ಅನುಭವ ಮಂಟಪ ಕುರಿತು ವೀಣಾ ಬನ್ನಂಜೆ ಆಡಿದ್ದು ಅಪ್ಪಟ ಅಪದ್ಧ

Date:

Advertisements

ನಾನು ಇಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದ್ದರೊ ಇಲ್ಲವೊ ಎನ್ನುವ ಕುರಿತು ಸಮಜಾಯಿಷಿ ಕೊಡಲು ಇಚ್ಚಿಸುವುದಿಲ್ಲ. ಏಕೆಂದರೆ ಇಂತಹ ಅಪಕ್ವ ಚಿಂತಕಿಗೆ ಉತ್ತರಿಸುವ ಅಗತ್ಯವಿಲ್ಲ. ಈಕೆಯ ಈ ವಾದವು ಅತ್ಯಂತ ಅಪಕ್ವ, ಬಾಲಿಶ, ಅಧ್ಯಯನರಹಿತ, ಮಾತ್ಸರ್ಯಪೂರಿತ, ಪೂರ್ವಾಗ್ರಹಪೀಡಿತವಾಗಿದೆ ಎನ್ನಲು ಬೇರೆ ಪುರಾವೆಗಳ ಅಗತ್ಯವಿಲ್ಲ. ಹಿಂದೂ ಸಂಸ್ಕೃತಿಯ ಚಿಂತನೆಯ ಹೆಸರಿನಲ್ಲಿ ಈಕೆಯ ಹಾಗೆಯೇ ಹಲಬುವ ಒಂದು ದೊಡ್ಡ ಪಟಾಲಂ ಇಲ್ಲಿ ಕಾರ್ಯ ಮಾಡುತ್ತಿದೆ.

ಕಳೆದ ವಾರ ವೀಣಾ ಬನ್ನಂಜೆ ಎನ್ನುವ ಸಂಘ ಪರಿವಾರದ ಚಿಂತಕಿ ಅಥವಾ ಒಬ್ಬ ಮಾಧ್ವ ಬ್ರಾಹ್ಮಣರ ಕರ್ಮಠ ಹೆಣ್ಣುಮಗಳು ತನ್ನ ಎಂದಿನ ಪರಂಪರಾಗತ ವಿಧ್ವಂಸಕ ದಾಟಿಯಲ್ಲಿ ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪವನ್ನೇ ಸ್ಥಾಪಿಸಲಿಲ್ಲ ಎಂದು ಒಂದು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಆಕೆಯ ಈ ವಾದವು ಅತ್ಯಂತ ಅಪಕ್ವ, ಬಾಲಿಶ, ಅಧ್ಯಯನರಹಿತ, ಮಾತ್ಸರ್ಯಪೂರಿತ, ಪೂರ್ವಾಗ್ರಹಪಿಡೀತವಾಗಿದೆ ಎನ್ನಲು ಬೇರೆ ಪುರಾವೆಗಳ ಅಗತ್ಯವಿಲ್ಲ. ಹಿಂದೂ ಸಂಸ್ಕೃತಿಯ ಚಿಂತನೆಯ ಹೆಸರಿನಲ್ಲಿ ಈಕೆಯ ಹಾಗೆಯೇ ಹಲಬುವ ಒಂದು ದೊಡ್ಡ ಪಟಾಲಮ್ಮೇ ಇಲ್ಲಿ ಕಾರ್ಯನಿರತ ಆಗಿದೆ. ಭಾರತೀಯ ತತ್ವಪರಂಪರೆಯಲ್ಲಿ (ಅಂದರೆ ಕೇವಲ ವೈದಿಕ ಪರಂಪರೆಯಲ್ಲ) ಯಾವೆಲ್ಲ ಅವೈದಿಕ ಪ್ರಗತಿಪರ ಚಿಂತನೆಗಳಿವೆಯೊ ಅವೆಲ್ಲವೂ ಅವೈದಿಕ ದಾರ್ಶನಿಕರು ಹೇಳಿಯೇ ಇಲ್ಲ ಎನ್ನುವುದು ಅಥವಾ ಅವೆಲ್ಲವೂ ವೈದಿಕ ಪರಂಪರೆಯ ಕವಲು ಎನ್ನುವುದು ಈ ಪಟಾಲಮ್ ನ ಅಂಟು ಜಾಡ್ಯ. 

