ಪಾಕ್‌ಅನ್ನು ಖಂಡಿಸದ ‘ಕ್ವಾಡ್‌’ ಹೇಳಿಕೆಗೆ ಭಾರತ ಸಹಿ; ಮತ್ತೆ ತಲೆ ಬಾಗಿತಾ ಮೋದಿ ಸರ್ಕಾರ

Date:

Advertisements
ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ, ಭಯೋತ್ಪಾದಕ ನೆಲೆಗಳಿಗೆ ಅವಕಾಶ ನೀಡಿರುವ ಪಾಕಿಸ್ತಾನದ ಧೋರಣೆಯನ್ನು ಕ್ವಾಡ್‌ ಖಂಡಿಸಿಲ್ಲ. ಆದರೂ, ಕ್ವಾಡ್‌ನ ಜಂಟಿ ಹೇಳಿಕೆಗೆ ಭಾರತ ಸಹಿ ಹಾಕಿದೆ. ಇದು, ದೇಶದಲ್ಲಿ ವ್ಯಾಪಕ ಆಕ್ರೋಶ, ಅಸಮಾಧಾನ, ಟೀಕೆಗೆ ಗುರಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯನ್ನು ಕ್ವಾಡ್ (ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ) ಕಟುವಾಗಿ ಟೀಕಿಸಿದೆ. ಆದರೂ, ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ, ಭಯೋತ್ಪಾದಕ ನೆಲೆಗಳಿಗೆ ಅವಕಾಶ ನೀಡಿರುವ ಪಾಕಿಸ್ತಾನದ ಧೋರಣೆಯನ್ನು ಕ್ವಾಡ್‌ ಖಂಡಿಸಿಲ್ಲ. ಮಾತ್ರವಲ್ಲದೆ, ಆ ಬಗ್ಗೆ ಒಂದೇ ಒಂದು ಸಾಲಿನ ಉಲ್ಲೇಖವನ್ನೂ ಮಾಡಿಲ್ಲ. ಆದರೂ, ಕ್ವಾಡ್‌ನ ಜಂಟಿ ಹೇಳಿಕೆಗೆ ಭಾರತ ಸಹಿ ಹಾಕಿದೆ. ಇದು, ದೇಶದಲ್ಲಿ ವ್ಯಾಪಕ ಆಕ್ರೋಶ, ಅಸಮಾಧಾನ, ಟೀಕೆಗೆ ಗುರಿಯಾಗಿದೆ.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಜೀವ ಕಳೆದುಕೊಂಡರು. ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಹೊತ್ತುಕೊಂಡಿತು. ಬಳಿಕ, ದಾಳಿ ನಡೆಸಿದ್ದು, ನಾವಲ್ಲ ಎಂದು ಹೇಳಿತು. ಈ ನಡುವೆ, ಮೇ 7ರಂದು ಭಾರತವು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪ್ರತಿಕ್ರಿಯಿಸಿತು. ಪಾಕಿಸ್ತಾನದ ಭಯೋತ್ಪಾದಕ ನೆಲೆಗಳುಳ್ಳ 9 ಸ್ಥಳಗಳ ಮೇಲೆ ದಾಳಿ ಮಾಡಿತು. ಆದಾಗ್ಯೂ, ಯಾವೊಬ್ಬ ಭಯೋತ್ಪಾದಕನ್ನು ಕೊಲ್ಲಲಾಗಿಲ್ಲ ಅಥವಾ ಬಂಧಿಸಲಾಗಿಲ್ಲ ಎಂದು ಹೇಳಲಾಗಿದೆ.

