ಬಾಂಗ್ಲಾದಲ್ಲಿ ಮತ್ತೆ ಬಿಕ್ಕಟ್ಟು | ಸೇನೆ-ರಾಜಕಾರಣಿಗಳಿಗೆ ಬೇಕಾಗಿರುವುದೇನು?

Date:

Advertisements
ಮೊಹಮ್ಮದ್‌ ಯೂನುಸ್‌ಗೆ ಈಗ 84 ವರ್ಷ. ವಿಶ್ರಾಂತಿ ಸಮಯ. ದೇಶ ಸಂಕಷ್ಟದಲ್ಲಿರುವ ಕಾರಣ ಈ ಇಳಿ ವಯಸ್ಸಿನಲ್ಲಿಯೂ ರಾಷ್ಟ್ರಕ್ಕಾಗಿ ವಿರಾಮ ಪಡೆಯದೆ ಕೆಲಸ ಮಾಡುತ್ತಿದ್ದಾರೆ. ಆದರೆ ಸೇನೆ ಹಾಗೂ ರಾಜಕಾರಣಿಗಳಿಗೆ ಅದು ಬೇಡವಾಗಿದೆ. ಬಿಕ್ಕಟ್ಟು ಬೇಕಾಗಿದೆ.

ಮೊಹಮ್ಮದ್ ಯೂನುಸ್‌ ಮಧ್ಯಂತರ ಅಧ್ಯಕ್ಷರಾದ ನಂತರ ಅಭಿವೃದ್ಧಿಯ ಒಂದಿಷ್ಟು ಆಶಾಭಾವನೆ ಹೊಂದಿದ್ದ ನೆರೆಯ ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಸಂಘರ್ಷ ಏರ್ಪಟ್ಟಿದೆ. 2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ-ಸಾರ್ವಜನಿಕರ ಬೃಹತ್ ಪ್ರತಿಭಟನೆಗಳ ಪರಿಣಾಮವಾಗಿ ಯೂನುಸ್‌ ಅವರು ಮಧ್ಯಂತರ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಯೂನುಸ್ ನೇತೃತ್ವದ ಸರ್ಕಾರವು ದೇಶದಲ್ಲಿ ರಾಜಕೀಯ ಸುಧಾರಣೆಗಳನ್ನು ಮತ್ತು ಹೊಸ ಸಂವಿಧಾನದ ರೂಪುರೇಷೆಗಳನ್ನು ರೂಪಿಸುವ ಗುರಿಯನ್ನು ಹೊಂದಿತ್ತು. ಆದರೆ, ಈ ಪ್ರಯತ್ನಗಳು ವಿವಿಧ ಅಡೆತಡೆಗಳನ್ನು ಎದುರಿಸುತ್ತಿವೆ.

ಮುಖ್ಯವಾಗಿ, ಸೇನೆಯ ಮುಖ್ಯಸ್ಥ ವಾಕರ್-ಉಜ್-ಜಮಾನ ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಸೇರಿದಂತೆ ವಿಪಕ್ಷಗಳು ಡಿಸೆಂಬರ್ 2025ರೊಳಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸುವಂತೆ ಒತ್ತಡ ಏರುತ್ತಿದ್ದಾರೆ. ದೇಶದಲ್ಲಿ ಹಲವು ಬದಲಾವಣೆಗಳನ್ನು ಜಾರಿಗೊಳಿಸುವ ಕಾರಣ ಹಾಗೂ ಪರಿಸ್ಥಿತಿ ಅಷ್ಟು ಉತ್ತಮವಾಗಿರುವುದರಿಂದ ಯೂನುಸ್‌ ಅವರು 2026ರವರೆಗೆ ಚುನಾವಣೆಯನ್ನು ಮುಂದೂಡುವುದು ಅವಶ್ಯ ಎಂದು ಸೇನೆ ಹಾಗೂ ರಾಜಕೀಯ ಪಕ್ಷಗಳಿಗೆ ತಮ್ಮ ನಿಲುವನ್ನು ತಿಳಿಸಿದ್ದರು. ಆದರೆ ಈ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ರಾಜಕೀಯ ಅಸ್ಥಿರತೆಯನ್ನು ಹೆಚ್ಚಿಸಿವೆ.

ಯೂನುಸ್ ಅವರ ನೇತೃತ್ವದ ಮಧ್ಯಂತರ ಸರ್ಕಾರವು ಸಂವಿಧಾನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಬಾಂಗ್ಲಾದೇಶದ ಸಂವಿಧಾನದಲ್ಲಿ ಮಧ್ಯಂತರ ಸರ್ಕಾರದ ಸ್ಥಾಪನೆಯ ಕುರಿತಾಗಿ ಸ್ಪಷ್ಟವಾದ ನಿಯಮಗಳು ಇಲ್ಲದ ಕಾರಣ, ಈ ಸರ್ಕಾರದ ಸಂವಿಧಾನಾತ್ಮಕ ಮಾನ್ಯತೆ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಇದಕ್ಕಾಗಿ ಹೊಸ ಸಂವಿಧಾನದ ರೂಪುರೇಷೆಗಳನ್ನು ಜಾರಿಗೊಳಿಸಲು ಯೂನುಸ್‌ ಅವರು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದರು. ಆದರೆ ಸೇನೆ ಹಾಗೂ ಬಿಎನ್‌ಪಿ ಪಕ್ಷಗಳು ಇದಕ್ಕೆ ಅಡ್ಡಿಪಡಿಸುತ್ತಿವೆ. ಯೂನುಸ್‌ ಅವರು ಕಳೆದ ವರ್ಷ ಅಧಿಕಾರಕ್ಕೆ ಬಂದ ನಂತರ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ್ದರು. ಅಧಿಕಾರ ನೀಡಿದಾಗ ಸೇನೆಯ ತಮ್ಮ ಆಡಳಿತದಲ್ಲಿ ಮೂಗು ತೂರಿಸಬಾರದೆಂಬುದು ಪ್ರಮುಖ ಬೇಡಿಕೆಯಾಗಿತ್ತು. ಆದರೆ ಅಧಿಕಾರದ ರುಚಿ ನೋಡಿರುವ ಸೇನಾ ನಾಯಕರು ಯೂನುಸ್‌ ಅವರಿಗೆ ಪದೇ ಪದೇ ಕಾಟ ಕೊಡುತ್ತಿದ್ದಾರೆ.   

Advertisements

ಇದರ ಜೊತೆ ಕಳೆದ 15 ವರ್ಷಗಳಿಂದ ಆಳ್ವಿಕೆ ನಡೆಸಿದ ಶೇಖ್‌ ಹಸೀನಾ ಸರ್ಕಾರ ಬಾಂಗ್ಲಾದೇಶದ ಆರ್ಥಿಕತೆಯನ್ನು ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಿಸಿತ್ತು. ಹಸೀನಾ ಸರ್ಕಾರದಲ್ಲಿ ಅಭಿವೃದ್ಧಿಗಿಂತ ಭ್ರಷ್ಟಾಚಾರ ಆರೋಪಗಳೆ ಹೆಚ್ಚು ಸದ್ದು ಮಾಡಿದವು. ಪುರಬಾಚಲ್ ಯೋಜನೆಯ ಅಕ್ರಮ ಭೂಮಿ ಹಂಚಿಕೆಯಲ್ಲಿ ಹಸೀನಾ ಕುಟುಂಬದ ಸದಸ್ಯರು ಸೇರಿದ್ದರು. ರೂಪ್ಪುರ್ ಅಣುಶಕ್ತಿ ಯೋಜನೆಯಲ್ಲಿ ಕೋಟ್ಯಂತರ ಹಣ ಮಲೇಷಿಯಾದ ವಿದೇಶಿ ಖಾತೆಗಳಿಗೆ ಹರಿದುಹೋಗಿದೆ. ಲಂಡನ್‌ನಲ್ಲಿ ಶೇಖ್ ಹಸೀನಾ ಅವರ ಆಪ್ತರ ಕುಟುಂಬ 9 ಕೋಟಿ ಪೌಂಡ್‌ ಮೌಲ್ಯದ ಆಸ್ತಿಗಳನ್ನು ಅಕ್ರಮವಾಗಿ ಖರೀದಿಸಿತ್ತು. ಢಾಕಾ ಮೆಟ್ರೋ ರೈಲು ಮತ್ತು ಆಶ್ರಯಾನ್‌ ಯೋಜನೆಗಳಲ್ಲಿ 80,000 ಕೋಟಿ ಟಾಕಾ(ಬಾಂಗ್ಲಾದೇಶದ ರೂಪಾಯಿ) ದುರ್ಬಳಕೆ ಮಾಡಿಕೊಳ್ಳಲಾಗಿತ್ತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೆ.ಆರ್.ಪೇಟೆ ದಲಿತ ಯುವಕ ಜಯಕುಮಾರ್ ಕೇಸ್‌ನಲ್ಲಿ ಪೊಲೀಸರು ಕುರುಡಾಗಿದ್ದು ಅಕ್ಷಮ್ಯ

