ನಾವು ಕಟ್ಟಿಕೊಂಡ ಸಮಾಜದಲ್ಲಿ ಅತ್ಯಂತ ಮುಗ್ಧವಾಗಿ ಮಾಡಲಾಗುವ ಕೆಲಸಗಳು, ವ್ಯಾಪಾರ, ಮಾತುಕತೆಗಳೆಲ್ಲವೂ ಘನಘೋರ ಸೆಕ್ಸಿಸ್ಟ್ expression ಗಳೇ ಆಗಿರುತ್ತವೆ. ಮಕ್ಕಳನ್ನ ನಾವು ನಿರಂತರವಾಗಿ ಸ್ಟೀರಿಯೋಟೈಪ್ ಮಾಡುತ್ತಲೇ ಇರುತ್ತೇವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ತರಗತಿಯ ಶಿಕ್ಷಕನ ಬೀಸು ಹೇಳಿಕೆಗಳು ಆಘಾತಕಾರಿ ಅನ್ನಿಸಲಿಲ್ಲ. ಎಲ್ಲಾ ತರತಮಗಳ ಬೇರು Gender Bias ನಲ್ಲಿದೆ, ಸಮಾಜದ toxicity ಇರುವುದೇ ಹೆಣ್ಣು ಗಂಡೆಂಬ ಭೇದಭಾವದಲ್ಲಿ. ಅದು ಮುಂದುವರೆದು ಜಾತಿ, ಧರ್ಮ, ವರ್ಣದ ಸ್ವರೂಪ ಪಡೆಯುತ್ತದೆ.
ನನ್ನ ಮಗಳು ಇತ್ತೀಚೆಗೆ ಒಂದು ವಿಷಯವನ್ನು ನನ್ನ ಬಳಿ ಹಂಚಿಕೊಂಡಳು. “ಅಪ್ಪ ಸ್ಕೂಲ್ ಅಲ್ಲಿ ಒಂದು ಭಾಷೆ ಹೇಳಿಕೊಡುವ ಮೇಷ್ಟ್ರು ಎಷ್ಟು ಸೆಕ್ಸಿಸ್ಟ್ ಗೊತ್ತಾ ಅಂದಳು?” ನನ್ನ ಕುತೂಹಲ ಹೆಚ್ಚಾಗಿ “ಯಾರಪ್ಪಾ ಅವರು, ಏನಾಯ್ತು?ʼʼ ಅಂದೆ. ಎಲ್ಲೆಡೆ ಕಾರ್ಮೋಡಗಳಿದ್ದ ದಿನವದು. ಮಗಳನ್ನು ಶಾಲೆಯಿಂದ ಪಿಕ್ ಮಾಡಿಬಿಡುವ, ಅವಳಿಗೆ ಸರ್ಪ್ರೈಸ್ ನೀಡುವ ಎಂದು ಕಾರ್ ಅನ್ನು ಅವಳ ಶಾಲೆಯೆಡೆಗೆ ತಿರುಗಿಸಿದ್ದೆ. ಕಾರು ಶಾಲೆ ರಸ್ತೆ ತಲುಪುವ ಹೊತ್ತಿಗೆ ಮಳೆಯ ದಪ್ಪ ದಪ್ಪನೆ ಹನಿಗಳು ಕಾರಿನ ಗಾಜಿಗೆ ಬಡಿಯುತ್ತಿತ್ತು. ಓಡಿ ಬಂದು ಕಾರ್ ನುಸುಳಿದ ಮಗಳು ಸ್ವಲ್ಪ ಹಿಂಜರಿಕೆಯಿಂದಲೇ ಈ ವಿಷಯ ಹಂಚಿಕೊಳ್ಳೋಕೆ ಮುಂದಾಗಿದ್ದಳು.