ಆಪರೇಷನ್ ಸಿಂಧೂರ ದಾಳಿಯ ಬಳಿಕ, 15 ದಿನಗಳ ಕಾಲ ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ನಡೆಯಿತು. ಈ ಘರ್ಷಣೆಯಲ್ಲಿ, ಭಾರತದ ಓರ್ವ ಸೈನಿಕ ಸೇರಿ 17 ಮಂದಿ ಹಾಗೂ ಪಾಕಿಸ್ತಾನದ 25 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿವೆ. ಸಂಘರ್ಷದ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ‘ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಿಸಲಾಗಿದೆ. ವ್ಯಾಪಾರ ಸಂಬಂಧದ ಅಸ್ತ್ರ ಬಳಸಿ, ಸಂಘರ್ಷವನ್ನು ಕೊನೆಗಾಣಿಸಿದ್ದೇನೆ’ ಎಂದು ಹೇಳಿಕೊಂಡರು. ಪಾಕಿಸ್ತಾನವನ್ನು ಸದೆಬಡಿಯುತ್ತೇವೆಂದು ಅಬ್ಬರಿಸುತ್ತಿದ್ದ ಮೋದಿ ಸರ್ಕಾರ, ಟ್ರಂಪ್ ಬ್ಲಾಕ್‌ಮೇಲ್‌ಗೆ ಬಗ್ಗಿ ಕದನ ವಿರಾಮಕ್ಕೆ ಒಪ್ಪಿಕೊಂಡಿತು. ಮಾತ್ರವಲ್ಲ, ಟ್ರಂಪ್ ಹೇಳಿಕೆಯನ್ನೂ ಕೇಂದ್ರ ಸರ್ಕಾರ ಖಂಡಿಸಲಿಲ್ಲ.

Advertisements

ಭಾರತ ಮತ್ತು ಪಾಕಿಸ್ತಾನಗಳು ತಾವು ಹೇಳಿದಂತೆ ಕೇಳುವ ರಾಷ್ಟ್ರಗಳೆಂದು ಟ್ರಂಪ್ ಜಗತ್ತಿನೆದುರು ಪದೇ-ಪದೇ ಹೇಳುತ್ತಿದ್ದರೂ, ಭಾರತ ಪ್ರಧಾನಿ ಮೌನವಾಗಿದ್ದಾರೆ. ಇದೀಗ, ಕ್ವಾಡ್‌ನ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ಪ್ರತಿನಿಧಿಗಳು ಜುಲೈ 2ರಂದು ಪಹಲ್ಗಾಮ್ ದಾಳಿಯನ್ನು ನೀಚ ಕೃತ್ಯವೆಂದು ಖಂಡಿಸಿವೆ. ಜಂಟಿ ಹೇಳಿಕೆ ಸಿದ್ದಪಡಿಸಿದ್ದಾರೆ. ಆದರೆ, ಇದರಲ್ಲಿ ಭಯೋತ್ಪಾದನೆಗೆ ಸಹಕಾರ ನೀಡುತ್ತಿರುವ ಪಾಕಿಸ್ತಾನವನ್ನು ಖಂಡಿಸಿಲ್ಲ. ವಿರೋಧಿಸಿಲ್ಲ. ಆದರೂ, ಈ ಜಂಟಿ ಹೇಳಿಕೆಗೆ ಭಾರತ ಸಹಿ ಹಾಕಿದೆ. ಕ್ವಾಡ್‌ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವರು ಸಹಿ ಮಾಡಿದ್ದಾರೆ.

ಭಾರತವು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನದ ಬೆಂಬಲವಿದೆ ಎಂದು ಏಪ್ರಿಲ್ 22ರಿಂದಲೂ ಸ್ಪಷ್ಟವಾಗಿ ಆರೋಪಿಸುತ್ತಲೇ ಬಂದಿದೆ. ಆದರೂ, ಭಾರತದಲ್ಲೇ ನಡೆದ ಕ್ವಾಡ್‌ನ ಶೃಂಗಸಭೆಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆಯು ಪಾಕಿಸ್ತಾನದ ವಿಚಾರವನ್ನು ಉಲ್ಲೇಖಿಸಿಲ್ಲ. ಪಾಕ್ ಬೆಂಬಲದ ವಿಚಾರವಾಗಿ ಕ್ವಾಡ್ ಮೌನವಾಗಿದ್ದು, ತಟಸ್ಥ ಧೋರಣೆ ತಳೆದಿದೆ. ಕ್ವಾಡ್‌ನಲ್ಲಿ ಪಾಕಿಸ್ತಾನ ಸದಸ್ಯ ರಾಷ್ಟ್ರವಲ್ಲ. ಆದರೂ, ಪಾಕಿಸ್ತಾನವನ್ನು ಕ್ವಾಡ್ ಖಂಡಿಸಿಲ್ಲ. ಆದರೆ, ಭಾರತವು ಕ್ವಾಡ್‌ನ ಸದಸ್ಯ ರಾಷ್ಟ್ರವಾಗಿದ್ದರೂ, ಭಯೋತ್ಪಾದನೆಯಲ್ಲಿ ಪಾಕ್ ಪಾತ್ರದ ಬಗ್ಗೆ ಖಂಡನೆಯನ್ನು ವ್ಯಕ್ತಪಡಿಸುವಂತೆ ಕ್ವಾಡ್‌ ಸದಸ್ಯರ ಮೇಲೆ ಒತ್ತಡ ತರುವಲ್ಲಿ, ಮನವೊಲಿಸುವಲ್ಲಿ ವಿಫಲವಾಗಿದೆ. ಬದಲಾಗಿ, ಆ ಜಂಟಿ ಹೇಳಿಕೆಗೆ ಜೈಶಂಕರ್ ಸಹಿ ಹಾಕಿದ್ದಾರೆ.

ಕ್ವಾಡ್‌ನ ಹೇಳಿಕೆ ಮತ್ತು ಜೈಶಂಕರ್ (ಕೇಂದ್ರ ಸರ್ಕಾರ) ನಡೆಯ ವಿರುದ್ಧ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದು, ಭಯೋತ್ಪಾದನೆ ವಿರುದ್ಧದ ಒಗ್ಗಟ್ಟಿನ ಕೊರತೆಯನ್ನು ಸೂಚಿಸುತ್ತದೆ. ಭಾರತವು ಕ್ವಾಡ್‌ ಸದಸ್ಯ ರಾಷ್ಟ್ರವಾಗಿದ್ದರೂ, ಭಾರತದೊಂದಿಗೆ ಪ್ರಬಲವಾಗಿ ಕ್ವಾಡ್‌ನ ಇತರ ಸದಸ್ಯ ರಾಷ್ಟ್ರಗಳು ನಿಲ್ಲುವಲ್ಲಿ ಹಿಂದೇಟು ಹಾಕಿವೆ ಎಂದು ಭಾರತೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆ ಮತ್ತು ಭಾರತ-ಪಾಕ್ ಸಂಘರ್ಷದ ಸಮಯದಲ್ಲಿಯೂ ಭಾರತವು ಏಕಾಂಗಿಯಾಗಿತ್ತು. ಪಾಹಲ್ಗಾಮ್ ದಾಳಿಗೆ ವಿಷಾಧ ವ್ಯಕ್ತಪಡಿಸಿದ್ದರ ಹೊರತಾಗಿ, ಯಾವುದೇ ರಾಷ್ಟ್ರವು ಭಾರತವನ್ನು ಪೂರ್ಣಪ್ರಮಾಣದಲ್ಲಿ ಬೆಂಬಲಿಸಲಿಲ್ಲ. ಅಮೆರಿಕವು ಇಬ್ಬರೂ (ಭಾರತ-ಪಾಕ್) ನನ್ನ ಮಿತ್ರರೇ ಎಂದು ಹೇಳಿಕೊಂಡರೆ, ರಷ್ಯಾ, ಅರಬ್ ರಾಷ್ಟ್ರಗಳು, ಜಪಾನ್, ಆಸ್ಟ್ರೇಲಿಯಾ ಹಾಗೂ ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ದಾಳಿಯನ್ನು ಖಂಡಿಸಿ ಹೇಳಿಕೆಯನ್ನಷ್ಟೇ ನೀಡಿದ್ದವು. ಭಾರತದ ಕಾರ್ಯಾಚರಣೆಗೆ ಯಾವುದೇ ರಾಷ್ಟ್ರವು ಬೆಂಬಲ ನೀಡಲಿಲ್ಲ. ಆದರೆ, ಪಾಕಿಸ್ತಾನವು ಪರೋಕ್ಷವಾಗಿ ಚೀನಾ ಮತ್ತು ನೇರವಾಗಿ ಟರ್ಕಿಯ ಬೆಂಬಲವನ್ನು ಪಡೆಯಿತು. ಈಗ ಕ್ವಾಡ್‌ನಲ್ಲಿಯೂ ಭಾರತವು ಪಾಕಿಸ್ತಾನವನ್ನು ಖಂಡಿಸುವ ನಿರ್ಣಯ ಕೈಗೊಳ್ಳುವಂತೆ ಮಾಡುವಲ್ಲಿ ವಿಫಲವಾಗಿದೆ.

ಈ ಲೇಖನ ಓದಿದ್ದೀರಾ?: ಮೋದಿ-ಇಂದಿರಾ ನಡುವಣ ಐದು ಹೋಲಿಕೆಗಳು, ಇನ್ನೈದು ಭಿನ್ನತೆಗಳು

”ಕ್ವಾಡ್‌ನ ಹೇಳಿಕೆ ಮತ್ತು ಭಾರತದ ಅಸಹಾಯಕತೆಯು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನ ಕೊರತೆಯನ್ನು ತೋರಿಸುತ್ತದೆ. ಪಾಕಿಸ್ತಾನವನ್ನು ಹೆಸರಿಸದಿರುವುದು ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳಿಗೆ ರಕ್ಷಣೆ ನೀಡುವಂತಿದೆ. ಅದಕ್ಕೆ ಭಾರತ ಸಹಿ ಹಾಕಿರುವುದು ಭಾರತದ ರಾಜತಾಂತ್ರಿಕ ನಿಲುವಿನ ದೌರ್ಬಲ್ಯವಾಗಿದೆ” ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಕ್ವಾಡ್‌ನ ತಟಸ್ಥ ಹೇಳಿಕೆಗೆ ಭಾರತ ಸಹಿ ಹಾಕಿರುವುದು, ಭಾರತವೇ ನಿರ್ಣಯಿಸಿರುವ ಭಯೋತ್ಪಾದನೆ ವಿರುದ್ಧದ ಕಠಿಣ ನಿಲುವಿಗೆ ಧಕ್ಕೆ ತರುತ್ತದೆ. ಕ್ವಾಡ್‌ನ ತಟಸ್ಥತೆಯು ಭಾರತದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ಇದು ಭಾರತೀಯರಿಗೆ ಕ್ವಾಡ್‌ ಮಾಡಿದ ಅವಮಾನ. ಭಾರತವು ತನ್ನ ಸ್ವಾಭಿಮಾನವನ್ನು ಕಾಪಾಡಿಕೊಳ್ಳಬೇಕಿತ್ತು. ಹೇಳಿಕೆಗೆ ಸಹಿ ಹಾಕಲು ನಿರಾಕರಿಸಬೇಕಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಭಾರತವು ಕ್ವಾಡ್‌ನಂತಹ ವೇದಿಕೆಗಳಲ್ಲಿ ತನ್ನ ಭಯೋತ್ಪಾದನೆ ವಿರುದ್ಧದ ನಿಲುವನ್ನು ಇನ್ನಷ್ಟು ಸ್ಪಷ್ಟವಾಗಿ ಮಂಡಿಸಬೇಕಾಗಿದೆ. ಅದೇ ರೀತಿ, ಕ್ವಾಡ್‌ನ ಇತರ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳ ವಿರುದ್ಧ ಒಗ್ಗಟ್ಟಿನಿಂದ ಕ್ರಮ ಕೈಗೊಳ್ಳುವಂತೆ ಭಾರತವು ಒತ್ತಡ ತರಬೇಕಿದೆ. ಆದರೆ, ಟ್ರಂಪ್‌ ಅವರನ್ನು ಎದುರಿಸಿ ಮೋದಿ ಸರ್ಕಾರ ಇಂತಹ ಗಟ್ಟಿ ನಿರ್ಧಾರ/ಒತ್ತಡ ತರಲು ಸಾಧ್ಯವೇ ಎಂಬ ಪ್ರಶ್ನೆಯೂ ಮುಂದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X