ಈ ಅಕ್ರಮಗಳ ವಿರುದ್ಧ ಯೂನುಸ್‌ ಸರ್ಕಾರ ಸಮರ ಸಾರಿತ್ತು. ಶೇಖ್ ಹಸೀನಾ ಕುಟುಂಬದ 155ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ 1,000 ಕೋಟಿ ಟಾಕಾ ಹತ್ತಿರದ ಹಣವನ್ನು ನ್ಯಾಯಾಲಯ ಜಪ್ತಿ ಮಾಡಿತ್ತು. ಲಂಡನ್‌ನಲ್ಲಿ ಶೇಖ್ ಹಸೀನಾ ಅವರ ಆಪ್ತರ ಕುಟುಂಬ 9 ಕೋಟಿ ಪೌಂಡ್‌ ಮೌಲ್ಯದ ಆಸ್ತಿಗಳನ್ನು ಅಕ್ರಮವಾಗಿ ಖರೀದಿಸಿದ್ದು, ಇದನ್ನು ಇಂಗ್ಲೆಂಡ್‌ನ ಅಪರಾಧ ವಿಭಾಗ ಜಪ್ತಿ ಮಾಡಲಾಗಿತ್ತು. ಅಲ್ಲದೆ ಹಸೀನಾ ವಿರುದ್ಧ ಕೊಲೆ, ಅಪಹರಣ, ಮತ್ತು ಮಾನವತೆ ವಿರುದ್ಧದ ಅಪರಾಧ ಸೇರಿದಂತೆ 152 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಅದಲ್ಲದೆ ಹಸೀನಾ ಅವರನ್ನು ಭಾರತದಿಂದ ಕರೆತರುವ ಪ್ರಯತ್ನವನ್ನು ಕೂಡ ನಿರಂತರವಾಗಿ ಮಾಡುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳು ಯೂನುಸ್‌ ಸರ್ಕಾರದ ಮೇಲೆ ಭಾರವನ್ನು ಮತ್ತಷ್ಟು ಹೆಚ್ಚಿಸಿದೆ. ಆರ್ಥಿಕ ಸ್ಥಿರತೆಯನ್ನು ಮರುಸ್ಥಾಪಿಸುವ ಜವಾಬ್ದಾರಿ ಅವರ ಮೇಲಿದೆ. ಆದರೆ, ಸೇನೆಯ ಮಧ್ಯ ಪ್ರವೇಶ, ರಾಜಕೀಯ ಅಸ್ಥಿರತೆ ಯೂನುಸ್‌ ಅವರಿಗೆ ಅಡ್ಡಿಯುಂಟು ಮಾಡುತ್ತಿವೆ.