“ಮೇಷ್ಟ್ರು ತರಗತಿಗೆ ಬರುತ್ತಾರೆ. ಪಾಠದ ಒಂದೆರಡು ಪ್ಯಾರ ಮುಗಿದ ಕೂಡಲೆ ಇದ್ದಕ್ಕಿದ್ದ ಹಾಗೆ ಈ ಕಾಲದ ಹುಡುಗಿಯರು ಸರಿಯಿಲ್ಲ, ನಮ್ಮ ತಾಯಿ ಎಂತಹ ತ್ಯಾಗಮಯಿ ಅನ್ನುವ ಕಡೆಗೆ ಟಾಪಿಕ್ ತಿರುಗಿಸಿಬಿಡುತ್ತಾರೆ. ಹುಡುಗರಿಗೆ ಹೆಚ್ಚು ಶಕ್ತಿಯಿದೆ, ಅವರೇ ಮುಂದೆ ಸಾಧಕರಾಗೋದು, ಹುಡುಗಿಯರು ಚಂಚಲೆಯರು ಅವರ ಕೈಲೇನು ಆಗದು. ಮೊರಾಲಿಟಿ, ಮೌನ, ನಾಚಿಕೆ ಬೆಳೆಸಿಕೊಳ್ಳಿ ಎಂಬೆಲ್ಲಾ ಬಿಟ್ಟಿ ಸಲಹೆಗಳನ್ನು ತರಗತಿಯ ವಿದ್ಯಾರ್ಥಿನಿಯರಿಗೆ ನೀಡುತ್ತಾರೆ” ಎನ್ನುವ ವೆರಿ ಡಿಸ್ಟರ್ಬಿಂಗ್ ವಿಚಾರ ತಿಳಿಸಿದಳು. ಮಳೆ ಧೋ ಎಂದು ಸುರಿಯುತ್ತಿದ್ದ ಕಾರಣ ಕಾರನ್ನು ನಿಧಾನ ಗತಿಯಲ್ಲಿ ಡ್ರೈವ್ ಮಾಡುತ್ತಿದ್ದೆ. ಮನೆ ಇನ್ನು ದೂರವಿತ್ತು. “ನೀವೆಲ್ಲ ರಿಯಾಕ್ಟ್ ಮಾಡಲ್ವ? ಸರ್ ನೀವು ಯಾವ ಕಾಲದಲ್ಲಿ ಬದುಕುತ್ತಿದ್ದೀರಿ ಅಂತ ಕೇಳಲ್ವಾ?” ಅಂದೆ. ʼʼಅಪ್ಪ ಹಾಗೇನಾದರೂ ಕೇಳಿದ್ರೆ ನೀವು ಪರದೇಶದ ಭಾಷೆಯ ಪ್ರೇಮಿಗಳು. ಆ ಭಾಷೆ ಬಂದೇ ಈ ದೇಶ ಎಕ್ಕುಟ್ಹೋಗಿದ್ದು, ಹುಡುಗೀರು ಹಾಳಾಗಿದ್ದು ಅಂತ ಶುರುವಚ್ಚಿಕೊಳ್ಳುತ್ತಾರೆ! ಅದಕ್ಕೆ ನಾವು ಅವರ ಅರಚಾಟಗಳನ್ನು ಸುಮ್ಮನೆ ಸಹಿಸಿಕೊಳ್ಳುತ್ತವೆ ಅಪ್ಪ” ಅಂದಳು.
