ಜನಾಂಗೀಯ ಬೈಗುಳಗಳನ್ನು ಬಳಸಿದ್ದರ ಹಿನ್ನೆಲೆಯಲ್ಲಿ ಲಂಡನ್ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ರಶ್ಮಿಯಂಥವರು ಟ್ವೀಟ್ ಮಾಡಿದರೆ ಉಡುಪಿಯ ಘಟನೆ ಭಾರೀ ಸಂಚಲನ ಉಂಟು ಮಾಡಿರುವುದು ವಿಪರ್ಯಾಸವೇ ಸರಿ
ಉಡುಪಿ ಮತ್ತೆ ಸುದ್ದಿಯಲ್ಲಿದೆ. “ಇಲ್ಲಿನ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೊ ಚಿತ್ರೀಕರಣವನ್ನು ಮೂವರು ಮುಸ್ಲಿಂ ಹೆಣ್ಣುಮಕ್ಕಳು ಮಾಡುತ್ತಿದ್ದರು ಮತ್ತು ಅದನ್ನು ಹಂಚುತ್ತಿದ್ದರುʼʼ ಎಂಬ ನಕಲಿ ನರೇಟಿವ್ ಬೆಳೆಸಲಾಗುತ್ತಿದೆ.
ಆದರೆ “ಇದೊಂದು ತಮಾಷೆಯ ವಿಡಿಯೊ. ಮೊಬೈಲ್ ನಿಷಿದ್ಧವಿದ್ದರೂ ಮೊಬೈಲ್ ಬಳಕೆ ಮಾಡಿದ ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆʼʼ ಎಂದು ಕಾಲೇಜಿನ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದರೂ ಸಂಘಪರಿವಾರ ವಿವಾದವನ್ನು ಮತ್ತೊಂದು ಘಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದೆ. ಒತ್ತಡಕ್ಕೆ ಮಣಿದಿರುವ ಪೊಲೀಸರು, ಯಾವುದೇ ದೂರು ಇಲ್ಲವಾದರೂ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಮಲ್ಪೆ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧವೂ ಕ್ರಮ ಜರುಗಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ʼಫೇಕ್ ನ್ಯೂಸ್ʼ ಹರಡಿದ ಪ್ರಮುಖ ವ್ಯಕ್ತಿಯೊಬ್ಬರು ಮಾತ್ರ ನಿಶ್ಚಿಂತೆಯಿಂದ ಇರುವುದು ವಿಷಾದನೀಯ.
ಇಂತಹದ್ದೊಂದು ಬೆಳವಣಿಗೆಗೆ ಕಾರಣವಾಗಿದ್ದು- ಯಾವುದೇ ಪೂರ್ವಾಪರ ತಿಳಿಯದೆ ಟ್ವೀಟ್ ಮಾಡಿದ ರಶ್ಮಿ ಸಮಂತ್. ಘಟನೆಗೆ ಕೋಮು ಆಯಾಮ ಮತ್ತು ಕೋಮುದ್ವೇಷವನ್ನು ನೀಡಿದ ರಶ್ಮಿ ಸಮಂತ್, ಟ್ವಿಟರ್‌ನಲ್ಲಿ ಸಕ್ರಿಯರಾದ ತಕ್ಷಣವೇ ಬಲಪಂಥೀಯ ಎಕೊ ಸಿಸ್ಟಮ್ ಭಾರೀ ಪ್ರಮಾಣದಲ್ಲಿ ಆಕ್ಟೀವ್ ಆಯಿತು. ಈ ವಿದ್ಯಮಾನದ ಬೆನ್ನಲ್ಲೇ ಈ ರಶ್ಮಿ ಸಮಂತ್ ಯಾರು ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.
ರಶ್ಮಿ ಸಮಂತ್, ಜನಾಂಗೀಯತೆ ಮತ್ತು ಮತ್ತೊಂದು ಕೋಮಿನ ಕುರಿತು ಅಸಡ್ಡೆ ಪ್ರದರ್ಶಿಸುತ್ತಿರುವುದು ಇದೇ ಮೊದಲೇನೂ ಅಲ್ಲ. ಅವರ ಹಿನ್ನೆಲೆಯನ್ನು ಕೆದಕಿದರೆ ಇಂಥವರ ಪೋಸ್ಟ್‌ಗಳಿಗೆ ಆದ್ಯತೆಯನ್ನು ನೀಡಬಾರದೆಂಬುದು ಎಂಥವರಿಗೂ ಅರ್ಥವಾಗುತ್ತದೆ.
ಲಂಡನ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಖ್ಯಾತಿಯನ್ನೂ ಹೊಂದಿದ್ದ ರಶ್ಮಿ ಸಮಂತ್ ಮೂಲತಃ ಉಡುಪಿಯವರು. ಆದರೆ ರಶ್ಮಿ ಆಯ್ಕೆಯಾದ ಬೆನ್ನಲ್ಲೇ ಅವರು ಈ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ್ದ ಪೋಸ್ಟ್‌ಗಳೂ ಚರ್ಚೆಗೆ ಒಳಪಟ್ಟವು. ಜನಾಂಗೀಯ ಮತ್ತು ಟ್ರಾನ್ಸೋಫೋಬಿಕ್ ಪೋಸ್ಟ್‌ಗಳ ಕಾರಣಕ್ಕೆ ಭಾರೀ ಟೀಕೆಗೆ ಒಳಗಾದ ಬಳಿಕ ರಶ್ಮಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಭಾರತ ಮತ್ತು ಬ್ರಿಟನ್ ಸರ್ಕಾರದ ನಡುವೆಯೂ ಮಾತುಕತೆ ನಡೆಯುವ ಮಟ್ಟಕ್ಕೆ ಈ ಪ್ರಕರಣ ಬೆಳೆದಿತ್ತು.
ರಶ್ಮಿ ಸಮಂತ್ ವಿದ್ಯಮಾನದ ಕುರಿತು ಬಿಜೆಪಿ ಸಂಸದ ಅಶ್ವಿನಿ ವೈಷ್ಣವ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್, “ಭಾರತ ಸರ್ಕಾರವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅಗತ್ಯವಿದ್ದಾಗ ಬ್ರಿಟಿಷ್ ಸರ್ಕಾರದೊಂದಿಗೆ ಮಾತನಾಡಲಿದೆʼʼ ಎಂದಿದ್ದರು.
ಆಕ್ಸ್‌ಫರ್ಡ್‌ನ ಲಿನಾಕ್ರೆ ಕಾಲೇಜಿನಲ್ಲಿ ಎಂಎಸ್ಸಿ ವಿದ್ಯಾರ್ಥಿಯಾಗಿದ್ದ ರಶ್ಮಿ ಸಮಂತ್, ಆಕ್ಸ್‌ಫರ್ಡ್ ವಿದ್ಯಾರ್ಥಿ ಒಕ್ಕೂಟದ ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆಯಾಗಿ 2021ರ ಫೆಬ್ರವರಿ 11ರಂದು ಆಯ್ಕೆಯಾಗಿದ್ದರು.
ಚುನಾವಣಾ ಅಭಿಯಾನದ ವೇಳೆ ರಶ್ಮಿ ಅವರು, “ವಿಶ್ವವಿದ್ಯಾನಿಲಯ ಮತ್ತು ಪಠ್ಯಕ್ರಮಗಳನ್ನು ವಸಾಹತುಶಾಹಿಗೊಳಿಸುವುದು, ಹೋಮೋಫೋಬಿಯಾ ಮತ್ತು ಟ್ರಾನ್ಸೋಫೋಬಿಯಾ ನಿಭಾಯಿಸುವುದು, ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಧನಸಹಾಯವನ್ನು ಹೆಚ್ಚಿಸುವುದುʼʼ ಮೊದಲಾದವುಗಳ ಕುರಿತು ಮಾತನಾಡಿದ್ದರು. ಆದರೆ ಅವರ ಹಳೆಯ ಪೋಸ್ಟ್‌ಗಳು ಸದ್ಯದ ನಿಲುವಿಗೆ ತದ್ವಿರುದ್ಧವಾಗಿದ್ದವು.

2017 ಮತ್ತು 2019ರ ನಡುವೆ ಮಾಡಲಾಗಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನೋಡಿ… ರಶ್ಮಿ ಅವರ 2017ರ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಲಾದ ಪೋಸ್ಟ್‌ನಲ್ಲಿ ಬರ್ಲಿನ್ ಹತ್ಯಾಕಾಂಡದ ಕುರಿತು ತುಚ್ಛೀಕರಿಸಿ, ಅದರ ತೀವ್ರತೆಯನ್ನು ಅಲ್ಲಗಳೆದು ಮಾತನಾಡಿದ್ದರು. ಈ ಹತ್ಯಾಕಾಂಡದ ಗಂಭೀರತೆಯನ್ನೇ ʼತಮಾಷೆʼಯ ವಸ್ತುವಾಗಿಸಿಕೊಂಡಿದ್ದರು. Holocaust ಎಂಬುದನ್ನು ʻCASTS a HOLLOWʼ ಎಂದಿದ್ದರು.
ಬರ್ಲಿನ್ ಹತ್ಯಾಕಾಂಡ ಸ್ಮಾರಕ (Berlin Holocaust Memorial) ಮುಂದೆ ಪೋಸ್ ನೀಡಿದ್ದ ರಶ್ಮಿ ಸಮಂತ್ ಅವರು “ಈ ಸ್ಮಾರಕವು ಹಿಂದಿನ ದೌರ್ಜನ್ಯಗಳು ಮತ್ತು ಕಾರ್ಯಗಳ ಒಂದು ಪೊಳ್ಳಾದ (ತೀವ್ರತೆಯನ್ನು ಹೊಂದಿಲ್ಲದ) ಕನಸನ್ನು ಬಿತ್ತರಿಸುತ್ತದೆ” (The memorial CASTS a HOLLOW dream of the past atrocities and deeds) ಎಂದಿದ್ದರು. ಅಂದರೆ ಜನರನ್ನು ನೋವಿಗೆ ದೂಡಿದ್ದ ಐತಿಹಾಸಿಕ ಘಟನೆಯ ಕುರಿತು ಯಾವುದೇ ಸೂಕ್ಷ್ಮತೆ ಇಲ್ಲದ ಮಾತುಗಳಿಂದ ಬಣ್ಣಿಸಿದ್ದರು ಮತ್ತು ಹತ್ಯಾಕಾಂಡದ ತೀವ್ರತೆಯನ್ನೇ ಅಣಕಿಸಿದ್ದರು!
ರಶ್ಮಿಅವರು 2019ರ ಮತ್ತೊಂದು ಪೋಸ್ಟ್‌ನಲ್ಲಿ ʼಚಿಂಗ್ ಚಾಂಗ್ʼನೊಂದಿಗೆ ಮಲೇಷಿಯಾದಲ್ಲಿದ್ದೇನೆ ಎಂದು ಬರೆದುಕೊಂಡಿದ್ದರು. ʼಚಿಂಗ್ ಚಾಂಗ್ʼ ಎಂಬುದು ಚೀನಿಯರನ್ನು ಅವಮಾನಿಸುವ ಪದವಾಗಿ ಗುರುತಿಸಲ್ಪಟ್ಟಿದೆ. ಜನಾಂಗೀಯ ನಿಂದನೆಯಾಗಿಯೂ ಅದನ್ನು ಪರಿಗಣಿಸುತ್ತಾರೆ. (Ching chong and ching chang chong are ethnic slurs used to imitate the Chinese language, people of Chinese ancestry, or other people of East Asian descent perceived to be Chinese.)
ಇದನ್ನು ಓದಿ ಸುಳ್ಳು ಸುದ್ದಿ, ನಕಲಿ ನರೇಟಿವ್ ಹೆಚ್ಚಾಗಿದ್ದರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದೇಕೆ?
ಮಹಿಳೆಯರು ಮತ್ತು ಟ್ರಾನ್ಸ್‌ವಿಮೆನ್‌ಗಳನ್ನು ಪ್ರತ್ಯೇಕವಾಗಿ ರಶ್ಮಿ ಗುರುತಿಸುತ್ತಾರೆಂಬ ಚರ್ಚೆಯೂ ನಡೆದಿತ್ತು. ಇವೆಲ್ಲವುದರ ಕುರಿತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಯಾವ ವಿದ್ಯಾರ್ಥಿಗಳು ರಶ್ಮಿಯವರನ್ನು ಆಯ್ಕೆ ಮಾಡಿದ್ದರೋ ಅದೇ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದಾಗ, ತಮ್ಮ ತಪ್ಪಿನ ಅರಿವಾಗಿರುವ ಕುರಿತು ರಶ್ಮಿ ಪತ್ರ ಬರೆದಿದ್ದರು.
ಹೀಗೆ ಜನಾಂಗೀಯ ಬೈಗುಳಗಳನ್ನು ಬಳಸಿದ್ದರ ಹಿನ್ನೆಲೆಯಲ್ಲಿ ಲಂಡನ್ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ರಶ್ಮಿಯಂಥವರು ಟ್ವೀಟ್ ಮಾಡಿದರೆ ಉಡುಪಿಯ ಘಟನೆ ಭಾರೀ ಸಂಚಲನ ಉಂಟು ಮಾಡಿರುವುದು ವಿಪರ್ಯಾಸವೇ ಸರಿ. ಜನಾಂಗೀಯ ದ್ವೇಷದ ಚಹರೆಗಳನ್ನು ಮೊದಲಿನಿಂದಲೂ ಪೋಷಿಸಿಕೊಂಡು ಬಂದಿರುವ ರಶ್ಮಿ ಸಮಂತ್ ವಿರುದ್ಧ ಕರ್ನಾಟಕ ಸರ್ಕಾರ ಕ್ರಮ ಜರುಗಿಸದೆ ಇರುವುದು ಏತಕ್ಕೆ ಎಂಬುದು ಇನ್ನೂ ನಿಗೂಢವಾಗಿದೆ.
ಇದನ್ನು ಓದಿ ಉಡುಪಿಯ ಕಾಲೇಜಿನಲ್ಲಿ ನಡೆದಿದ್ದೇನು? ಬಿಜೆಪಿ ನಾಯಕರು ಹೇಳುತ್ತಿರುವುದೇನು? ಇಲ್ಲಿದೆ ವಿವರ

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.
Hagadre A 3 Hudgiru Madidu Thapilva ,
Aduna kelidu thappa,
Nen Mane Hen Makludu thagdedre yen madthede,
Ninage Sathya gotta sumsumne janagala madhe dwesha haradabedi yellara makkalu makkale yaaro lelavi tappu maadirutthaare adanna kshamisi buddi heli
ಬೇರೆಲ್ಲೂ ಸಲ್ಲದವರು ಇಲ್ಲಿ ಖಂಡಿತ ಸಲ್ಲುವರಯ್ಯಾ……
Muslims win
ಅವರು ಅನ್ಯಾಯಕ್ಕೆ ಒಳಗಾದ ಹೆಣ್ಣು ಮಕ್ಕಳ ಬಗ್ಗೆ ನ್ಯಾಯ ಕೊಡಿಸುವ ಮಾತನಾಡಿದ್ದಾರೆ ಅವರಿಗೆ ಪರವಾಗಿ ಮಾತನಾಡಿದ್ದಾರೆ ಇದನ್ನ ಬಿಟ್ಟು ಅವರ ಇತಿಹಾಸ ಕೆದಕುವ ಚಾಳಿ ಅವರನ್ನು ಬಾಯಿ ಮುಚ್ಚಿಸುವ ಹುನ್ನಾರವೇ?