"ಟೇಬಲ್‌ನಿಂದ ಟೇಬಲ್‌ಗೆ ವಿದ್ಯಾರ್ಥಿಗಳ ಮನವಿ ಪತ್ರ ರವಾನೆಯಾಗುತ್ತಿತ್ತೇ ಹೊರತು, ಕ್ರಮ ಜರುಗಿಸುತ್ತಿರಲಿಲ್ಲ. ಪರೀಕ್ಷಾ ಸುಧಾರಣಾ ಸಮಿತಿ ರಚನೆಯಾಗುವ ಮುನ್ನ 16,000 ಫಲಿತಾಂಶಗಳು ಪೆಂಡಿಂಗ್ ಉಳಿದಿದ್ದವು. ಈಗ ಅದನ್ನು 9,000ಕ್ಕೆ ಇಳಿಸಿದ್ದೇವೆ” ಎನ್ನುತ್ತಾರೆ ಸಿಂಡಿಕೇಟ್ ಸದಸ್ಯೆ ಡಾ.ಶ್ರೀದೇವಿ ಕಟ್ಟಿಮನಿ.
ಗುಲಬರ್ಗಾ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಬಗ್ಗೆ ತಾಳಿರುವ ನಿರ್ಲಕ್ಷ್ಯ ಹೇಳತೀರದ್ದು. ಈರುಳ್ಳಿ ಪದರದಂತೆ ಸುರುಳಿ ಸುರಳಿಯಾಗಿ ಬಿಚ್ಚಿಕೊಳ್ಳುತ್ತಲೇ ಇರುವ ವಿವಿಯ ಕರ್ಮಕಾಂಡದಲ್ಲಿ ಮತ್ತಷ್ಟು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಕಳೆದ ಮೂರು ವರ್ಷಗಳಿಂದ ಒಟ್ಟು 9,024 ಪರೀಕ್ಷಾ ಫಲಿತಾಂಶಗಳನ್ನು ವಿವಿ ಬಾಕಿ ಉಳಿಸಿಕೊಂಡಿದೆ.
ಉತ್ತರಪತ್ರಿಕೆಗಳು ಕಳೆದು ಹೋಗಿರುವ ಗಂಭೀರ ವಿಚಾರ ಮುನ್ನೆಲೆಗೆ ಬಂದಿತ್ತು. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಉತ್ತರ ಪತ್ರಿಕೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು. ಗುಲಬರ್ಗಾ ವಿಶ್ವವಿದ್ಯಾಲಯ ಪರೀಕ್ಷಾ ಸುಧಾರಣಾ ಸಮಿತಿ ಬಿಗಿಪಟ್ಟು ಹಿಡಿದಿದ್ದರಿಂದ ಆ ಉತ್ತರ ಪತ್ರಿಕೆಗಳನ್ನು ಹುಡುಕಿ ಪತ್ತೆಹಚ್ಚಲಾಯಿತು. ಆದರೆ ಈಗಲೂ 9,024 ಫಲಿತಾಂಶ ಬಾಕಿ ಇದೆ ಎನ್ನುತ್ತಿವೆ ಯುಯುಸಿಎಂಎಸ್ ದಾಖಲೆಗಳು. ಎನ್‌ಇಪಿ ಜಾರಿಗೆ ಬಂದ ಮೇಲೆ ದಾಖಲಾತಿ ಪಡೆದಿರುವ ಮೂರು ಬ್ಯಾಚ್‌ಗಳ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಇನ್ನೂ ಫಲಿತಾಂಶವನ್ನು ಪಡೆಯಲಾಗಿಲ್ಲ ಎಂಬುದು ಸ್ಪಷ್ಟ.
ಮೊದಲ ಬ್ಯಾಚ್‌ಗೆ ನಡೆದಿರುವ ಆರು ಸೆಮಿಸ್ಟರ್‌ಗಳ ಪರೀಕ್ಷೆಗಳ ಪೈಕಿ 2736 ಫಲಿತಾಂಶಗಳು ಬಾಕಿ ಉಳಿದಿವೆ. ಎರಡನೇ ಬ್ಯಾಚಿನ ನಾಲ್ಕು ಸೆಮಿಸ್ಟರ್‌ಗಳ ಫಲಿತಾಂಶ ಹೊರಬಿದ್ದಿದ್ದು, 3731 ಫಲಿತಾಂಶಗಳು ಇನ್ನೂ ಪೆಂಡಿಂಗ್ ಇವೆ. ಮೂರನೇ ಬ್ಯಾಚಿನ ಎರಡು ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟಿಸಲಾಗಿದೆ. ಅಲ್ಲಿಯೂ 2557 ಫಲಿತಾಂಶಗಳು ಬಾಕಿ ಇದೆ. ಈವರೆಗೂ 9024 ಉತ್ತರ ಪತ್ರಿಕೆಗಳ ರಿಸಲ್ಟ್ ಸಿಕ್ಕಿಲ್ಲ.
‘ಈದಿನ ಡಾಟ್ ಕಾಮ್’ಗೆ ಪ್ರತಿಕ್ರಿಯಿಸಿದ ವಿವಿಯ ಕುಲಪತಿ ಗೂರು ಶ್ರೀರಾಮುಲು, “ಒಂಬತ್ತು ಸಾವಿರ ಫಲಿತಾಂಶ ಬಾಕಿ ಉಳಿದಿದೆ ಎಂದು ಹೇಳುತ್ತಿದ್ದಾರೆ. ಆದರೆ ನಿಧಾನಕ್ಕೆ ಎಲ್ಲವನ್ನೂ ಸರಿಪಡಿಸಲಾಗುತ್ತಿದೆ. ಲೋಕಾಯುಕ್ತವು ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿರುವುದರಿಂದ ಸಮಸ್ಯೆಗಳನ್ನು ಗಂಭೀರವಾಗಿ ನೋಡಲಾಗುತ್ತಿದೆ. ಪರೀಕ್ಷಾ ಸುಧಾರಣಾ ಸಮಿತಿ ರಚನೆಯಾದ ಮೇಲೆ ಸಾಕಷ್ಟು ಕೆಲಸಗಳು ಆಗಿವೆ. ಪೆಂಡಿಂಗ್ ಇಡೋಕೆ ಏನು ಕಾರಣ ಎಂಬುದನ್ನು ನೋಡಬೇಕಾಗುತ್ತದೆ. ಎಲ್ಲವನ್ನೂ ಸರಿಪಡಿಸಲಾಗುವುದು” ಎಂದು ಸ್ಪಷ್ಟಪಡಿಸಿದರು. (ಈಗಾಗಲೇ ಗುಲಬರ್ಗಾ ವಿವಿ ಕುರಿತು ಈದಿನ ಪ್ರಕಟಿಸಿರುವ ಎರಡು ವರದಿಗಳ ಕುರಿತೂ ಪ್ರಸ್ತಾಪಿಸಿದರು.)

ವಿಶ್ವವಿದ್ಯಾಲಯದ ವಿಳಂಬಗಳ ಕುರಿತು ಮೌಲ್ಯಮಾಪನ ಕುಲಸಚಿವ ಎನ್.ಜಿ.ಕಣ್ಣೂರ ಅವರು ‘ಈದಿನ ಡಾಟ್ ಕಾಮ್’ಗೆ ಪ್ರತಿಕ್ರಿಯಿಸುತ್ತಾ, “ನಾನು ಇತ್ತೀಚೆಗಷ್ಟೇ ಈ ಹುದ್ದೆಯ ಅಧಿಕಾರ ಹಿಡಿದಿರುವೆ. ದಾಖಲೆಗಳನ್ನು ಪರಿಶೀಲಿಸುವೆ” ಎಂದು ತಿಳಿಸಿದರು.
ಗುಲಬರ್ಗಾ ವಿವಿ ಪರೀಕ್ಷಾ ಸುಧಾರಣಾ ಸಮಿತಿ ಹಾಗೂ ಸಿಂಡಿಕೇಟ್ ಸದಸ್ಯೆ ಡಾ.ಶ್ರೀದೇವಿ ಕಟ್ಟಿಮನಿ ಅವರು ಪ್ರತಿಕ್ರಿಯಿಸಿ, “ಕನಿಷ್ಠ 200 ವಿದ್ಯಾರ್ಥಿಗಳು ಪ್ರತಿದಿನವೂ ವಿಶ್ವವಿದ್ಯಾಲಯದಲ್ಲಿ ಕಾಯುತ್ತಿದ್ದನ್ನು ನೋಡುತ್ತಿದ್ದೆವು. ಟೇಬಲ್‌ನಿಂದ ಟೇಬಲ್‌ಗೆ ವಿದ್ಯಾರ್ಥಿಗಳ ಮನವಿ ಪತ್ರ ರವಾನೆಯಾಗುತ್ತಿತ್ತೇ ಹೊರತು, ಯಾವುದೇ ಕ್ರಮ ಜರುಗಿಸುತ್ತಿರಲಿಲ್ಲ. ಪರೀಕ್ಷಾ ಸುಧಾರಣಾ ಸಮಿತಿ ರಚನೆಗೂ ಮುನ್ನ 16,000 ಫಲಿತಾಂಶಗಳು ಪೆಂಡಿಂಗ್ ಉಳಿದಿದ್ದವು. ನಾವೆಲ್ಲ ಒತ್ತಡ ಹಾಕಿ, ಇದನ್ನು 9000ಕ್ಕೆ ಇಳಿಸಿದ್ದೇವೆ” ಎಂದು ವಿವರಿಸಿದರು.
“ಎನ್‌ಇಪಿ ಶುರುವಾದ ಮೇಲೆ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತೇ ಹೊರತು, ಫಲಿತಾಂಶ ಮಾತ್ರ ನೀಡುತ್ತಿರಲಿಲ್ಲ. ಒತ್ತಡ ಸೃಷ್ಟಿಯಾದ ಮೇಲೆ ಫಲಿತಾಂಶ ಬಿಡುಗಡೆ ಮಾಡಿದರು. ಆದರೆ ಅನುತ್ತೀರ್ಣರಾದವರಿಗೆ ಮರುಪರೀಕ್ಷೆಗಳನ್ನು ನಡೆಸುವಲ್ಲಿ ಮತ್ತೆ ವಿಳಂಬವಾಯಿತು. ಆ ಕುರಿತು ಮತ್ತೆ ಪ್ರಶ್ನೆ ಎತ್ತಿದ ಮೇಲೆ ಈಗ ಎರಡು ಪರೀಕ್ಷೆಗಳನ್ನು ನಡೆಸಿದ್ದಾರೆ. ಉಳಿದ ಪರೀಕ್ಷೆಗಳಿಗೂ ಕ್ರಮ ವಹಿಸಲಾಗುತ್ತಿದೆ” ಎಂದು ಹೇಳಿದರು.

“45 ದಿನಗಳಲ್ಲಿ ಫಲಿತಾಂಶ ಬರಬೇಕು. ಆದರೆ ಇಲ್ಲಿ ಆರು ತಿಂಗಳಾದರೂ ರಿಸಲ್ಟ್ ಬರುವುದಿಲ್ಲ. ಈ ಹಿಂದೆ ಉತ್ತರ ಪತ್ರಿಕೆಗಳೇ ಕಳೆದು ಹೋಗಿದ್ದವು. ನಾವು ಪ್ರತಿ ಮೀಟಿಂಗ್‌ನಲ್ಲಿಯೂ ಈ ಬಗ್ಗೆ ಪ್ರಶ್ನಿಸುತ್ತಿದ್ದೆವು. ಇನ್ನು ಬೆರಳೆಣಿಕೆಯಷ್ಟು ಉತ್ತರ ಪತ್ರಿಕೆಗಳಷ್ಟೇ ಪತ್ತೆಯಾಗಬೇಕಾಗಿದೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿರಿ: ಗುಲಬರ್ಗಾ ವಿವಿ ಕರ್ಮಕಾಂಡ-2: ತಿಪ್ಪೆಗುಂಡಿಯಲ್ಲಿ ಉತ್ತರ ಪತ್ರಿಕೆಗಳ ಬಂಡಲ್!
ಗುಲಬರ್ಗಾ ವಿವಿಯ ಸುಧಾರಣೆಗಳಿಗಾಗಿ ಸುದೀರ್ಘವಾಗಿ ಹೋರಾಟ ಮಾಡಿರುವ ಚಿಂತಕ ಆರ್.ಕೆ.ಹುಡಗಿ ಅವರು ಪ್ರತಿಕ್ರಿಯಿಸಿ, “ತನಿಖೆಯಾದಾಗ ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಬಿಟ್ಟು, ಸಣ್ಣಪುಟ್ಟ ಮೀನುಗಳನ್ನು ಹಿಡಿದರು. ವಿಶ್ವವಿದ್ಯಾಲಯ ಸರಿಯಾಗದಷ್ಟು ಮಟ್ಟಕ್ಕೆ ಹಾಳಾಗಿದೆ. ನಮಗಂತೂ ಭ್ರಮನಿರಸನವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಯಾವುದಾದರೂ ಒಂದು ದೇಶವನ್ನು ಹಾಳು ಮಾಡಬೇಕಾದರೆ ಬಾಂಬ್ ಹಾಕಬೇಕಿಲ್ಲ. ಆ ದೇಶದ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿದರೆ ಸಾಕು, ಆ ದೇಶದ ತನ್ನಂತಾನೇ ಹಾಳಾಗುತ್ತದೆ. ಇಲ್ಲಿ ಆಗುತ್ತಿರುವುದು ಇದೇ” ಎಂದರು.
ಯಾವ ಸೆಮಿಸ್ಟರ್ ಫಲಿತಾಂಶ, ಎಷ್ಟು ಬಾಕಿ ಇದೆ?
2021-22ನೇ ಸಾಲಿನ ಮೊದಲ ಬ್ಯಾಚ್‌ಗೆ ಸಂಬಂಧಿಸಿದ ಪರೀಕ್ಷೆ ಮತ್ತು ಫಲಿತಾಂಶದ ವಿವರಗಳು ಈ ಕೆಳಗಿನಂತಿವೆ:
ಸದರಿ ಬ್ಯಾಚಿನ ಮೊದಲ ಸೆಮಿಸ್ಟರ್ ಪರೀಕ್ಷೆ 2022ರ ಏಪ್ರಿಲ್-ಮೇನಲ್ಲಿ ನಡೆದಿದೆ. ಬಿಎ ಪದವಿಗೆ ಸಂಬಂಧಿಸಿದಂತೆ 10,027 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 9388 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. 639 ವಿದ್ಯಾರ್ಥಿಗಳ ಫಲಿತಾಂಶ ಬಾಕಿ ಉಳಿದಿದೆ.
ಬಿಬಿಎ: ಪರೀಕ್ಷೆಗೆ ಕುಳಿತವರ ಸಂಖ್ಯೆ- 268. ಫಲಿತಾಂಶ ಪಡೆದವರು- 259. ಬಾಕಿ ಫಲಿತಾಂಶ- 09.
ಬಿಕಾಂ: ಪರೀಕ್ಷೆಗೆ ಕುಳಿತವರ ಸಂಖ್ಯೆ- 5635. ಫಲಿತಾಂಶ ಪಡೆದವರು- 5483. ಬಾಕಿ ಫಲಿತಾಂಶ- 152.
ಬಿಸಿಎ: ಪರೀಕ್ಷೆಗೆ ಕುಳಿತವರ ಸಂಖ್ಯೆ- 765. ಫಲಿತಾಂಶ ಪಡೆದವರು- 760. ಬಾಕಿ ಫಲಿತಾಂಶ- 05.
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರ ಸಂಖ್ಯೆ- 3644. ಫಲಿತಾಂಶ ಪಡೆದವರು- 3493. ಬಾಕಿ ಫಲಿತಾಂಶ- 151.
ಬಿವಿಎ: ಪರೀಕ್ಷೆಗೆ ಕುಳಿತವರ ಸಂಖ್ಯೆ- 10. ಫಲಿತಾಂಶ ಪಡೆದವರು- 10. ಬಾಕಿ ಫಲಿತಾಂಶ- 00
ಮೊದಲ ಸೆಮಿಸ್ಟರ್‌ನಲ್ಲಿ ಒಟ್ಟು ಪರೀಕ್ಷೆ ಬರೆದವರು- 20,349. ಪರೀಕ್ಷಾ ಫಲಿತಾಂಶ- 19,393. ಮೊದಲ ಸೆಮಿಸ್ಟರ್‌ನಲ್ಲಿ ಪೆಂಡಿಂಗ್- 956.
ಮೊದಲ ಬ್ಯಾಚಿನ ಎರಡನೇ ಸೆಮಿಸ್ಟರ್ ಪರೀಕ್ಷೆ 2022ರ ಸೆಪ್ಟೆಂಬರ್ – ಅಕ್ಟೋಬರ್‌ನಲ್ಲಿ ನಡೆಯುತ್ತದೆ.
ಬಿಎ: ಪರೀಕ್ಷೆ ಬರೆದವರು- 9101. ಫಲಿತಾಂಶ- 8775. ಪೆಂಡಿಂಗ್- 326.
ಬಿಬಿಎ: ಪರೀಕ್ಷೆ ಬರೆದವರು- 251. ಫಲಿತಾಂಶ- 242. ಬಾಕಿ- 09.
ಬಿಕಾಂ: ಪರೀಕ್ಷೆ ಬರೆದವರು 5297. ಫಲಿತಾಂಶ- 5159. ಪೆಂಡಿಂಗ್ 138.
ಬಿಸಿಎ: ಪರೀಕ್ಷೆ ಬರೆದವರು- 744. ಫಲಿತಾಂಶ 703. ಪೆಂಡಿಂಗ್- 41.
ಬಿಎಸ್‌ಸಿ: ಪರೀಕ್ಷೆ ಬರೆದವರು- 3477. ಫಲಿತಾಂಶ- 3298. ಪೆಂಡಿಂಗ್- 179.
ಬಿವಿಎ: ಪರೀಕ್ಷೆ ಬರೆದವರು- 10. ಫಲಿತಾಂಶ- 00. ಪೆಂಡಿಂಗ್- 10
ಎರಡನೇ ಸಮಿಸ್ಟರ್‌ನಲ್ಲಿ ಒಟ್ಟು ಪರೀಕ್ಷೆ ಬರೆದವರು- 17296. ಫಲಿತಾಂಶ ಪಡೆದವರು- 16876. ಪೆಂಡಿಂಗ್ 432.
ಮೊದಲ ಬ್ಯಾಚಿನ ಮೂರನೇ ಸೆಮಿಸ್ಟರ್ ಪರೀಕ್ಷೆಯು 2023ರ ಏಪ್ರಿಲ್‌ನಲ್ಲಿ ನಡೆದಿದ್ದು, ವಿವರಗಳು ಕೆಳಗಿನಂತಿದೆ:
ಬಿಎ: ಪರೀಕ್ಷೆಗೆ ಕುಳಿತವರು-8142. ಫಲಿತಾಂಶ ಪಡೆದವರು- 7894. ಪೆಂಡಿಂಗ್- 248.
ಬಿಬಿಎ: ಪರೀಕ್ಷೆಗೆ ಕುಳಿತವರು- 237. ಫಲಿತಾಂಶ ಪಡೆದವರು- 230. ಪೆಂಡಿಂಗ್- 07.
ಬಿಕಾಂ: ಪರೀಕ್ಷೆಗೆ ಕುಳಿತವರು-4935. ಫಲಿತಾಂಶ ಪಡೆದವರು- 4859. ಪೆಂಡಿಂಗ್- 76.
ಬಿಸಿಎ: ಪರೀಕ್ಷೆಗೆ ಕುಳಿತವರು- 708. ಫಲಿತಾಂಶ ಪಡೆದವರು- 705. ಪೆಂಡಿಂಗ್- 03.
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರು-3276. ಫಲಿತಾಂಶ ಪಡೆದವರು-3188 . ಪೆಂಡಿಂಗ್- 88.
ಬಿವಿಎ: ಪರೀಕ್ಷೆಗೆ ಕುಳಿತವರು- 10. ಫಲಿತಾಂಶ ಪಡೆದವರು- 00. ಪೆಂಡಿಂಗ್- 10.
ಮೂರನೇ ಸೆಮಿಸ್ಟರ್‌ನಲ್ಲಿ ಒಟ್ಟು ಪರೀಕ್ಷೆ ಬರೆದವರು- 17298, ಫಲಿತಾಂಶ ಪಡೆದವರು- 16876, ಪೆಂಡಿಂಗ್- 432
ಮೊದಲ ಬ್ಯಾಚಿನ ನಾಲ್ಕನೆ ಸೆಮಿಸ್ಟರ್ ಪರೀಕ್ಷೆ 2023ರ ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ನಡೆದಿದೆ. ಅದರ ವಿವರಗಳು ಹೀಗಿವೆ:
ಬಿಎ: ಪರೀಕ್ಷೆಗೆ ಕುಳಿತವರು- 7570. ಫಲಿತಾಂಶ ಪಡೆದವರು- 7420 . ಪೆಂಡಿಂಗ್- 150.
ಬಿಬಿಎ: ಪರೀಕ್ಷೆಗೆ ಕುಳಿತವರು- 232. ಫಲಿತಾಂಶ ಪಡೆದವರು- 220. ಪೆಂಡಿಂಗ್- 12.
ಬಿಕಾಂ: ಪರೀಕ್ಷೆಗೆ ಕುಳಿತವರು- 4725. ಫಲಿತಾಂಶ ಪಡೆದವರು- 4688. ಪೆಂಡಿಂಗ್- 37.
ಬಿಸಿಎ: ಪರೀಕ್ಷೆಗೆ ಕುಳಿತವರು- 709. ಫಲಿತಾಂಶ ಪಡೆದವರು- 700. ಪೆಂಡಿಂಗ್- 09.
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರು- 3191. ಫಲಿತಾಂಶ ಪಡೆದವರು- 3116. ಪೆಂಡಿಂಗ್- 75.
ಬಿವಿಎ: ಪರೀಕ್ಷೆಗೆ ಕುಳಿತವರು- 10. ಫಲಿತಾಂಶ ಪಡೆದವರು- 00. ಪೆಂಡಿಂಗ್- 00.
ಒಟ್ಟು: ಪರೀಕ್ಷೆ ಬರೆದವರು- 16437. ಫಲಿತಾಂಶ ಪಡೆದವರು- 16144. ಪೆಂಡಿಂಗ್- 293.
ಇದನ್ನೂ ಓದಿರಿ: ಗುಲಬರ್ಗಾ ವಿವಿ ಕರ್ಮಕಾಂಡ-1: ಅಂಕಗಳನ್ನೇ ತಿದ್ದಿದ ಭೂಪರು; ಭಾರೀ ಅಕ್ರಮ ಬಯಲು
ಮೊದಲ ಬ್ಯಾಚಿನ ಐದನೇ ಸೆಮಿಸ್ಟರ್ ಪರೀಕ್ಷೆ 2024ರ ಫೆಬ್ರವರಿಯಲ್ಲಿ ನಡೆದಿದೆ. ಅದರ ವಿವರಗಳು ಹೀಗಿವೆ:
ಬಿಎ: ಪರೀಕ್ಷೆಗೆ ಕುಳಿತವರು- 6940 . ಫಲಿತಾಂಶ ಪಡೆದವರು- 6861. ಪೆಂಡಿಂಗ್- 79.
ಬಿಬಿಎ: ಪರೀಕ್ಷೆಗೆ ಕುಳಿತವರು- 232 . ಫಲಿತಾಂಶ ಪಡೆದವರು- 231. ಪೆಂಡಿಂಗ್- 01.
ಬಿಕಾಂ: ಪರೀಕ್ಷೆಗೆ ಕುಳಿತವರು- 4493 . ಫಲಿತಾಂಶ ಪಡೆದವರು- 4462. ಪೆಂಡಿಂಗ್- 31.
ಬಿಸಿಎ: ಪರೀಕ್ಷೆಗೆ ಕುಳಿತವರು- 693 . ಫಲಿತಾಂಶ ಪಡೆದವರು- 692 . ಪೆಂಡಿಂಗ್- 01 .
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರು- 3067 . ಫಲಿತಾಂಶ ಪಡೆದವರು- 3043 . ಪೆಂಡಿಂಗ್- 24 .
ಬಿವಿಎ: ಪರೀಕ್ಷೆಗೆ ಕುಳಿತವರು- 09. ಫಲಿತಾಂಶ ಪಡೆದವರು- 09. ಪೆಂಡಿಂಗ್- 00.
ಒಟ್ಟು: ಪರೀಕ್ಷೆ ಬರೆದವರು- 15434. ಫಲಿತಾಂಶ ಪಡೆದವರು- 15298. ಪೆಂಡಿಂಗ್- 136.
ಮೊದಲ ಬ್ಯಾಚಿನ ಆರನೇ ಸೆಮಿಸ್ಟರ್ ಪರೀಕ್ಷೆ 2024ರ ಆಗಸ್ಟ್‌ನಲ್ಲಿ ನಡೆದಿದೆ. ಅದರ ವಿವರಗಳು ಹೀಗಿವೆ:
ಬಿಎ: ಪರೀಕ್ಷೆಗೆ ಕುಳಿತವರು- 6718. ಫಲಿತಾಂಶ ಪಡೆದವರು- 6620. ಪೆಂಡಿಂಗ್- 98.
ಬಿಬಿಎ: ಪರೀಕ್ಷೆಗೆ ಕುಳಿತವರು- 223. ಫಲಿತಾಂಶ ಪಡೆದವರು-222 . ಪೆಂಡಿಂಗ್- 01.
ಬಿಕಾಂ: ಪರೀಕ್ಷೆಗೆ ಕುಳಿತವರು- 4404. ಫಲಿತಾಂಶ ಪಡೆದವರು- 4344. ಪೆಂಡಿಂಗ್- 60.
ಬಿಸಿಎ: ಪರೀಕ್ಷೆಗೆ ಕುಳಿತವರು- 676. ಫಲಿತಾಂಶ ಪಡೆದವರು- 674. ಪೆಂಡಿಂಗ್- 02.
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರು- 3009. ಫಲಿತಾಂಶ ಪಡೆದವರು- 2954. ಪೆಂಡಿಂಗ್- 55.
ಬಿವಿಎ: ಪರೀಕ್ಷೆಗೆ ಕುಳಿತವರು- 09. ಫಲಿತಾಂಶ ಪಡೆದವರು- 09. ಪೆಂಡಿಂಗ್- 00.
ಒಟ್ಟು: ಪರೀಕ್ಷೆ ಬರೆದವರು- 15,030. ಫಲಿತಾಂಶ ಪಡೆದವರು- 14,823. ಪೆಂಡಿಂಗ್- 216.
ಒಟ್ಟಾರೆಯಾಗಿ ಹೇಳುವುದಾದರೆ ಮೊದಲ ಬ್ಯಾಚಿನ ಒಟ್ಟು ಆರು ಸೆಮಿಸ್ಟರ್‌ಗಳಿಗೆ ಸಂಬಂಧಿಸಿದಂತೆ 2736 ಫಲಿತಾಂಶಗಳು ಇನ್ನೂ ಪ್ರಕಟವಾಗಿಲ್ಲ!
***
2022- 2023ನೇ ಸಾಲಿನ ಎರಡನೇ ಬ್ಯಾಚ್ ಫಲಿತಾಂಶದ ವಿವರಗಳು:
ಮೊದಲ ಸೆಮಿಸ್ಟರ್ ಪರೀಕ್ಷೆಯು 2023ರ ಫೆಬ್ರವರಿಯಲ್ಲಿ ನಡೆದಿದೆ.
ಬಿಎ: ಪರೀಕ್ಷೆಗೆ ಕುಳಿತವರು- 8701. ಫಲಿತಾಂಶ ಪಡೆದವರು- 8221. ಪೆಂಡಿಂಗ್- 480.
ಬಿಬಿಎ: ಪರೀಕ್ಷೆಗೆ ಕುಳಿತವರು-207. ಫಲಿತಾಂಶ ಪಡೆದವರು- (ಮಾಹಿತಿ ತಪ್ಪಾಗಿರುವ ಸಾಧ್ಯತೆ ಇದೆ, ಹೀಗಾಗಿ ಇಲ್ಲಿ ಸೇರಿಸಿಲ್ಲ). ಪೆಂಡಿಂಗ್- 110.
ಬಿಕಾಂ: ಪರೀಕ್ಷೆಗೆ ಕುಳಿತವರು- 4544. ಫಲಿತಾಂಶ ಪಡೆದವರು- 4386. ಪೆಂಡಿಂಗ್- 158.
ಬಿಸಿಎ: ಪರೀಕ್ಷೆಗೆ ಕುಳಿತವರು- 1057. ಫಲಿತಾಂಶ ಪಡೆದವರು- 1040. ಪೆಂಡಿಂಗ್- 17.
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರು- 2859. ಫಲಿತಾಂಶ ಪಡೆದವರು- 2805. ಪೆಂಡಿಂಗ್- 54.
ಬಿವಿಎ: ಪರೀಕ್ಷೆಗೆ ಕುಳಿತವರು- 14. ಫಲಿತಾಂಶ ಪಡೆದವರು- 00. ಪೆಂಡಿಂಗ್- 14.
ಒಟ್ಟು: ಪರೀಕ್ಷೆ ಬರೆದವರು- 17382. ಫಲಿತಾಂಶ ಪಡೆದವರು- 16649. ಪೆಂಡಿಂಗ್- 833
ಎರನೇ ಸೆಮಿಸ್ಟರ್ ಪರೀಕ್ಷೆ 2023ರ ಆಗಸ್ಟ್‌ನಲ್ಲಿ ನಡೆದಿದೆ. ಅದರ ವಿವರಗಳು ಹೀಗಿವೆ:
ಬಿಎ: ಪರೀಕ್ಷೆಗೆ ಕುಳಿತವರು- 8002. ಫಲಿತಾಂಶ ಪಡೆದವರು- 7656. ಪೆಂಡಿಂಗ್- 346.
ಬಿಬಿಎ: ಪರೀಕ್ಷೆಗೆ ಕುಳಿತವರು- 184. ಫಲಿತಾಂಶ ಪಡೆದವರು-127 . ಪೆಂಡಿಂಗ್- 57.
ಬಿಕಾಂ: ಪರೀಕ್ಷೆಗೆ ಕುಳಿತವರು- 4180. ಫಲಿತಾಂಶ ಪಡೆದವರು- 1089. ಪೆಂಡಿಂಗ್- 91.
ಬಿಸಿಎ: ಪರೀಕ್ಷೆಗೆ ಕುಳಿತವರು- 1013. ಫಲಿತಾಂಶ ಪಡೆದವರು- 984. ಪೆಂಡಿಂಗ್-29.
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರು- 2851. ಫಲಿತಾಂಶ ಪಡೆದವರು- 2487. ಪೆಂಡಿಂಗ್- 364.
ಬಿವಿಎ: ಪರೀಕ್ಷೆಗೆ ಕುಳಿತವರು- 13. ಫಲಿತಾಂಶ ಪಡೆದವರು- 00. ಪೆಂಡಿಂಗ್- 13.
ಒಟ್ಟು: ಪರೀಕ್ಷೆ ಬರೆದವರು- 16243. ಫಲಿತಾಂಶ ಪಡೆದವರು-15343. ಪೆಂಡಿಂಗ್- 900
ಇದನ್ನೂ ಓದಿರಿ: ಮಂಗಳೂರಿಗೆ ಮುಕುಟಪ್ರಾಯವಾದ ‘ಪ್ರಜಾಸೌಧ’; ಅಭಿವೃದ್ಧಿ ಕಾರ್ಯ ನಿಂತಿದೆ ಎಂದವರಿಗೆ ಉತ್ತರ
ಮೂರನೇ ಸೆಮಿಸ್ಟರ್ ಪರೀಕ್ಷೆ 2024ರ ಜನವರಿಯಲ್ಲಿ ನಡೆದಿದೆ. ಅದರ ವಿವರಗಳು ಹೀಗಿವೆ:
ಬಿಎ: ಪರೀಕ್ಷೆಗೆ ಕುಳಿತವರು- 7115. ಫಲಿತಾಂಶ ಪಡೆದವರು- 6241. ಪೆಂಡಿಂಗ್- 874.
ಬಿಬಿಎ: ಪರೀಕ್ಷೆಗೆ ಕುಳಿತವರು- 169. ಫಲಿತಾಂಶ ಪಡೆದವರು- 161. ಪೆಂಡಿಂಗ್- 08 .
ಬಿಕಾಂ: ಪರೀಕ್ಷೆಗೆ ಕುಳಿತವರು- 3848. ಫಲಿತಾಂಶ ಪಡೆದವರು- 3535. ಪೆಂಡಿಂಗ್- 313.
ಬಿಸಿಎ: ಪರೀಕ್ಷೆಗೆ ಕುಳಿತವರು- 959. ಫಲಿತಾಂಶ ಪಡೆದವರು- 860. ಪೆಂಡಿಂಗ್- 99.
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರು- 2508. ಫಲಿತಾಂಶ ಪಡೆದವರು- 2317. ಪೆಂಡಿಂಗ್- 191.
ಬಿವಿಎ: ಪರೀಕ್ಷೆಗೆ ಕುಳಿತವರು- 13. ಫಲಿತಾಂಶ ಪಡೆದವರು- 00. ಪೆಂಡಿಂಗ್- 13.
ಒಟ್ಟು: ಪರೀಕ್ಷೆ ಬರೆದವರು- 14612. ಫಲಿತಾಂಶ ಪಡೆದವರು- 13114. ಪೆಂಡಿಂಗ್- 1498
ನಾಲ್ಕನೇ ಸೆಮಿಸ್ಟರ್ ಪರೀಕ್ಷೆ 2023ರ ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ನಡೆದಿದೆ. ಅದರ ವಿವರಗಳು ಹೀಗಿವೆ:
ಬಿಎ: ಪರೀಕ್ಷೆಗೆ ಕುಳಿತವರು- 6759. ಫಲಿತಾಂಶ ಪಡೆದವರು- 6521. ಪೆಂಡಿಂಗ್- 238.
ಬಿಬಿಎ: ಪರೀಕ್ಷೆಗೆ ಕುಳಿತವರು- 163. ಫಲಿತಾಂಶ ಪಡೆದವರು-158. ಪೆಂಡಿಂಗ್- 05.
ಬಿಕಾಂ: ಪರೀಕ್ಷೆಗೆ ಕುಳಿತವರು- 3735. ಫಲಿತಾಂಶ ಪಡೆದವರು- 3549. ಪೆಂಡಿಂಗ್- 186.
ಬಿಸಿಎ: ಪರೀಕ್ಷೆಗೆ ಕುಳಿತವರು- 950. ಫಲಿತಾಂಶ ಪಡೆದವರು- 941. ಪೆಂಡಿಂಗ್- 09.
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರು- 2464. ಫಲಿತಾಂಶ ಪಡೆದವರು- 2402. ಪೆಂಡಿಂಗ್- 62.
ಬಿವಿಎ: ಪರೀಕ್ಷೆಗೆ ಕುಳಿತವರು- 13. ಫಲಿತಾಂಶ ಪಡೆದವರು- 13. ಪೆಂಡಿಂಗ್-00.
ಒಟ್ಟಾರೆ ಪರೀಕ್ಷೆ ಬರೆದವರು-14084. ಫಲಿತಾಂಶ ಪಡೆದವರು-13584. ಪೆಂಡಿಂಗ್- 500
ಅಂದರೆ ಈವರೆಗೆ ನಡೆದಿರುವ ಎರಡನೇ ಬ್ಯಾಚ್ ಪರೀಕ್ಷೆಗಳಲ್ಲಿ ಇನ್ನೂ 3731 ಫಲಿತಾಂಶಗಳು ಬಾಕಿ ಉಳಿದಿವೆ.
***
2023- 24ನೇ ಸಾಲಿನ ಮೂರನೇ ಬ್ಯಾಚ್ ಫಲಿತಾಂಶಗಳಲ್ಲೂ ಇದೇ ವಿಳಂಬವನ್ನು ಕಾಣಬಹುದು.
