‌ತಬ್ಬಲಿ ಹಸುಗೂಸುಗಳ ಚೀತ್ಕಾರ: ಸಮಾಜದ ಆತ್ಮಸಾಕ್ಷಿಗೆ ಪ್ರಶ್ನೆ

Date:

ಒಂದು ಸಮಾಜದ ಶ್ರೇಷ್ಠತೆ ಅದರ ಸಂಪತ್ತಿನಲ್ಲಿ ಅಲ್ಲ; ತಬ್ಬಲಿ ಹಸುಗೂಸುಗಳ ಕಣ್ಣೀರು ಒರೆಸುವ ಸಾಮರ್ಥ್ಯದಲ್ಲಿದೆ. ಯಾವುದೇ ಜೀವ ತಬ್ಬಲಿಯಾಗಿ ಬೀದಿಯಲ್ಲಿ ಚೀತ್ಕರಿಸದಂಥ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಸಾಮೂಹಿಕ ಸಂಕಲ್ಪವಾಗಬೇಕು. 

ಮಗು ಹುಟ್ಟಿದಾಗ ದೇವರು ಮನುಷ್ಯನ ಮೇಲೆ ಕರುಣೆ ಇಟ್ಟಿದ್ದಾನೆ ಎಂದು ಹೇಳುತ್ತಾರೆ. ಆದರೆ ಆ ಮಗುವನ್ನೇ ತಬ್ಬಲಿ ಮಾಡಿ ಬೀದಿಯ ಅಂಚಿನಲ್ಲಿ ಅನಾಥವಾಗಿ ಬಿಟ್ಟುಹೋದಾಗ, ಒಡೆಯುವುದು ಕೇವಲ ಒಂದು ಕುಟುಂಬವಲ್ಲ; ಮಾನವೀಯತೆಯೇ ಒಡೆಯುತ್ತದೆ. ಮಗು ಪ್ರಕೃತಿಯ ಅತ್ಯಂತ ಸುಂದರ ಸೃಷ್ಟಿ. ಒಂದು ಮಗು ಜನಿಸಿದ ಕ್ಷಣದಿಂದ ಮನೆಗೆ ಹೊಸ ಬೆಳಕು ಬರುತ್ತದೆ. ಹಸುಗೂಸುಗಳ ಮೊದಲ ಅಳು ಜೀವನದ ಆರಂಭದ ಸಂಕೇತವಾಗಿದ್ದರೆ, ತಾಯಿಯ ಮೊದಲ ಸ್ಪರ್ಶ ಭದ್ರತೆಯ ಮೊದಲ ಭಾಷೆಯಾಗುತ್ತದೆ. ಆ ಪುಟ್ಟ ಕೈಗಳು ಭವಿಷ್ಯದ ಕನಸುಗಳನ್ನು ಹಿಡಿದಿರುತ್ತವೆ. ಅದರ ಕಣ್ಣುಗಳಲ್ಲಿ ನಾಳೆಯ ಸಮಾಜದ ಪ್ರತಿಬಿಂಬ ಅಡಗಿರುತ್ತದೆ.

