ಕವಿ, ನಾಟಕಕಾರ ರಘುನಂದನ ಕೃತಿಗಳ ಕುರಿತು ಚರ್ಚೆ, ಸಂವಾದ

Date:

ಕವಿ, ನಾಟಕಕಾರ, ನಿರ್ದೇಶಕ ರಘುನಂದನ ಅವರು ಕನ್ನಡದ ಮಹತ್ತ್ವದ ರಂಗನಿರ್ದೇಶಕರು. ಹತ್ತಿರಹತ್ತಿರ ನಲವತ್ತೈದು ವರ್ಷಗಳ ತಮ್ಮ ಸೃಜನಶೀಲ ಜೀವನದುದ್ದಕ್ಕೂ ರಂಗಭೂಮಿ ಮತ್ತು ಕಾವ್ಯಗಳು ಪರಸ್ಪರ ಅಭಿನ್ನವಾದವು ಎಂದೇ ಭಾವಿಸುತ್ತ ಸೃಷ್ಟಿಕಾರ್ಯದಲ್ಲಿ ತೊಡಗಿಕೊಂಡು ಬಂದವರು. ‘ನೀರೊಳಗೆ ವೀಣೆ ಮಿಡಿಯಿತು‘ ಎಂಬಂತೆ ಒಳ್ಳೆಯ ಕಾವ್ಯದ ಆಳದಲ್ಲೊಂದು ನಾಟಕೀಯತೆ ಇರುತ್ತದೆ ಮತ್ತು ಇರಬೇಕು, ನಾಟಕ, ರಂಗಪ್ರಯೋಗಗಳು ಕಾವ್ಯವೇ ಆಗಬೇಕು, ಇರಬೇಕು ಎಂಬ ವ್ರತ ಪಾಲಿಸಿಕೊಂಡು ಬಂದವರು. ಕಾವ್ಯವಲ್ಲದ್ದು ನಾಟಕವಲ್ಲ ಎಂದು ತಿಳಿದವರು. ಮೇಲಾಗಿ, ಕನ್ನಡದ ದೊಡ್ಡ ಕವಿಗಳ ಕಾವ್ಯವನ್ನೂ, ತಮ್ಮದೇ ಕವನಗಳನ್ನೂ ಮನಮುಟ್ಟುವಂತೆ ಓದಿ, ಕೇಳಿಸುವವರು.

- Advertisement -

ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಅವರ ನಾನು ಸತ್ತಮೇಲೆ ಕವನ ಸಂಕಲನ ಹಾಗೂ ಕಾವ್ಯಚಿಂತನೆ ಮತ್ತು ಲೋಕಮೀಮಾಂಸೆ ಇರುವ ಹೊತ್ತಿಗೆ ತುಯ್ತವೆಲ್ಲ ನವ್ಯದತ್ತ…, ಇವೆರಡೂ ಕನ್ನಡದಲ್ಲಿ ಈಚೆಗೆ ಹೊರಬಂದ ಮಹತ್ತ್ವದ ಪುಸ್ತಕಗಳು. ಅವುಗಳನ್ನು ಕುರಿತು ಈವತ್ತು ಸಂಜೆ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಚರ್ಚೆ ಮತ್ತು ಸಂವಾದವಿದೆ. ಚರ್ಚೆ ಮತ್ತು ಸಂವಾದ ನಡೆಸುವವರು ಖ್ಯಾತ ವಿದ್ವಾಂಸ ಮತ್ತು ವಿಮರ್ಶಕ ಪ್ರೊ. ಬಸವರಾಜ ಕಲ್ಗುಡಿ ಹಾಗೂ ಸಾಹಿತ್ಯದ ಗಂಭೀರ ವಿಮರ್ಶಕರಾದ ಸುಭಾಷ್ ರಾಜಮಾನೆ ಅವರು. ಜೊತೆಗೆ ರಘುನಂದನ ಅವರು ತಮ್ಮ ಹಲವು ಕವನಗಳನ್ನು ಓದುತ್ತಾರೆ ಅನ್ನುವುದೊಂದು ವಿಶೇಷ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಪುಸ್ತಕಗಳನ್ನು ಕುರಿತು 

ನಾನು ಸತ್ತಮೇಲೆ: ಕವನ, ಆಟದ ಹಾಡು, ಕಬ್ಬ ಕವನ ಸಂಕಲನದಲ್ಲಿ ಸಾವಿನ ಬೆಡಗನ್ನು ಧ್ಯಾನಿಸುವ ಆರು ಅಷ್ಟಷಟ್ಪದಿಗಳೂ ಸೇರಿದಂತೆ 28 ಸ್ವರಚಿತ ಕವಿತೆಗಳಿವೆ; ಕಾವ್ಯದ ಹುಟ್ಟು ಮತ್ತು ಗುರಿಗಳನ್ನು ಕುರಿತ ಧ್ಯಾನದೊಂದು ಟಿಪ್ಪಣಿಯಿದೆ; ಬೇರೆ ನುಡಿಗಳಿಂದ ಕನ್ನಡಕ್ಕೆ ತಂದ ಕವಿತೆಗಳಿವೆ; ಹಾಗೂ ಸ್ವತಂತ್ರವಾಗಿ ಬರೆದ ನಾಟಕಗಳಲ್ಲಿನವು, ಬೇರೆ ನುಡಿಗಳಲ್ಲಿರುವ ನಾಟಕಗಳನ್ನು ಕನ್ನಡಿಸುವಾಗ ಬರೆದವು, ಮತ್ತು ನಾಲ್ಕು ರಂಗಪ್ರಯೋಗಗಳಿಗೆ ಬರೆದ ಪ್ರಸ್ತಾವನೆಯ ದೃಶ್ಯಗಳು – ಹೀಗೆ ಒಟ್ಟು ಹನ್ನೆರಡು ನಾಟಕಗಳ ಹಾಡು, ಕಬ್ಬಗಳಿವೆ. ಕನ್ನಡದ ಹಲವು ಬಗೆಗಳನ್ನು, ಅದರ ಹಲವು ಸ್ತರದ ನಾದ, ನುಡಿಗಟ್ಟು, ಕಾಕುಗಳನ್ನು ಹಲವು ಬಗೆಯ ಛಂದಸ್ಸು, ಧಾಟಿ, ಲಯಗಳಲ್ಲಿ ಬಿಗಿ-ಹುಲುಸಾಗಿ ಹಿಡಿದಿರುವ ಪದ್ಯ, ಹಾಡುಗಳ ಹೊತ್ತಿಗೆ ಇದು. (ಪ್ರ: ಚಾರುಮತಿ ಪ್ರಕಾಶನ, ಚಾಮರಾಜಪೇಟೆ, ಬೆಂಗಳೂರು)

ಇದನ್ನು ಓದಿದ್ದೀರಾ?: ಹೊಸ ಓದು | ಕವಿ, ನಾಟಕಕಾರ ರಘುನಂದನ ಅವರ ಎರಡು ಪುಸ್ತಕಗಳ ಕಿರು ಪರಿಚಯ

ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ ವರಕವಿ ಬೇಂದ್ರೆಯವರ ಉಯ್ಯಾಲೆ ಕವನ ಸಂಕಲನದ ಅಷ್ಟಷಟ್ಪದಿಗಳನ್ನು ಕುರಿತ ಧ್ಯಾನವು ಮಡುಗಟ್ಟಿರುವ ಹೊತ್ತಿಗೆ. ಆ ಮಡುವಿನ ನಡುವಿಂದ ಹೊರಟು, ಕಾವ್ಯಮೀಮಾಂಸೆ, ಲೋಕತತ್ತ್ವ ಜಿಜ್ಞಾಸೆ, ರಾಜಕೀಯ-ಸಾಮಾಜಿಕ ಚಿಂತನೆ, ವಿಜ್ಞಾನಶೋಧದ ಕೆಲವು ಆಯಾಮ… ಇಂಥವುಗಳನ್ನು ಕುರಿತ ಧ್ಯಾನವೂ ಆಗಿ ಉಂಗುರ-ಉಂಗುರ ಹಬ್ಬಿಕೊಳ್ಳುತ್ತ, ಹಾಗೆ ಹಬ್ಬಿಕೊಳ್ಳುವಾಗಲೂ ಆ ನಡುವಿನ ಸೆಳೆತದಲ್ಲಿಯೇ ಇರುತ್ತ, ಕಡೆಗೆ ಅಲ್ಲಿಗೇ, ಮಡುವಿನ ನಡುವಿಗೇ,ಮರಳುತ್ತದೆ. (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್, ಬೆಂಗಳೂರು)

WhatsApp Image 2025 01 11 at 11.14.48
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18 ಕೋಟಿಗೆ ಹರಾಜಾಯಿತು ಆತನ ಕಲಾಕೃತಿ!

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ ಮಾದರಿ

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ,...