“ಕನ್ನಡನಾಡು ನನ್ನ ಪ್ರೀತಿಯ ನಾಡು” ಎಂದು ಇಡೀ ಜಗತ್ತಿಗೆ ಸಾರುತ್ತಾ ಬಂದ ಬಾನು ದಸರಾ ಉದ್ಘಾಟಿಸಿದರೆ ತಪ್ಪೇ!

Date:

Advertisements

ಮೊದಲು ಬಾನು ಮುಷ್ತಾಕರ ಕತೆಗಳನ್ನು ಓದಿ, ಏನನ್ನಿಸಿತು ಹೇಳಿ. ದಸರಾಗೆ ನೀವೇ ಅವರನ್ನು ಸ್ವಾಗತಿಸುತ್ತೀರಿ. ನೀವು ಒಪ್ಪಿ, ಬಿಡಿ; ಮನುಷ್ಯ ಇನ್ನೊಬ್ಬ ಮನುಷ್ಯನ ಮೇಲೆ, ಹೆಣ್ಣು ಮಕ್ಕಳ ಮೇಲೆ ನಡೆಸುವ ದೌರ್ಜನ್ಯವೇ ಅವರ ಇಡೀ ಕತೆಗಳ ಕಥಾನಕ. ಹಾಗಾಗಿಯೇ ದತ್ತಪೀಠದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದ ಪರಂಪರೆಯನ್ನು ಉಳಿಸಲು ಅವರು ಹಾತೊರೆದದ್ದು. ನಿಮಗೆ ಕನ್ನಡ ಸಾಹಿತ್ಯ ಪರಂಪರೆ ಹೇಗೆ ಇಷ್ಟೊಂದು ಮಾನವೀಯವಾಗಿ ಸ್ಪಂದಿಸಿದೆ ಎಂದು ನೋಡುವ, ಓದುವ, ಕೇಳುವ ವ್ಯವಧಾನವೇ ಇಲ್ಲ.

ರಾಜಕೀಯ ಹಿಂದುತ್ವವಾದ, ಮನುಷ್ಯ – ಮನುಷ್ಯನನ್ನು ಬೇರ್ಪಡಿಸುವುದರಲ್ಲೇ ಆಸಕ್ತಿ ತೋರುತ್ತದೆ. ಶರೀಫಜ್ಜ ಈ ಕನ್ನಡ ನಾಡಿಗೆ ಯಾವತ್ತೂ ಪರಧರ್ಮೀಯ ಎನಿಸಿಕೊಳ್ಳಲಿಲ್ಲ. ಏನೆಲ್ಲ ತತ್ವ ಕೊಟ್ಟ ಅಜ್ಜ! ಕನ್ನಡ ಸಾಹಿತ್ಯ ಪರಂಪರೆಯ ಜೀವಾಳವೇ ವಿಶ್ವಮಾನವತೆ. ಮನುಷ್ಯ ಜಾತಿ ತಾನೊಂದೆವಲಂ ಎಂದು ಪಂಪನಿಂದ ಹುಟ್ಟು ಪಡೆಯಿತೆಂದರೆ ಅದು ಈ ಮಣ್ಣೊಳಗೆ ಇತ್ತು. ಆ ಬೆರೆತ ತತ್ವವನ್ನು ಲೋಕಕ್ಕೆ ತೋರಿದರು. ಇನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಬಾಂಧವ್ಯ ಬೆಳಕಾಗಿ ಕನ್ನಡ ಲೋಕಕ್ಕೆ ಪಸರಿಸಿತು. ಇದು ಬಾನು ಲೋಕ. ಇದರೊಳಗೆ ಸೂಫಿಗಳು, ಹಿಂದೂಸ್ತಾನಿ ಗಾಯಕರು, ನಾಟ್ಯಶಾಸ್ತ್ರ ಎಲ್ಲಾ ಬೆರೆತಿದೆ. ಹಾಗಾಗಿ ಬಾನು ಚಿತ್ರಿಸುವ ಮುಸ್ಲಿಂ ಹೆಣ್ಣು ಮಕ್ಕಳ ಲೋಕ ನಮಗೂ ಕಲಕುತ್ತದೆ. ಅಲ್ಲಿ ಹಿಂದೂ, ಕ್ರಿಶ್ಚಿಯನ್ ಎನ್ನುವ ಭೇದವಿಲ್ಲ. ನಮ್ಮೆಲ್ಲರ ಮನೆಯ ಹೆಣ್ಣುಮಕ್ಕಳ ನೋವೇ ಆಗಿರುತ್ತದೆ. ಹಾಗಾಗಿ ಕನ್ನಡ ಸಾಹಿತ್ಯಕ್ಕೂ ನಮಗೂ ಭೇದವೆಣಿಸದಿರಿ. ನಮ್ಮ ಲೋಕ ಬಾಂಧವ್ಯದ ಲೋಕ. ಅಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ಕಥನವನ್ನು ಒಬ್ಬರಿಗೊಬ್ಬರು ಸಾಹಿತ್ಯದ ಮೂಲಕ ಹಂಚಿಕೊಳ್ಳುತ್ತೇವೆ. ಅದಕ್ಕೆ ನಮ್ಮಂಥವರು ಯಾವುದೇ ಧರ್ಮದ, ಯಾವುದೇ ಜಾತಿಯ, ಹೆಣ್ಣುಮಕ್ಕಳ ಭೇದ ಕಾಣದೆ ಇರುವ ವಿಶ್ವಮಾನವತೆಯನ್ನು, ಕುವೆಂಪುವನ್ನು ಪ್ರೀತಿಸುವುದು.