- Advertisement -

ಆದರೆ, ಈ ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ಮಗುವಿಗೂ ಈ ಭಾಗ್ಯ ಸಿಗುವುದಿಲ್ಲ. ಕೆಲವು ಮಕ್ಕಳು ಜನಿಸಿದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯ ಹಿಂಭಾಗದಲ್ಲಿ, ದೇವಾಲಯದ ಮೆಟ್ಟಿಲುಗಳಲ್ಲಿ, ಬಸ್ ನಿಲ್ದಾಣದಲ್ಲಿ, ಕಸದ ರಾಶಿಯ ಬಳಿ ಅಥವಾ ಬೀದಿ ಬದಿಯಲ್ಲಿ ಅನಾಥವಾಗುತ್ತಾರೆ. ಪ್ರೀತಿಯ ತೊಟ್ಟಿಲಿನಲ್ಲಿ ತೂಗಬೇಕಿದ್ದ ಬಾಲ್ಯ ಧೂಳಿನ ನಡುವೆ ರೋಧಿಸುತ್ತದೆ. ತಾಯಿಯ ಎದೆಯ ಬೆಚ್ಚಗಿನ ಅಪ್ಪುಗೆಯಲ್ಲಿ ಬೆಳೆಯಬೇಕಿದ್ದ ಜೀವ ಚಳಿಗಾಳಿಯ ನಡುವೆ ನಲುಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ಒಂದು ಬೆಳಗಿನ ಜಾವ ರಸ್ತೆಬದಿ ಬಟ್ಟೆ ಸುತ್ತಿರುವ ಸ್ಥಿತಿಯಲ್ಲಿ ಹಸುಗೂಸೊಂದು ಅಳುತ್ತಿತ್ತೆಂದು ಕಲ್ಪಿಸಿಕೊಂಡರೆ, ಆ ತಬ್ಬಲಿ ಹಸುಗೂಸಿನ ಅಳುವಿನಲ್ಲಿ ಹಸಿವು, ಚಳಿ, ಭಯ ಇರುತ್ತದೆ. ಆದರೆ ಅದಕ್ಕಿಂತ ಹೆಚ್ಚಾಗಿ ಬದುಕಬೇಕೆಂಬ ಹಂಬಲವಿರುತ್ತದೆ. ತನ್ನ ತಾಯಿಯ ಮುಖವನ್ನು ಸರಿಯಾಗಿ ನೋಡವ ಮುನ್ನವೇ ಅದು ಏಕಾಂತವನ್ನು ಎದುರಿಸುತ್ತಿರುತ್ತದೆ. ಆ ಪುಟ್ಟ ಜೀವದ ತಪ್ಪೇನು? ಅದು ಈ ಜಗತ್ತಿಗೆ ಬಂದದ್ದೇ ಅದರ ಅಪರಾಧವೇ?

ಈ ಪ್ರಶ್ನೆಗಳು ಕೇವಲ ಒಂದು ಮಗುವಿನ ಪ್ರಶ್ನೆಗಳಲ್ಲ. ಅವು ನಮ್ಮ ಸಮಾಜದ ಆತ್ಮಸಾಕ್ಷಿಗೆ ಕೇಳುವ ಪ್ರಶ್ನೆಗಳು. ನಾವು ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ ಮತ್ತು ಅಭಿವೃದ್ಧಿಯ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ಒಂದು ನವಜಾತ ಮಗು ಬೀದಿಯಲ್ಲಿ ಅಳುತ್ತಿದ್ದರೆ, ನಮ್ಮ ಅಭಿವೃದ್ಧಿಯ ಅರ್ಥವೇನು? ಸಮಾಜದ ನಿಜವಾದ ಪ್ರಗತಿ ಅಡಗಿರುವುದು ಅಸಹಾಯಕರನ್ನು ರಕ್ಷಿಸುವ ಹೃದಯಗಳಲ್ಲಿಯೇ ಹೊರತು ಎತ್ತರದ ಕಟ್ಟಡಗಳಲ್ಲಿ ಅಲ್ಲ.

ಮಗುವನ್ನು ಬೀದಿಯಲ್ಲಿ ಬಿಟ್ಟುಹೋಗುವ ಘಟನೆಗಳ ಹಿಂದೆ ಅನೇಕ ಸಂಕೀರ್ಣ ಕಾರಣಗಳಿರಬಹುದು. ಕೆಲವರು ಬಡತನದಿಂದ, ಕೆಲವರು ಕುಟುಂಬದ ಬೆಂಬಲದ ಕೊರತೆಯಿಂದ, ಕೆಲವರು ಸಾಮಾಜಿಕ ಕಳಂಕದ ಭಯದಿಂದ, ಮತ್ತೂ ಕೆಲವರು ತೀವ್ರ ಮಾನಸಿಕ ಸಂಕಷ್ಟಗಳಿಂದ ಇಂತಹ ನಿರ್ಧಾರಕ್ಕೆ ತಳ್ಳಲ್ಪಡಬಹುದು. ಈ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಆದರೆ ಯಾವುದೇ ಕಾರಣಗಳಿಗೂ ಒಂದು ನಿರಪರಾಧಿ ಮಗುವಿನ ಬದುಕಿನ ಹಕ್ಕನ್ನು ಕಸಿದುಕೊಳ್ಳುವ ಹಕ್ಕಿಲ್ಲ.

