ಮನಮೋಹನ್ ಸಿಂಗ್ ಅವರನ್ನು ವ್ಯಂಗ್ಯವಾಡಿದವರು ಇಂದು ಸಂಸತ್ತಿನಲ್ಲಿ ವಿಪಕ್ಷದವರ ಪ್ರಶ್ನೆಗಳಿಗೆ ಹೆದರಿ ಪಲಾಯನ ಮಾಡುತ್ತಿರುವುದೇಕೆ?

Date:

ಮೋದಿ ಆಡಳಿತ ಬಿಜೆಪಿ ಸರ್ಕಾರ ಇಂದು ಅನುಸರಿಸುತ್ತಿರುವ ಈ ‘ಪಲಾಯನ ರಾಜಕಾರಣ’ ಸಂಸತ್ತಿನ ಶಿಸ್ತನ್ನು ಹಾಳುಗೆಡವುದರ ಜೊತೆಗೆ ಅದು ಸಂಸತ್ತಿನ ಅಸ್ತಿತ್ವವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ. ಇತಿಹಾಸವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಳಸುವ ಇಂಥಹ ಮೌನವನ್ನು ಎಂದಿಗೂ ಕ್ಷಮಿಸಿಲ್ಲ ಅದಕ್ಕೆ ಅನೇಕ ಉದಾಹರಣೆಗಳಿವೆ

- Advertisement -

ಭಾರತದಂತಹ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಲೋಕಸಭೆಯು ಕೇವಲ ಮೆಜಾರಿಟಿಯ ಮೇಲೆ ಆಟವಾಡುವ ಮೈದಾನವಲ್ಲ, ಅದು ಸಂವಿಧಾನಾತ್ಮಕ ಜವಾಬ್ದಾರಿಯ ವೇದಿಕೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಲೋಕಸಭೆಯೊಳಗೆ ನಡೆಯುತ್ತಿರುವ ಬೆಳವಣಿಗೆಗಳು, ಸಂವಿಧಾನದ ಮೂಲ ಉದ್ದೇಶವನ್ನೇ ಮೌನಗೊಳಿಸುವ ಪ್ರಯತ್ನಗಳಾಗಿ ಕಾಣಿಸುತ್ತಿವೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡದೇ ಇರುವ ಇಂಥಹ ಘಟನೆ, ಕೇವಲ ರಾಜಕೀಯ ವಿರೋಧವಷ್ಟೇ ಅಲ್ಲ, ಅದು ಸಂವಿಧಾನಾತ್ಮಕ ಶಿಷ್ಟಾಚಾರಕ್ಕೆ ಸವಾಲಾಗಿದೆ ಎಂದರೆ ತಪ್ಪಾಗಲಾರದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಭಾರತದ ಸಂವಿಧಾನದ ವಿಧಿ 105 ಸಂಸದರಿಗೆ ಮಾತನಾಡುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಈ ಸ್ವಾತಂತ್ರ್ಯವು ಕೇವಲ ಆಡಳಿತ ಪಕ್ಷವನ್ನು ಹೋಗಳುವುದಕ್ಕಷ್ಟೇ ಸೀಮಿತವಲ್ಲ, ವಿರೋಧ ಪಕ್ಷದ ಸದಸ್ಯರಿಗೂ ಇದು ಅತ್ಯಗತ್ಯವಾಗಿರುತ್ತದೆ. ಏಕೆಂದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಹಕ್ಕು ದುರ್ಬಲರಿಗೆ ರಕ್ಷಾಕವಚವಾಗಿ ಪರಿಣಮಿಸುತ್ತದೆ. ಆ ಹಕ್ಕನ್ನು ಸದನದೊಳಗೆ ಹರಣ ಮಾಡುವುದು ಸಂವಿಧಾನದ ಉದ್ದೇಶವನ್ನೇ ಹರಣ ಮಾಡಿದ ಹಾಗಾಗುತ್ತದೆ.