ನನಗೆ ತಮ್ಮ ಅಲೆಮಾರಿಗಳ ನೋವಿನ ಲೋಕವನ್ನು ತೋರಲು ಹಂದಿಜೋಗಿ ಸಮುದಾಯದ ಸ್ನೇಹಿತರು, ಆ ಲೋಕಕ್ಕೆ ಪರಿಚಯಿಸುತ್ತಾರೆ. ಕ್ರಿಶ್ಚಿಯನ್ ಒಬ್ಬ ನಮ್ಮ ನೋವಿನ ಲೋಕಕ್ಕೆ ಸ್ಪಂದಿಸಲು ಬಂದಿದ್ದಾರೆ ಅನ್ನುತ್ತಾರೆ. ಮಾತನಾಡಲು ಹೇಳುತ್ತಾರೆ. ನನಗೆ ಅನಿಸುತ್ತೆ ಹಸಿದ್ದ ಪುಟ್ಟಮಗು ಅಪ್ಪನಿಗೆ ಏನಾದರೂ ತಿನ್ನಿಸಲು ಕೇಳುತ್ತಿರುತ್ತೆ. ಅಪ್ಪ ಜೋಬಿಂದ ಹತ್ತಿಪ್ಪತ್ತು ರೂಪಾಯಿಯ ನೋಟನ್ನು ತೆಗೆದು ನೋಡುತ್ತಾನೆ, ಜೇಬಿಗೆ ಹಾಕುತ್ತಾನೆ. ಮಗಳ ಹಠ ಹೆಚ್ಚುತ್ತಾ ಹೋಗುತ್ತದೆ. ನಾನು ಸುಮ್ಮನೆ ಹೇಗೆ ಇರಲಿ? ಮಗು ಬಯಸಿದ್ದಕ್ಕಿಂತಲೂ ಹೆಚ್ಚು ಕೊಡಿಸಿದೆ. ಅದರ ಹೊಟ್ಟೆ ತಣಿಯಿತು. ನನ್ನಿಂದ ಇಷ್ಟೆ ಆಗಬಹುದಿತ್ತೇನೋ. ಅಲೆಮಾರಿಗಳ ದುಃಖ ನಿವಾರಣೆಗೆ, ಬುದ್ದನ ದುಃಖ ನಿವಾರಣೆ ನಿಜ ಮಾಡಲು ಈ ಮನುಷ್ಯ ಸಮುದಾಯವೇ ಸ್ಪಂದಿಸಬೇಕಿದೆ. ನಾವು ಒಂದು ರೂಪಾಯಿಯ ಹಾಗೆ ಒಂದು ಲಕ್ಷ ಜನ ಕೊಟ್ಟರೂ ಎರಡು ದಿನ ಊಟ ಅಲೆಮಾರಿಗಳ ಪ್ರತಿಭಟನೆಗೆ ಬಂದವರಿಗೆ ಆಗುತ್ತೆ. ಇದಕ್ಕೆ ನೀವೇ ಚಾಲನೆ ಕೊಡಿ ಅಂದರೆ ಬಾನು ಮುಷ್ತಾಕ್ ಅವರು ಸ್ಪಂದಿಸದೆ ಇರುತ್ತಾರೆಯೇ? ಎಲ್ಲಾ ಧರ್ಮದ, ಜಾತಿಯ ಜನರು ಸ್ಪಂದಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅವರಿಗೆ ಒಂದು ಪರ್ಸೆಂಟ್ ಮೀಸಲಾತಿ ಕೊಡಲೇಬೇಕು ಅಂತ ಹಠ ಹಿಡಿದಿದ್ದೇವೆ.