ಬಡತನ ಮನುಷ್ಯನನ್ನು ದುರ್ಬಲನನ್ನಾಗಿ ಮಾಡಬಹುದು; ಆದರೆ ಮಗುವಿನ ಬದುಕನ್ನು ಕೊನೆಗಾಣಿಸುವ ಕಾರಣವಾಗಬಾರದು. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು, ಗರ್ಭಿಣಿಯರಿಗೆ ಆರೋಗ್ಯ ಸೇವೆ, ಮಾನಸಿಕ ಸಮಾಲೋಚನೆ ಮತ್ತು ಸಾಮಾಜಿಕ ಬೆಂಬಲ ದೊರಕಿದರೆ ಇಂತಹ ದುಃಖದ ಘಟನೆಗಳನ್ನು ಕಡಿಮೆ ಮಾಡಬಹುದು.

ಸಮಾಜದಲ್ಲಿ ಕೆಲವೊಮ್ಮೆ ಜನರ ಟೀಕೆ ಮತ್ತು ಕಳಂಕದ ಭಯವೂ ಕೂಡ ದೊಡ್ಡ ಸಮಸ್ಯೆಯಾಗುತ್ತದೆ. ತಪ್ಪು ಮಾಡಿದವರನ್ನು ದೂಷಿಸುವುದಕ್ಕಿಂತ, ಸಂಕಷ್ಟದಲ್ಲಿರುವವರಿಗೆ ಬೆಂಬಲ ನೀಡುವ ಮನೋಭಾವ ಬೆಳೆಯಬೇಕು. ಮಾನವೀಯತೆ ಎಂದರೆ ತೀರ್ಪು ಕೊಡುವುದು ಅಲ್ಲ; ಕೈಹಿಡಿಯುವುದು.
ಬೀದಿಯಲ್ಲಿ ಬಿದ್ದಿರುವ ಮಗುವಿಗೆ ಹಸಿವು, ಚಳಿ, ಅನಾರೋಗ್ಯ ಮತ್ತು ಅಪಾಯಗಳು ಮಾತ್ರವಲ್ಲ, ಪ್ರೀತಿಯ ಕೊರತೆಯೂ ದೊಡ್ಡ ನೋವಾಗಿದೆ. ಆ ಮಗುವಿಗೆ ತನ್ನ ಜನನದ ಕಥೆ ಗೊತ್ತಿರುವುದಿಲ್ಲ. ಆದರೆ ಅದರ ಕಣ್ಣೀರು ನಮ್ಮನ್ನು ಕೇಳುತ್ತದೆ; ʼನಾನು ಬದುಕಲು ಅರ್ಹವಲ್ಲವೇ? ನನಗೂ ಒಂದು ಮನೆ, ಒಂದು ಮಡಿಲು, ಒಂದು ಪ್ರೀತಿಯ ಪಡೆಯುವ ಹಕ್ಕಿಲ್ಲವೇ?ʼ ಎಂದು. ಇದಕ್ಕೆ ಸಮಾಜವೇ ಉತ್ತರ ನೀಡಬೇಕು.

ಪ್ರತಿಯೊಂದು ಮಗುವಿಗೂ ಬದುಕುವ ಹಕ್ಕು ಇದೆ. ಸುರಕ್ಷಿತ ಬಾಲ್ಯ, ಶಿಕ್ಷಣ, ಆರೋಗ್ಯ ಮತ್ತು ಪ್ರೀತಿಯಿಂದ ಬೆಳೆಯುವ ಅವಕಾಶ ಅದರ ಮೂಲಭೂತ ಹಕ್ಕುಗಳನ್ನು ಕಾಪಾಡುವುದು ಕೇವಲ ಪೋಷಕರ ಕರ್ತವ್ಯವಲ್ಲ; ಅದು ಸಮಾಜ, ಸರ್ಕಾರ ಮತ್ತು ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ.

ಬೀದಿಯಲ್ಲಿ ಬಿದ್ದಿರುವ ಒಂದು ಮಗುವನ್ನು ನೋಡಿದಾಗ ನಾವು ಕೇವಲ ಪ್ರೇಕ್ಷಕರಾಗಬಾರದು. ಅದರ ಸುರಕ್ಷತೆಯನ್ನು ಖಚಿತಪಡಿಸುವುದು, ಸಂಬಂಧಿತ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಮತ್ತು ಅಗತ್ಯ ನೆರವು ಒದಗಿಸಲು ಮುಂದಾಗುವುದು ನಮ್ಮ ಮಾನವೀಯ ಕರ್ತವ್ಯ.

ಇದನ್ನೂ ಓದಿದ್ದೀರಾ? ಕಾಡಿನಿಂದ ಕಡಲಾಚೆಗೆ : ಅಲೆಮಾರಿ ಹಕ್ಕಿಪಿಕ್ಕಿ ಜನಾಂಗ ವಿದೇಶಗಳಲ್ಲಿ ಸಿಕ್ಕಿಬೀಳುತ್ತಿರುವುದು ಯಾಕೆ?

ಇಂದು ನಾವು ಉಳಿಸುವ ಒಂದು ಮಗು, ನಾಳೆ ಸಮಾಜವನ್ನು ಉಳಿಸುವ ವ್ಯಕ್ತಿಯಾಗಬಹುದು. ಅಂದರೆ ವೈದ್ಯನಾಗಬಹುದು, ಶಿಕ್ಷಕನಾಗಬಹುದು, ವಿಜ್ಞಾನಿಯಾಗಬಹುದು, ಕಲಾವಿದನಾಗಬಹುದು ಅಥವಾ ದೇಶಕ್ಕೆ ಸೇವೆ ಮಾಡುವ ನಾಗರಿಕನಾಗಬಹುದು. ಆದ್ದರಿಂದ ಮಗುವಿನ ಮೌಲ್ಯವನ್ನು ಅದರ ಜನನದ ಪರಿಸ್ಥಿತಿಯಿಂದ ಅಲ್ಲ, ಅದರ ಮಾನವೀಯತೆಯಿಂದ ಅಳೆಯಬೇಕು.

ಒಂದು ಸಮಾಜದ ಶ್ರೇಷ್ಠತೆ ಅದರ ಸಂಪತ್ತಿನಲ್ಲಿ ಅಲ್ಲ; ತಬ್ಬಲಿ ಹಸುಗೂಸುಗಳ ಕಣ್ಣೀರು ಒರೆಸುವ ಸಾಮರ್ಥ್ಯದಲ್ಲಿದೆ. ಯಾವುದೇ ಜೀವ ತಬ್ಬಲಿಯಾಗಿ ಬೀದಿಯಲ್ಲಿ ಚೀತ್ಕರಿಸದಂಥ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಸಾಮೂಹಿಕ ಸಂಕಲ್ಪವಾಗಬೇಕು. ಮಕ್ಕಳು ದೇವರ ಕೊಡುಗೆ; ಅವುಗಳನ್ನು ತ್ಯಜಿಸುವುದು ಮಾನವೀಯತೆಯ ಸೋಲು. ಎಳೆಯ ಜೀವಗಳನ್ನು ಪ್ರೀತಿಯಿಂದ ಕಾಪಾಡುವುದು ನಮ್ಮ ನಾಗರಿಕತೆಯ ಗೆಲುವು

ಆರ್‌ ಕಾವೇರಿ
ಬರಹ : ಆರ್ ಕಾವೇರಿ
ಬರಹ : ಆರ್ ಕಾವೇರಿ, ಸಂಶೋಧನ ವಿದ್ಯಾರ್ಥಿನಿ
ಕನ್ನಡ ವಿಶ್ವವಿದ್ಯಾಲಯ, ಹಂಪಿ
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಖಾಸಗಿ ಬಸ್‌ಗಳ ದುಬಾರಿ ಟಿಕೆಟ್ ದರಕ್ಕೆ ಕಡಿವಾಣ ಹಾಕಿ

ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ...

ಜನಗಣತಿಯಲ್ಲೂ ಆರೆಸ್ಸೆಸ್‌ ಹಸ್ತಕ್ಷೇಪದ ಆತಂಕ: ಕೇಂದ್ರದ ಹೊಸ ನಿಯಮಕ್ಕೆ ಕಾಂಗ್ರೆಸ್ ಆಕ್ಷೇಪ!

2027ರ ಜನಗಣತಿಗೆ ಗಣತಿದಾರರಾಗಿ ಕಾರ್ಯನಿರ್ವಹಿಸುವವರ ಅರ್ಹತಾ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿರುವುದು...