ರಿಪಬ್ಲಿಕ್ ಆಫ್ ಮಹಾರಾಣಿ ಕ್ಲಷ್ಟರ್ ವಿಶ್ವವಿದ್ಯಾಲಯವೂ; ಕಾಲೇಜು ಶಿಕ್ಷಣ ಇಲಾಖೆಯ ವರ್ಗಾವಣೆಯ ಅವಾಂತರವೂ

Date:

Advertisements
ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಾಧ್ಯಾಪಕರ ವರ್ಗಾವಣೆಯಲ್ಲಿ ಗೊಂದಲ, ಗೋಜಲು, ಪಕ್ಷಪಾತ, ವರ್ಗಹಿತಾಸಕ್ತಿಯ ರಾಜಕಾರಣ ನಡೆಯುತ್ತಿದ್ದರೂ ಏಕೆ ಇಲಾಖೆ ಜಾಣಮೌನ ವಹಿಸಿದೆ. ಸಂವಿಧಾನಬದ್ಧವಾದ ಸರ್ಕಾರದ ಈ ಉನ್ನತ ಶಿಕ್ಷಣ ಸಂಸ್ಥೆಗಳೇ ಹೀಗಾದರೆ ಶಿಕ್ಷಣದ ಗತಿಯೇನು...

ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಯ ಈ ಸಲದ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ನಿಯಮಾನುಸಾರ ಪ್ರಕ್ರಿಯೆಗೊಳ್ಳಬೇಕಾದ ವರ್ಗಾವಣೆಯು, ಗುಂಪುಗಾರಿಕೆ, ಸ್ವಜಾತಿ ಪಕ್ಷಪಾತ ಹಾಗೂ ಪಾರದರ್ಶಕವಾಗಿಲ್ಲ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಹೆಚ್ಚುವರಿ ಆಯುಕ್ತರು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ಒಂದು ಸಭೆಯನ್ನು ಮಾಡಿ ಅದರಂತೆ ಕಾಲೇಜು ಶಿಕ್ಷಣ ಇಲಾಖೆಯು ವರ್ಗಾವಣೆಗೆ ಬೇಕಾದ ನಡಾವಳಿಯನ್ನು ರೂಪಸಿ, ಇದರ ಅನ್ವಯದಂತೆ ಕ್ಲಷ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಿಗೆ ಕಡ್ಡಾಯ ವರ್ಗಾವಣೆಗೆ ತಂದು ಅವರುಗಳ ಜೇಷ್ಠತೆಯನುಸಾರವಾಗಿ ಸ್ಥಳವನ್ನು ತೋರಿಸಿ, ಆ ಸ್ಥಳಕ್ಕೆ ಆಪ್ಟ್ ಇನ್ ಹಾಗೂ ಆಪ್ಟ್ ಔಟ್ ಅವಕಾಶವನ್ನು ಕಲ್ಪಿಸಲಾಯಿತು. ಆದರೆ ಇಲ್ಲಿಯವರೆಗೂ ಆಪ್ಟ್ ಇನ್, ಆಪ್ಟ್ ಔಟ್ ಆಗದೆಯೇ ಕಡ್ಡಾಯ ವರ್ಗಾವಣೆಯಲ್ಲಿ ಸುಖಾಸುಮ್ಮನೆ ಜೇಷ್ಠತೆಯನ್ನು ನೆಪ ಮಾಡಿಕೊಂಡು ವರ್ಗಾವಣೆಯ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿ ಸ್ಥಳ ಪಡೆದರೂ ಆ ಜಾಗದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಬೆಂಗಳೂರಿನಲ್ಲಿಯೇ ಮಹಾರಾಣಿ ಕ್ಲಷ್ಟರ್ ವಿಶ್ವವಿದ್ಯಾಲಯದ ಅಧ್ಯಾಪಕರುಗಳು ಹಾಗೂ ವಿಹೆಚ್ ಡಿ ಕಾಲೇಜು, ನೃಪತುಂಗ ಕಾಲೇಜುಗಳ ಪ್ರಾಧ್ಯಾಪಕರಿಗಳು ಅಲ್ಲಿಯೇ ಮುಂದುವರಿದಿದ್ದಾರೆ.

ಇದನ್ನು ಓದಿದ್ದೀರಾ?: ನೆನಪು | ಮೌನಕ್ರಾಂತಿಯ ಹರಿಕಾರ ರಾಗಿತಜ್ಞ ಲಕ್ಷ್ಮಣಯ್ಯ: ಕೆ. ಪುಟ್ಟಸ್ವಾಮಿ ಬರೆಹ

Advertisements

ಮತ್ತೆ ಈ ಸ್ಥಳಗಳನ್ನು ಈ ಅಧ್ಯಾಪಕರಿಗೆಂದೇ ಕಾಯ್ದಿರಿಸುವುದರ ಪರಿಣಾಮವಾಗಿ ಬೇರೆ ಯಾವುದೇ ಕಾಲೇಜು ಶಿಕ್ಷಣದ ಮಾತೃ ಇಲಾಖೆಯ ಪ್ರಥಮದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಈ ಸ್ಥಳಗಳೂ ಲಭ್ಯವಾಗುತ್ತಿಲ್ಲ. ಮತ್ತೆ ಹೀಗೆ ಕಾಯ್ದಿರಿಸಿದ ಬೆಂಗಳೂರಿನ ಆಸುಪಾಸಿನ ಸುಮಾರು 120 ಸ್ಥಳಗಳು ಹುದ್ಧೆಸಮೇತ ಖಾಲಿ ಉಳಿದಿರುತ್ತವೆ. ಹಾಗೆಯೇ ಈಗಾಗಲೇ ಈ ಬೆಂಗಳೂರಿನ ಕಾಲೇಜಿನ ಆಪ್ಟ್ ಇನ್ ಹಾಗೂ ಆಪ್ಟ್ ಔಟ್ ಗೆ ಒಳಪಡುವ ಈ ಅಧ್ಯಾಪಕರುಗಳು ವರ್ಗಾವಣೆಯಲ್ಲಿ ತಾವು ಅತಿ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜುಗಳನ್ನು ವರ್ಗಾವಣೆಯಲ್ಲಿ ಆಯ್ಕೆ ಮಾಡಿಕೊಂಡು ಆ ಕಾಲೇಜಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಗೆ ಪ್ರಗತಿಗೆ ಹಿನ್ನಡೆಯಾಗಲೂ ಕಾರಣಕರ್ತರಾಗಿರುತ್ತಾರೆ.

ವರ್ಗಾವಣೆಯಲ್ಲಿ ಇಲಾಖೆಯ ಮಾತೃ ಕಾಲೇಜುಗಳ ಅಧ್ಯಾಪಕರಿಗೊಂದು ನಿಯಮ ಹಾಗೂ ಮಹಾರಾಣಿ ಕ್ಲಷ್ಟರ್  ವಿಶ್ವವಿದ್ಯಾಲಯದ ಅಧ್ಯಾಪಕರಿಗೊಂದು ನಿಯಮ ಹಾಗೂ ಮಾನದಂಡವನ್ನು ಇಲಾಖೆ ಏಕೆ ಅನುಸರಿಸುತ್ತಿದೆ. ಈ ಬೆಳವಣಿಗೆಯಿಂದಾಗಿ ಹಿಂದಿನ ಎರಡು ವರ್ಷಗಳ ವರ್ಗಾವಣೆಯಲ್ಲಿ ಸರಿಸುಮಾರು 120 ಮಹಾರಾಣಿ ಮೊದಲಾದ ಕಾಲೇಜಿನ ಪ್ರಾಧ್ಯಾಪಕರುಗಳಿಗೆ ಸ್ಥಳಗಳನ್ನು ಕಾಯ್ದಿರಿಸಲಾಗಿದೆ. ವರ್ಗಾವಣೆ ವಿಚಾರದಲ್ಲಿ ಇಲಾಖೆ ಈ ಬಗೆಯ ಇಬ್ಬಂದಿತನವನ್ನು ಅನುಸರಿಸುತ್ತಿದೆ ಎಂಬ ಆಪಾದನೆಗೆ ಇಲಾಖೆ ಏಕೆ ಗುರಿಯಾಗಬೇಕು.

ಅಲ್ಲದೆ, ಸಾವಿರಾರು ಮಾತೃ ಇಲಾಖೆಯ ಪ್ರಾಧ್ಯಾಪಕರುಗಳಿಗೆ ಈ ಬೆಂಗಳೂರಿನ ಅಧ್ಯಾಪಕರುಗಳಿಗೆ ಕಾಯ್ದರಿಸಿದ ಸ್ಥಳಗಳನ್ನು ಪ್ರತಿ ಸಲದ ವರ್ಗಾವಣೆಯಲಿ ತೋರಿಸದೆ ವಂಚಿಸಲಾಗುತ್ತಿದೆ. ಜೊತೆಗೆ ಎರಡೂ ವರ್ಷ ವಯೋನಿವೃತ್ತಿ ಹೊಂದುವ ಪ್ರಾಧ್ಯಾಪಕರುಗಳಿಗೆ ವಿನಾಯಿತಿ ನೀಡಿ, ತದನಂತರದಲ್ಲಿ ಬರುವ ವಲಯವಾರು ಇನ್ನುಳಿದ ಪ್ರಾಧ್ಯಾಪಕರುಗಳನ್ನು ಜೇಷ್ಠತೆಯ ಪಟ್ಟಿಯಿಂದ ಕೈ ಬಿಟ್ಟು, ವರ್ಗಾವಣೆ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದಾಗಿ ವರ್ಗಾವಣೆಯ ಅಧಿಸೂಚನೆಗಳಂತೆ ಶೇ. 15 ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ವರ್ಗಾವಣೆ ಮಾಡುತ್ತಿರುವುದು ಎಷ್ಟು ಸಮಂಜಸ. ಹಾಗಾದರೆ ವರ್ಗಾವಣೆಗೆ ಯಾವ ಕಾಯ್ದೆಯನ್ನು ಅನುಸರಿಸಲಾಗುತ್ತಿದೆ ಎಂಬುದನ್ನು ಇಲಾಖೆ ಸ್ಪಷ್ಟಪಡಿಸುತ್ತಿಲ್ಲವೇಕೆ. ಅದರಲ್ಲಿಯೂ ನಗರದ ಎ ವಲಯದಲ್ಲಿ ಕಡ್ಡಾಯ ವರ್ಗಾವಣೆಯ ಶೇ. 9ರಷ್ಟು ಪ್ರಮಾಣದಲ್ಲಿ ವರ್ಗಾವಣೆ ಮಾಡುವಲ್ಲಿ ಇಲಾಖೆ ಲೋಪವೆಸಗಿದ್ದು, ಬೆಂಗಳೂರ ನಗರದ ಹಿತಾಸಕ್ತಿಗೋಸ್ಕರವೇ ವರ್ಗಾವಣೆಯ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ. ಈ ಪ್ರಕ್ರಿಯೆಯಿಂದಾಗಿ ಇನ್ನುಳಿದ ಕರ್ನಾಟಕದ ಎಲ್ಲ ಪ್ರಥಮದರ್ಜೆಯ ಪ್ರಾಧ್ಯಾಪಕರುಗಳು ತಾವು ವರ್ಗಾವಣೆಗೆ ಅರ್ಹರಾಗಿದ್ದರೂ ಇವರುಗಳನ್ನು ಜೇಷ್ಠತೆಯ ಪಟ್ಟಿಯಿಂದ ಕೈಬಿಡಲಾಗಿದೆ. ಇದು ಅನ್ಯಾಯವಲ್ಲವೆ. ಈ ಬಗ್ಗೆ ಯಾರ ಬಳಿ ದೂರು ನೀಡುವುದು.

