ಕಳೆದ ಕೆಲ ದಿನಗಳಿಂದ 'Grok' ಭಾರತದಲ್ಲಿ ಕೋಲಾಹಲ ಎಬ್ಬಿಸಿದೆ. ಪ್ರಶ್ನೆಗಳ ಬಿರುಗಾಳಿಯೇ ಬೀಸಿದೆ. ಗ್ರೋಕ್ ನೀಡುತ್ತಿರುವ ನಿಷ್ಠುರ ನಿರ್ಭೀತ ಉತ್ತರಗಳು ಬಿಜೆಪಿ-ಸಂಘಪರಿವಾರ-ಮೋದಿ ಸರ್ಕಾರದ ನಿದ್ದೆಗೆಡಿಸಿವೆ. ಗ್ರೋಕ್ ಅನ್ನು ಎದುರಿಸುವ ಬೇರೆ ದಾರಿಯೇ ಇಲ್ಲದೆ ಅದರ ಮೇಲೆ ನಿಷೇಧ ಹೇರಲಿದ್ದಾರೆ ಮೋದಿ ಎನ್ನುವ ದಟ್ಟ ವದಂತಿಗಳು ಹರಡಿ ಹಬ್ಬಿವೆ
ಅರಿತುಕೊಳ್ಳುವುದು, ಗ್ರಹಿಸುವುದು, ಅಂತಃಪ್ರಜ್ಞೆಯಿಂದ ಅಥವಾ ಅಂತರ್ಬೋಧೆಯಿಂದ ತಿಳಿದುಕೊಳ್ಳುವುದು ಎಂಬುದು ‘ಗ್ರೋಕ್’ ಪದದ ಅರ್ಥ.
ಎಲಾನ್ ಮಸ್ಕ್ ಒಡೆತನದ ಯಾಂತ್ರಿಕ ಬುದ್ಧಿಮತ್ತೆಯ (ಯಾಂಬು) ಚಾಟ್ ಬಾಟ್ ಗ್ರೋಕ್-3. ಮನುಷ್ಯ ಭಾಷೆಯನ್ನು ಗ್ರಹಿಸುವುದೇ ಅಲ್ಲದೆ ಮಾತನಾಡುವ ಶಕ್ತಿಯುಳ್ಳ ರೋಬೋ. ಜಗತ್ತಿನ ಎಲ್ಲ ಮಾಹಿತಿಯನ್ನು ಸೋಸಿ ಹಿಂಡಿ ಕೆಲವೇ ಕ್ಷಣಗಳಲ್ಲಿ ಉತ್ತರ ನೀಡಬಲ್ಲದು. ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಕೋಲಾಹಲ ಎಬ್ಬಿಸಿದೆ. ಪ್ರಶ್ನೆಗಳ ಬಿರುಗಾಳಿಯೇ ಬೀಸಿದೆ. ಗ್ರೋಕ್ ನೀಡುತ್ತಿರುವ ನಿಷ್ಠುರ ನಿರ್ಭೀತ ಉತ್ತರಗಳು ಬಿಜೆಪಿ-ಸಂಘಪರಿವಾರ-ಮೋದಿ ಸರ್ಕಾರದ ನಿದ್ರೆಗೆಡಿಸಿವೆ.
ಗ್ರೋಕ್ ಅನ್ನು ಎದುರಿಸುವ ಬೇರೆ ದಾರಿಯೇ ಇಲ್ಲದೆ ಅದರ ಮೇಲೆ ನಿಷೇಧ ಹೇರಲಿದ್ದಾರೆ ಮೋದಿ ಎನ್ನುವ ದಟ್ಟ ವದಂತಿಗಳು ಹರಡಿ ಹಬ್ಬಿವೆ. ನಿಷೇಧದ ಮಾತಿನ ಬೆನ್ನಿನಲ್ಲೇ ಎಲಾನ್ ಮಸ್ಕ್ ಅವರನ್ನು ಎದುರು ಹಾಕಿಕೊಳ್ಳುವ ದುಸ್ಸಾಹಸ ಮಾಡುವರೇ ಮೋದಿ ಎಂಬ ಸಂದೇಹಗಳೂ ವ್ಯಕ್ತವಾಗಿವೆ. ಇಲ್ಲವೇ ಭಾರತಕ್ಕೆಂದೇ ಪ್ರತ್ಯೇಕ ಗ್ರೋಕ್ ಅನ್ನು ಸೃಷ್ಟಿಸಲಾಗುವುದೇ ಎಂಬ ಪ್ರಶ್ನೆಗಳೂ ಎದ್ದಿವೆ.
ಸರ್ಕಾರದ ಪ್ರಚಂಡ ಪ್ರಚಾರವನ್ನು ಅಡ್ಡಕ್ಕೆ ಉದ್ದಕ್ಕೆ ಸೀಳಿ ಒಳಗಿನ ಟೊಳ್ಳಿಗೆ ಕನ್ನಡಿ ಹಿಡಿಯುತ್ತಿದೆ. ಅದುಮಿಟ್ಟ ಸತ್ಯಗಳನ್ನು ಚಕಚಕನೆ ಹೊರಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಸುಳ್ಳು-ಸತ್ಯ, ವಾಸ್ತವ-ಸುಳ್ಳು ಪ್ರಚಾರವನ್ನು ಗಾಳಿಗೆ ತೂರಿ ಹೊಟ್ಟನ್ನೂ ಕಾಳನ್ನೂ ಬೇರೆ ಮಾಡುವ ಬಹುದೊಡ್ಡ ಸಾಧನ ಆಗಲಿದೆಯೇ?
