿ ಬೇರೆಯ ಯಾತ್ರಿಕರಿಗೆ ಸಂಬಂಧಿಸಿರುವ ಸಾಧ್ಯತೆಗಳಿವೆ” ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಜಡಿ ಮಳೆಯ ನಡುವೆ ಶುರುವಾಗಿದ್ದ ಅಸ್ಥಿಪಂಜರ ಹುಡುಕಾಟವು ಎರಡನೇ ದಿನವೂ ಸಫಲವಾಗಲಿಲ್ಲ. ಉಳಿದ ಸ್ಥಳಗಳ ಕಾರ್ಯಾಚರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.

“ಒಂದನೇ ಸ್ಥಳವಿರುವ ಜಾಗದಲ್ಲಿ ಈ ಹಿಂದೆ ಗುಡ್ಡ ಕುಸಿತವಾಗಿತ್ತು. ಸ್ನಾನಘಟ್ಟದ ಬಳಿಕ ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದರಿಂದ ಹಾಗೂ ನದಿಯು ಅನೇಕ ಸಲ ಪ್ರವಾಹ ಉಂಟಾಗಿದ್ದರಿಂದ ಬಹುಶಃ ಆ ಜಾಗದಲ್ಲಿ ಅಸ್ಥಿಪಂಜರ ನಾಶವಾಗಿರುವ ಸಾಧ್ಯತೆಯೇ ಹೆಚ್ಚಿದೆ” ಎನ್ನುತ್ತಾರೆ ಸ್ಥಳೀಯರು.

‘ಈದಿನ ಡಾಟ್ ಕಾಮ್’ ಗ್ರೌಂಡ್ ರಿಪೋರ್ಟ್ ವೇಳೆ ಇಂದು (ಬುಧವಾರ) ಕಂಡುಕೊಂಡಿರುವ ವಿವರಗಳನ್ನು ‘ಓದುಗರಿಗೆ’ ತಿಳಿಸುವ ಪ್ರಯತ್ನ ಮುಂದಿನ ವಿವರಗಳಲ್ಲಿದೆ.

ಬುಧವಾರ (ಇಂದು) ಬೆಳಿಗ್ಗೆ 11 ಗಂಟೆಯ ವೇಳೆಗೆ ಎಸ್‌ಐಟಿ ತಂಡವು ದೂರುದಾರನನ್ನು ಕರೆತಂದಿತು. ದೂರುದಾರ ತೋರಿಸಿರುವ ಸ್ಥಳಗಳ ಬಗ್ಗೆ ಎಸ್‌ಐಟಿ ನಂಬಿಕೆ ಇಟ್ಟಿದ್ದು, ಇಂದು ಎರಡನೇ ಸ್ಥಳದತ್ತ ತೆರಳಿತು.

ಸ್ನಾನಘಟ್ಟದ ಪಕ್ಕದಲ್ಲಿನ ಬಂಗ್ಲೆ ಗುಡ್ಡದಲ್ಲಿನ ಕಾಡಿನೊಳಗೆ ತಂಡವು ತೆರಳಿತು. ಮೊದಲ ದಿನದ ಕಾರ್ಯಾಚರಣೆ ರಸ್ತೆ ಪಕ್ಕದಲ್ಲಿಯೇ ಇದ್ದಿದ್ದರಿಂದ ಅದರ ವಿಡಿಯೊ ತುಣುಕುಗಳು ಮಾಧ್ಯಮಗಳಿಗೆ ಲಭ್ಯವಾಗುತ್ತಿದ್ದವು. ಆದರೆ ಕಾಡಿನ ಒಳಗೆ ಪ್ರವೇಶ ನಿಷೇಧಿತವಾಗಿದ್ದರಿಂದ ಪೊಲೀಸರು, ಅಧಿಕಾರಿಗಳು ವಾಪಸ್ ಬರುವುದನ್ನು ಕಾಯಬೇಕಾಯಿತು. ಜಡಿಮಳೆಯ ನಡುವೆ, ಬಿಗಿ ಪೊಲೀಸ್ ಬಂದೋಬಸ್ತ್‌ ಮೂಲಕ ತನಿಖಾ ಕಾರ್ಯ ಸಾಗಿದೆ.