ನನಗೆ ಇದೆಲ್ಲ ಅರಗಿಸಿಕೊಳ್ಳೋಕೆ ಒಂದೆರಡು ನಿಮಿಷ ಬೇಕಾಯಿತು. “ಮೇಡಂ ಹತ್ತಿರ ಹೋಗೋದು ತಾನೇ. Can’t you seek there assistance ಅಂದೆ.” ಅದಕ್ಕವಳು “ಅಪ್ಪ ಅವರೇನು ಹೊರತಲ್ಲ. ಹುಡುಗರು ಹಾಳಾಗೋಕೆ ನೀವೇ ಕಾರಣ. ಬಾಯ್ಸ್ ಆರ್ ಬೆಟರ್ ಫೋಕಸ್ಡ್. ಯುವರ್ ಫೋಕಸ್ ಇಸ್ ಆನ್ ದೆಮ್. ನಿಮ್ಮ ಕ್ಲಾಸ್ ಹುಡುಗಿಯೊಬ್ಬಳು ತರಗತಿಯ ಹುಡುಗನೊಬ್ಬನಿಗೆ ಪ್ರಪೋಸ್ ಮಾಡಿದ್ದಾಳೆ ಗೊತ್ತಾ? ಮೊದಲು ನೀವ್ ಸರಿಯಾಗಿರಿ ಎಂಬ ಶಾಕಿಂಗ್ ಉತ್ತರ ನೀಡುತ್ತಾರೆ ಅಪ್ಪ” ಎಂಬ ಪ್ರತಿಕ್ರಿಯೆ ಕೇಳಿ ನಾನು ಇನ್ನಷ್ಟು ವಿಚಲಿತನಾದೆ. ನನಗೇನು ಹೇಳಬೇಕು ಅಂತ ಗೊತ್ತಾಗಲಿಲ್ಲ. ನಿಟ್ಟುಸಿರು ಬಿಡುತ್ತಾ, ನಾನು ಬಂದು ಮಾತನಾಡುವೆ ಎಂದೆ. “ಜಸ್ಟ್ ಚಿಲ್ ಅಪ್ಪ. ಐ ಹ್ಯಾವ್ ಲನ್ಟು ಇಗ್ನೋರ್ ಹಿಮ್. ಇನ್ನೆರಡು ತಿಂಗಳು ಮುಗಿದರೆ ಐ ಶಲ್ ಬಿ ಔಟ್ ಆಫ್ ದಟ್ ಸ್ಕೂಲ್. ಡೊಂಟ್ ವರಿ” ಅಂದಳು.
ಅಲ್ಲಿಗೆ ನಮ್ಮ ಮಾತು ಕೊನೆಯಾದವು. ಅವಳು ತನ್ನ ಫೇವರಿಟ್ ಮ್ಯೂಸಿಕ್ ಅನ್ನು ಕೇಳತೊಡಗಿದಳು. ಆದ್ರೆ ನನ್ನ ಮನಸ್ಸು ಮಾತ್ರ ತರಗತಿಯ ವಿದ್ಯಾರ್ಥಿಗಳ ಬಗ್ಗೆ ಯೋಚಿಸತೊಡಗಿತ್ತು. ನನ್ನ ಮಗಳಿಗೆ ಅವಳ ಓದಿನಿಂದ, ನೋಡುವ ವೆಬ್ ಸೀರೀಸ್‌ಗಳಿಂದ, ಆಪ್ತರ ಜೊತೆಗಿನ ಒಡನಾಟದಿಂದ, ಇಂಡಿಪೆಂಡೆಂಟ್ ಆದ ತಾಯಿಯನ್ನು ಗಮನಿಸಿ, ಶಾಲೆಯಲ್ಲಿ ಮೇಷ್ಟ್ರು ಮಾಡುವ ಕಾಮೆಂಟ್ಸ್‌ಗಳು ಸೆಕ್ಸಿಸ್ಟ್ ಆದವು ಎಂದು ಗುರುತಿಸಲಾದರು ಆಗಿದೆ. (ಈ ಅರಿವು ಎನ್ನುವುದೊಂದು ಕೂಡ ಪ್ರಿವಿಲೇಜ್ ಅಲ್ವಾ?) ಈ ಪ್ರಿವಿಲೇಜ್ ಇಲ್ಲದೆ ತರಗತಿಯಲ್ಲಿ ಕುಳಿತಿರುವ ಹುಡುಗಿಯರ ಮನಸ್ಥಿತಿಯನ್ನು ಈ ಕಾಮೆಂಟುಗಳು ಹೇಗೆ ಪ್ರಭಾವಿಸಿರಬಹುದು. ನಾವು ಅಸಹಾಯಕರು, ಚಂಚಲೆಯರು, ದೊಡ್ಡ ದೊಡ್ಡ ಹುದ್ದೆಗೆ ಯೋಗ್ಯರಲ್ಲದವರು ಎಂದು ಕೆಲ ಹುಡುಗಿಯರು ಅಂತರ್ಗತ (internalise) ಮಾಡಿಕೊಂಡಿರಬಹುದು. ಕೆಲ ಹುಡುಗಿಯರ ಆತ್ಮಗೌರವ, ಆತ್ಮವಿಶ್ವಾಸ ಕುಗ್ಗಿ ಹೋಗಿರಬಹುದು. ಇನ್ನಲವರು ತೀವ್ರವಾಗಿ ಘಾಸಿಗೊಂಡಿರಬಹುದು.
ನನ್ನ ಮಗಳ ಶಾಲಾ ಶಿಕ್ಷಕನನ್ನು ಒಮ್ಮೆ ಭೇಟಿಯಾಗಬೇಕು, ಅವರಿಗೆ ಕೆಲ ಸಲಹೆಗಳನ್ನು ನೀಡಬೇಕು, ಅವರು ಮಾಡುತ್ತಿರುವುದು ತಪ್ಪೆಂದು ಹೇಳಬೇಕು ಎಂದುಕೊಳ್ಳುವಾಗಲೇ ಅಸಾಧ್ಯ ಕೋಪ ನನಗೆ ಅರಿವಿಲ್ಲದೆಯೇ ನನ್ನಲ್ಲಿ ಮೂಡಿತ್ತು. ಸಂಯಮ ಕಳೆದುಕೊಳ್ಳದೆ ಆಲೋಚಿಸಿದೆ, ನಾವು ಬದುಕುವ ಸಮಾಜವೇ ಸೆಕ್ಸಿಸ್ಟ್ ಅಲ್ಲವೇ, ನಾವು ಕೂಡ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಕ್ಕಳಿಗೆ ನಿರಂತರವಾಗಿ ಹುಡುಗ ಮತ್ತು ಹುಡುಗಿಯಾಗಿ ಇರುವುದು ಹೇಗೆ ಎಂಬ ಮೆಸೇಜ್ ನೀಡುತ್ತಿರುತ್ತೇವೆ ಅಲ್ಲವೆ ಎಂಬುದರ ಅರಿವಾಗಿ ಶಿಕ್ಷಕನ ಹೇಳಿಕೆಗಳು ಮಹಾಪರಾಧವೆನ್ನಿಸುವುದಿಲ್ಲ.
ಇದನ್ನು ಓದಿದ್ದೀರಾ?: ಮಾಧ್ವರ ತಪ್ತ ಮುದ್ರಾಧಾರಣೆ ಮತ್ತು ಜಾತಿ ಜನಗಣತಿ
ಮಕ್ಕಳಾಡುವ ಆಟಿಕೆಗಳನ್ನ ಗಮನಿಸಿ. ಅವುಗಳು ಎಷ್ಟು ಸೆಕ್ಸಿಸ್ಟ್ ಅಲ್ಲವೇ? Gendered ಆಲೋಚನೆಗಳನ್ನು ಮಕ್ಕಳ ಹೃದಯದಾಳಕ್ಕೆ ಆಟಿಕೆಗಳು ಇಳಿಸಿ ಬಿಡುವುದಿಲ್ಲವೇ? ಗಂಡು ಮಕ್ಕಳು ಸಾಮಾನ್ಯವಾಗಿ ಬಿಲ್ಡಿಂಗ್ ಬ್ಲಾಕ್ಸ್, ಲೆಗೊ, ಬಸ್ಸು, ಕಾರು, ಜೆಸಿಬಿಗಳಲ್ಲಿ ಆಟವಾಡುತ್ತಾರೆ. ಗಂಡು ಮಕ್ಕಳು ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಮೆಕಾನಿಕಲ್ ವಿಷಯಗಳಲ್ಲಿ ಪ್ರಾಬಲ್ಯ ಸಾಧಿಸಿರುವುದಕ್ಕೆ ಇದು ಕಾರಣವಿರಬಹುದು. ಮುಂದುವರೆದು ವಿಜ್ಞಾನ, ಗಣಿತ, ಸಂಶೋಧನಾ ಕ್ಷೇತ್ರಗಳಲ್ಲಿಯು ಹುಡುಗರು ಏಕೆ ಮುಂದಿದ್ದಾರೆ ಎನ್ನುವುದಕ್ಕೆ ಆಟಿಕೆಗಳು ಕೂಡ ಕಾರಣವಾಗಿರಬಹುದು. ಇಂಗ್ಲೆಂಡ್‌ನಂತಹ ದೇಶದಲ್ಲೇ ವಿಜ್ಞಾನ ಗಣಿತ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಹೆಣ್ಣು ಮಕ್ಕಳ ಸಂಖ್ಯೆ ಶೇಕಡಾ 13ರಷ್ಟು ಮಾತ್ರವಂತೆ!