ಈ ಕಾರಣಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪದಚ್ಯುತಿಗೆ ವಿರೋಧ ಪಕ್ಷಗಳು ಸಹಿ ಸಂಗ್ರಹ ಅಭಿಯಾನ ಆರಂಭಿಸಿರುವುದು ಸರಿಯಾಗಿಯೇ ಇದೆ. ಸ್ಪೀಕರ್ ಸ್ಥಾನವು ಸಂವಿಧಾನದ ಪ್ರಕಾರ neutral ಆಗಿರಬೇಕು. ಸಂವಿಧಾನದ ವಿಧಿ 93 ಲೋಕಸಭೆಗೆ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಗಳನ್ನು ಆಯ್ಕೆ ಮಾಡುವ ಹಕ್ಕನ್ನು ನೀಡುತ್ತದೆ. ಆದರೆ ಆ ಸ್ಥಾನವು ಆಡಳಿತ ಪಕ್ಷದ ರಕ್ಷಣೆಗೆ ನಿಂತವರಂತೆ ವರ್ತಿಸಿದರೆ, ಅದು ಸಂವಿಧಾನ ತಮಗೆ ನೀಡಿರುವ ಜವಾಬ್ದಾರಿಯ ಉಲ್ಲಂಘನೆಯಾಗುತ್ತದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನಕ್ಸಲ್ ನಿಗ್ರಹದ ನೆಪದಲ್ಲಿ ಪ್ರಕೃತಿ ಸಂಪತ್ತಿನ ಲೂಟಿಗಿಳಿಯಿತೇ ಸರ್ಕಾರ?

“ಮಾನ್ಯ ನರೇಂದ್ರ ಮೋದಿ ನನ್ನ ಭಾಷಣಕ್ಕೆ ಹೆದರಿ ಓಡಿ ಹೋಗಿದ್ದಾರೆ” ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ಕೇವಲ ರಾಜಕೀಯಕ್ಕಾಗಿ ಬಳಸುತ್ತಿರುವ ವ್ಯಂಗ್ಯ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಏಕೆಂದರೆ ಸಂವಿಧಾನದ ವಿಧಿ 75(3) ಸ್ಪಷ್ಟವಾಗಿ ಹೇಳುತ್ತದೆ ಮಂತ್ರಿಮಂಡಲವು ಲೋಕಸಭೆಗೆ ಸಮೂಹಿಕವಾಗಿ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ಹೊಣೆಗಾರಿಕೆಯ ಅರ್ಥವೇ ಪ್ರಶ್ನೆಗಳಿಗೆ ಉತ್ತರಿಸುವುದು. ಚರ್ಚೆಯಲ್ಲಿ ಯಾವ್ಯಾವ ಪ್ರಶ್ನೆಗಳನ್ನು ಕೇಳುತ್ತಾರೋ ಎಂದು ಹೆದರಿ ಪಲಾಯನ ಮಾಡುವುದಲ್ಲ.

ಸ್ಪಷ್ಟ ಬಹುಮತ ಹೊಂದಿರುವ NDA ಮೈತ್ರಿಕೂಟ ಕಲಾಪ ಮುಂದುವರೆಸಲು ಹಿಂಜರಿಯುತ್ತಿರುವುದು, ರಾಜಕೀಯ ಲೆಕ್ಕಾಚಾರವಾಗಿರಬಹುದು. ಆದರೆ ಸಂವಿಧಾನಾತ್ಮಕ ದೃಷ್ಟಿಯಲ್ಲಿ ಇದು ಅಪಾಯಕಾರಿ ಪ್ರವೃತ್ತಿ. ಬಹುಮತ ಸಿಕ್ಕಿರುವುದು ಮೌನವಾಗಿರುವುದಕ್ಕಲ್ಲ, ಬದಲಾಗಿ ಅದು ಹೆಚ್ಚು ಜವಾಬ್ದಾರಿಯನ್ನು ನಿರೀಕ್ಷಿಸುತ್ತದೆ.

ಈ ಮೌನದ ಹಿಂದೆ ಜನರಲ್ ಎಂ.ಎನ್. ನರವಣೆ ಅವರ ಪುಸ್ತಕದ ಕುರಿತ ಚರ್ಚೆಯ ಭಯ ಅಡಗಿದೆಯೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ. ರಾಷ್ಟ್ರಭದ್ರತೆಗೆ ಸಂಬಂಧಿಸಿದ ನಿರ್ಧಾರಗಳು ಸಾರ್ವಜನಿಕ ಚರ್ಚೆಗೆ ಒಳಪಟ್ಟಾಗ, ಸರ್ಕಾರವು ಅದನ್ನು ಸಂಸತ್ತಿನಲ್ಲೇ ಎದುರಿಸಬೇಕು. ಸಂವಿಧಾನದ ವಿಧಿ 19(1)(a) ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಆರ್