ಈ ದಿನ ಕವಿತೆ | ರಕ್ತ- ಅಲಿ ಸರ್ದಾರ್‌ ಜಾಫ್ರಿ

Date:

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿಯ ಕವಿತೆ ಉರ್ದು ಕವಿ ಅಲಿ ಸರ್ದಾರ್‌ ಜಾಫ್ರಿ ಅವರ ʼರಕ್ತʼ. ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್‌ ಭಾಗ್ಯ

- Advertisement -

ರಕ್ತ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಈ ರಕ್ತ ತೊಗೊಂಡು ನೀನೇನು ಮಾಡುತ್ತೀ
ಈ ರಕ್ತ
ಚುಂಬನದ ಬಿಸುಪು, ಗುಲಾಬಿಯ ಕೆಂಪು
ಈಗತಾನೆ ಹುಟ್ಟಿದ ಮಕ್ಕಳ ಮುಗುಳು ನಗು
ವರುಷ ವರುಷಗಳಿಂದ ತುಟಿಗಳು ಉಸುರಿದ ಆಶೀರ್ವಚನ
ಇದು ಅರ್ಧ ನಿಮೀಲಿತ ನಯನಗಳಿಗೆ ಹಚ್ವಿದ ಕಾಡಿಗೆ
ಮೃದು ಕೈಗಳ ಮದರಂಗಿ
ರೂಬಾಬು ಗಾಯಕರ ಹಾಡು
ಕವಿಗಳ ಕಹಳೆಯ ಮೊಳಗು
ಪ್ರೇಮದ ದೃಢತೆಯ ಭರವಸೆ.

ಈ ರಕ್ತ ಪಾಷಂಡಿಯಲ್ಲ, ಕಾಫಿರನಲ್ಲ,
ಮುಸ್ಲಿಮನಲ್ಲ
ಇದು ವೇದದ ಗೀತದ ಸಂಗೀತ
ಪವಿತ್ರ ಗ್ರಂಥದ ಸೊಲ್ಲು
ಇದು ಬದುಕಿನ ಪುಸ್ತಕದ ಮೊದಲ ಅಕ್ಷರ
ವಾಂಛೆಯ ಮೊದಲ ಪೆಂಪು
ಪ್ರವಚನದ ಮೂಲ *ತೋರ ಹಾಗೂ ಸಾಮ್ಸ್ ನ ಹೃದಯ
ಈ ಬೂದಿಮುಚ್ಚಿದ ಕೆಂಡ ಕತ್ತಿಯ ದಾಹವನ್ನು ತಣಿಸದು

ಈ ರಕ್ತ ತೊಗೊಂಡು ನೀನೇನು ಮಾಡುತ್ತೀ
ಬಿಸಿ ಕೆಂಪು ಜವ್ವನದ ಈ ರಕ್ತ
ನೆಲದ ಮೇಲೆ ಬಿದ್ದರೆ
ಭೂಮಿಯ ಗರ್ಭವನ್ನು ಸುಟ್ಟುಹಾಕುತ್ತದೆ
ಆಕಾಶದಿಂದ ಯಾವ ಹರಕೆಗಳೂ ಹರಿದು ಬರುವುದಿಲ್ಲ
ಯಾವ ಬೀಜವೂ ಮೊಳೆಯುವುದಿಲ್ಲ
ಯಾವ ಮುಗುಳೂ ನಗುವುದಿಲ್ಲ
ಯಾವ ಹೂವೂ ಘಮಘಮಿಸುವುದಿಲ್ಲ
ಕಣ್ಣಿನ ಬೆಳಕು ಕದಪಿನ ಕೆಂಪು
ಹೃದಯದ ಹಿಗ್ಗು
ಇದು* ಫರಾನ್ ಪರ್ವತದ ಮೇಲಿನ ಸೂರ್ಯ
*ಸಿನೈ ಹಾಗೂ * ತುರ್ ಪರ್ವತಗಳ ಭವ್ಯತೆ
ಇದು ಬೆಳಕೆಂಬ ನಿಜ ನುಡಿಯ ಕಾಂತಿ
ಇದು ಸತ್ಯ ಎಂಬ ಪದದ ಕಿಡಿ
ದಹಿಸುವ ಹೃದಯವ ಸಂತೈಸಲಾಗದ ಯಾತನೆ

ಈ ರಕ್ತ
ನನ್ನದು ನಿನ್ನದು ಎಲ್ಲರದು.

ಟಿಪ್ಪಣಿ

  • ತೋರ– ಜುದಾಯಿಸಂ ನ ಬುನಾದಿ ರೂಪದ ಆಖ್ಯಾನಗಳನ್ನು ಒಳಗೊಂಡಿರುವ ಪವಿತ್ರ ಗ್ರಂಥ
  • ಸಾಮ್ಸ್– ಪವಿತ್ರ ಗ್ರಂಥದ ಪದ್ಯಗಳು
  • ಫರಾನ್– ತೋರದಲ್ಲಿ ಬರುವ ಮೆಕ್ಕಾದ ಪ್ರಸ್ತಾಪ
  • ಸಿನೈ- ಪ್ರವಾದಿ ಮೋಸೆಸ್ ರಿಗೆ ಹತ್ತು ಆಜ್ಞೆಗಳು ದೊರೆಯಿತೆಂದು ಹೇಳಲಾದ ಪರ್ವತ
  • ತುರ್ ಪರ್ವತ– ಪ್ರವಾದಿ ಮಹಮ್ಮದರಿಗೆ ಜಿಬ್ರೈಲ್ ಮೂಲಕ ಆಯತ್ ಗಳು ದೊರೆತ ಸ್ಥಳ.
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ ನಡುವೆ ಟ್ರಂಪ್‌ಗೆ ಅಗ್ನಿಪರೀಕ್ಷೆ!

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್...