ಹೆಣ್ಣು ಮಕ್ಕಳ ಆಟಿಕೆಗಳಾವುವು? ಸುಂದರವಾದ ಬೊಂಬೆಗಳು, ಬೊಂಬೆಗಳ ಬಟ್ಟೆಯ ವಾರ್ಡ್ರೋಬ್‌ಗಳು, ಮಹಡಿಯ ಮನೆಗಳು, ಅಡಿಗೆ ಮನೆಯ ಪಾತ್ರೆ, ಒಲೆ, ಸಿಲೆಂಡರ್‌ಗಳು… ಹೆಣ್ಣು ಮಕ್ಕಳು ಮನೆಗೆಲಸಗಳಿಗೆ ಸೀಮಿತಗೊಳ್ಳುವುದರಲ್ಲಿ, ರುಚಿಕರ ಅಡಿಗೆ ಮಾಡಿ, ಮನೆ ನೋಡಿಕೊಳ್ಳುವುದರಲ್ಲೇ ಸಾರ್ಥಕತೆ ಕಾಣುವುದರಲ್ಲಿ ಅಚ್ಚರಿ ಏನಿದೆ. our gendered society programmes them so.
ಜೀವವಿಲ್ಲದ ಸುಂದರವಾದ ಬೊಂಬೆಗಳನ್ನೂ ಮಾತನಾಡಿಸುವ ಹೆಣ್ಣು ಮಕ್ಕಳು ಭಾವುಕರಾಗಿಯೂ, expressive ಆಗಿಯೂ ಇದ್ದರೆ; ಯಂತ್ರಗಳ ಒಡನಾಟದಲ್ಲಿ ಬೆಳೆಯುವ ಹುಡುಗರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿಕ್ಕೆ ಹೆಣಗಾಡುತ್ತಾರೆ. ಇಂದಿಗೂ ಹುಡುಗರು ಸುಲಭವಾಗಿ express ಮಾಡುವ ಭಾವನೆ ಯಾವುದಾದರೂ ಇದ್ದರೆ ಅದು ಕೋಪ ಮಾತ್ರ ಎನ್ನುವುದು ನನ್ನ ಅನಿಸಿಕೆ!
ಆಟಿಕೆಗಳು ವಿಷಯ ಇದಾದರೆ ಮಕ್ಕಳು ತೊಡುವ ಬಟ್ಟೆಗಳು ಕೂಡ ಸೆಕ್ಸಿಸ್ಟ್ ಆಗಿಯೇ ಇರುತ್ತವೆ. ಆನ್ಲೈನ್ ಶಾಪಿಂಗ್ ಮಾಡಿ ಅಥವಾ ಯಾವುದಾದರೂ ಬಟ್ಟೆ ಅಂಗಡಿಗೆ ಹೋಗಿ ಅಲ್ಲಿ ಬಾಯ್ಸ್ ಮತ್ತು ಗರ್ಲ್ಸ್ ಎಂಬ ವಿಭಾಗಗಳಿರುತ್ತವೆ. ಹೆಣ್ಣು ಮಕ್ಕಳ ಬಟ್ಟೆಗಳು ಅತಿಯಾಗಿ ಪಿಂಕ್ ಬಣ್ಣದ್ದಾದರೆ, ಗಂಡ ಮಕ್ಕಳ ಬಟ್ಟೆಗಳು ಹೆಚ್ಚಾಗಿ ನೀಲಿ ಬಣ್ಣದ್ದಾಗಿರುತ್ತವೆ. ಪಿಂಕ್ ಬಟ್ಟೆಗಳ ಮೇಲೆ Pretty, adorable, princess, beautiful, gorgeous, angel ಎಂಬ ಪದಗಳು ಮುದ್ರಿತವಾಗಿದ್ದರೆ, ಗಂಡು ಮಕ್ಕಳ ಬಟ್ಟೆಗಳ ಮೇಲೆ ಟಫ್, ಟ್ರಬಲ್, ಹೀರೋ, ವಾರಿಯರ್, ಟಫ್ ಗೈಸ್ ಡಾಂಟ್ ಟಾಕ್ ಎಂಬ ವಾಕ್ಯಗಳಿರುತ್ತವೆ. ಹೆಣ್ಣು ಮಕ್ಕಳಿಗೆ ಸೌಂದರ್ಯವೇ ಎಲ್ಲಾ ಎನ್ನುವಷ್ಟು ಈ ಬಟ್ಟೆಗಳು ಅವರ ತಲೆ ಕೆಡಿಸಿದರೆ, ಗಂಡು ಮಕ್ಕಳು ಅನವಶ್ಯಕ ಗಾಂಭೀರ್ಯಕ್ಕೆ ತುತ್ತಾಗಿಬಿಡುತ್ತಾರೆ. ಟೀಶರ್ಟ್ ಮೇಲಿರುವ ಬರಹಗಳು ಗಂಡು ಮಕ್ಕಳನ್ನು ಹೆಚ್ಚು ಅಗ್ರೆಸಿವ್ ಮಾಡಿದ್ರೆ ಹೆಣ್ಣುಮಕ್ಕಳನ್ನು ಹೊಮ್ಲಿಯಾಗಲು ಪ್ರೇರೇಪಿಸುತ್ತವೆ.
ಗಂಡು ಮತ್ತು ಹೆಣ್ಣು ಮಕ್ಕಳೊಡನೆ ಹಿರಿಯರು ಮಾತನಾಡುವಾಗ ಭಾಷೆ ಕೂಡ ಸೆಕ್ಸಿಸ್ಟ್ ಹಾಗು gendered ಆಗಿರುತ್ತೆ. ಗಂಡುಮಕ್ಕಳನ್ನು ಮಗ, ಹೈದ, buddy, guys, lad, son, fellow ಎಂಬ ಪದಗಳು ಬಳಕೆಯಾದರೆ ಹೆಣ್ಣು ಮಕ್ಕಳಿಗೆ Darling, queen, Goddess, pretty, cutie, honey, chick, sweety, babe, bitch, slut. ಭಾಷೆಯಲ್ಲಿ ಹೆಣ್ಣನ್ನು ವಿವರಿಸುವ ಪದಗಳಲ್ಲಿ ಪುರುಷ ಪ್ರಧಾನ ಸಮಾಜ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿ goddess ಅಥವಾ slut ಎನ್ನುವ ಪದಗಳನ್ನು ಮಾತ್ರ. ಹೀಗೆ ಬಳಸುವ ಆಡುಭಾಷೆಯ ಪದಗಳು ಗಂಡುಮಕ್ಕಳ ಟಫ್ ಎಂದು ಮರು ಖಾತರಿಪಡಿಸಿದರೆ ಹೆಣ್ಣು ಮಕ್ಕಳನ್ನು ಮತ್ತದೇ ಸೌಂದರ್ಯಕ್ಕೆ, ಶೀಲಕ್ಕೆ ಕಟ್ಟಿಹಾಕುತ್ತದೆ.
