ಪೂರ್ಣ ಕುಂಭ ಮೇಳಕ್ಕೆ ಲಿಂಗಾಯತರಿಗೆ ವಿಶೇಷ ಆಹ್ವಾನ: ಯೋಗಿ ಆದಿತ್ಯನಾಥ್ ಸಲಹೆಗೆ ಆರೆಸ್ಸೆಸ್ ಸಮ್ಮತಿ

Date:

Advertisements

ಲಿಂಗಾಯತರು ಮತ್ತು ಇತರೆ ಸಮುದಾಯಗಳನ್ನು ಕುಂಭಮೇಳಕ್ಕೆ ಆಹ್ವಾನಿಸುವ ಆದಿತ್ಯನಾಥರ ಸಲಹೆಯನ್ನು ಆರೆಸ್ಸೆಸ್ ಒಪ್ಪಿಕೊಂಡಿತು. ಕರ್ನಾಟಕದ ಲಿಂಗಾಯತರು, ಮಹಾರಾಷ್ಟ್ರದ ಕಾರ್ವಿಗಳು ಹಾಗೂ ಕೇರಳದ ಕೆಲ ಸಮುದಾಯಗಳು ಕುಂಭಮೇಳದಿಂದ ದೂರ ಉಳಿದಿರುವುದು ಹೌದು. ಈ ದಿಕ್ಕಿನಲ್ಲಿ ಆರೆಸ್ಸೆಸ್ ಕೂಡ ಕಾರ್ಯನಿರತವಾಗಿದೆ. ಈ ಸಮುದಾಯಗಳನ್ನು ಕುಂಭಮೇಳದ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನಗಳು ಈ ಹಿಂದೆ ನಡೆದಿಲ್ಲ. ಸ್ವಾಮಿನಾರಾಯಣ ಪಂಥ ಕೂಡ ಈ ಹಿಂದೆ ಕುಂಭ ಮೇಳದಿಂದ ದೂರ ಉಳಿದಿತ್ತು.

ಮುಂದಿನ ವರ್ಷ ಪ್ರಯಾಗರಾಜದಲ್ಲಿ (ಅಲಹಾಬಾದ್) ನಡೆಯಲಿರುವ ಕುಂಭಮೇಳಕ್ಕೆ ಕರ್ನಾಟಕದ ಲಿಂಗಾಯತರಿಗೆ ವಿಶೇಷ ಆಹ್ವಾನ ನೀಡಲು ಆರೆಸ್ಸೆಸ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀರ್ಮಾನಿಸಿದ್ದಾರೆ.
2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ ಈ ಮೇಳ ನಡೆಯಲಿದೆ.

ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಅದ್ದೂರಿ ಹಿಂದೂ ಧಾರ್ಮಿಕ ಉತ್ಸವ ಕುಂಭಮೇಳದಲ್ಲಿ ಕರ್ನಾಟಕದ ಲಿಂಗಾಯತರೂ ಸೇರಿದಂತೆ ಹಿಂದೂ ಸಮಾಜ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಆರೆಸ್ಸೆಸ್‌ನ ನೆರವು ಕೋರಿದ್ದಾರೆ ಆದಿತ್ಯನಾಥ್.

Advertisements

ಲಿಂಗಾಯತರಂತಹ ಹಲವು ಸಮುದಾಯಗಳು ಕುಂಭಮೇಳದಿಂದ ದೂರ ಉಳಿದಿವೆ ಇಲ್ಲವೇ ಅವರನ್ನು ಯಾವೊತ್ತೂ ಆಹ್ವಾನಿಸಲಾಗಿಲ್ಲ. ಈ ಸಮುದಾಯಗಳನ್ನು ಹತ್ತಿರ ಕರೆದುಕೊಂಡು ಜೊತೆಗೆ ಒಯ್ಯುವುದು ಬಹುಮುಖ್ಯ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆರೆಸ್ಸೆಸ್ ಜೊತೆ ಸಮಾಲೋಚಿಸಿದ್ದಾರೆಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಆರೆಸ್ಸೆಸ್‌ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿಯ ಎರಡು ದಿನಗಳ ಸಭೆ ಇತ್ತೀಚೆಗೆ ಮಥುರಾದಲ್ಲಿ ಮುಕ್ತಾಯಗೊಂಡಿತು. ಮುಖ್ಯಮಂತ್ರಿ ಆದಿತ್ಯನಾಥ್ ಅವರು ಎರಡು ತಾಸುಗಳಿಗೂ ಹೆಚ್ಚು ಕಾಲ ಈ ಸಭೆಯ ನಂತರ ಆರೆಸ್ಸೆಸ್‌ನ ಉನ್ನತ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಈ ಭೇಟಿಯಲ್ಲಿ ಮುಚ್ಚಿದ ಕದಗಳ ಹಿಂದಿನ ಚರ್ಚೆ, ಸಹಭೋಜನವೂ ಸೇರಿತ್ತು.