Advertisements

ಈ ಲೋಕದ ಒಬ್ಬ ಪ್ರತಿನಿಧಿ ಬಾನು ಮುಷ್ತಾಕ್ ಕೂಡ ಎಂಬುದು ಗೊತ್ತಿದೆ. ಮೊದಲು ಬಾನು ಮುಷ್ತಾಕರ ಕತೆಗಳನ್ನು ಓದಿ. ಏನನ್ನಿಸಿತು ಹೇಳಿ. ದಸರಾಗೆ ನೀವೇ ಅವರನ್ನು ಸ್ವಾಗತಿಸುತ್ತೀರ. ನೀವು ಒಪ್ಪಿ ಬಿಡಿ, ಮನುಷ್ಯ ಇನ್ನೊಬ್ಬ ಮನುಷ್ಯನ ಮೇಲೆ, ಹೆಣ್ಣು ಮಕ್ಕಳ ಮೇಲೆ ನಡೆಸುವ ದೌರ್ಜನ್ಯವೇ ಅವರ ಇಡೀ ಕತೆಗಳ ಕಥಾನಕ. ಹಾಗಾಗಿ ದತ್ತಪೀಠದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದ ಪರಂಪರೆಯನ್ನು ಉಳಿಸಲು ಅವರು ಹಾತೊರೆದದ್ದು. ನಿಮಗೆ ಕನ್ನಡ ಸಾಹಿತ್ಯ ಪರಂಪರೆ ಹೇಗೆ ಇಷ್ಟೊಂದು ಮಾನವೀಯವಾಗಿ ಸ್ಪಂದಿಸಿದೆ ಎಂದು ನೋಡುವ, ಓದುವ, ಕೇಳುವ ವ್ಯವಧಾನವೇ ಇಲ್ಲ.

ಇಲ್ಲಿ ಚಿತ್ರಕಾರರು, ಪಾತ್ರೆ ಅಂಗಡಿ ನಡೆಸುವವರು, ಸಾಹಿತಿಗಳು, ಕಾರ್ಪೆಂಟರ್ ಗಳು, ಸುಡುಗಾಡು ಸಿದ್ದರು, ಹಂದಿಜೋಗಿಗಳು ಎಲ್ಲರೂ ಇದ್ದಾರೆ. ಶಿವಶಿವೆಯರು ಇದ್ದಾರೆ. ಬುದ್ದ, ಅಂಬೇಡ್ಕರ್, ಲೋಹಿಯಾ ಮುಂತಾದವರು ನಮ್ಮ ಚೆಗುವೆರಾನ ಸಾಥಿಗಳು ಇದ್ದಾರೆ. ನಮಗೂ ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್, ವಿವೇಕಾನಂದರ ಮೇಲೆ ಎಲ್ಲಿಲ್ಲದ ಪ್ರೀತಿ. ಗಾಂಧಿ- ಅಂಬೇಡ್ಕರ್ ಇಬ್ಬರೂ ಜೊತೆಗೂಡಿದರೆ ಈ ಲೋಕದ ದುಃಖ ನಿವಾರಣೆ ವೇಗಗತಿಯಲ್ಲಿ ಆಗುತ್ತಾ ಅಂತ ನೋಡಿ ಬೆಸೆಯುತ್ತೇವೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದ ಸಾಹಿತ್ಯ ಲೋಕ ಬಾನು ಮೇಡಂಗೆ ಬೂಕರ್ ಪ್ರಶಸ್ತಿ ಕೊಟ್ಟದ್ದು. ಆ ಪ್ರಬುದ್ಧತೆ ಬೆಳೆಸಿಕೊಳ್ಳಲು ನೀವು ಯಾಗವನ್ನು ಮಾಡಬೇಕಿಲ್ಲ. ಕನ್ನಡ ಸಾಹಿತ್ಯ, ಕುವೆಂಪು, ಬೇಂದ್ರೆ, ದೇವನೂರ ಮಹಾದೇವ, ಬೋಳುವಾರು ಮಹಮದ್ ಕುಂಞಿ, ನಾ ಡಿಸೋಜಾ ಅಂಥವರ ಸಾಹಿತ್ಯ ಓದಬೇಕು. ಇವೆಲ್ಲ ನಮಗೆ ವಚನ ಚಳವಳಿ ಕಲಿಸಿದ್ದು. ನೀವು ಕಲಿತುಕೊಳ್ಳಿ, ಆಗ ಉದ್ವೇಗಗೊಳ್ಳದೆ ಸಹಜವಾಗಿ ಇರ್ತಿರ.

ಮುಷ್ತಾಕ್

ಭಿನ್ನ ಆಹಾರ, ಭಿನ್ನ ಉಡುಗೆ, ಭಿನ್ನ ಮದುವೆ, ಭಿನ್ನ ಸಂಗೀತವನ್ನು‌ ನೋಡಿ. ಚಲನೆ ಇಲ್ಲದಿದ್ದರೆ ಕೊಳೆತು ನಾರುತ್ತೀರಿ. ಎಲ್ಲೋ ಉತ್ತರದ ಬೆಲ್ಜಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯವಾದಾಗ ಇದೇ ಪಂಥ ಬೀದಿನಾಟಕದಲ್ಲಿ ಗೆಜ್ಜೆಕಟ್ಟಿ ಪ್ರತಿಭಟಿಸಿತು. ಇದು ಈ ಲೋಕದ ಸುವ್ವಿ ಬಾ ಕಲ್ಯಾಣದ ಮಾರ್ಗ. ಬಾನು ಮುಷ್ತಾಕರ ಕಥಾಲೋಕದಲ್ಲಿ ಸಂಪ್ರದಾಯವನ್ನು ಮೀರಲೂ ಆಗದೆ, ಬೇರೆ ಧರ್ಮದ ಹುಡುಗನನ್ನು ಮದುವೆಯಾಗಲೂ ಆಗದೆ ತೊಳಲಾಡುತ್ತಾಳೆ. ಅಂಥ ಹೆಣ್ಣು ಮಕ್ಕಳು ಅಲೆಮಾರಿ ಲೋಕದಲ್ಲಿಯೂ ಇದ್ದಾರೆ. ಹಿಂದೂ ಲೋಕದಲ್ಲಿಯೂ ಇದ್ದಾರೆ, ಕ್ರಿಶ್ಚಿಯನ್, ಮುಸ್ಲಿಂ ಎಲ್ಲಾ ಲೋಕದಲ್ಲೂ ಇದ್ದಾರೆ.

ಇದನ್ನೂ ಓದಿ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಪೋಸ್ಟ್; ಇಬ್ಬರ ಮೇಲೆ ಎಫ್‌ಐಆರ್‌

ಭಾರತೀಯ ತತ್ವ ಮೀಮಾಂಸೆಯೊಳಗೆ ಅಣುವೆಂಬ ಸೂಕ್ಷ್ಮ ಲೋಕದ ಬಗ್ಗೆ ಮಾತಾಡುವ ಕಣಾದ ಎಂಬ ಋಷಿಯೂ ಇದ್ದಾನೆ. ಸಂಗೀತ ಲೋಕದ ವಿದ್ವತ್ತರಿಗೆ ಬೃಹದ್ದೇಸಿಯ ಬಗ್ಗೆ ಮಾತಾಡಿದ ಮಾತಂಗ ಬುದ್ದರು ಇದ್ದಾರೆ. ದಯಮಾಡಿ ಅರ್ಥಮಾಡಿಕೊಳ್ಳಿ. ಇಲ್ಲದಿದ್ದರೆ ನಮ್ಮ ಬಂಡಾಯದ ಕಹಳೆ ನಿಮ್ಮನ್ನು ಕೂಗಿ ಎಚ್ಚರಿಸುತ್ತದೆ. ಕಲ್ಬುರ್ಗಿ, ಗೌರಿಯಂತಹ ಕರುಳಿನ ಕಿಡಿಗಳು ಇಂತಹ ಬಂಡಾಯಕ್ಕೆ ಗುಂಡು ತೂರಿದರೂ ಪರ್ವಾಗಿಲ್ಲ ಅಂತ ಎದೆವೊಡ್ಡಿದವರು. ಹಾಗಾಗಿ ನಮಗೆ ಹೆದರಿಕೆ ಎಂಬುದಿಲ್ಲ. ಜಗತ್ತಿನ ಕಾಟಂ ವಿಜ್ಞಾನವೇ ಇಡೀ ಲೋಕ ಸಮಸ್ತವೂ ಒಂದಕ್ಕೊಂದರ ಸಂಬಂಧದಲ್ಲಿದೆ ಎಂದು ಹೇಳುತ್ತೆ. ಈ ಧರ್ಮ ಹೇಳುವ ಮುತ್ತಿನ ನುಡಿ ಕೇಳಿ. ‘ಕಾರುಣ್ಯ ಭಿಕ್ಷಾ ಧಮ್ಮ ಗುರುವೇʼ ಅಂತ. ಕರುಣೆಯೇ ಧರ್ಮ ಇಲ್ಲಿ. ಅಂತ ಪರಂಪರೆಯಷ್ಟೆ ಸಾಹಿತ್ಯ ಲೋಕದಲ್ಲಿ ಉಳಿಯಬಲ್ಲುದು. ಬಾಬ್ ಮಾರ್ಲೆಯಂಥ ಸಂಗೀತ ಮಾಂತ್ರಿಕ ಕಲಾ ಜಗತ್ತನ್ನು ಒನ್ ಲವ್ ಮೂಲಕ ಹೇಳುತ್ತಾನೆ. ಅದು ಇಡೀ ಲೋಕವನ್ನೆ ಪ್ರೀತಿಯಲ್ಲಿ ಬೆಸೆಯುತ್ತೆ ಅನ್ನುತ್ತಾನೆ.