ನಾನು ಇಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದ್ದರೋ ಇಲ್ಲವೋ ಎನ್ನುವ ಕುರಿತು ಸಮಜಾಯಷಿ ಕೊಡಲು ಇಚ್ಚಿಸುವುದಿಲ್ಲ. ಏಕೆಂದರೆ ಇಂತಹ ಅಪಕ್ವ ವ್ಯಕ್ತಿಗೆ ಉತ್ತರಿಸುವ ಅಗತ್ಯವಿಲ್ಲ ಎನ್ನುವುದು ನನ್ನ ಬಲವಾದ ಅನಿಸಿಕೆ. ಅದಲ್ಲದೆ ‘ವಚನ’ ಟಿವಿ ಯು-ಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡಾ. ಎಸ್ ಎಮ್ ಜಾಮದಾರ್ ಅವರು ಈಗಾಗಲೇ ಸುದೀರ್ಘವಾಗಿ ಈಕೆ ಎತ್ತಿರುವ ಎಲ್ಲ ಅಧ್ವಾನದ  ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದ್ದಾರೆ. ಅದನ್ನು ಈಗಾಗಲೇ ಸಾವಿರಾರು ಜನರು ವೀಕ್ಷಿಸಿದ್ದಾರೆ. ಡಾ. ಜಾಮದಾರ್ ಅವರು ಕೊಟ್ಟ ಉತ್ತರಗಳು ಈಕೆ ಮತ್ತು ಈಕೆಯ ಪಟಾಲಮ್ ಮುಟ್ಟಿನೋಡಿಕೊಳ್ಳುವಂತಿವೆ. ಸಂಘ-ಪರಿವಾರದ ವಿಧ್ವಂಸಕರಿಗೆ ಉತ್ತರಿಸುವಾಗ ಸಭ್ಯತೆಯ ಭಾಷೆ ಬಳಸಬೇಕು ಎನ್ನುವ ಸ್ವಯ ಕಟ್ಟಳೆಯನ್ನು ನಾನು ಯಾವತ್ತೂ ಪಾಲಿಸಲು ಇಚ್ಚಿಸುವುದಿಲ್ಲ. ಏಕೆಂದರೆ ಆ ಸಭ್ಯತೆಯ ಭಾಷೆಗೆ ಅವರು ಅರ್ಹರಲ್ಲ. ರಾಜಾರಾಮ್ ಹೆಗಡೆ, ಡಂಕಿನ್ ಝಳಕಿ, ಜನಮೇಜಯ ಉಮರ್ಜಿ, ವೀಣಾ ಬನ್ನಂಜೆ ಮುಂತಾದವರ ಪರಂಪರಾಗತ ಕಿಡಿಗೇಡಿತನ ಹೊಸದೇನಲ್ಲ. ಕೆಲವು ತಿಂಗಳುಗಳ ಹಿಂದೆ ಈ ಪಟಾಲಮ್ ವಚನದರ್ಶನ ಎನ್ನುವ ಪುಸ್ತಕ ಪ್ರಕಟಿಸಿ ಸರಿಯಾಗಿ ಹೆಟ್ಟಿಸಿಕೊಂಡಿದ್ದು ನಾವು ಜ್ಞಾಪಿಸಿಕೊಳ್ಳಬೇಕು. ಬಸವಾನುಯಾಯಿಗಳ ಪ್ರತಿರೋಧಕ್ಕೆ ಹೆದರಿ ಮುಂದೆ ಈ ಪುಸ್ತಕ ಬಿಡುಗಡೆಯ ಅಭಿಯಾನವನ್ನೇ ಇವರು ಮೊಟಕುಗೊಳಿಸಿದ್ದು ಈಗ ನೆನಪು ಮಾತ್ರ.