ಆರೆಸ್ಸೆಸ್ ಸಭೆಗೆ ಆ ರಾಜ್ಯದ ಬಿಜೆಪಿ ಮುಖ್ಯಮಂತ್ರಿಯೊಬ್ಬರು ಹಾಜರಾಗುವುದು ಅಪರೂಪವೇನೂ ಅಲ್ಲ. ಇತ್ತೀಚೆಗೆ ಉತ್ತರಪ್ರದೇಶ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಕಳಪೆ ಪ್ರದರ್ಶನದ ನಂತರ ಮತ್ತು ಸದ್ಯದಲ್ಲೇ ನಡೆಯಲಿರುವ ಒಂಬತ್ತು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯ ಮುನ್ನ ಆದಿತ್ಯನಾಥ್ ಮತ್ತು ಆರೆಸ್ಸೆಸ್ ಉನ್ನತ ನಾಯಕರ ನಡುವಣ ಈ ಮಾತುಕತೆ ಕುತೂಹಲ ಮೂಡಿಸಿದೆ.

ಲಿಂಗಾಯತರು ಮತ್ತು ಇತರೆ ಸಮುದಾಯಗಳನ್ನು ಕುಂಭಮೇಳಕ್ಕೆ ಆಹ್ವಾನಿಸುವ ಆದಿತ್ಯನಾಥರ ಸಲಹೆಯನ್ನು ಆರೆಸ್ಸೆಸ್ ಒಪ್ಪಿಕೊಂಡಿತು. ಕರ್ನಾಟಕದ ಲಿಂಗಾಯತರು, ಮಹಾರಾಷ್ಟ್ರದ ಕಾರ್ವಿಗಳು ಹಾಗೂ ಕೇರಳದ ಕೆಲ ಸಮುದಾಯಗಳು ಕುಂಭಮೇಳದಿಂದ ದೂರ ಉಳಿದಿರುವುದು ಹೌದು. ಈ ದಿಕ್ಕಿನಲ್ಲಿ ಆರೆಸ್ಸೆಸ್ ಕೂಡ ಕಾರ್ಯನಿರತವಾಗಿದೆ. ಈ ಸಮುದಾಯಗಳನ್ನು ಕುಂಭಮೇಳದ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನಗಳು ಈ ಹಿಂದೆ ನಡೆದಿಲ್ಲ. ಸ್ವಾಮಿನಾರಾಯಣ ಪಂಥ ಕೂಡ ಈ ಹಿಂದೆ ಕುಂಭ ಮೇಳದಿಂದ ದೂರ ಉಳಿದಿತ್ತು. ಅವರನ್ನು ಕಳೆದ ಕುಂಭಕ್ಕೆ ಕರೆದು ಸೇರಿಸಿಕೊಳ್ಳಲಾಯಿತು. ಸಂಘದ ಉನ್ನತ ನಾಯಕರೊಂದಿಗೆ ಆದಿತ್ಯನಾಥ್ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಅವರ ಸಲಹೆ ಆರೆಸ್ಸೆಸ್‌ಗೆ ಸಮ್ಮತವಿದೆ ಎಂದು ಸಂಘದ ಹಿರಿಯ ಹುದ್ದರಿಯೊಬ್ಬರು ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಬಾತ್ಮೀದಾರ ದೀಪ್ತಿಮಾನ್ ತಿವಾರಿ ಅವರಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸ್ವತಂತ್ರ ಮೀಡಿಯಾದ ಬಾಯಿ ಬಡಿಯಲು ಕರಾಳ ಕಾಯಿದೆಗಳ ದುರುಪಯೋಗ: WAN- INFRA ಕಳವಳ

ಲಿಂಗಾಯತರು, ಕಾರ್ವಿಗಳು ಹಾಗೂ ಕೇರಳದ ಕೆಲ ವರ್ಗಗಳನ್ನು ಕರೆತರಲು ಆರೆಸ್ಸೆಸ್ ಪ್ರಯತ್ನಿಸಿದರೆ ಅದಕ್ಕೆ ತಮ್ಮ ರಾಜ್ಯ ಸರ್ಕಾರದ ಆಡಳಿತಾತ್ಮಕ ನೆರವನ್ನು ನೀಡುವುದಾಗಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ.

ಉತ್ತರಪ್ರದೇಶದ ಆಚೆಗೂ ತಮ್ಮ ನಾಯಕತ್ವದ ವರ್ಚಸ್ಸನ್ನು ಬೆಳೆಸಿಕೊಂಡು ರಾಷ್ಟ್ರಮಟ್ಟಕ್ಕೆ ವ್ಯಾಪಿಸುವುದು ಯೋಗಿಯವರ ಇರಾದೆಯಿದು ಎನ್ನಲಾಗಿದೆ. ಈಗಾಗಲೆ ಅವರು ಉತ್ತರಪ್ರದೇಶದ ಆಚೆಗೂ ಬಿಜೆಪಿ ಪ್ರಚಾರಸಭೆಗಳನ್ನು ಉದ್ದೇಶಿಸಿ ಮಾಡುವ ಮುಖ್ಯ ಹಿಂದುತ್ವ ಚಹರೆಗಳಲ್ಲಿ ಒಬ್ಬರಾಗಿದ್ದಾರೆ.

ಆರೆಸ್ಸೆಸ್ ಜೊತೆಗೆ ನಿಕಟ ಸಂಬಂಧ ಹೊಂದಿರುವ ಆದಿತ್ಯನಾಥ್ ಉದ್ದೇಶವನ್ನೂ ಈ ಭೇಟಿ ಸೂಚಿಸಿದೆ. ಆರೆಸ್ಸೆಸ್‌ಗೆ ನೂರು ವರ್ಷಗಳು ತುಂಬುತ್ತಿರುವ ಈ ಹಂತದಲ್ಲಿ ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ ಮುಂತಾದ ಸಂಘದ ಐದು ಪ್ರತಿಜ್ಞೆಗಳ (ಪಂಚ ಪ್ರಣ) ಪ್ರಚಾರಕ್ಕೂ ಕುಂಭಮೇಳದ ವೇದಿಕೆಯನ್ನು ಬಳಸಿಕೊಳ್ಳಬೇಕೆಂದು ಆದಿತ್ಯನಾಥ್ ಸಲಹೆ ನೀಡಿದರೆಂದು ಗೊತ್ತಾಗಿದೆ.

ಆದಿತ್ಯನಾಥರ ಮೂಲ ಹಿಂದೂ ಮಹಾಸಭಾದ ಸೈದ್ಧಾಂತಿಕ ಪರಂಪರೆ. ಕಾಲೇಜು ವಿದ್ಯಾಭ್ಯಾಸದಲ್ಲಿ ಕೆಲ ಕಾಲ ಎಬಿವಿಪಿಯೊಂದಿಗೆ ಸಂಬಂಧ ಹೊಂದಿದ್ದರು. ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ಏರಿರುವುದು ಆರೆಸ್ಸೆಸ್ ಸಂಸ್ಥೆಯಲ್ಲಿ ಬೆಳೆದ ಕಾರಣಕ್ಕೆ ಅಲ್ಲ. ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಸೈದ್ಧಾಂತಿಕ ಮೂಲ ಒಂದೇ ಆದರೂ ಪಾರಂಪರಿಕವಾಗಿ ಹಲವು ಭಿನ್ನತೆಗಳನ್ನು ಹೊಂದಿವೆ.

