‘ಜೈ ಶ್ರೀರಾಮ್‌’ ಅಂದ್ರೆ ಮಾತ್ರ ಅನ್ನ ಅನ್ನೋರು ಪಾಠ ಕಲಿಯೋದು ಯಾವಾಗ?

Date:

Advertisements

‘ಜೈ ಶ್ರೀರಾಮ್‌’ ಅಂದ್ರೆ ಮಾತ್ರ ಅನ್ನ ಅನ್ನೋರು ಪಾಠ ಕಲಿಯೋದು ಯಾವಾಗ ಅನ್ನೋ ಪ್ರಶ್ನೆ ಈಗ ಎದ್ದಿದೆ. ಅನ್ನವನ್ನ ಹಾಕೋದು ಅಂದ್ರೆ ಅದು ಅತೀ ಶ್ರೇಷ್ಟ. ಒಂದು ಹೊತ್ತಿನ ಊಟ ಸಿಕ್ಕರೆ ಸಾಕು ಅಂತ ಎಷ್ಟೋ ಜನ ಕಷ್ಟ ಪಡ್ತಿದ್ದಾರೆ. ಅಂತವರಿಗೆ ಒಂದು ಹೊತ್ತಿನ ಊಟ ಸಿಕ್ಕಿರೆ, ಎಷ್ಟು ಖುಷಿ ಆಗಬಹುದು. ಈಗಾಗಲೇ ಮುಸ್ಲಿಮರು ನಿಂತ್ರೂ ತಪ್ಪು ಕುಂತ್ರೂ ತಪ್ಪು ಅಂತ ಹೇಳೋ ರೀತಿ ಬಿಜೆಪಿ ಸರ್ಕಾರ ಜನರಿಗೆ ಕುಮ್ಮಕ್ಕು ನೀಡ್ತಾ ಇದೆ. ಆದ್ರೆ, ಈ ಎಲ್ಲ ಘರ್ಷಣೆಗಳ ಮಧ್ಯೆ ಒಂದು ವಿಡಿಯೋ ವೈರಲ್‌ ಆಗ್ತಾ ಇದೆ.

ಆ ವಿಡಿಯೋ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋದಲ್ಲಿ, ಮುಸ್ಲಿಂ ಮುಖಂಡರು ಯಾವುದೇ ಧರ್ಮವನ್ನ ನೋಡದೇ ಬಡವರ ಹೊಟ್ಟೆ ತುಂಬಿಸೋ ಕೆಲಸ ಮಾಡಿದ್ದಾರೆ. ಇಲ್ಲಿ ಅನ್ನ ಕೊಡ್ತಾ ಇರೋ ಮುಸ್ಲಿಂ ಧರ್ಮದವರು ‘ಅಲ್ಲಾ ಹು ಅಕ್ಬರ್‌’ ಅಂತ ಹೇಳಿ, ನಮಗೆ ಜೈಕಾರ ಹಾಕಿ ಅನ್ನೋ ಯಾವುದೇ ಷರತ್ತುಗಳನ್ನ ವಿಧಿಸದೇ ಹಸಿದು ಬಂದವರಿಗೆ ಊಟವನ್ನ ಕೊಡ್ತಿದ್ದಾರೆ. ಇದು ನಿಜವಾಗಿಯೂ ನಮ್ಮ ದೇಶದಲ್ಲಿ ಬೇಕಾದದ್ದು.. ಇದು ನಿಜವಾದ ಭಾರತ ಅಂತ ಹೇಳೊಕೆ ಹೆಮ್ಮೆ ಆಗತ್ತೆ.. ಭಾರತ ಸಾರ್ವಭೌಮ ರಾಷ್ಟ್ರ, ಭಾರತದ ನೂರಾರು ಸಂಸ್ಕೃತಿ, ಧರ್ಮ, ಭಾಷೆ ಆಚರಣೆ ಮಾಡೋ ಧೀಮಂತ ರಾಷ್ಟ್ರವೆಂದು ಆ ವಿಡಿಯೋ ನೋಡಿ ಹೆಮ್ಮೆಪಡಬಹುದು.

ಆದ್ರೆ, ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅನ್ನದಾನ ಮಾಡುತ್ತಿದ್ದ ಹಿಂದು ವ್ಯಕ್ತಿಯೊಬ್ಬ ಮುಸ್ಲಿಮರೊಂದಿಗೆ ನಡೆದುಕೊಂಡ ರೀತಿ, ಹಸಿವಿನ ಪ್ರಜ್ಞೆ ಇದ್ದವರ ಕಣ್ಣಲ್ಲಿ ನೀರು ಬರಿಸುತ್ತದೆ. ಹಸಿವು ಅಂತ ತಿನ್ನೋಕೆ ಬಂದವರನ್ನ ಈ ರೀತಿಯಾಗಿ ನಡೆಸಿಕೊಳ್ಳಿ ಅಂತ ಆಗಲೀ, ಅಥವಾ ಜೈಶ್ರೀರಾಮ್‌ ಅಂದವರಿಗೆ ಮಾತ್ರ ಅನ್ನ ಕೊಡಿ ಅಂತ ಆಗಲೀ ಯಾವುದೇ ಹಿಂದೂ ಧರ್ಮದ ಗ್ರಂಥಗಳಲ್ಲಿ ಬರೆದಿಲ್ಲ. ಹಿಂದೂ ಧರ್ಮದ ಶಾಸ್ತ್ರ ಪುರಾಣದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಹಸಿವು ಅಂತ ಬಂದಾಗ ಆತನಿಗೆ ಹೊಟ್ಟೆ ತುಂಬಾ ಊಟ ಕೊಟ್ಟು ಕಳಿಸಿ ಅನ್ನೋದನ್ನೇ ಹಿಂದೂ ಧರ್ಮ ಹೇಳೊದು. ಕೇಲವ ಹಿಂದೂ ಧರ್ಮ ಒಂದೇ ಅಲ್ಲ, ಎಲ್ಲಾ ಧರ್ಮಗಳಲ್ಲೂ ಕೂಡ ಇದೇ ಮಾತಿರೋದು..

Advertisements

ಆದ್ರೆ, ಟಾಟಾ ಹಾಸ್ಪಿಟಲ್‌ ಹೊರಗೆ ಅನ್ನದಾನ ಕಾರ್ಯಕ್ರಮ ನಡೆಯುತ್ತಿತ್ತು. ಇಲ್ಲಿ ಅನ್ನ ಬಡಿಸುವ ಒಬ್ಬ ವ್ಯಕ್ತಿ ಆ ಮುಸ್ಲಿಂ ಮಹಿಳೆ ಜೊತೆ ನಡೆದುಕೊಂಡು ರೀತಿ ಅತ್ಯಂತ ಹೀನ ಮತ್ತು ಖಂಡನೀಯ. ಹಸಿವು ಎಲ್ಲರಿಗೂ ಒಂದೇ. ಹಸಿದವ್ರಿಗೆ ಊಟ ಕೊಟ್ಟು ಸ್ವಲ್ಪ ಗೌರವ ಕೊಡೊದನ್ನ ಪ್ರತಿಯೊಬ್ಬರೂ ಕಲಿಯಬೇಕು.

ಮತ್ತೊಂದು ವಿಡಿಯೋದಲ್ಲಿ, ಒಬ್ಬ ಹಿಂದೂ ಮಹಿಳೆ ಮಸೀದಿ ಹೊರಗಡೆ ಹಣ್ಣುಗಳನ್ನ ಮಾರಾಟ ಮಾಡ್ತಿದ್ದಾರೆ. ಅವರ ಪ್ರಕಾರ ಮುಸ್ಲಿಮರು ಅವರಿಗೆ ಸಹಾಯ ಮಾಡುತ್ತಾರೆ ಮತ್ತು ಎಂದಿಗೂ ತೊಂದರೆ ಅಥವಾ ತಾರತಮ್ಯ ಮಾಡುವುದಿಲ್ಲ. ರಂಜಾನ್‌ನಲ್ಲಿ ಅವರ ವ್ಯಾಪಾರ ಚೆನ್ನಾಗಿ ನಡೀತಾ ಇದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಆದ್ರೆ ಒಂದಿಷ್ಟು ದೇವಸ್ಥಾನದ ಹೊರಗೆ ಮುಸ್ಲಿಮರಿಗೆ ವ್ಯಾಪಾರ ಮಾಡೋ ಅವಕಾಶವೇ ಇಲ್ಲ.

ಪರಸ್ಪರ ಸಾಮರಸ್ಯ, ಬಾಂಧವ್ಯ, ಸಹೋದರತೆ ಇನ್ನು ಕೂಡ ಜೀವಂತವಾಗಿವೆ ಎಂಬುದಕ್ಕೆ ಮಸೀದಿ ಮುಂದೆ ವ್ಯಾಪಾರ ಮಾಡುವ ಆ ಮಹಿಳೆ ಸಾಕ್ಷಿ. ಈ ಹಿಂದೆ ಮೊಘಲ್ ಭಾರತದಲ್ಲಿ, ಚಕ್ರವರ್ತಿ ಅಕ್ಬರ್ ಹಿಂದು-ಮುಸ್ಲಿಂ ಐಕ್ಯತೆಯನ್ನು ಪ್ರತಿಪಾದಿಸಿದ್ದರು, ಹಿಂದುಗಳು ಮತ್ತು ಮುಸ್ಲಿಮರನ್ನು ತನ್ನ ನ್ಯಾಯಾಲಯದಲ್ಲಿ ಅಧಿಕಾರಿಗಳನ್ನಾಗಿ ನೇಮಿಸಿದ್ದರು. ಅಕ್ಬರ್, ಹಿಂದು ಧರ್ಮ ಮತ್ತು ಇಸ್ಲಾಂನ ಹಬ್ಬ, ಎರಡೂ ಹಬ್ಬಗಳನ್ನು ಪ್ರಚಾರ ಮಾಡಿದ್ದರು ಹಾಗೂ ಎರಡೂ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು.

ಮುಘಲರು, ಅವಧ್ ಮುರ್ಷಿದಾಬಾದ್ ನವಾಬ್ ಮತ್ತು ಟಿಪ್ಪು ಸುಲ್ತಾನ್ ಮುಂತಾದ ಮುಸ್ಲಿಂ ರಾಜರು ಸಂಪೂರ್ಣವಾಗಿ ಜಾತ್ಯತೀತರಾಗಿದ್ದರು. 1916ರ ಲಕ್ನೋ ಒಪ್ಪಂದವನ್ನು ಭಾರತದ ಸ್ವಾತಂತ್ರ್ಯ ಚಳುವಳಿಯ ಯುಗದಲ್ಲಿ ‘ಹಿಂದು-ಮುಸ್ಲಿಂ ಐಕ್ಯತೆಯನ್ನು ಸಾಧಿಸುವಲ್ಲಿ ಪ್ರಮುಖ ಹೆಜ್ಜೆ’ ಅಂತ ಪರಿಗಣಿಸಲಾಗಿದೆ. ಮುಹಮ್ಮದ್ ಅಲಿ ಜಿನ್ನಾ ಅವರು ತಮ್ಮ ರಾಜಕೀಯ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಹಿಂದು-ಮುಸ್ಲಿಂ ಏಕತೆಯನ್ನು ಪ್ರತಿಪಾದಿಸಿದ್ದರು.

1857ರ ಭಾರತೀಯ ದಂಗೆಯಲ್ಲಿ ಭಾರತದಲ್ಲಿನ ಅನೇಕ ಹಿಂದುಗಳು ಮತ್ತು ಮುಸ್ಲಿಮರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಲು ಭಾರತೀಯರಾಗಿ ಒಗ್ಗೂಡಿದ್ದರು. ಇಷ್ಟೆಲ್ಲ ಇತಿಹಾಸ ಇರೋ ಈ ನಾಡಲ್ಲಿ ಈಗ ದಿನದಿಂದ ದಿನಕ್ಕೆ ಕೋಮು ಗಲಭೆಗಳು ಜಾಸ್ತಿ ಆಗ್ತಾ ಇದೆ. ಇದಕ್ಕೆ ಕಡಿವಾಣ ಹಾಕಬೇಕಾದವರು ಯಾರು? ನಾವು, ಭಾರತೀಯರು.

Pavitra G M
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X