ಹಿಂದಿನ ಎರಡುವರ್ಷಗಳ ಹುದ್ಧೆ ಸಮೇತವಾಗಿ ಕಾರ್ಯಭಾರವಿಲದೆ ಸ್ಳಳಾಂತರಗೊಂಡ ಪ್ರಾಧ್ಯಾಪಕರುಗಳನ್ನು ಪ್ರಸ್ತುತ ವರ್ಷದ ವರ್ಗಾವಣೆಯಲ್ಲಿ ಜೇಷ್ಠತೆ ಪಟ್ಟಿಯಲ್ಲಿ ತೋರಿಸಿ ಕಡ್ಡಾಯ ವರ್ಗಾವಣೆಗೆ ಗುರಿಪಡಿಸಲಾಗಿದೆ. ಇವರ ಸೇವಾವಧಿಯು ಪ್ರಸ್ತುತ ಸ್ಥಳಾಂತರಗೊಂಡ ಕಾಲೇಜುಗಳಲ್ಲಿದ್ದು, ಸದರಿ ಈ ಅಧ್ಯಾಪಕರುಗಳ ಹೆಸರನ್ನು ತಾವು ಈ ಹಿಂದೆ ಸೇವೆ ಸಲ್ಲಿಸಿದ್ದ ಕಾಲೇಜುಗಳಲ್ಲಿಯೇ ತೋರಿಸಲಾಗಿದ್ದು, ಈಗ ಇವರುಗಳನ್ನು ಕಡ್ಡಾಯ ವರ್ಗಾವಣೆಯ ಪಟ್ಟಿಯಲ್ಲಿ ಸೇರಿಸಿ ವಿನಾಕಾರಣ ಈ ಅಧ್ಯಾಪಕರುಗಳಿಗೂ ಕಿರುಕುಳ ಹಾಗೂ ಮಾನಸಿಕವಾಗಿ ಕಿರಿಕಿರಿ ನೀಡಲಾಗುತ್ತಿದೆ.

ಇದನ್ನು ಓದಿದ್ದೀರಾ?: ನೆನಪು | ಗಾಂಗುಲಿ ಎಂಬ ಗುರುವಿಗೆ ಸಲಾಂ ಎಂಬ ಅದ್ವಿತೀಯ ಶಿಷ್ಯನೊಬ್ಬನ ಅಪರೂಪದ ಕಾಣಿಕೆ

ಈ ವರ್ಗಾವಣೆಯು ಬೆಂಗಳೂರಿನಲ್ಲಿರುವ ಎ ಜೋನ್ ವಲಯದ ಅಧ್ಯಾಪಕರುಗಳ ಹಿತಾಸಕ್ತಿ ಕಾಪಾಡಲು ಹೆಚ್ಚು ಅನುಕೂಲವಾಗುತ್ತಿದೆಯೇ ಹೊರತು, ಕರ್ನಾಟಕದ ಎಲ್ಲ ಕಾಲೇಜುಗಳಲ್ಲಿರುವ ಅಧ್ಯಾಪಕರುಗಳಿಗೆ ಈ ಬಗೆಯ ವರ್ಗಾವಣೆ ಅನಾನೂಕೂಲವನ್ನುಂಟು ಮಾಡುತ್ತದೆಂದೇ ಹೇಳಬೇಕಾಗುತ್ತದೆ. ಏಕೆ ಈ ಪಕ್ಷಪಾತೀಯ ಧೋರಣೆಯನ್ನು ಇಲಾಖೆ ಅನುಸರಿಸುತ್ತಿದೆ.

