ಸಹರಾ ನಿಧಾನಕ್ಕೆ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಈ ಪ್ರದೇಶ ಇತ್ತೀಚೆಗೆ ಭಾರಿ ಮಳೆಗೆ ಸಾಕ್ಷಿಯಾಗಿದೆ. ಇದರಿಂದಾಗಿ ಸಸ್ಯಗಳು ಮರುಭೂಮಿಯಾದ್ಯಂತ, ವಿಶೇಷವಾಗಿ ಮೊರಾಕೊದಲ್ಲಿ ಬೆಳೆಯಲು ಶುರುವಾಗಿದೆ. ಅಲ್ಲಿನ ಸುತ್ತಮುತ್ತಲಿನ ಅಲ್ಜೀರಿಯಾ, ಟುನೀಶಿಯಾ ಮತ್ತು ಲಿಬಿಯಾ ಸಾಮಾನ್ಯವಾಗಿ ಮರಗಳಿಲ್ಲದ ಭೂಪ್ರದೇಶಗಳಾಗಿವೆ. ಈಗ ಅಲ್ಲಿ ನಿಧಾನವಾಗಿ ಮಳೆ ಬರಲು ಶುರುವಾಗಿದೆ…
ಇದು ಎಡೆಬಿಡದ ಸೂರ್ಯನ ರಶ್ಮಿ ಬೀಳುವಂತಹ ಹಾಗೂ ಸದಾ ಹರಿದಾಡುವ ಮರಳಿನ ಸಾಗರ ಹೊಂದಿರುವ ಭೂಮಿಯ ಕಥೆ. ಹೌದು, ಸಹರಾ ಉತ್ತರ ಆಫ್ರಿಕಾದಾದ್ಯಂತ ವ್ಯಾಪಿಸಿರುವ ವಿಶ್ವದ ಅತಿದೊಡ್ಡ ಬಿಸಿ ಮರುಭೂಮಿಯಾಗಿದೆ. ಭೂಮಿಯ ಮೇಲಿನ ಅತ್ಯಂತ ಒಣ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಆದರೆ ಬಹುಶಃ ಮುಂದೆ ಇದು ಒಣಭೂಮಿಯಾಗದೆ ಹೋಗಬಹುದು. ಯಾಕಂದ್ರೆ ಇನ್ನು ಮುಂದೆ, ಸಹರಾದಲ್ಲಿಯೂ ಹೊಸ ಜೀವಂತಿಕೆ ಅರಳಲಿದೆ. ಹೌದು ನಾಸಾದವರು ಈಗಾಗಲೇ ಸಹರಾ ಮರುಭೂಮಿಯಲ್ಲಿ ಒಣಭೂಮಿ ಹಸಿರಾಗಿ ಬದಲಾಗೋದನ್ನು ಸೆರೆಹಿಡಿದಿದ್ದಾರೆ. ಈ ಬದಲಾವಣೆಯನ್ನ ಸೆರೆಹಿಡಿದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಜೀವ ಮತ್ತು ಜಲ ಸಂಕುಲವು ಎಲ್ಲೆಡೆ ಕಾಣಿಸಿಕೊಂಡಿದೆ. ಅದನ್ನು ನೋಡುವಾಗ ಒಣ ಭೂಮಿ ಮೇಲೆ ಬಣ್ಣ ಎರಚಿದಂತೆ ಕಾಣುತ್ತಿತ್ತು. ಹಾಗಿದ್ದರೆ ಇಲ್ಲಿ ಏನಾಗ್ತಿದೆ? ಇದು ಸಂಭ್ರಮ ಪಡೋ ವಿಚಾರವೋ? ಇಲ್ಲ ವಿನಾಶದ ಸಂಕೇತವೇ?
ಉತ್ತರ ಆಫ್ರಿಕಾದ ವಿಶಾಲವಾದ ಮರುಭೂಮಿಯೇ ಸಹರಾ ಮರುಭೂಮಿ. ಇದು ಉತ್ತರ ಆಫ್ರಿಕಾದಾದ್ಯಂತ 9 ಮಿಲಿಯನ್ ಚದರ ಕಿಲೋಮೀಟರ್‌ಗಿಂತ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಬಿಸಿ ಮರುಭೂಮಿಯಾಗಿದೆ, ಆದರೆ ವಿಜ್ಞಾನಿಗಳಿಗೆ, ಇದೊಂದು ದೊಡ್ಡ ತೆರೆದ ವಸ್ತುಸಂಗ್ರಹಾಲಯದಂತೆ ಕಾಣುವುದು. ಅಲ್ಲಿ ಈಗ ಬದಲಾಗುತ್ತಿರುವ ಮರಳು ಮತ್ತು ಶಿಥಿಲೀಕರಣವು ಅದರ ಹಿಂದಿನ ಯುಗದ ಪ್ರಾಚೀನ ಭೂದೃಶ್ಯಗಳನ್ನು ನೆನಪಿಗೆ ತರುತ್ತಿದೆ. ಅಂದರೆ ಸಾವಿರಾರು ವರ್ಷಗಳ ಹಿಂದೆ ಸಹರಾ ಈಗಿನಂತೆ ಇರಲಿಲ್ಲ. ಬದಲಾಗಿ ಇದು ಸರೋವರಗಳಿಂದ, ನದಿಗಳಿಂದ ಮತ್ತು ಕಾಡುಗಳಿಂದಲೇ ತುಂಬಿದ ಸೊಂಪಾದ ಹಸಿರಿನ ನೆಲೆಯಾಗಿತ್ತು, ಆದ್ದರಿಂದ ಸಹರಾ ಒಂದು ಚರಿತ್ರೆಯ ಹಿಂದಿನ ಅಗಾಧವಾದ ಮಾಹಿತಿ ಸಂಗ್ರಹವೇ ಆಗಿದೆ.

ಈ ರೀತಿಯ ಅಕಾಲಿಕ ಹವಾಮಾನ ಬದಲಾವಣೆಯಿಂದ ಆ ಭೂ ಪ್ರದೇಶಕ್ಕೆ ಮುಂದೆ ಏನಾಗಬಹುದು? ಅಲ್ಲಿನ ಭೂ ಪ್ರದೇಶ ಮತ್ತು ನಾಗರಿಕತೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು. ಜೊತೆಗೆ ಜೀವ ಸಂಕುಲದಿಂದ ತುಂಬಿ ತುಳುಕುತ್ತಿರುವ ಸವಾನಾವನ್ನು ಈ ಸಹರಾ ಮರುಭೂಮಿಯೂ ಸೇರಿಕೊಂಡರೆ ಮುಂದೇನಾಗಬಹುದು ಎಂಬುದೇ ಕುತೂಹಲದ ಸಂಗತಿಯಾಗಿದೆ. ಏಕೆಂದರೆ ಇಂದು ನಾವು ನೋಡುತ್ತಿರೋ ಈ ಬದಲಾವಣೆ ಸಾವಿರ ವರ್ಷಗಳ ಹಿಂದೊಮ್ಮೆ ನಡೆದಿರುವಂತದ್ದು. ಈ ಬಾರಿ ಹವಾಮಾನ ಬದಲಾವಣೆಯು ಸಹರಾವನ್ನು ಮತ್ತೆ ಅದರ ಬೇರುಗಳಿಗೆ ಕೊಂಡೊಯ್ಯುತ್ತಿದೆ. ನಾಸಾ ಈಗಾಗಲೇ ಬಿಡುಗಡೆ ಮಾಡಿದ ಮರುಭೂಮಿಯ ಆ ಉಪಗ್ರಹ ಚಿತ್ರಗಳನ್ನು ನೋಡಿದರೆ ಅಲ್ಲಿನ ರೂಪಾಂತರವನ್ನು ಗಮನಿಸಬಹುದು.
ಸಹರಾ ನಿಧಾನಕ್ಕೆ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಈ ಪ್ರದೇಶ ಇತ್ತೀಚೆಗೆ ಭಾರಿ ಮಳೆಗೆ ಸಾಕ್ಷಿಯಾಗಿದೆ. ಇದರಿಂದಾಗಿ ಸಸ್ಯಗಳು ಮರುಭೂಮಿಯಾದ್ಯಂತ, ವಿಶೇಷವಾಗಿ ಮೊರಾಕೊದಲ್ಲಿ ಬೆಳೆಯಲು ಶುರುವಾಗಿದೆ. ಅಲ್ಲಿನ ಸುತ್ತಮುತ್ತಲಿನ ಅಲ್ಜೀರಿಯಾ, ಟುನೀಶಿಯಾ ಮತ್ತು ಲಿಬಿಯಾ ಸಾಮಾನ್ಯವಾಗಿ ಮರಗಳಿಲ್ಲದ ಭೂಪ್ರದೇಶಗಳಾಗಿವೆ. ಈಗ ಅಲ್ಲಿ ನಿಧಾನವಾಗಿ ಮಳೆ ಬರಲು ಶುರುವಾಗಿದೆ. ಅದರಿಂದಾಗಿ ಅಲ್ಲಿ ಹಸಿರು ಚಿಗುರುಗಳು ಮೊಳಕೆಯೊಡೆಯುತ್ತಿವೆ. ಈ ಪ್ರದೇಶದ ಇತಿಹಾಸವನ್ನು ಪರಿಗಣಿಸಿದರೆ, ಇದನ್ನ ಅಸಾಮಾನ್ಯ ಅನ್ನೋಕೆ ಸಾಧ್ಯವಿಲ್ಲ. ಯಾಕಂದ್ರೆ ಸಹರಾ ಮರುಭೂಮಿಯಂತೆ ಕಂಡರೂ, ಮಳೆಯ ಪ್ರವಾಹವು ಬಂದಾಗ ಮಾತ್ರ ಎಲ್ಲವೂ ಬೇಗನೆ ಹಸಿರಾಗಲು ಪ್ರಾರಂಭಿಸುತ್ತವೆ. ಸಸ್ಯಗಳುಮೊಳಕೆಯೊಡೆಯಲು ಪ್ರಾರಂಭಿಸುತ್ತದೆ. ಮತ್ತು ಪ್ರಕೃತಿ ಸುಲಭವಾಗಿ ಪ್ರತಿಕ್ರಿಯಿಸಲು ಆರಂಭಿಸಿದೆ. ಆದರೆ ಅಸಾಮಾನ್ಯ ಸಂಗತಿಯೆಂದರೆ ಈ ರೀತಿ ಸಸ್ಯವರ್ಗವು ಸುಂದರವಾಗಿ ಕಾಣುವುದು. ನಿಜವಾದ ಸೌಂದರ್ಯ ಅಲ್ಲ, ಇದು ಮುಂಬರಲಿರುವ ವಿಷಯಗಳ ವಿನಾಶಕಾರಿ ಸಂಕೇತವಾಗಿದೆ. ಹವಾಮಾನ ಬದಲಾವಣೆಯು ಈಗ ಆಫ್ರಿಕಾದಲ್ಲಿ ಚಂಡಮಾರುತಗಳ ಹಾದಿಯನ್ನು ತುಳಿಯುತ್ತಿವೆ. ಇದು ಚಂಡಮಾರುತಗಳ ವ್ಯವಸ್ಥೆಯನ್ನೇ ಉತ್ತರದ ಕಡೆಗೆ ಸೆಳೆದಿದೆ, ಆದ್ದರಿಂದ ಈ ಪ್ರದೇಶದಲ್ಲಿ ಮಳೆಯು ಕೆಲವೇ ದಿನಗಳಲ್ಲಿ ಬಲವಾಗಲು ಶುರುವಾಗಿದೆ. ಮತ್ತು ಆಗಾಗ್ಗೆ ಅದು ಕಂಡುಬಂದಿದೆ.

ಉತ್ತರ ಆಫ್ರಿಕಾವು ಈಗಾಗಾಗಲೇ ಒಂದು ವರ್ಷದ ಅವಧಿಯ ಮಳೆಯನ್ನ ಏಕಕಾಲದಲ್ಲಿ ಪಡೆದಿದೆ. ಆದ್ದರಿಂದ ಸಾಮಾನ್ಯವಾಗಿ ಒಣ ಪ್ರದೇಶಗಳಾದ ನೈಜರ್, ಚಾಡ್, ಸುಡಾನ್, ಲಿಬಿಯಾ ಮತ್ತು ಈಜಿಪ್ಟ್ ಪ್ರದೇಶಗಳು ಕಳೆದ ಜುಲೈನಿಂದ ಯಾವಾಗಲೂ ಸುರಿಯುತ್ತಿದ್ದ ಮಳೆಯ ಪ್ರಮಾಣಕ್ಕಿಂತ 400% ಕ್ಕಿಂತ ಹೆಚ್ಚು ಪಡೆದಿವೆ. ಈಗಾಗಲೇ ಇಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಸುಮಾರು 4 ಮಿಲಿಯನ್ ಜನರು ತೀವ್ರವಾಗಿ ಬಾಧಿತರಾಗಿದ್ದಾರೆ, ಮತ್ತು ಸಹರಾ ಮರುಭೂಮಿಯು ಇರಬೇಕಾದುದಕ್ಕಿಂತ ಆರು ಪಟ್ಟು ತೇವವಾಗಿರೋದು ಕಂಡುಬಂದಿದೆ.
ಇದನ್ನೂ ಓದಿ ಉದಯನಿಧಿಯ ಉದಯ; ಕುಟುಂಬ ರಾಜಕಾರಣವೆಂಬುದು ಜನತಂತ್ರದ ಕೊರಳಿಗೆ ಬಿಗಿದ ಒರಳುಕಲ್ಲು
ಏತನ್ಮಧ್ಯೆ, ಚಂಡಮಾರುತಗಳು ಬದಲಾದ ಕಾರಣ, ನೈಜೀರಿಯಾ ಮತ್ತು ಕ್ಯಾಮರೂನ್ ನಂತಹ ಹೆಚ್ಚಿನ ಮಳೆ ಪಡೆಯಬೇಕಾದ ಕೆಲವು ದೇಶಗಳಲ್ಲಿ ಕಡಿಮೆ ಮಳೆಯಾಗಿದೆ. ಅಂದರೆ ಕಳೆದ ಜುಲೈನಿಂದ ಅಲ್ಲಿನ ಸಾಮಾನ್ಯ ಮಳೆಯ ಪ್ರಮಾಣದ 50 ರಿಂದ 80% ರಷ್ಟು ಮಳೆಯನ್ನ ಪಡೆದಿದ್ದಾರೆ. ಇದು ಕೇವಲ ಆರಂಭ ಮಾತ್ರ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹವಾಮಾನ ಬದಲಾವಣೆಯು ಭೂಮಿಯ ಋತುಗಳಿಗೆ ಅಡ್ಡಿಪಡಿಸುತ್ತಿದೆ, ಇದರಿಂದ ನೈಸರ್ಗಿಕ ವಿಪತ್ತುಗಳು ಇನ್ನಷ್ಟು ಹದಗೆಡಲಿದೆ. ಮತ್ತು ಇದು ಮುಂದೆ ಭಾರೀ ಪ್ರಮಾಣದ ಪರಿಣಾಮಗಳನ್ನು ಆಹ್ವಾನಿಸುತ್ತಿದೆ. ಆದ್ದರಿಂದ ಸಹರಾ ತನ್ನ ಹೊಸ ಹಸಿರಿನಿಂದ ಆಕರ್ಷಕವಾಗಿ ಕಾಣುತ್ತದೆ ಅಂದರೆ ಅದು ಸಂಭ್ರಮದ ವಿಷಯವಲ್ಲ.
ಕಾಡು ನಾಡಗಬೇಕು ನಾಡು ಕಾಡಗಬೇಕು ಸಿದ್ದಯ್ಯ ಸ್ವಾಮಿ ಬನ್ನಿ….