ಮಧ್ಯಾಹ್ನದ ಮೂರು ಗಂಟೆಯವರೆಗೂ ಕಾಡಿನೊಳಗೆಯೇ ಶೋಧ ಕಾರ್ಯ ಮುಂದುವರಿಯಿತು. ಮಧ್ಯಾಹ್ನದವರೆಗೆ ಎರಡು ಮತ್ತು ಮೂರನೇ ಸ್ಥಳಗಳಲ್ಲಿ ಅಗೆಯಲಾಯಿತು. ನಾಲ್ಕನೇ ಜಾಗದಲ್ಲಿ ಅರ್ಧದಷ್ಟು ಅಗೆದು ನಂತರ ಹೊರಬರಲಾಯಿತು. ಆ ವೇಳೆಯವರೆಗೂ ಯಾವುದೇ ಸಾಕ್ಷ್ಯ ಸಂಗ್ರಹವಾಗಿಲ್ಲ ಎಂದು ಮೂಲಗಳು ಹೇಳಿವೆ.

1001573317

ನಾಲ್ಕು ಮತ್ತು ಐದನೇ ಜಾಗದಲ್ಲಿ ಕಾರ್ಯಾಚರಣೆ ನಡೆಯುವ ವೇಳೆಗೆ ಎಸ್‌ಐಟಿ ಮುಖ್ಯಸ್ಥರಾದ ಪ್ರಣಬ್ ಮೊಹಂತಿ ಸ್ಥಳಕ್ಕೆ ಆಗಮಿಸಿದರು. ಕಾಡಿನೊಳಗೆ ತೆರಳಿ ತನಿಖೆಯನ್ನು ಪರಿಶೀಲಿಸಿದರು. ನಾಲ್ಕು ಮತ್ತು ಐದನೇ ಜಾಗವನ್ನು ಅಗೆದ ಬಳಿಕ ಕಾಡಿನಿಂದ ತನಿಖಾ ತಂಡ ಹೊರಬಂದಿತು. ಮೊಹಂತಿಯವರ ಅಭಿಪ್ರಾಯ ಪಡೆಯಲು ಮಾಧ್ಯಮಗಳು ಯತ್ನಿಸಿದವು. “ತನಿಖೆ ಪ್ರಾಥಮಿಕ ಹಂತದಲ್ಲಿದೆ” ಎಂದಷ್ಟೇ ಹೇಳಿ ಮುನ್ನಡೆದರು.

ಇಂದು ಕಾರ್ಯಾಚರಣೆ ನಡೆದ ಎರಡು, ಮೂರು, ನಾಲ್ಕು, ಐದು- ಈ ಜಾಗಗಳಲ್ಲಿ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ ಎಂದು ಎಸ್ ಐಟಿ ಮೂಲಗಳು ಹೇಳುತ್ತಿವೆ. ಮೂರನೇ ದಿನ ಕಾರ್ಯಾಚರಣೆಯನ್ನು ನಾಳೆ ಅಂದರೆ ಗುರುವಾರ ಮುಂದುವರಿಸಲಿದ್ದಾರೆ. ಸದ್ಯಕ್ಕೆ ಸದರಿ ಜಾಗಗಳಲ್ಲಿ ಸಿಕ್ಕ ವಸ್ತುಗಳನ್ನು ಸಂಗ್ರಹಿಸಿರುವುದು ಕಂಡು ಬಂದಿದೆ.

ಇದನ್ನೂ ಓದಿರಿ: ಕೇಂದ್ರ ಸೇವೆಗೆ ಪ್ರಣಬ್ ಮೊಹಂತಿ? ಧರ್ಮಸ್ಥಳ ಪ್ರಕರಣದ ನೂತನ ಎಸ್‌ಐಟಿ ಮುಖ್ಯಸ್ಥರು ಯಾರಾಗಲಿದ್ದಾರೆ?

