ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ – ಜಯಂತ್‌ ಪರ್ಮಾರ್

Date:

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ

- Advertisement -

ಬೇವಿನ ಕಡ್ಡಿಯ ಕುಂಚ,
ಬಿಳಿ ಸುದ್ದೆ ಮಣ್ಣು,
ನನ್ನವ್ವನ ಕಪ್ಪು ಕೈಗಳು
ಸಗಣಿ ಬಳಿದ ಮಣ್ಣಿನ ಗೋಡೆಯ ಮೇಲೆ
ಚಿತ್ರ ಬಿಡಿಸುತ್ತಿದ್ದವು.
ಅವಳ ಬೆರಳ ಗುರುತುಗಳು ಅಲ್ಲಿ ಜೀವ ತಳೆದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ...

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ ಬಿಜೆಪಿ ಪಕ್ಷದ ಶಾಸಕರು ಮನವೊಲಿಸಿ ದೆಹಲಿಯಲ್ಲಿ ಸಭೆ ಮಾಡುವುದಾಗಿ ತಿಳಿಸಿದ್ದರು. ಆದರೆ ದೆಹಲಿಯಲ್ಲಿ ರೈತ ಮುಖಂಡರು ಮತ್ತು ಕೇಂದ್ರ ಸಚಿವರ...

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ ಯುವಜನರ ಕುರಿತು ‘ಸೊಳ್ಳೆಗಳನ್ನು ಹೊಡೆಯಲು ಸುತ್ತಿಗೆಗಳು ಬೇಕಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದ ಕಾನೂನು ಕಾಯುವ ಅತ್ಯುನ್ನತ ಹೊಣೆ...

​ಮೋದಿ-ಶಾ ಅಸಲಿ ಮುಖ ಅನಾವರಣ: ಅಂಕಿತಾ ಭಂಡಾರಿ ಕೊಲೆ...

ವೇದಿಕೆಗಳಲ್ಲಿ ‘ಬೇಟಿ ಬಚಾವೋ’ ಎಂದು ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಹಾಡಹಗಲೇ ಕೊಲೆಯಾದ ಬಡ ಯುವತಿಯ ಸಾವಿನ ಸುತ್ತ ಕಳಂಕದ ಹುತ್ತ ಹೊತ್ತಿರುವ...

ಹಸು , ಎತ್ತು, ನಾಯಿ, ಗಿಳಿ
ಕಾಗೆಗಳು ಇವೆಯಲ್ಲಿ.
ನವಿಲಿನ ಗರಿ ಉದ್ದವಾಗಿದ್ದು ಛಾವಣಿಯ ಗಳಕ್ಕೆ ತಾಗುತ್ತಿದೆ.
ಹುಲಿಯ ಬಾಲದಿಂದ ಚಾಚಿಕೊಂಡಿರುವ ಸೋಗೆ ,
ಕಾವಿ ಮಣ್ಣಿನ ಎರಡು ತಲೆಯ ಆನೆ,
ಮುಗಿ ಬೀಳಲು ಸಿದ್ಧವಿರುವ ಹಳದಿ ಸಿಂಹ ಅಲ್ಲಿದೆ.
ಗೋಧಿ ಹೊಲದ ನಡುವೆ ಹಾವಿನಂತೆ ಹರಿದು ಹೋಗುವ
ರೈಲು ಹಾದಿ;
ಮೋಡಗಳು, ಮೇಕೆ , ಕೋತಿ
ರೈಲಿನ ವ್ಯಾಗನ್ ಪಕ್ಕದಲ್ಲಿ;
ಹಗ್ಗದ ಮಂಚದ ಮೇಲೆ ಕುಳಿತು
ತೂಕಡಿಸುವ ನನ್ನಜ್ಜಿಯ ಗಾಜುಗಣ್ಣುಗಳು.

ನನ್ನವ್ವ ಹೇಳಿದಳು:
ನಾನು ಇದೀಗ ಚಿತ್ರ ಮುಗಿಸಿದೆ,
ನನಗೆ ಇಲ್ಲಿಂದ ಕಾಣುವ ಬಾವಿ
ಹಳ್ಳಿಯಲಿ ಎಷ್ಟೊಂದು ರಕ್ತಪಾತ ಮಾಡಿತು.
ಏಕೆ ಆ ಬಾವಿಯ ನೀರು
ಈಗಲೂ ನಮಗೆ ಬಹಳ ದೂರ?

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶದ ನಿರುದ್ಯೋಗ ಪ್ರಮಾಣದಲ್ಲಿ ಸ್ಥಿರತೆ; ನಗರ ಮಹಿಳೆಯರ ನಿರುದ್ಯೋಗದಲ್ಲಿ ಏರಿಕೆ!

ಭಾರತದಲ್ಲಿ ನಿರುದ್ಯೋಗ ಪ್ರಮಾಣವು ಸೆಪ್ಟೆಂಬರ್ 2026ರಲ್ಲಿ ಶೇ. 5ರಷ್ಟೇ ಇದ್ದು, ಹಿಂದಿನ...

ರಾತ್ರಿ ವೇಳೆಯಲ್ಲೂ ರವಿ; ಸೂರ್ಯನ ಬೆಳಕು ಮಾರಾಟ ಮಾಡಲು ಅಮೆರಿಕ-ಭಾರತ ಸಹಭಾಗಿತ್ವ: ಏನಿದು ಯೋಜನೆ?

ವಿಜ್ಞಾನ ಕಲ್ಪನೆಗಳಿಗಿಂತಲೂ ಮಿಗಿಲಾದ ಅಪರೂಪದ ಯೋಜನೆಯೊಂದು ಈಗ ಜಾಗತಿಕ ಇಂಧನ ಕ್ಷೇತ್ರದಲ್ಲಿ...