1990ರ ದಶಕದ ‘ರಾಮಮಂದಿರ ಆಂದೋಲನ’ದ ಸಂದರ್ಭದಲ್ಲಿ ಆದಿತ್ಯನಾಥರು ಆರೆಸ್ಸೆಸ್ ಅಂಗ ಸಂಸ್ಥೆ ವಿಶ್ವಹಿಂದು ಪರಿಷತ್ತಿನೊಂದಿಗೆ ಸಂಯೋಜಕರಾಗಿ ಕೆಲಸ ಮಾಡಿದ್ದುಂಟು. ಗೋರಖಪುರದ ಗೋರಖನಾಥ ಪೀಠದ ಮುಖ್ಯಸ್ಥರಾಗಿ ರಾಮಮಂದಿರ ಆಂದೋಲನದಲ್ಲಿ ಕೈ ಕಲೆಸಿದ್ದರು. ಅವರು ಹುಟ್ಟಿ ಹಾಕಿ ಬೆಳೆಸಿದ್ದ ಹಿಂದೂ ಯುವವಾಹಿನಿಯನ್ನು ಮುಖ್ಯಮಂತ್ರಿಯಾದ ನಂತರ ವಿಸರ್ಜಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಬುಲ್ಡೋಝರ್ ಗಳು ಮತ್ತು ಎನ್ಕೌಂಟರುಗಳ ಮೂಲಕ ಕಾನೂನನ್ನು ‘ಬಿಗಿಯಾಗಿ’ ಜಾರಿ ಮಾಡಿರುವ ಅವರ ನಿರ್ಣಯಾತ್ಮಕ ಕ್ರಮಗಳು ಆರೆಸ್ಸೆಸ್‌ಗೆ ಮೆಚ್ಚುಗೆಯಾಗಿವೆ. ಉತ್ತರಪ್ರದೇಶವು ಹಿಂದುತ್ವ ಪ್ರಾಜೆಕ್ಟುಗಳ ಬಹುಮುಖ್ಯ ಪ್ರಯೋಗಶಾಲೆಯಾಗಿದ್ದು, ಮುಖ್ಯಮಂತ್ರಿಯವರ ಕ್ರಿಯೆಗಳು ಆರೆಸ್ಸೆಸ್ ಗುರಿಗಳೊಂದಿಗೆ ಯಶಸ್ವಿಯಾಗಿ ಹೆಣೆದುಕೊಂಡಿವೆ. ಹೀಗಾಗಿ ಆದಿತ್ಯನಾಥರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು ಮುಖ್ಯವಾದದ್ದು ಎಂಬುದು ಆರೆಸ್ಸೆಸ್ ನ ಹಿರಿಯ ನಾಯಕರ ನಂಬಿಕೆ.

ಯೋಗಿ ಅವರನ್ನು ‘ಭವಿಷ್ಯತ್ತು’ ಎಂದು ಬಣ್ಣಿಸಿರುವ ಆರೆಸ್ಸೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದು- ಯೋಗೀಜಿ ಸಂಘದಿಂದ ಬಂದವರೇನೂ ಅಲ್ಲ, ನಮ್ಮ ಸಿದ್ಧಾಂತವನ್ನು ಒಪ್ಪಿಕೊಳ್ಳುವವರೆಲ್ಲ ನಮ್ಮವರೇ, ರಾಮಮಂದಿರ ಆಂದೋಲನದ ನಿಕಟ ಒಡನಾಡಿ ಯೋಗೀಜಿ. ಅವರು ಹಿಂದುತ್ವದ ದೊಡ್ಡ ಚಹರೆಯೆಂದು ಇಡೀ ದೇಶ ಒಪ್ಪಿಕೊಂಡಿದೆ. ಹಿಂದುತ್ವದ ಸಿದ್ಧಾಂತದ ಭವಿಷ್ಯತ್ತನ್ನು ಅವರಲ್ಲಿ ಕಂಡಿದೆ ಆರೆಸ್ಸೆಸ್ಸು. ಸಮಾಜದ ತೀರ್ಪನ್ನು ಪ್ರಶ್ನಿಸಲು ನಾವ್ಯಾರು? ಸಂಘವು ಸಂಘಟನಾತ್ಮಕ ಬಲವನ್ನು ಪ್ರತಿನಿಧಿಸಿದರೆ ಮುಖ್ಯಮಂತ್ರಿಯವರು ತಮ್ಮ ವರ್ಚಸ್ವೀ ರಾಜಕೀಯ ನಾಯಕತ್ವದ ಮೂಲಕ ಈ ಬಲಕ್ಕೆ ಪೂರಕವಾಗಿದ್ದಾರೆಂದು ಆರೆಸ್ಸೆಸ್ ಮೂಲಗಳು ಹೇಳಿವೆ.