ನಾವು ಕಟ್ಟಿಕೊಂಡ ಸಮಾಜದಲ್ಲಿ ಅತ್ಯಂತ ಮುಗ್ಧವಾಗಿ ಮಾಡಲಾಗುವ ಕೆಲಸಗಳು, ವ್ಯಾಪಾರ, ಮಾತುಕತೆಗಳೆಲ್ಲವೂ ಘನಘೋರ ಸೆಕ್ಸಿಸ್ಟ್ expression ಗಳೇ ಆಗಿರುತ್ತವೆ. ಮಕ್ಕಳನ್ನ ನಾವು ನಿರಂತರವಾಗಿ ಸ್ಟೀರಿಯೋಟೈಪ್ ಮಾಡುತ್ತಲೇ ಇರುತ್ತೇವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ತರಗತಿಯ ಶಿಕ್ಷಕನ ಬೀಸು ಹೇಳಿಕೆಗಳು ಆಘಾತಕಾರಿ ಅನ್ನಿಸಲಿಲ್ಲ. “ನಾವು ಸೃಷ್ಟಿಸಿಕೊಂಡಿರುವ ಸಾಮಾಜಿಕ ಸನ್ನಿವೇಶಗಳು ಹೇಗಿವೆ ಎಂದರೆ, ಗಂಡು ಮತ್ತು ಹೆಣ್ಣು ಎಂಬುದು ಎರಡು ವಿಭಿನ್ನ ಸಂಸ್ಕೃತಿಗಳೇ ಆಗಿಹೋಗಿವೆ, ಅವರ ಜೀವನಾನುಭವಗಳು ಕೂಡ ಸಂಪೂರ್ಣ ಭಿನ್ನವಾದವು ಎನ್ನುವಂತಾಗಿದೆ” ಎನ್ನುತ್ತಾಳೆ ಕೇಟ್ ಮಿಲೆಟ್.
ಫ್ರಾನ್ಸ್‌ನ ಬಹುದೊಡ್ಡ ಚಿಂತಕ ಗುಸ್ತಾವ್ ಲೆ ಬಾನ್ (1895) “ಮಹಿಳೆಯರು ಮಾನವ ವಿಕಸನ ಕ್ರಿಯೆಯ ಅತ್ಯಂತ ಕೀಳು ರೂಪಗಳು. ಪುಟ್ಟ ಮಕ್ಕಳಿಗೆ, ಅನಾಗರಿಕರಿಗೆ ಅವರನ್ನು ಹೋಲಿಸಬಹುದೇ ಹೊರತು ನಾಗರಿಕ ಮತ್ತು ವಯಸ್ಕ ಗಂಡಿಗಲ್ಲ” ಎಂಬ ಹೇಳಿಕೆ ನೀಡಿದ್ದ. ಇಪ್ಪತ್ತನೇ ಶತಮಾನದ ಮಹಿಳಾ ಸಬಲೀಕರಣದ ಹೋರಾಟದ ಹೊರತಾಗಿಯೂ ಹೆಣ್ಣು ಮಕ್ಕಳ ಮೆದುಳು ಸಣ್ಣದಿರುತ್ತದೆ, ಅದು ಪೂರ್ಣವಾಗಿ ವಿಕಸನವಾಗಿಲ್ಲ, ಅದು ಕೀಳು, ನ್ಯೂನತೆಗಳಿಂದ ಕೂಡಿದೆ. ಹೆಣ್ಣು ಮಕ್ಕಳು ಭಾವನಾತ್ಮಕವಾಗಿ ಅಸ್ಥಿರರು, ಚಂಚಲೆಯರು, ವೈಜ್ಞಾನಿಕವಾಗಿ ಅಸಮರ್ಥರು, ದೈಹಿಕವಾಗಿ ದುರ್ಬಲರು ಅದರಿಂದಲೇ ಅವರಿಗೆ ದೊಡ್ಡ ಜವಾಬ್ದಾರಿಗಳನ್ನು, ಅಧಿಕಾರವನ್ನು, ಉನ್ನತ ಪಟ್ಟಗಳನ್ನು ನೀಡಬಾರದೆಂಬ ಪುರಾವೆ ಇಲ್ಲದ ನಂಬಿಕೆಗಳು ನಮ್ಮ ಪಿತೃಪ್ರಧಾನ ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿವೆ. ಶಾಲಾ ಶಿಕ್ಷಕನ ಬೀಸು ಹೇಳಿಕೆಗಳು ಇಂತಹ ನಂಬಿಕೆಗಳ ಪ್ರತಿಫಲನವಷ್ಟೇ.

