ಕಾಂಗ್ರೆಸ್ ಕೇರಳದ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್‌ನ ಉರಿನಂಜನ್ನು ಒಡೆದ ರೀತಿ ಮಾತ್ರ ತುಂಬಾ ಚೆನ್ನಾಗಿತ್ತು. ಕಾಂಗ್ರೆಸ್‌ನ ಒಟ್ಟು ಏಳು ಮಂದಿ ಸಂಸದರು ವಕ್ಫ್ ತಿದ್ದುಪಡಿ ಬಿಲ್ಲನ್ನು ವಿರೋಧಿಸಿ ಚೆನ್ನಾಗಿಯೇ ಮಾತನಾಡಿದರು. ಹಾಗೆ ಮಾತನಾಡುವ ಅವಕಾಶವನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅತ್ಯಂತ ಸೆಕ್ಯುಲರ್ ಆಗಿ ಹಂಚಿ ಕೊಟ್ಟರು. ಕಾಂಗ್ರೆಸ್‌ನ ಹಿಂದು, ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ ಸದಸ್ಯರು ಬಿಲ್ಲನ್ನು ವಿರೋಧಿಸಿ ಪ್ರಬಲವಾಗಿ ಮತ್ತು ವಸ್ತುನಿಷ್ಟವಾಗಿ ವಿಚಾರ ಮಂಡಿಸಿದರು.
ಅದರಲ್ಲೂ ರಾಹುಲ್ ಗಾಂಧಿಯವರು ಕೇರಳದ ಹೈಬಿ ಈಡನ್ ಎಂಬ ಕ್ಯಾಥೋಲಿಕ್ ಕ್ರೈಸ್ತ ಸಂಸದನನ್ನೂ ಬಿಲ್ ವಿರೋಧಿಸಿ ಮಾತನಾಡಲು ಬಳಸಿದ್ದು ರಾಹುಲ್ ಗಾಂಧಿಯವರ ದೂರದೃಷ್ಟಿ ಮತ್ತು ಕಾಂಗ್ರೆಸ್‌ನ ಸೆಕ್ಯುಲರ್ ಬದ್ಧತೆಯನ್ನು ಎತ್ತಿ ತೋರಿಸಿದೆ.
ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದುದಕ್ಕೆ ಕೆಲವರು ರಾಹುಲ್ ಗಾಂಧಿಯನ್ನು ಆಕ್ಷೇಪಿಸುವುದು ನೋಡಿದರೆ ನಗು ಬರುತ್ತದೆ. ಒಟ್ಟು ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ ಲೋಕಸಭೆಯಲ್ಲಿರುವುದು 232. ಎನ್‌ಡಿಎ ಒಕ್ಕೂಟದ ಸದಸ್ಯರ ಸಂಖ್ಯೆ 288 ಇದೆ. ಹೀಗಿರುವಾಗ ಸಹಜವಾಗಿಯೇ ಗೆಲುವು ಬಿಲ್ ಮಂಡಿಸಿದವರದ್ದೇ ಆಗಿದೆ. ನಾವು ಅದಕ್ಕಾಗಿ ಮುಸ್ಲಿಮರ ರಾಜಕೀಯ ದೌರ್ಬಲ್ಯವನ್ನು ದೂರಬೇಕೇ ಹೊರತು ಬಿಲ್ ವಿರುದ್ಧ ಏಳು ಮಂದಿ ಸದಸ್ಯರು ಬಲವಾಗಿ ಮಾತನಾಡುವಂತೆ ಸಜ್ಜುಗೊಳಿಸಿದ ಕಾಂಗ್ರೆಸ್ಸನ್ನಲ್ಲ. ಪಲ್ಟಿ ಕುಮಾರ ಮತ್ತು ನಾಯಿಡು ಬಿಜೆಪಿಯ ಸಾಕು ನಾಯಿಗಳು ಎಂದು ಗೊತ್ತಿದ್ದೂ ಗೊತ್ತಿದ್ದು ಅವರಿಗೆ ಟೊಪ್ಪಿ ತೊಡಿಸುವ, ಅವರಿಂದ ನಮಾಜು ಮಾಡಿಸುವ ನಮ್ಮವರ ಹುಂಬತನವನ್ನೇಕೆ ನಾವು ಟೀಕಿಸುತ್ತಿಲ್ಲ..?ಅವರ ಪಕ್ಷಕ್ಕೆ ಒಂದಷ್ಟು ಸೀಟು ಬರುವಲ್ಲಿ ಮುಸ್ಲಿಮರ ಪಾತ್ರ ಇದ್ದೇ ಇದೆಯಲ್ವಾ..?
ರಾಹುಲ್ ಗಾಂಧಿ ಮಧ್ಯಾಹ್ನದ ಬಳಿಕ ಬಂದದ್ದು,ಪ್ರಿಯಾಂಕ ಗಾಂಧಿ ನಿನ್ನೆ ಸಂಸತ್ತಿಗೆ ಗೈರಾದದ್ದನ್ನು ಟೀಕಿಸುವವರಿಗೆ ಕನಿಷ್ಟ ಬುದ್ಧಿ ಬೇಡವೇ.? ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಮಧ್ಯೆ ಒಂದೆರಡು ಸಂಖ್ಯೆಯ ಸದಸ್ಯರ ಅಂತರವಿರುವುದಲ್ಲ,ಬರೋಬ್ಬರಿ 50 ಸದಸ್ಯರ ಅಂತರವಿದೆ. ಹಾಗಿರುವಾಗ ಪ್ರಿಯಾಂಕ ಹಾಜರಾದ ಮಾತ್ರಕ್ಕೆ ಬಿಲ್ ಏನೂ ಬಿದ್ದು ಹೋಗುತ್ತಿರಲಿಲ್ಲ.
ರಾಹುಲ್ ಗಾಂಧಿಯವರು ಬಿಲ್ ವಿರುದ್ಧ ಮಾತನಾಡಲು ಏಳು ಮಂದಿಯನ್ನು ಪ್ರಿಪೇರ್ ಮಾಡಿದ್ದರು ಎಂಬುವುದನ್ನು ಒತ್ತಿ ಹೇಳಬೇಕಾಗುತ್ತದೆ.ನಮಗೆಲ್ಲಾ ಗೊತ್ತಿರುವಂತೆಯೇ ಈ ಹಿಂದೆಯೂ ರಾಹುಲ್ ಗಾಂಧಿ ಮಾತನಾಡಲು ಎದ್ದು ನಿಂತಾಗ ಆರೆಸ್ಸೆಸ್ ಗುಲಾಮ ಸ್ಪೀಕರ್ ಮಾತನಾಡಲು ಅವಕಾಶ ನೀಡದಿರುವುದು, ಮೈಕ್ರೋ ಫೋನ್ ಸಂಪರ್ಕ ಕಟ್ ಮಾಡುವುದು ಮುಂತಾದ ನೀಚ ಪಾಲಿಟಿಕ್ಸ್ ಮಾಡಿದ್ದಾರೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಮಸೂದೆ: ಮುಸ್ಲಿಮರ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಿಗೆ ಕಡಿತ ಖಂಡಿತ
ರಾಹುಲ್ ಮಾತನಾಡಲು ನಿಂತರೆ ಅವರ ಜನಪ್ರಿಯತೆ ದೇಶದಾದ್ಯಂತ ಇನ್ನಷ್ಟು ಹೆಚ್ಚುತ್ತದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಮೋದಿಗಿಂತ ರಾಹುಲ್‌ಗೆ ಹೆಚ್ಚು ಬೆಲೆಯಿದೆ ಎನ್ನುವುದು ಬಿಜೆಪಿಗೆ ಗೊತ್ತಿಲ್ಲದ ವಿಷಯವೇನಲ್ಲ. ಅಂತಹ ರಾಹುಲ್ ಮಾತನಾಡಿದರೆ ಇಡೀ ಸರಕಾರವನ್ನೇ ಬೆತ್ತಲು ಮಾಡುತ್ತಾರೆಂದು ಸ್ಪೀಕರ್ ಮುಖಾಂತರ ಬಿಜೆಪಿ ಇಂತಹ ಮೋಸದಾಟ ಆಡಿಸುತ್ತದೆ. ಹಾಗಿರುವುದರಿಂದ ರಾಹುಲ್ ಮಾತು ಯಾರಿಗೂ ತಲುಪದೇ ಇರುವುದಕ್ಕಿಂತ ರಾಹುಲ್ ಮಾತನಾಡಬೇಕಾದುದನ್ನು ಬೇರೆ ಸದಸ್ಯರಿಂದ ಮಾತನಾಡಿಸಿ ದೇಶಕ್ಕೆ ಮತ್ತು ಜಗತ್ತಿಗೆ ಸರಕಾರದ ನೀಚ ಪ್ರವೃತ್ತಿಯನ್ನು ಮತ್ತು ಮುಸ್ಲಿಂ ವಿರೋಧಿ ನೀತಿಯನ್ನು ತಿಳಿಯಪಡಿಸುವುದು ಲೇಸಲ್ಲವೇ..?
ಕಾಂಗ್ರೆಸ್ ಪಕ್ಷದ ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ ಸಮುದಾಯಕ್ಕೆ ಸೇರಿದ ಏಳು ಮಂದಿ ಸಂಸತ್ ಸದಸ್ಯರು ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಪ್ರಬಲವಾಗಿ ಮಾತನಾಡಿದರು. ಆದರೆ, ಮಸೂದೆಯನ್ನು ಬೆಂಬಲಿಸಿ ಮಾತನಾಡಲು ಮುಸ್ಲಿಂ ಸಮುದಾಯಕ್ಕೆ ಸೇರಿದ ಒಬ್ಬನೇ ಒಬ್ಬ ವ್ಯಕ್ತಿ ಅಲ್ಲಿಲ್ಲದಿರುವುದು ದುರಂತವಲ್ಲದೆ ಮತ್ತೇನು?