ಆದಿತ್ಯನಾಥರು ಚಾಲ್ತಿಗೆ ತಂದಿರುವ ‘ಬಟೇಂಗೇ ತೊ ಕಟೇಂಗೇ’ (ಒಗ್ಗಟ್ಟಾಗದೆ ಚೆದುರಿ ಹೋದರೆ ನಮ್ಮನ್ನು ಕತ್ತರಿಸಿ ಹಾಕುವುದು ಸುಲಭ) ಎಂಬ ಘೋಷಣೆಯನ್ನು ಆರೆಸ್ಸೆಸ್‌ನ ಪ್ರಧಾನ ಕಾರ್ಯರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಮಥುರಾ ಸಭೆಯಲ್ಲಿ ಮಾತನಾಡುವಾಗ ಬಳಸಿದ್ದು ಗಮನಾರ್ಹ.

ಆದಿತ್ಯನಾಥರು ಆರೆಸ್ಸೆಸ್‌ನ ಉನ್ನತ ನಾಯಕರನ್ನು ಭೇಟಿ ಮಾಡಿ ಮಾತಾಡಿದ ಕುರಿತು ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದು- “ಮುಖ್ಯವಾಗಿ ಅವರು ಕುಂಭಮೇಳ ಕುರಿತು ಚರ್ಚಿಸಿದರು…ದೇಶದ ಉದ್ದಗಲಗಳಿಂದ ಜನರು ಕುಂಭಮೇಳಕ್ಕೆ ಬಂದು ಪಾಲ್ಗೊಳ್ಳಬೇಕೆಂಬುದು ಅವರ ಕೋರಿಕೆಯಾಗಿತ್ತು.

ಲಿಂಗಾಯತರು ಮತ್ತು ಬುಡಕಟ್ಟುಗಳ ಜನರನ್ನು ಹಲವು ನೂರು ವರ್ಷಗಳಿಂದಲೂ ಕುಂಭಮೇಳಕ್ಕೆ ಕರೆದಿಲ್ಲ ಹೀಗಾಗಿ ಅವರು ಭಾಗವಹಿಸಿಲ್ಲ. ಕುಂಭಮೇಳವು ಕೇವಲ ಧಾರ್ಮಿಕ ಉತ್ಸವ ಅಲ್ಲ, ಅದು ರಾಷ್ಟ್ರೀಯ ಏಕತೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಸಂಗಮವೂ ಹೌದು ಎಂಬುದು ಆದಿತ್ಯನಾಥರ ಅಭಿಮತವಾಗಿತ್ತು. ನಾವು ನೆರವಾಗುತ್ತೇವೆ ಎಂದು ಭರವಸೆ ನೀಡಿದೆವು”

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಇಷ್ಟೆಲ್ಲಾ ಯೋಗಿಯನ್ನು ಹೊಗಳಿ ಬರೆಯೋದು ಯಾಕೆ ಆತನ ಚಹಾರೆ ಇದೆ ಅದೂ ಇದೂ ಅಂತ ಇಡೀ ದೇಶದಲ್ಲಿ ಕೆಟ್ಟ ಅಭಿವೃದ್ಧಿಗೆ ಉದಾಹರಣೆಯಾದ ರಾಜ್ಯ ಅದು ಅದಕ್ಕೆ ಮುಖ್ಯ ಕಾರಣ ಈತನ ಜನ ದ್ರೋಹಿ ಆಡಳಿತ. ಆತನ ಕೆಟ್ಟ ಮುಖ ದೇಶ ವ್ಯಾಪಿ ಆಗಿರುವಂತಹದ್ದು ಇಂತಹ ಈ ದಿನ ಮಾಧ್ಯಮದಲ್ಲೇ ಈ ರೀತಿ ವರದಿ ಬರೋದು ನಾಚಿಕೆಗೇಡು

  2. ಎಲ್ಲಾ ಓಟಿಗಾಗಿ, ಇದೇ ಬ್ರಾ ಮಿಂಡ್ ರು ಕಾರಣ ಆ ಲಿಂಗಯತ ದರ್ಮ ಹುಟ್ಟಿಗೆ, ಈ ಮೋಸಗಾರ ಬ್ರಾ ಮಿಂಡ್ರ ನಂಬಬೇಡೀ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X