ಇದನ್ನೂ ಓದಿ ಭೂಮ್ತಾಯಿ | ಪರಿಸರ ಕಾನೂನುಗಳಿಗೆ ಮೃತ್ಯುಪಾಶವಾಗುತ್ತಿರುವ ಅಭಿವೃದ್ಧಿಯ ಪ್ರಸ್ತಾಪಗಳು

ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಮುಸ್ಲಿಮರನ್ನೂ ನಮ್ಮಂತೆಯೇ ಕಂಡು ಗೌರವಿಸುವವರು ಅಂತ ದಸರಾಗೆ ಆಹ್ವಾನಿಸಿದ್ದೇವೆ. ಇದು ಕನ್ನಡನಾಡಿಗೆ ಹೆಮ್ಮೆ ಅಲ್ವ? ಇದೆಲ್ಲ ನಿಮಗೆ ಯಾಕೆ ಅರ್ಥ ಆಗಲ್ಲ? ನೀವು ನಿಮ್ಮ ಮನೆಯ ಮಕ್ಕಳ ಜೊತೆ ಬೆರೆಯಿರಿ. ಅವರಿಗೆ ಆಟವಾಡಲು ಆ ಧರ್ಮ, ಈ ಧರ್ಮ ಅಂತ ಇರಲ್ಲ. ಆ ಮಕ್ಕಳ ತಾಯಿಯಂಥವರು ಬಾನು ಮುಷ್ತಾಕ್. ಇಡೀ ಜಗತ್ತಿಗೆ ಕನ್ನಡನಾಡು ನನ್ನ ಪ್ರೀತಿಯ ನಾಡು ಎಂದು ಸಾರುತ್ತಾ ಬಂದರಲ್ರಿ! ಅವರು ಕನ್ನಡ ನಾಡಿನ ಹೆಮ್ಮೆ. ನಾಳೆ ಕನ್ನಡದ ಮನಸ್ಸುಗಳು, ರೈತ, ದಲಿತ, ಸಾಹಿತಿ, ಆ ಧರ್ಮ ಈ ಧರ್ಮ ಎನ್ನದೆ ನಿಮ್ಮ ವಿರುದ್ದ ಪ್ರತಿಭಟಿಸುತ್ತದೆ. ನೀವು ತತ್ವಪದಕಾರರ ಲೋಕ ನೋಡದಿದ್ದರೆ ಏನೂ ಗೊತ್ತಾಗುವುದಿಲ್ಲ. ಅಂಥ ಸಂಸ್ಕೃತಿ ಕಥನಗಳನ್ನು ಮಥಿಸುವ ಲೋಕ ನಮ್ಮದು. ಹಾಗಾಗಿ ಬಾನು ಮೇಡಂಗೆ ನಮ್ಮೆಲ್ಲ ಸಾಹಿತ್ಯ ಲೋಕದ ಪ್ರೀತಿಯ ಆಹ್ವಾನ; ಹೃದಯ ತುಂಬಿ ಕೊಡ್ತೀವಿ. ಅವರು ದಸರಾ ಉದ್ಘಾಟಿಸಬೇಕು. ಬಂಡಾಯ ಎಂದರೆ ದುಃಖ ನಿವಾರಣೆಯೇ ಅಂತ ಹೇಳಬೇಕು ಅನಿಸುತ್ತೆ. ಅವರು ಏನೇ ಮಾತಾಡಿದರೂ ತಾಯಿ ಚಾಮುಂಡಿ ನುಡಿದಂತೆ. ಅದು ಕನ್ನಡ ನಾಡಿನ ಮೂಲಕ ಇಡೀ ಮನುಷ್ಯ ಲೋಕವನ್ನೆ ಬೆಸೆಯುತ್ತೆ.

ಅಪೂರ್ವ ಡಿಸಿಲ್ವ
ಅಪೂರ್ವ ಡಿಸಿಲ್ವ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X