Bangla protest

ಮೊಹಮ್ಮದ್‌ ಯೂನುಸ್ ಅವರು 1970 ಹಾಗೂ 80ರ ದಶಕದಲ್ಲಿ ‘ಸಣ್ಣ ಸಾಲ’ಗಳ ಯೋಜನೆಯ ಮೂಲಕ ಬಾಂಗ್ಲಾದ ಬಡವರ ಅಗತ್ಯಗಳನ್ನು ಪೂರೈಸಿದವರು. ಯೂನುಸ್ ಅವರ ಗ್ರಾಮೀಣ ಬ್ಯಾಂಕ್‌ ಯೋಜನೆಯು ಆರ್ಥಿಕವಾಗಿ ಹಿಂದುಳಿದಿದ್ದ ಲಕ್ಷಾಂತರ ಕೃಷಿಕರು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿತ್ತು. ದೇಶವು ಸುಧಾರಣೆ ಕಾಣುವುದರ ಜೊತೆ ಮೊಹಮ್ಮದ್ ಯೂನುಸ್ ಅವರ ಗ್ರಾಮೀಣ ಬ್ಯಾಂಕ್‌ ಸಾಧನೆಗೆ 2006ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಕೂಡ ಒಲಿದು ಬಂತು. ಗ್ರಾಮೀಣ ಬ್ಯಾಂಕ್ ಸ್ಥಾಪಕರಾಗಿ, ಬಡವರ ಆರ್ಥಿಕ ಸಬಲೀಕರಣಕ್ಕೆ ಕಾರಣರಾದ ಯೂನುಸ್, ಕಳೆದ 10 ತಿಂಗಳಿನಿಂದ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುತ್ತಿದ್ದರು. ಆರ್ಥಿಕ ಸುಧಾರಣೆ, ಚುನಾವಣಾ ಸುಧಾರಣೆ ಮತ್ತು ಸಾಂವಿಧಾನಿಕ ಸುಧಾರಣೆಗೆ ಆರು ಆಯೋಗಗಳನ್ನು ರಚಿಸಿ, ಸರ್ಕಾರದ ಕಾರ್ಯನಿರ್ವಹಣೆಯನ್ನು ಪಾರದರ್ಶಕವಾಗಿಡಲು ಶ್ರಮಿಸುತ್ತಿದ್ದಾರೆ. ಆಡಳಿತದಲ್ಲಿ ನಾಗರಿಕರ ಒಡನಾಟ ಮತ್ತು ಸಂವಾದವನ್ನು ಉತ್ತೇಜಿಸುತ್ತ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತು ನೀಡುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿನ 17 ಕೋಟಿ ಜನಸಂಖ್ಯೆಯಲ್ಲಿ ಮೂರೂವರೆ ಕೋಟಿಗೂ ಹೆಚ್ಚು ಯುವಜನರಿಗೆ ಉದ್ಯೋಗವಿಲ್ಲ. ಬಹುತೇಕರು ಗುಣಮಟ್ಟದ ಶಿಕ್ಷಣ ಪಡೆದುಕೊಂಡಿಲ್ಲ. ಪ್ರತಿ ವರ್ಷ 20 ಲಕ್ಷ ಯುವಜನರು ನಿರುದ್ಯೋಗಿಗಳಾಗುತ್ತಿದ್ದಾರೆ. ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿದೆ. ಹಿಂದೆ ಆಳಿದವರು ಭ್ರಷ್ಟಾಚಾರಕ್ಕೆ ಒತ್ತು ಕೊಟ್ಟು ಉದ್ಯೋಗವನ್ನು ಭರ್ತಿ ಮಾಡುವ ಕೆಲಸವನ್ನು ಮಾಡಿರಲಿಲ್ಲ. ಸರ್ಕಾರದ ಖಜಾನೆಯೂ ಖಾಲಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಹಣದುಬ್ಬರದ ಪ್ರಮಾಣ ಮಿತಿಮೀರಿದೆ. ವಿದೇಶಿ ವಿನಿಮಯ ದರ ತಳ ಕಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಸಾಲದ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಅದಲ್ಲದೆ ಬಾಂಗ್ಲಾದೇಶದ ಇತಿಹಾಸದಲ್ಲಿ ವಿದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಮಾಡಿದ ಸಾಲವು ತೀವ್ರ ಪ್ರಮಾಣದಲ್ಲಿದೆ. ಇವೆಲ್ಲದಕ್ಕೂ ಯೂನುಸ್‌ ಅವರು ಒಂದಿಷ್ಟು ಆಶಾಕಿರಣವಾಗಿದ್ದರು.

ಮೊಹಮ್ಮದ್‌ ಯೂನುಸ್‌ ಅವರಿಗೆ ಈಗ 84 ವರ್ಷ. ನಾಗರಿಕರಿಗೆ ಈ ವಯಸ್ಸು ವಿಶ್ರಾಂತಿ ಪಡೆದುಕೊಂಡು ಅಂತಿಮ ದಿನಗಳನ್ನು ಎಣಿಸುವ ಸಮಯ. ದೇಶ ಸಂಕಷ್ಟದಲ್ಲಿರುವ ಕಾರಣ ಈ ಇಳಿ ವಯಸ್ಸಿನಲ್ಲಿಯೂ ರಾಷ್ಟ್ರಕ್ಕಾಗಿ ವಿರಾಮ ಪಡೆಯದೆ ಕೆಲಸ ಮಾಡುತ್ತಿದ್ದಾರೆ. ಸ್ವಹಿತಾಸಕ್ತಿಯೇ ಮುಖ್ಯವಾಗಿರುವ ಸೇನೆ ಹಾಗೂ ಭ್ರಷ್ಟ ರಾಜಕಾರಣಿಗಳಿಗೆ ದೇಶ ಬೇಕಾಗಿಲ್ಲ. ಮೊಹಮ್ಮದ್‌ ಯೂನುಸ್ ಮಾತ್ರವಲ್ಲ ಯಾರಿಗೂ ಅವರು ಕೆಲಸ ಮಾಡಲು ಬಿಡುವುದಿಲ್ಲ. ದೇಶದಲ್ಲಿ ಬಿಕ್ಕಟ್ಟು ಸೃಷ್ಟಿಸಿ, ಜನರನ್ನು ಅತಂತ್ರಕ್ಕೆ ತಳ್ಳಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕಾಗಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X