ಧರ್ಮಸ್ಥಳದ ಸುತ್ತಮುತ್ತಲಿನ ಜನರು ನೇತ್ರಾವತಿ ನದಿ ಮೇಲಿನ ಸೇತುವೆ ಮೇಲೆ ಜಮಾಯಿಸಿದ್ದರು. ಹಲವು ವರ್ಷಗಳಿಂದ ಇಲ್ಲಿ ನಡೆದಿವೆ ಎನ್ನಲಾದ ಘಟನೆಗಳ ಬಗ್ಗೆ ನಮಗೆ ನಂಬಿಕೆ ಇದೆ. ನಮ್ಮ ಅನುಭವದಲ್ಲಿ ಕೇಳಲ್ಪಟ್ಟ, ನೋಡಲ್ಪಟ್ಟ ಘಟನೆಗಳು ನಿಜವಾಗಬಹುದು, ಮೃತದೇಹ ಸಿಗಬಹುದು ಎಂಬುದು ಜನರ ಅಭಿಪ್ರಾಯ.

‘ಈದಿನ’ಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ಹಾಗೂ ಹೋರಾಟಗಾರ ಪ್ರಜ್ವಲ್, “ಎಸ್‌ಐಟಿಯವರು ಪ್ರಾಮಾಣಿಕ ತನಿಖೆ ನಡೆಸುತ್ತಿರುವ ವಿಶ್ವಾಸ ನಮಗಿದೆ. ಈವರೆಗಿನ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಎಸ್‌ಐಟಿ ತನಿಖೆಯ ಬಗ್ಗೆ ವಿಶ್ವಾಸ ಮೂಡುತ್ತಿದೆ. ಆದರೆ ನದಿ ತಟದಲ್ಲಿರುವ ಪ್ರದೇಶಗಳಲ್ಲಿ ಅಸ್ಥಿಪಂಜರಗಳನ್ನು ಹುಡುಕುವುದು ಕಷ್ಟದ ಕೆಲಸವೇ ಸರಿ. ಕಳೆದ ವರ್ಷ ನೇತ್ರಾವತಿ ನದಿಯು ಸೇತುವೆ ಮಟ್ಟಕ್ಕೆ ಉಕ್ಕಿ ಹರಿದಿದ್ದನ್ನು ನಾವು ನೋಡಿದ್ದೇವೆ. ಹೀಗಾಗಿ ನದಿ ತಟಕ್ಕೆ ಹೊಂದಿಕೊಂಡಿರುವ ಸ್ಥಳಗಳಲ್ಲಿ ಮೃತದೇಹದ ಅವಶೇಷಗಳು ನಾಶವಾಗಿರುವ ಸಾಧ್ಯತೆ ಇದೆ. ಆದರೆ ನದಿ ಮಟ್ಟಕ್ಕಿಂತ ಮೇಲ್ಭಾಗದಲ್ಲಿ ಆರು, ಏಳು ಮತ್ತು ನಂತರದ ಸ್ಥಳಗಳನ್ನು ಗುರುತಿಸಲಾಗಿದೆ. ಬಹುಶಃ ಅಲ್ಲಿ ಅಸ್ಥಿಪಂಜರಗಳು ಸಿಗುವ ಸಾಧ್ಯತೆ ಇದೆ” ಎಂದರು.

ತನಿಖೆಯಂತೂ ಬಿರುಸಿನಿಂದ ಸಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಗುರುವಾರದ ಕಾರ್ಯಾಚರಣೆಯು ಪ್ರಕರಣಕ್ಕೆ ತಿರುವು ನೀಡಬಹುದೇ ಎಂಬ ನಿರೀಕ್ಷೆಗಳಿವೆ. ಧರ್ಮಸ್ಥಳದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ಮತ್ತು ಸ್ಪಷ್ಟ ಮಾಹಿತಿಯನ್ನು ಕೊಡುವ ನಿರಂತರ ಪ್ರಯತ್ನವನ್ನು ನಿಮ್ಮ ‘ಈದಿನ ಡಾಟ್‌ ಕಾಮ್’ ಮಾಡುತ್ತಿದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X