Advertisements

ಸಂವಾದ, ಪೋಸ್ಟ್ ಕಾರ್ಡ್, ವಿಕ್ರಮ ಟಿವಿ ಮುಂತಾದ ನಾಯಿಕೊಡೆ ಅಥವಾ ಪಾರ್ಥೇನಿಯಮ್ ಕಳೆಯಂತೆ ಈ ಸಂಘ ಪರಿವಾರದ ಜಾಲತಾಣಗಳು ಹರಡುತ್ತಿರುವ ಸುಳ್ಳುಗಳು ಹಾಗೂ ದ್ವೇಷದ ವಿಷ ಈ ನಾಡನ್ನು ಪ್ರಕ್ಷುಬ್ಧಗೊಳಿಸಲು ಪ್ರಯತ್ನಿಸಿ ಅಷ್ಟೊಂದು ಯಶಸ್ಸು ಕಂಡಿಲ್ಲ. ಏಕೆಂದರೆ ಕನ್ನಡದ ನೆಲ ಬಸವಣ್ಣ,ಸರ್ವಜ್ಞ, ಷರೀಫ, ಕನಕದಾಸ, ಕುವೆಂಪು ಮುಂತಾದ ದಾರ್ಶನಿಕರ ಕರ್ಮಭೂಮಿ. ಇಲ್ಲಿ ವೈದಿಕ ವಿಕೃತಿಗಳಿಗೆ ಜಾಗವಿಲ್ಲ. ಈ ಜಾಲತಾಣಗಳಲ್ಲಿ ಬುದ್ಧ ಒಬ್ಬ ಉಪನಿಷತ್ತಿನ ಋಷಿ ಎನ್ನುವˌ ಬಸವಣ್ಣ ಸನಾತನ ಧರ್ಮದ ಸುಧಾರಕ ಎನ್ನುವˌಮೌರ್ಯ ಸಾಮ್ರಾಟ ಅಶೋಕನ ಆಡಳಿತ ಭಾರತವನ್ನು ದುರ್ಬಲಗೊಳಿಸಿತು ಎನ್ನುವˌ ಡಾ. ಬಿ. ಆರ್ ಅಂಬೇಡ್ಕರ್ ಗೆ ಸಂಸ್ಕೃತದ ಜ್ಞಾನವಿರಲಿಲ್ಲ. ಅವರು ಸಂವಿಧಾನವನ್ನೆ ಬರೆಯಲಿಲ್ಲ ಎನ್ನುವ ಅರ್ಥದ ಅನೇಕ ಅನರ್ಥಕಾರಿ ಹಾಗೂ ಸುಳ್ಳು ಚಿಂತನೆಗಳನ್ನು ಹರಿಬಿಡಲಾಗುತ್ತಿದೆ. ವೀಣಾ ಬನ್ನಂಜೆ  ಈ ಪಟಾಲಮ್ ನ ಭಾಗವಾಗಿ ಈ ವೇದಿಕೆಗಳ ಮೂಲಕ ತನ್ನ ವಿಧ್ವಂಸಕ ಚಿಂತನೆಗಳನ್ನು ಆಗಾಗ ಹರಿಬಿಟ್ಟು ಫಜೀತಿ ಎದುರಿಸಿದ್ದಾರೆ. ಹಿಂದೊಮ್ಮೆ ಹರಕು ಬಾಯಿಯ ಬಾಡಿಗೆ ಭಾಷಣಕಾರ ಹಾಗೂ ಟಿವಿ ಹರಟೆಯ ವಿದೂಷಕನೊಬ್ಬ ಲಿಂಗಾಯತ ಧರ್ಮದ ವಿಷಯದಲ್ಲಿ ಸಚಿವ ಎಂ ಬಿ ಪಾಟೀಲರನ್ನು ಕೆಣಕಿದ್ದ.

ವೀಣಾ ಬನ್ನಂಜೆ

ಅದಕ್ಕೆ ಎಂ. ಬಿ. ಪಾಟೀಲರು ಸರಿಯಾಗಿ ಪ್ರತ್ಯುತ್ತರ ಕೊಟ್ಟಿದ್ದರು. ಆಗ ಈ ವೀಣಾ ಬನ್ನಂಜೆ ಆ ವಿದೂಷಕನನ್ನು ಸಮರ್ಥಿಸಿ ಎಂ. ಬಿ ಪಾಟೀಲರನ್ನು ಟೀಕಿಸಿ ವಿವಾದ ಸೃಷ್ಟಿಸಿದ್ದರು. ಆಕೆಯ ಆ ಟೀಕೆಗೆ ಸಾಮಾಜಿಕ ಜಾಲತಾಣದಲ್ಲಿ ಉಗ್ರವಾದ ಪ್ರತಿಕ್ರಿಯೆಗಳು ಬಂದಿದ್ದವು. ಆ ಪ್ರತಿಕ್ರಿಯೆಗಳು ತನ್ನನ್ನು ಅತ್ಯಂತ ಘಾಸಿಗೊಳಿಸಿವೆ ಎಂದು ಆಕೆ ಲಿಂಗಾಯತ ಮಠಾಧೀಶರೊಬ್ಬರ ಹತ್ತಿರ ಕರೆ ಮಾಡಿ ನೋವು ತೋಡಿಕೊಂಡಿದ್ದಳಂತೆ. ತಾನು ವಚನ ಸಾಹಿತ್ಯದ ಕುರಿತು ಎಷ್ಟೊಂದು ಅಭಿಮಾನ ಹೊಂದಿದ್ದರೂ ಬಸವಾನುಯಾಯಿಗಳು ನನ್ನನ್ನು ಒಬ್ಬ ಶರಣ ಚಿಂತಕಿಯಾಗಿ ಗುರುತಿಸಲಿಲ್ಲ ಎಂದು ಅಲವತ್ತುಕೊಂಡಿದ್ದಳಂತೆ. ವೀಣಾ ಬನ್ನಂಜೆˌ ಗುರುರಾಜ್ ಕರಜಗಿ ಮುಂತಾದ ಸಂಘ ಪರಿವಾರದವರು ಶರಣ ಸಾಹಿತ್ಯತ ಕುರಿತು ಆಡುವ ಮಾತುಗಳ ಹಿಂದಿನ ಹುನ್ನಾರಗಳನ್ನು ಇಂದಿನ ಲಿಂಗಾಯತರು ಚನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರಲ್ಲಿ ಆ ಬಸವಪ್ರಜ್ಞೆ ಸದಾ ಜಾಗ್ರತವಾಗಿದೆ ಎನ್ನುವ ಸಂಗತಿ ಈ ಪಟಾಲಮ್ ತಿಳಿದುಕೊಳ್ಳಬೇಕಿದೆ. ಈ ಪಟಾಲಮ್ ಗೆ ಚಿಂತನೆ ಮಾಡಲು ಅವರದೇ ಸಿದ್ಧಾಂತ ಸಾಕಷ್ಟಿದೆ. ಅಷ್ಟಮಠಗಳ ನಡುವೆ ಇರುವ ಆಂತರಿಕ ಭಿನ್ನಾಭಿಪ್ರಾಯಗಳು, ತ್ರಿಮತಸ್ಥರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ಹೀಗೆ ಇವರು ಮಾತನಾಡಲು ಅವರದ್ದೇ ಸಾಕಷ್ಟು ವಿಷಯಗಳಿವೆ. 

ಅದನ್ನೆಲ್ಲ ಬಿಟ್ಟು ಇವರು ಶರಣ ಚಳುವಳಿ ಹಾಗೂ ವಚನ ಸಾಹಿತ್ಯದ ಹಿಂದೆ ಬಿದ್ದಿರಲು ಕಾರಣ ಶರಣ ಚಳುವಳಿಯ ಅವೈದಿಕ ಸಿದ್ಧಾಂತಗಳು ಹಾಗೂ ಶರಣರು ಪ್ರತಿಪಾದಿಸಿದ ವೈದಿಕ ವಿರೋಧಿ ಚಿಂತನೆಗಳು ಇವರನ್ನು ಅತ್ಯಂತ ಆತಂಕಕ್ಕೆ ದೂಡಿವೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಹೇಗಾದರೂ ಮಾಡಿ ಶರಣ ಚಳುವಳಿಯ ಮಹತ್ವವನ್ನು ಕಡಿಮೆ ಮಾಡಬೇಕು ಎನ್ನುವ ಈ ಸನಾತನಿ ಪಟಾಲಮ್ ನ ಹುನ್ನಾರಗಳಿಂದ ಲಿಂಗಾಯತರು ಇನ್ನಷ್ಟು ಜಾಗ್ರತರಾಗುತ್ತಿದ್ದಾರೆ. ಅನುಭವ ಮಂಟಪ ಕುರಿತು ಈ ಅಜ್ಞಾನಿ  ಉದುರಿಸಿದ ಅಣಿಮುತ್ತುಗಳಿಗೆ ಅತ್ಯಂತ ವಿದ್ವತ್ತಪೂರ್ಣ ಉತ್ತರಗಳಿಂದ ಹಿಡಿದು ಅತ್ಯಂತ ಉಗ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಡಾ. ಎಸ್ ಎಮ್ ಜಾಮದಾರ್ ಅವರ ಉತ್ತರಗಳುˌ ಶರಣ ಚಿಂತಕ ರಮ್ಜಾನ್ ದರ್ಗಾ ಅವರ ಪ್ರತಿಕ್ರಿಯೆ ಹಾಗೂ ಇನ್ನೂ ಅನೇಕ ಜನರ ಪ್ರತಿಕ್ರಿಯೆಗಳು ವೀಣಾ ಬನ್ನಂಜೆ ಮುಂದೆಂದೂ ವಚನ ಸಾಹಿತ್ಯದ ಕುರಿತು ತಂಟೆ ಮಾಡಸಂತೆ ಎಚ್ಚರಿಸಿವೆ. ಡಾ. ಜಾಮದಾರ್ ಅವರು ಸಂದರ್ಶನದಲ್ಲಿ ಹೇಳಿದಂತೆ ಈಕೆ ಈಗ ವಚನ ಸಾಹಿತ್ಯದ ವಿಷಯದಿಂದ ವೇದಾಂತದ ವಿಷಯಕ್ಕೆ ಬದಲಾಗಿದ್ದೇನೆ ಎಂದಿದ್ದಳಂತೆ. ಹಾಗೊಂದು ವೇಳೆ ಈಕೆ ವಚನ ಸಾಹಿತ್ಯದ ಗೊಡವೆ ಬಿಟ್ಟು ವೇದಾಂತವೊˌ ಮಣ್ಣೊ ಮಸಿಯೊ ಕುರಿತು ಮಾತನಾಡುವುದು ಲೇಸು.

ಜಾಮದಾರ್‌
ಡಾ. ಜಾಮದಾರ್

ತಾನು ಈಗ ವಚನ ಸಾಹಿತ್ಯದಿಂದ ವಿಮುಖಳಾಗಿ ವೇದಾಂತದ ಕುರಿತು ಒಲವು ಹೊಂದಿರುವುದಾಗಿ ಡಾ. ಜಾಮದಾರ್ ಅವರ ಎದುರಿಗೆ ಸಾಂದರ್ಭಿಕವಾಗಿ ಹೇಳಿರುವ ಈಕೆ ಮತ್ತೇಕೆ ವಚನ ಸಾಹಿತ್ಯ, ಶರಣರ ಅವೈದಿಕ ಚಿಂತನೆಗಳ ಕುರಿತು ಮಾತನಾಡುತ್ತಿದ್ದಾಳೆ ಎನ್ನುವ ಸಂಗತಿ ಅರ್ಥವಾಗದ್ದೇನಲ್ಲ. ಸಂಘ ಪರಿವಾರ ಪ್ರಾಯೋಜಿತ ಇಡೀ ಸನಾತನಿ ವೈದಿಕ ಪಟಾಲಮ್ ಗೆ ಇರುವ ಏಕೈಕ ಭಯವೆಂದರೆ ಅದು ವಚನ ಸಾಹಿತ್ಯದ ಕುರಿತದ್ದು ಎನ್ನುವ ಮಾತು ನಾವು ಹೇಳುವುದಲ್ಲ. ವಚನ ಸಾಹಿತ್ಯ ಕುರಿತ ಇವರ ವರ್ತನೆˌ ವಿತಂಡವಾದಗಳೇ ಅದನ್ನು ಸಮರ್ಥಿಸುತ್ತವೆ. ಶರಣ ಸಂಸ್ಕೃತಿಯನ್ನು ನಾಶಗೊಳಿಸಲು ಹನ್ನೆರಡನೇ ಶತಮಾನದಿಂದ ನಿರಂತರವಾಗಿ ವೀಣಾ ಬನ್ನಂಜೆಯ ಪೂರ್ವಜರು ಪ್ರಯತ್ನ ಮಾಡುತ್ತ ಬಂದಿದ್ದಾರೆ. ಈಗಲೂ ಈಕೆ ಮತ್ತು ಈಕೆಯ ಸಮಕಾಲೀನರು ಇದನ್ನೇ ಮಾಡುತ್ತಿದ್ದಾರೆ. ಆದರೆ ಅಂದುಕೊಂಡಿದ್ದನ್ನು ಇವರಿಗೆ ಸಾಧಿಸಲು ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಈಗ ವೀಣಾ ಬನ್ನಂಜೆ ಅನುಭವ ಮಂಟಪ ಕುರಿತು ವ್ಯಕ್ತಪಡಿಸಿರುವ ದೋಷಪೂರಿತ ಅಭಿಪ್ರಾಯ ಲಿಂಗಾಯತ ಸಮಾಜದ ಮನಸ್ಸನ್ನು ಅತ್ಯಂತ ತೀವ್ರವಾಗಿ ಘಾಸಿಗೊಳಿಸಿದೆ. ಇದು ಪ್ರತಿಭಟನೆಯ ಸ್ವರೂಪ ಪಡೆಯುವ ಮೊದಲು ಈಕೆ ಕ್ಷಮೆಯನ್ನು ಯಾಚಿಸಿ ತನ್ನ ಹೇಳಿಕೆಯನ್ನು ಹಿಂಪಡೆಯುವುದು ಒಳ್ಳೆಯ ಮಾರ್ಗ. 

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X