ಆಶ್ವರ್ಯವೆಂದರೆ, ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ವರ್ಗಾವಣೆಗೆ ಒಳಗಾದ ಬೋಧಕ ಸಿಬ್ಬಂಧಿಯೇ ಈ ವರ್ಗಾವಣೆಯ ನಿಯಮ ಹಾಗೂ ಅಧಿಸೂಚನೆಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದಾರೆ ಎಂಬ ಆರೋಪವಿದೆ. ಇದು ಇಲಾಖೆ ಕಾರ್ಯದಕ್ಷತೆಗೆ ಕುಂದುಂಟು ಮಾಡುವುದಿಲ್ಲವೆ. ಇದು ಎಷ್ಟರ ಮಟ್ಟಿಗೆ ಸರಿಯೆನಿಸಿದೆ. ಮತ್ತೆ ಬೋಧಕೇತರ ಸಿಬ್ಬಂದಿಗಳನ್ನು ಇಲಾಖೆ ನಿಯೋಜಿಸದೆ, ವರ್ಗಾವಣೆಗೆ ಒಳಗಾಗುವ ಅಧ್ಯಾಪಕರನ್ನೇ ಏಕೆ ಈ ವರ್ಗಾವಣೆಗೆ ಬಳಸಿಕೊಳ್ಳುತ್ತಿದೆ. ಇವರುಗಳು ತಮ್ಮ ತಮ್ಮ ಕಾಲೇಜುಗಳಲ್ಲಿ ಪಾಠ ಮಾಡದೆ, ಕಾಲೇಜಿನ ಕೆಲಸವನ್ನು ನಿರ್ವಹಿಸದೆ, ಕೇಂದ್ರ ಕಛೇರಿಯಲ್ಲಿ ಬೋಧಕೇತರ ಕೆಲಸಗಳನ್ನು ಮಾಡಲು ನಿಯೋಜನೆಗೆ ಒಳಗಾಗಿರುವುದು ಯು.ಜಿ.ಸಿ ನಿಯಮಗಳಿಗೆ ವಿರುದ್ಧವಾಗಿದೆ.

ಈ ವಿಚಾರ ಇಲಾಖೆಗೆ ತಿಳಿದಿರುವುದಿಲ್ಲವೆ. ಅಲ್ಲದೆ ಈ ಕೇಂದ್ರ ಕಛೇರಿಯಲ್ಲಿ ಉಳಿಯುವ ಇವರುಗಳು ಜಾತಿ ಪ್ರಭಾವ ಹಾಗೂ ರಾಜಕಾರಣವನು ಬಳಸಿ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿಯೇ ಉಳಿಯುವಂತೆ ಏಕೆ ಇವರನ್ನು ಇಲಾಖೆ ಕಾಪಾಡುತ್ತಿದೆ. ನೈತಿಕವಾಗಿ ಇದು ಇಲಾಖೆಗೆ ಎಷ್ಟು ಸರಿ. ಮತ್ತೆ ಒಂದೇ ಜಾತಿಗೆ ಸೇರಿದವರನ್ನೇ ಹೆಚ್ಚು ವಿಶೇಷಾಧಿಕಾರಿಗಳನ್ನಾಗಿ ನೇಮಕ ಮಾಡಿ, ನಿಯೋಜಿಸಿರುವ ಇಲಾಖೆಯ ಔಚಿತ್ಯವಾದರೂ ಏನು. ಮತ್ತೆ ಇದು ಇವರುಗಳ ಉನ್ನತ ಎಜಿಪಿ ಬಡ್ತಿಗೆ ಯು.ಜಿ.ಸಿ ನಿಯಮಗಳ ಪ್ರಕಾರ ಸರಿ ಹೊಂದುವುದಿಲ್ಲ. ಆದರೂ ಉನ್ನತ ಎಜಿಪಿ ಬಡ್ತಿಯನ್ನು ಇವರು ಹೇಗೆ ಹೊಂದುತ್ತಿದ್ದಾರೆ.

ಆದ್ದರಿಂದ ಉನ್ನತ ಶಿಕ್ಷಣ ಇಲಾಖೆಯಲ್ಲಿಯೇ ಹೀಗೆ ವರ್ಗಾವಣೆಯಲ್ಲಿ ಗೊಂದಲ, ಗೋಜಲು, ಪಕ್ಷಪಾತ, ವರ್ಗಹಿತಾಸಕ್ತಿಯ ರಾಜಕಾರಣ ನಡೆಯುತ್ತಿದ್ದರೂ ಏಕೆ ಇಲಾಖೆ ಜಾಣಮೌನವನ್ನು ವಹಿಸಿದೆ. ಮತ್ತೆ ಸಂವಿಧಾನಬದ್ಧವಾದ ಸರ್ಕಾರದ ಈ ಉನ್ನತ ಶಿಕ್ಷಣ ಸಂಸ್ಥೆಗಳೇ ಹೀಗಾದರೆ ಶಿಕ್ಷಣದ ಗತಿಯೇನು ಎಂಬ ದಿಗಿಲಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X