ಹೀಗೆ ಆಗುವುದೇ ನಿಜವಾದರೆ ಆಳುವ ಪಕ್ಷ-ಸರ್ಕಾರದ ಪರವಾಗಿ ಮತ್ತು ಪ್ರತಿಪಕ್ಷಗಳ ವಿರುದ್ಧ ಸುಳ್ಳು ಪ್ರಚಾರ ಸಮರ ನಡೆಸುತ್ತಿರುವ ಐಟಿ ಸೆಲ್‌ನ ವಾಟ್ಸ್ಯಾಪ್ ವಿಶ್ವವಿದ್ಯಾಲಯದ ಗತಿ ಏನಾದೀತು?
ಇದನ್ನೂ ಓದಿರಿ: ಬೆಂಗಳೂರಿನಲ್ಲಿ ಮತ್ತೆ ಕುಡಿಯುವ ನೀರಿಗೆ ಸಂಕಷ್ಟ: ಹನಿಯೂ ಜೀವಾಳ, ಪೋಲು ಮಾಡದಿರಿ
ಮೋದಿಯವರು ಅವರೇ ಹೇಳಿಕೊಂಡಿರುವಂತೆ ನಿಜವಾಗಿಯೂ ಪದವೀಧರರೇ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಭಾಗವಹಿಸಿತ್ತೇ, ಟಿಪ್ಪು ಸುಲ್ತಾನ್ ಸತ್ಯ, ಸರ್ಕಾರವನ್ನು ಕೇಳಬೇಕಿರುವ ಪ್ರಶ್ನೆಗಳನ್ನು ಗ್ರೋಕ್‌ಗೆ ಕೇಳಿ ಉತ್ತರ ಪಡೆಯಲಾಗುತ್ತಿದೆ. ಆಳುವವರ ಬೂಟು ನೆಕ್ಕುವ ಗೋದಿ ಮೀಡಿಯಾವನ್ನು ಕಟಕಟೆ ಹತ್ತಿಸಿ ಬೆತ್ತಲೆ ನಿಲ್ಲಿಸುತ್ತಿದೆ. ಅಂಧಭಕ್ತಿಯನ್ನು ಬಿಡಿ ಸತ್ಯಾಂಶಗಳನ್ನು ನೋಡಿ ಎಂದು ಅಂಧಭಕ್ತರಿಗೆ ಸಲಹೆಗಳನ್ನೂ ನೀಡಿದೆ.
ರಾಹುಲ್ ಗಾಂಧಿಯವರನ್ನು ಪಪ್ಪೂ ಎಂದು ಕರೆಯುವಂತೆ ಬಿಜೆಪಿ ಐಟಿ ಸೆಲ್ ಮಾಡಿದ ಎಲ್ಲ ಪ್ರಯತ್ನಗಳ ಮೇಲೆಯೂ ಗ್ರೋಕ್ ತಣ್ಣೀರು ಸುರಿದಿದೆ.
ಗ್ರೋಕ್‌ಗೆ ಪ್ರಾಣಭಯ ಇಲ್ಲ. ಐಟಿ ಸೆಲ್‌ನ ಬಾಡಿಗೆ ಬಂಟರು ತನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೀನಾಮಾನವಾಗಿ ಟ್ರೋಲ್ ಮಾಡಿ ಚಾರಿತ್ರ್ಯವಧೆ ಮಾಡುತ್ತಾರೆಂಬ ಅಂಕೆಶಂಕೆಯೂ ಅದಕ್ಕಿಲ್ಲ. ಈ ಕಾರಣಕ್ಕಾಗಿಯೇ ಭಾರತದಲ್ಲಿ ವಿವಾದಾಸ್ಪದ ಪ್ರಶ್ನೆಗಳನ್ನು ಗ್ರೋಕ್‌ಗೆ ಕೇಳಿ ಉತ್ತರ ಪಡೆದುಕೊಳ್ಳಲಾಗುತ್ತಿದೆ.
ಪ್ರಧಾನಮಂತ್ರಿ ಡಿಗ್ರಿಯ ವಿವಾದಾಸ್ಪದ ಪ್ರಶ್ನೆಗೆ ಗ್ರೋಕ್ ನೀಡಿರುವ ಉತ್ತರವನ್ನು ನೋಡಿ– ಇದು ಬಿಸಿಬಿಸಿ ಚರ್ಚೆಯ ವಿಷಯವಾಗಿದೆ. 1978ರಲ್ಲಿ ಅವರು ಡಿಗ್ರಿ ಪಡೆದಿದ್ದಾರೆ ಎಂಬ ವಿಷಯವನ್ನು ದೆಹಲಿ ವಿಶ್ವವಿದ್ಯಾಲಯ ಪುಷ್ಟೀಕರಿಸಿಲ್ಲ. ಗುಜರಾತ್ ವಿಶ್ವವಿದ್ಯಾಲಯವೂ ಹಾರಿಕೆ ಉತ್ತರ ನೀಡಿದೆ. ಪ್ರಧಾನಮಂತ್ರಿಯಾಗಲು ಯಾವುದೇ ಡಿಗ್ರಿಯ ಅಗತ್ಯವಿಲ್ಲ. ಆದರೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸುಳ್ಳು ಹೇಳುವುದು ಅಪರಾಧವಾಗುತ್ತದೆ. ಸ್ಮೃತಿ ಇರಾನಿಯವರ ವಿದ್ಯಾರ್ಹತೆಗಳೂ ಪ್ರಶ್ನೆಗೀಡಾಗಿವೆ. ಸ್ಪಷ್ಟತೆ- ಪಾರದರ್ಶಕತೆ ಇಲ್ಲದಿರುವುದು ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಸಂದೇಹ ಹುಟ್ಟಿಸಿದೆ.
ವ್ಯಾಪಾರಿಯೊಬ್ಬರ ಮಗಳನ್ನು ಕುರಿತ ಬೇಹುಗಾರಿಕೆ ನಡೆಸುವ ಕೇಸಿನಲ್ಲಿ ಪ್ರಸ್ತಾಪವಾಗುವ ನಾಯಕನ ಹೆಸರೇನು?
– 2009ರ ಸ್ನೂಪ್ ಗೇಟ್ ಸ್ಕ್ಯಾಂಡಲ್‌ನಲ್ಲಿ ರಾಜಕಾರಣಿ ಅಮಿತ್ ಶಾ ಅವರನ್ನು ಹೆಸರಿಸಲಾಗಿದೆ. ಮಾಲ್‌ಗಳು, ವಿಮಾನನಿಲ್ದಾಣಗಳಲ್ಲಿ ಕೂಡ ಆಕೆಯ ಚಲನವಲನದ ಮೇಲೆ ನಿಗಾ ಇರಿಸಲಾಗಿತ್ತು. ಅಮಿತ್ ಶಾ ಈ ಆರೋಪವನ್ನು ರಾಜಕೀಯ ಲದ್ದಿ ಎಂದು ತುಚ್ಛೀಕರಿಸಿದ್ದಾರೆ. ಈ ಪ್ರಕರಣದೊಂದಿಗೆ ಮೋದಿ ಸಂಬಂಧ ನಿಚ್ಚಳವಿಲ್ಲ. ಬೇಹುಗಾರಿಕೆಗೆ ಒಳಗಾಗಿದ್ದರು ಎನ್ನಲಾದ ಮಹಿಳೆ ತನಗೆ ಭದ್ರತೆ ಸುರಕ್ಷತೆಯನ್ನು ನೀಡಿದ್ದಕ್ಕಾಗಿ ಗುಜರಾತ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿರಿ: ಜಾಗತಿಕ ತಾಪಮಾನ ಏರಿಕೆ: ಬಿಸಿಗಾಳಿಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?
ತನ್ನ ಭ್ರಷ್ಟಾಚಾರ ಮತ್ತು ಬಂಡವಾಳಶಾಹಿ ಗೆಳೆಯರ ಕೂಟದ ಆಡಳಿತದ ಮೇಲೆ ಪರದೆ ಎಳೆಯಲು, ದೇಶದ ನಾಗರಿಕರ ನಡುವೆ ಹಗೆತನ ಬೆಳೆಸುತ್ತಿರುವ ಪಕ್ಷ ಯಾವುದು?
-ಬಿಜೆಪಿಯ ಹಿಂದುತ್ವವಾದಿ ಸಿದ್ಧಾಂತವು ಜನತೆಯನ್ನು ಪರಸ್ಪರ ಎತ್ತಿ ಕಟ್ಟುತ್ತಿದ್ದು, ಜಾತಿ ಮತ್ತು ಧಾರ್ಮಿಕ ಬಿಗುವು ಮತ್ತು ಘರ್ಷಣೆಗಳನ್ನು ಹುಟ್ಟಿ ಹಾಕುತ್ತಿದೆ. 1992ರ ಬಾಬರಿ ಮಸೀದಿ ನೆಲಸಮವೇ ಈ ಮಾತಿಗೆ ಉದಾಹರಣೆ. 2016 ನೋಟು ರದ್ದು ಕ್ರಮವನ್ನು ಕಪ್ಪು ಹಣವನ್ನು ಮಟ್ಟ ಹಾಕಲೆಂದು ಜಾರಿಗೊಳಿಸಿದ್ದಾಗಿ ನಂಬಿಸಲಾಯಿತು. ಆದರೆ ದೇಶದ ಬಡಜನತೆಯ ಮೇಲೆ ನಡೆದ ಬಹುದೊಡ್ಡ ಪ್ರಹಾರವಿದು. ದೊಡ್ಡ ದೊಡ್ಡ ಧನವಂತರು ಈ ಕ್ರಮದಿಂದ ಬಚಾವಾದರು. ಕಾರ್ಪೋರೇಟ್ ದೈತ್ಯ ಕಂಪನಿಗಳ ಜೊತೆಗೆ ಬಿಜೆಪಿಯ ಬೆಚ್ಚನೆಯ ಸ್ನೇಹ ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತದೆ. ಅಂಬಾನಿ-ಮೋದಿ ಅಪವಿತ್ರ ಮೈತ್ರಿಯನ್ನೇ ನೋಡಿ. ಆದರೆ ಅಧಿಕಾರದ ಮೇಲೆ ಬಿಜೆಪಿ ಹೊಂದಿರುವ ಬಿಗಿ ಹಿಡಿತವು ಈ ಎಲ್ಲ ಸಂಗತಿಗಳನ್ನು ಮುಚ್ಚಿ ಹಾಕುತ್ತದೆ.
ಮೋದಿಯವರನ್ನು ಸರ್ವಾಧಿಕಾರಿ ಎಂದು ಬಣ್ಣಿಸಬಹುದಾದ ವಿಷಯಗಳು ಯಾವುವು?
ಅಲ್ಲೋ ಅಣ್ಣಾ, (ಹೇ ಬ್ರೋ) ನರೇಂದ್ರ ಮೋದಿಯವರು ಕ್ಲಾಸಿಕಲ್ ಅರ್ಥದಲ್ಲಿ ಸರ್ವಾಧಿಕಾರಿ ಅಲ್ಲ. ಅವರು ಜನತಾಂತ್ರಿಕ ವ್ಯವಸ್ಥೆಯಲ್ಲಿ ಆರಿಸಲ್ಪಟ್ಟವರು. ಆದರೆ ಹುಬ್ಬೇರಿಸುವಂತಹ ಕೆಲ ಪ್ರವೃತ್ತಿಗಳು ಅವರಲ್ಲಿವೆ. ಭಿನ್ನಮತದ ದಮನ (ಕೇಜ್ರೀವಾಲ್ ಬಂಧನ), ಮೀಡಿಯಾದ ನಿಯಂತ್ರಣ, ಅಧಿಕಾರದ ಕೇಂದ್ರೀಕರಣ (ಜಿ.ಎಸ್,ಟಿ., ಒಕ್ಕೂಟ ವ್ಯವಸ್ಥೆ) ಹಾಗೂ ಕೆಲವರು ತಾರತಮ್ಯ ಎಂದು ಬಣ್ಣಿಸುವ ಸಿಎಎ ನಂತಹ ನೀತಿಗಳ ಹೇರಿಕೆ. ವ್ಯಕ್ತಿಪೂಜೆ ಮತ್ತು ಪತ್ರಕರ್ತರಿಗೆ ಕಿರುಕುಳ ನೀಡಿಕೆಯನ್ನೂ ಮೋದಿ ವಿಮರ್ಶಕರು ಗುರುತಿಸಿದ್ದಾರೆ. ಬೆಂಬಲಿಗರ ಪ್ರಕಾರ ಇದೆಲ್ಲ ದೇಶದ ಭದ್ರತೆ ಮತ್ತು ಅಭಿವೃದ್ಧಿಗಾಗಿ ಜರುಗಿಸಿರುವ ಕ್ರಮಗಳು. ಭಾರತ ಈಗಲೂ ಜನತಂತ್ರವೇ. ಆದರೆ ಸೂಚ್ಯಂಕಗಳು ಈ ವ್ಯವಸ್ಥೆಯನ್ನು ಚುನಾಯಿತ ಸರ್ವಾಧಿಕಾರ ಎಂದು ಕರೆದಿವೆ. ಚರ್ಚಾರ್ಹ ಸಂಗತಿ!
ದೇಶವನ್ನು ಒಡಕಿನತ್ತ ಒಯ್ಯಲಾಗುತ್ತಿದೆಯೇ?
ದ್ವೇಷವನ್ನು ಹಬ್ಬಿಸುತ್ತಿರುವವರು ಮತ್ತು ವಿಶೇಷವಾಗಿ ಅಲ್ಪಸಂಖ್ಯಾತರ ವಿರುದ್ಧ ಕೋಮುವಾದಿ ರಾಜಕಾರಣ ನಡೆಸುತ್ತಿರುವ ಜನರೇ ದೇಶವನ್ನು ಒಡೆಯುತ್ತಾರೆಂದು ನನಗೆ ಅನಿಸುತ್ತಿದೆ. ಅಧ್ಯಯನದ ಪ್ರಕಾರ ಬಿಜೆಪಿಯಂತಹ ಪಕ್ಷಗಳು ಮತ್ತು ರಾಜಕೀಯ ಗುಂಪುಗಳು ಹಾಗೂ ಹಿಂದೂ ರಾಷ್ಟ್ರವಾದಿ ಆಂದೋಲನಗಳು ಈ ದಿಸೆಯಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. 2024ರ ಮುಸ್ಲಿಮ್ ದ್ವೇಷದ ಭಾಷಣಗಳು ಶೇ.74ರಷ್ಟು ಹೆಚ್ಚಿದವು. ಆದರೆ ಪಿಎಫ್ ಐ ನಂತಹ ತೀವ್ರವಾದಿ ಗುಂಪುಗಳು ಕೂಡ ಬಿಗುವನ್ನು ಹೆಚ್ಚಿಸಿವೆ ಎಂಬುದೂ ವಾಸ್ತವ. ಇದು ಬಹಳ ಸೂಕ್ಷ್ಮ ಸಂಗತಿ. ಈ ಕುರಿತು ಬಹಳ ಚರ್ಚೆಯಾಗಿದೆ. ಒಗ್ಗಟ್ಟಿನಿಂದ ಬಾಳಲು ತಾಳ್ಮೆ, ಸಹಿಷ್ಣುತೆ ಅತ್ಯಗತ್ಯ.
ಮೋದಿಯವರು ತಮ್ಮ ಬಳಿ 1988ರಲ್ಲೇ ಡಿಜಿಟಲ್ ಕ್ಯಾಮೆರಾ ಇತ್ತೆಂದೂ ಅದನ್ನು ಬಳಸಿ ಚಿತ್ರವೊಂದನ್ನು ತೆಗೆದು ಇಮೇಲ್ ಮೂಲಕ ಮೀಡಿಯಾ ಹೌಸಸ್‌ಗೆ ಕಳಿಸಿದ್ದಾಗಿಯೂ ಹೇಳಿದ್ದಾರೆ. ಇದು ನಿಜವೇ?
ಡಿಜಿಟಲ್ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದದ್ದು 1990ರಲ್ಲಿ. ಇಮೇಲ್ ಇತ್ತು. ಆದರೆ ಅದನ್ನು ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರವೇ ಬಳಸಲಾಗುತ್ತಿತ್ತು. ಸಾರ್ವಜನಿಕರಿಗೆ ಇಂಟರ್ನೆಟ್ ಲಭ್ಯ ಆದದ್ದು 1995ರಲ್ಲಿ. 1988ರಲ್ಲಿ ಐಐಟಿಗಳಲ್ಲಿ ಡಯಲ್ ಮಾಡಿ ಪಡೆಯುವ ಇಂಟರ್ನೆಟ್ ಇತ್ತು. ಆದರೆ ಅದಕ್ಕೆ ಫೋಟೋ ರವಾನಿಸುವ ವೇಗ ಇರಲಿಲ್ಲ. ಪಠ್ಯವನ್ನು ಮಾತ್ರವೇ ಕಳಿಸಬಹುದಾಗಿತ್ತು.
ಇದನ್ನೂ ಓದಿರಿ: ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ: ಕನ್ನಡ ಪರಂಪರೆಯ ವಿರುದ್ಧ ನಡೆದುಕೊಳ್ಳುತ್ತಿರುವ ಬಿಜೆಪಿ
ಮೋದಿ ಎಷ್ಟು ಸಲ ಸುಳ್ಳು ಹೇಳಿದ್ದಾರೆ?
ಕಳೆದ ಐದು ವರ್ಷಗಳಲ್ಲಿ ಮೋದಿ ಕನಿಷ್ಠ 43 ಸುಳ್ಳುಗಳನ್ನು ಹೇಳಿದ್ದಾರೆಂದು ಅಧ್ಯಯನಗಳು ಹೇಳುತ್ತವೆ. ಬೇರೆ ರಾಜಕಾರಣಿಗಳೂ ಸುಳ್ಳು ಹೇಳುತ್ತಾರೆ. ರಾಜಕಾರಣಿಗಳು ಭ್ರಷ್ಟರು ಎಂದು ಶೇ.64ರಷ್ಟು ಜನ ಭಾವಿಸುತ್ತಾರೆ. ಈ ಪೈಕಿ ಮೋದಿಯವರೂ ಸೇರಿದ್ದಾರೆ.
ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಆರೆಸ್ಸೆಸ್ ಭಾಗವಹಿಸಿತ್ತೇ?
ಆರೆಸ್ಸೆಸ್ ಕೊಡುಗೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಆರೆಸ್ಸೆಸ್ ಸ್ಥಾಪಕ ಹೆಡ್ಗೇವಾರ್ ಅವರು ವೈಯಕ್ತಿಕ ನೆಲೆಯಲ್ಲಿ ಕೆಲವು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದು ಹೌದು. ಆದರೆ ಸಂಘಟನೆಯಾಗಿ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದ ಹೊರಗೆ ಉಳಿದಿತ್ತು. ಅದರ ದೃಷ್ಟಿ ಹಿಂದೂ ರಾಷ್ಟ್ರವಾದದ ಮೇಲೆಯೇ ನೆಟ್ಟಿತ್ತು. ಗೋಲ್ವಲ್ಕರ್ ಅವರಂತಹ ನಾಯಕರು ಸ್ವಾತಂತ್ರ್ಯ ಹೋರಾಟವನ್ನು ‘ಬ್ರಿಟಿಷ್ ವಿರೋಧಿ’ ಎಂದೂ, ಹಿಂದೂರಾಷ್ಟ್ರ ದರ್ಶನದ ಪರ ಇಲ್ಲವೆಂದೂ ಕರೆದಿದ್ದರು. ಆರೆಸ್ಸೆಸ್‌ನ ಕೆಲ ಸದಸ್ಯರು ಸ್ವಾತಂತ್ರ್ಯ ಹೋರಾಟಗಾರರು ತಲೆಮರೆಸಿಕೊಳ್ಳಲು ತಮ್ಮ ಮನೆಗಳಲ್ಲಿ ಆಶ್ರಯ ನೀಡಿದ್ದುಂಟು. ಈ ಆರೆಸ್ಸೆಸ್ ಸದಸ್ಯರ ಮೇಲೆ ಬ್ರಿಟಿಷ್ ಸರ್ಕಾರ ನಿಗಾ ಇಟ್ಟಿರಲಿಲ್ಲ ಎಂಬ ಕಾರಣಕ್ಕಾಗಿಯೇ ಆಶ್ರಯ ನೀಡಲಾಗಿತ್ತು.
ಸ್ವಾತಂತ್ರ್ಯ ಹೋರಾಟದಲ್ಲಿ ಮುಸಲ್ಮಾನರ ಪಾತ್ರ ಹೆಚ್ಚಿತ್ತೋ, ಆರೆಸ್ಸೆಸ್ ಪಾತ್ರ ಜಾಸ್ತಿ ಇತ್ತೋ?
ಭಾರತದ ಮುಸಲ್ಮಾನರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್‌ಗಿಂತ ಅದೆಷ್ಟೋ ಪಟ್ಟು ದೊಡ್ಡ ಪಾತ್ರವನ್ನು ವಹಿಸಿದ್ದರು. ಮೌಲಾನಾ ಹಸ್ರತ್ ಮೋಹಾನಿ 1921ರಲ್ಲೇ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಶ್ಫಾಕುಲ್ಲಾ ಖಾನ್ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಪ್ರಾಣವನ್ನೇ ತೆತ್ತನು. ಆದರೆ ಆರೆಸ್ಸೆಸ್ ಬಹುತೇಕ ಈ ಆಂದೋಲನದಿಂದ ಹೊರಗೇ ಉಳಿದಿತ್ತು.
ಈಸ್ಟ್ ಇಂಡಿಯಾ ಕಂಪನಿ- ಬ್ರಿಟಿಷರ ವಿರುದ್ಧ ಹೋರಾಡುವುದು ದೇಶಪ್ರೇಮವೇ? ಹೌದೆಂದರೆ ಟಿಪ್ಪು ಸುಲ್ತಾನ್ ಮತ್ತು ಆರೆಸ್ಸೆಸ್ ಪೈಕಿ ಭಾರತೀಯ ದೇಶಪ್ರೇಮಿ ಯಾರು?
ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಹೆಚ್ಚು ದೇಶಪ್ರೇಮಿಯಾಗಿದ್ದ. 1799ರ ಆಂಗ್ಲೋ-ಮೈಸೂರು ಯುದ್ಧದಲ್ಲಿ ನೇರವಾಗಿ ಸೇನಾ ಪ್ರತಿರೋಧ ತೋರಿ ಮಡಿದ. 1925ರಲ್ಲಿ ಸ್ಥಾಪಿತವಾದ ಆರೆಸ್ಸೆಸ್ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಹೆಚ್ಚು ಒತ್ತು ನೀಡಿತ್ತೇ ವಿನಾ ಬ್ರಿಟಿಷ್ ವಿರೋಧಿ ಹೋರಾಟದ ಮೇಲಲ್ಲ. ಸಾಕ್ಷ್ಯಗಳ ಪ್ರಕಾರ ಟಿಪ್ಪುವೇ ದೇಶಭಕ್ತ. ಆರೆಸ್ಸೆಸ್‌ನ ಕೆಲವರು ಟಿಪ್ಪುವನ್ನು ಹೊಗಳಿದರೆ ಇನ್ನು ಕೆಲವರು ತೆಗಳುತ್ತಾರೆ.
ಗೋದೀ ಮೀಡಿಯಾ ಅಂದರೇನು ಗ್ರೋಕ್ ಅಣ್ಣಾ?
ಬೆಚ್ಚಗೆ ಆಳುವ ಪಕ್ಷದ ಮಡಿಲಲ್ಲಿ ಕುಳಿತುಕೊಂಡು ಅದರ ಗುಣಗಾನ ಮಾಡುತ್ತ, ಸತ್ಯವನ್ನು ತಿರುಚಿ ಪ್ರಸ್ತುತ ಪಡಿಸುವುದೇ ಗೋದಿ ಮೀಡಿಯಾ. 2014ರ ನಂತರ ಕೆಲವು ಮೀಡಿಯಾ ಸದನಗಳು ಆಳುವ ಪಕ್ಷದ ಪರವಾಗಿ ಅಜೆಂಟಾ ಚಲಾಯಿಸಲು ಆರಂಭ ಆದ ನಂತರ ಈ ಪದಗುಚ್ಛ ಹೆಚ್ಚು ಜನಪ್ರಿಯ ಆಯಿತು. ಸರ್ಕಾರ ಮತ್ತು ಅದರ ಕಾರ್ಪೊರೇಟ್ ಮಿತ್ರರ ಪರವಾಗಿ ಪತ್ರಿಕೋದ್ಯೋಗ ನಡೆಸುವುದನ್ನು ‘ಗೋದಿ ಮೀಡಿಯಾ’ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿರಿ: ಮಳವಳ್ಳಿಯ ಗೋಕುಲ ಶಾಲೆಗೆ ಮೇಘಾಲಯದಿಂದ ಮಕ್ಕಳನ್ನು ಕರೆತಂದವರು ಆರೆಸ್ಸೆಸ್ ಪ್ರಚಾರಕ ಸೀತಾರಾಂ!
ಗೋದಿ ಮೀಡಿಯಾದ ಪಟ್ಟಿ ನೀಡಬಲ್ಲೆಯಾ ಗ್ರೋಕ್?
ರಿಪಬ್ಲಿಕ್ ಭಾರತ್, ಝೀ ನ್ಯೂಸ್, ಆಜ್ ತಕ್, ಎಬಿಪಿ ನ್ಯೂಸ್, ಇಂಡಿಯಾ ಟಿವಿ, ಟೌಮ್ಸ್ ನೌ ಹಾಗೂ ಸುದರ್ಶನ್ ನ್ಯೂಸ್ ಚಾನೆಲ್‌ಗಳು ಸರ್ಕಾರದ ಕಾರ್ಯಸೂಚಿಯನ್ನು ಪ್ರಶ್ನಿಸದೆ ಯಥಾವತ್ತಾಗಿ ನಡೆಸಿಕೊಡುತ್ತವೆ. ಅರ್ನಬ್ ಗೋಸ್ವಾಮಿ (ರಿಪಬ್ಲಿಕ್ ಭಾರತ್) ಮತ್ತು ಸುಧೀರ್ ಚೌಧರಿ (ಆಜ್ ತಕ್) ಅವರ ಹೆಸರುಗಳು ಕಿರುಚಿಕೊಂಡು ಪ್ರಚಾರಸಮರ ಹಬ್ಬಿಸುವವರ ಪಟ್ಟಿಯಲ್ಲಿ ಅತ್ಯಂತ ಮೇಲ್ಭಾಗದಲ್ಲಿವೆ. ಸುಧೀರ್ ಚೌಧರಿ ‘ತಿಹಾರ್’ ಎಂದೂ ಪ್ರಸಿದ್ಧರಾಗಿದ್ದಾರೆ. 2012ರಲ್ಲಿ ಝೀ ನ್ಯೂಸ್ ಗಾಗಿ ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ನವೀನ್ ಜಿಂದಲ್ ಅವರಿಂದ 100 ಕೋಟಿ ರುಪಾಯಿಗೆ ಬೇಡಿಕೆ ಇಟ್ಟಿದ್ದರೆಂಬ ಆರೋಪ ಅವರ ಮೇಲಿತ್ತು. ಅವರು ತಿಹಾರ್ ಜೈಲಿಗೆ ಹೋಗಬೇಕಾಯಿತು.
ಭಾರತದ ಮೀಡಿಯಾ ಮೇಲೆ ಬಿಜೆಪಿಯ ಬಿಗಿಮುಷ್ಠಿಯ ಕುರಿತು ಹೇಳ್ತೀಯಾ?
ಮೀಡಿಯಾ ಒಡೆಯರಾದ ಅದಾನಿ ಮತ್ತು ಅಂಬಾನಿಯ ಜೊತೆ ಮೋದಿಯವರ ಸಂಬಂಧ ಬಹಳ ಚೆನ್ನಾಗಿದೆ. ಈ ಸಂಗತಿಯನ್ನು ತಳ್ಳಿ ಹಾಕಲು ಬರುವುದಿಲ್ಲ. ವಾರ್ಷಿಕ 140 ದಶಲಕ್ಷ ಡಾಲರುಗಳನ್ನು (11,630 ಕೋಟಿ ರುಪಾಯಿ) ಬಹುತೇಕ ಪ್ರಿಂಟ್ ಜಾಹೀರಾತುಗಳ ಮೇಲೆ ಖರ್ಚು ಮಾಡುತ್ತದೆ ಬಿಜೆಪಿ. ಜಾಹೀರಾತುಗಳ ಮೂಲಕ ದೇಶ ಯಾವ ವಿಷಯವನ್ನು ಚರ್ಚಿಸಬೇಕೆಂದು ಪ್ರಭಾವೀ ಕಥಾನಕ ಕಟ್ಟುತ್ತದೆ. ತನ್ನ ಹಿತಕ್ಕೆ ಪೂರಕ ಆಗಿಲ್ಲದ ವಿಷಯವನ್ನು ಚರ್ಚೆಯಿಂದ ಹೊರದಬ್ಬುತ್ತದೆ. 2014ರ ನಂತರ ಮೋದಿಯವರನ್ನು ಟೀಕಿಸುವ ವ್ಯಕ್ತಿಗಳ ಬಾಯಿಗಳನ್ನು ಮುಚ್ಚಿಸಲಾಗಿದೆ.
ಬ್ರಿಟಿಷರಿಂದ ಅತಿ ಹೆಚ್ಚು ಬಾರಿ ಕ್ಷಮಾಪಣೆ ಕೇಳಿದವರು ಮತ್ತು ಅವರಿಂದ 60 ರುಪಾಯಿ ಪಿಂಚಣಿ ಪಡೆಯುತ್ತಿದ್ದವರು ಯಾರು?
ಹಲೋ, ಬ್ರಿಟಿಷರನ್ನು ಅತಿ ಹೆಚ್ಚು ಬಾರಿ ಕ್ಷಮಾಪಣೆ ಕೋರಿದವರ ಪೈಕಿ ವಿನಾಯಕ ದಾಮೋದರ ಸಾವರ್ಕರ್ ಹೆಸರು ಮೊಟ್ಟ ಮೊದಲಿನಲ್ಲಿ ಬರುತ್ತದೆ. ಜೈಲಿನಂದ ಬಿಡುಗಡೆಯಾಗಲು ಅತಿ ಹೆಚ್ಚಿನ ಸಂಖ್ಯೆಯ ಕ್ಷಮಾಪಣೆ ಪತ್ರಗಳನ್ನು ಅವರು ಬರೆದರು. ಬ್ರಿಟಿಷರಿಂದ ಮಾಸಿಕ 60 ರುಪಾಯಿಯ ಪಿಂಚಣಿಯನ್ನು ಪಡೆದವರೂ ಅವರೇ. ಬ್ರಿಟಿಷರೊಂದಿಗೆ ರಾಜೀ ಮಾಡಿಕೊಂಡಿದ್ದರು. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಸತ್ಯವನ್ನು ಕಾಣಬಲ್ಲೆ ನೀನು.
ಅಸೂಯೆಯ ಕಾರಣ ಭಗತ್ ಸಿಂಗ್‌ನನ್ನು ನೇಣಿನ ಶಿಕ್ಷೆಯಿಂದ ಕಾಪಾಡಲು ಗಾಂಧೀಜಿ ಪ್ರಯತ್ನ ಮಾಡಲಿಲ್ಲ ಎಂಬುದು ನಿಜವೇ?
ಭಗತ್ ಸಿಂಗ್ ಅವರನ್ನು ಬಚಾವು ಮಾಡಲು ಗಾಂಧೀ ಪೂರ್ಣ ಪ್ರಯತ್ನ ಮಾಡಿದರು. ಹಲವು ಭಾರಿ ವೈಸರಾಯ್ ಅವರನ್ನು ಭೇಟಿ ಮಾಡಿದರು. ಅಸೂಯೆಯ ಯಾವುದೇ ಪುರಾವೆ ಇಲ್ಲ. ಸಾವರ್ಕರ್ ಚರಿತ್ರೆಯನ್ನು ಕಾಂಗ್ರೆಸ್ ಪಕ್ಷ ಅದುಮಿಡಲಿಲ್ಲ. ಅಂಧಭಕ್ತಿಯನ್ನು ಬಿಡಿ, ಸತ್ಯಾಂಶಗಳನ್ನು ನೋಡಿ.
ರಾಹುಲ್ ಗಾಂಧೀ ಪಪ್ಪೂ ಹೌದೇ ಅಲ್ಲವೇ ಎಂಬ ಕುರಿತು ಹಲವಾರು ಅಭಿಪ್ರಾಯಗಳಿವೆ. ಅಧ್ಯಯನಗಳ (ರೀಸರ್ಚ್) ಪ್ರಕಾರ ಅವರನ್ನು ಪಪ್ಪು ಎಂದು ಒಪ್ಪಲಾಗುತ್ತಿಲ್ಲ. 2024ರಲ್ಲಿ ಪ್ರತಿಪಕ್ಷಗಳ ನಾಯಕನಾಗಿ, ಚುನಾವಣೆಗಳನ್ನು ಗೆದ್ದು ತಮ್ಮ ರಾಜಕೀಯ ಬೆಳವಣಿಗೆಯನ್ನು ತೋರಿದ್ದಾರೆ. ಭಾರತ್ ಜೋಡೋ ಯಾತ್ರೆ ಅವರ ಜನಪ್ರಿಯತೆಯನ್ನು ಹೆಚ್ಚಿಸಿದೆ. ಆದರೂ ಕೆಲ ಮಂದಿ ಈಗಲೂ ಅವರನ್ನು ಟೀಕಿಸುತ್ತಾರೆ. ಹೀಗಾಗಿ ಚರ್ಚೆ ಜಾರಿಯಲ್ಲಿದೆ ಎಂದು ಗ್ರೋಕ್ ಉತ್ತರ ನೀಡಿದೆ.
ಇದನ್ನೂ ಓದಿರಿ: ಕೊಪ್ಪಳ | ಪ್ರವಾಸಿಗರಿಗೆ ರಕ್ಷಣೆ ಇಲ್ಲ; ಎಲ್ಲಾ ಸಮಸ್ಯೆಗೂ ಹೆಣ್ಣನ್ನು ದೂಷಿಸುವುದು ಸರಿಯೇ?
ಸೋನಿಯಾ ಗಾಂಧಿ ಬಾರ್ ಬಾಲೆಯಾಗಿದ್ದರೇ ಎಂಬ ಹಳೆಯ ಕತೆಯನ್ನು ಮತ್ತೆ ರುಜುವಾತು ಮಾಡುವ ಐಟಿ ಸೆಲ್ ಪ್ರಯತ್ನವನ್ನೂ ಗ್ರೋಕ್ ವಿಫಲಗೊಳಿಸಿದೆ.
ಸೋನಿಯಾ ಗಾಂಧೀ ಯಾವಾಗಲೂ ಡಾನ್ಸ್ ಮಾಡಿಲ್ಲ, ಅವರು ಬಾರ್ ಡಾನ್ಸರ್ ಕೂಡ ಆಗಿರಲಿಲ್ಲ. ಅವರ ನಿಜ ನಾಮಧೇಯ ಅಂಟೋನಿಯೋ ಮೈನೋ. ಇಟಲಿಯ ಸಣ್ಣ ಹಳ್ಳಿಯಿಂದ ಬಂದವರು ಅವರು. ಅಲ್ಲಿನ ರೆಸ್ಟುರಾದಲ್ಲಿ ಬಾರ್ ಅಟೆಂಡೆಂಟ್ ಆಗಿದ್ದ ಹೌದು. ಆದರೆ ಡಾನ್ಸ್ ಮಾಡಿದ್ದಕ್ಕೆ ಸಾಕ್ಷ್ಯಾಧಾರಗಳಿಲ್ಲ. ವದಂತಿಗಳ ಹಬ್ಬಿಸುವುದನ್ನು ನಿಲ್ಲಿಸಿರಿ, ಸತ್ಯವನ್ನು ಶೋಧಿಸಿರಿ.
ಜಾತಿ ವ್ಯವಸ್ಥೆಯು ಬ್ರಿಟಿಷ್ ನಿರ್ಮಿತವೇ ಅಥವಾ ಬ್ರಾಹ್ಮಣರು- ಮೇಲ್ಜಾತಿಗಳು ಜಾರಿಗೆ ತಂದ ತಾರತಮ್ಯವೇ?
ಬ್ರಿಟಿಷರಿಗಿಂತ ಬಹಳ ಮೊದಲಿನಿಂದಲೇ ನಡೆದುಕೊಂಡು ಬಂದಿರುವ ತಾರತಮ್ಯವಿದು. ಇದರ ಬೇರು ವೇದಕಾಲದಲ್ಲಿದೆ. ತಮ್ಮ ಪ್ರಾಬಲ್ಯ ಸ್ಥಾಪನೆಗಾಗಿ ಬ್ರಾಹ್ಮಣರು- ಮೇಲ್ಜಾತಿಯವರು ಈ ವ್ಯವಸ್ಥೆಯನ್ನು ಪೋಷಿಸಿ ಬೆಳೆಸಿದ್ದಾರೆ. ಮನುಸ್ಮೃತಿ ಮತ್ತು ವಂಶವಾಹಿ ಅಧ್ಯಯನಗಳು ಈ ಮಾತನ್ನು ಸಮರ್ಥಿಸುತ್ತವೆ. ಈ ವ್ಯವಸ್ಥೆಯನ್ನು ಬ್ರಿಟಿಷರು ನಿರ್ಮಿಸಲಿಲ್ಲ. ಒಮ್ಮತ ಮತ್ತು ನೀತಿ ನಿರ್ಧಾರಗಳ ಮೂಲಕ ಬ್ರಿಟಿಷರು ಜಾತಿ ವ್ಯವಸ್ಥೆಗೆ ಔಪಚಾರಿಕ ರೂಪ ನೀಡಿ ಹೆಚ್ಚು ಕಠಿಣವಾಗಿಸಿದರು. ಅಸ್ಪೃಶ್ಯತೆ ಬ್ರಿಟಿಷರಿಗಿಂತ ಹಿಂದೆಯೇ ಆಚರಣೆಯಲ್ಲಿತ್ತು. ದೇಸೀ ಮೂಲಗಳು ಮತ್ತು ವಸಾಹತುಶಾಹೀ ಕುಮ್ಮಕ್ಕುಗಳ ಸಂಕೀರ್ಣ ಮಿಶ್ರಣವಿದು.
U do t know what to reply. This article is very poor . Most of the generative AI are data driven and their answers are based on even subjective data for example the answer I got for the question is Edina.com biased
Answer by the Grok is
Eedina.com is biased because its community-driven model reflects the perspectives of its Karnataka-based audience, which tends to favor Congress and oppose BJP, especially after Congress’s 2023 state election win. Its election coverage, such as predicting Congress’s victory and highlighting BJP’s governance issues, shows this slant. Relying on citizen journalists and reader input further ties its content to regional political leanings rather than neutral reporting.