ಮೂರನೇ ಬ್ಯಾಚಿನ ಮೊದಲ ಸೆಮಿಸ್ಟರ್ ಪರೀಕ್ಷೆಯು 2024ರ ಜನವರಿಯಲ್ಲಿ ನಡೆದಿದೆ. ಅದರ ವಿವರಗಳು ಹೀಗಿವೆ:
ಬಿಎ: ಪರೀಕ್ಷೆಗೆ ಕುಳಿತವರು- 7126 . ಫಲಿತಾಂಶ ಪಡೆದವರು-6331 . ಪೆಂಡಿಂಗ್- 795.
ಬಿಬಿಎ: ಪರೀಕ್ಷೆಗೆ ಕುಳಿತವರು- 158. ಫಲಿತಾಂಶ ಪಡೆದವರು- 116. ಪೆಂಡಿಂಗ್- 42.
ಬಿಕಾಂ: ಪರೀಕ್ಷೆಗೆ ಕುಳಿತವರು- 2820. ಫಲಿತಾಂಶ ಪಡೆದವರು- 2515. ಪೆಂಡಿಂಗ್- 305.
ಬಿಸಿಎ: ಪರೀಕ್ಷೆಗೆ ಕುಳಿತವರು- 500. ಫಲಿತಾಂಶ ಪಡೆದವರು- 464. ಪೆಂಡಿಂಗ್- 36.
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರು-1666. ಫಲಿತಾಂಶ ಪಡೆದವರು-1433. ಪೆಂಡಿಂಗ್-233.
ಬಿವಿಎ: ಪರೀಕ್ಷೆಗೆ ಕುಳಿತವರು- 35. ಫಲಿತಾಂಶ ಪಡೆದವರು-00. ಪೆಂಡಿಂಗ್- 35.
ಒಟ್ಟು: ಪರೀಕ್ಷೆ ಬರೆದವರು- 12305. ಫಲಿತಾಂಶ ಪಡೆದವರು-10859. ಪೆಂಡಿಂಗ್- 1446
ಇದನ್ನೂ ಓದಿರಿ: ಶಿವಮೊಗ್ಗ | ಅಪಾಯಕ್ಕೆ ಬಾಯ್ತೆರೆದಿರುವ ಸೇತುವೆ; ಸ್ಥಳೀಯ ಆಡಳಿತದ ವಿರುದ್ಧ ಜನಾಕ್ರೋಶ
ಈಬ್ಯಾಚಿನ ಎರಡನೇ ಸೆಮಿಸ್ಟರ್ ಪರೀಕ್ಷೆ 2024ರ ಜೂನ್ ಜುಲೈನಲ್ಲಿ ನಡೆದಿದೆ. ಅದರ ವಿವರಗಳು ಹೀಗಿವೆ:
ಬಿಎ: ಪರೀಕ್ಷೆಗೆ ಕುಳಿತವರು- 6538. ಫಲಿತಾಂಶ ಪಡೆದವರು- 5927 . ಪೆಂಡಿಂಗ್- 611.
ಬಿಬಿಎ: ಪರೀಕ್ಷೆಗೆ ಕುಳಿತವರು-144 . ಫಲಿತಾಂಶ ಪಡೆದವರು-140. ಪೆಂಡಿಂಗ್- 04.
ಬಿಕಾಂ: ಪರೀಕ್ಷೆಗೆ ಕುಳಿತವರು- 2623. ಫಲಿತಾಂಶ ಪಡೆದವರು- 2274. ಪೆಂಡಿಂಗ್- 349.
ಬಿಸಿಎ: ಪರೀಕ್ಷೆಗೆ ಕುಳಿತವರು- 474. ಫಲಿತಾಂಶ ಪಡೆದವರು- 466. ಪೆಂಡಿಂಗ್- 08.
ಬಿಎಸ್‌ಸಿ: ಪರೀಕ್ಷೆಗೆ ಕುಳಿತವರು- 1554. ಫಲಿತಾಂಶ ಪಡೆದವರು- 1449. ಪೆಂಡಿಂಗ್- 105.
ಬಿವಿಎ: ಪರೀಕ್ಷೆಗೆ ಕುಳಿತವರು- 34. ಫಲಿತಾಂಶ ಪಡೆದವರು- 00. ಪೆಂಡಿಂಗ್- 34.
ಒಟ್ಟು: ಪರೀಕ್ಷೆ ಬರೆದವರು- 11367. ಫಲಿತಾಂಶ ಪಡೆದವರು- 10256. ಪೆಂಡಿಂಗ್- 1111.
ಒಟ್ಟು ಈ ಬ್ಯಾಚ್‌ನಲ್ಲಿ 2557 ಫಲಿತಾಂಶಗಳು ಬಾಕಿ ಉಳಿದಿವೆ.
***
ಮೂರು ಬ್ಯಾಚಿಗೆ ನಡೆದಿರುವ ಎಲ್ಲ ಸೆಮಿಸ್ಟರ್ ಪರೀಕ್ಷೆಗಳನ್ನು ಒಟ್ಟುಗೂಡಿಸಿ ಹೇಳುವುದಾದರೆ ಈವರೆಗೆ 9024 ಫಲಿತಾಂಶಗಳು ಬಾಕಿ ಉಳಿದಿವೆ! ವಿದ್ಯಾರ್ಥಿಗಳು ನಿತ್ಯವೂ ಪರಿತಪಿಸುವಂತಾಗಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.