ಇತ್ತೀಚಿನ ಬ್ರೇನ್ ಮ್ಯಾಪಿಂಗ್ ತಂತ್ರಜ್ಞಾನ ಈ ಎಲ್ಲಾ ನಂಬಿಕೆಗಳನ್ನು ಸುಳ್ಳೆಂದು ಸಾಬೀತು ಪಡಿಸುತ್ತಿದೆ. ನ್ಯೂರೋ ಸೈಂಟಿಸ್ಟ್‌ಗಳು ಮೆದುಳೊಳಗಿನ ಪಿಸುಮಾತುಗಳನ್ನು ರೆಕಾರ್ಡ್ ಮಾಡುವ ಹಂತಕ್ಕೆ ತಲುಪಿರುವುದರಿಂದ what our brain does with our world very much depends on what it finds in that world (Gina Rippon- The Gendered Brain) ಅನ್ನುವುದು ಖಾತ್ರಿಯಾಗಿದೆ. ಮೆದುಳಿನ ಟೊಂಗೆಗಳು ನಿರಂತರವಾಗಿ ಚಿಗುರೊಡೆಯುತ್ತವೆ, ಕವಲೊಡೆಯುತ್ತವೆ, ಮೆದುಳು ದೇವರು ಸೃಷ್ಟಿಸಿದ ಒಂದು ಫೈನಲ್ ಪ್ರಾಡಕ್ಟ್ ಅಲ್ಲ. ಅದು ಸತತವಾಗಿ ಬೆಳೆಯುವ, ಬದಲಾಗುವ ವಿಸ್ಮಯಕಾರಿ ಅಂಗವೆಂದು ಎಲ್ಲರೂ ಒಪ್ಪುವ ಕಾಲ ಬಂದಿದೆ. The relationship between a brain and its world is not a one-way street, but a constant two-way flow of traffic. (Gina Rippon)
Gender ಆಧಾರಿತ ಊಹೆಗಳಿಗೆ, ತರತಮಗಳಿಗೆ ಮದ್ದಾಗಿ Gender ನ್ಯೂಟ್ರಲ್ ಶಾಲೆಗಳನ್ನು ತೆರೆಯಬೇಕಾದ ತುರ್ತು ಈಗಿದೆ. Gender ನ್ಯೂಟ್ರಲ್ ವಾತಾವರಣವನ್ನು ಪೋಷಕರು, ಶಿಕ್ಷಕರು ಹೇಗೆ ಕ್ರಿಯೇಟ್ ಮಾಡಬಹುದು ಎಂಬುದರ ಕುರಿತು ತರಬೇತಿ, ಸಲಹೆ ನೀಡಬಲ್ಲ ಸಹಾಯ ಕೇಂದ್ರಗಳು ಎಲ್ಲೆಡೆ ಆರಂಭಿಸಬೇಕಿದೆ. ಎಲ್ಲಾ ತರತಮಗಳ ಬೇರು Gender Bias ನಲ್ಲಿದೆ, ಸಮಾಜದ toxicity ಇರುವುದೇ ಹೆಣ್ಣು ಗಂಡೆಂಬ ಭೇದಭಾವದಲ್ಲಿ. ಅದು ಮುಂದುವರೆದು ಜಾತಿ, ಧರ್ಮ, ವರ್ಣದ ಸ್ವರೂಪ ಪಡೆಯುತ್ತದೆ ಎಂಬುದು ನನ್ನ ನಂಬಿಕೆ. ಶಾಂತಿ, ಸಮಾನತೆ, ಭ್ರಾತೃತ್ವ ನಮ್ಮ ಗುರಿಯಾದರೆ ಜೆಂಡರ್ ನ್ಯೂಟ್ರಲ್ ಶಾಲೆಗಳು ಆ ಗುರಿ ಸಾಧನೆಯನ್ನು ಸುಲಭವಾಗಿಸುತ್ತವೆ. ಏಕೆಂದರೆ ಶಾಲೆಗೆ ಹೋಗುವ ಮಕ್ಕಳು tiny social sponges, quickly soaking up the cultural information from the world around them. (Gina Rippon)

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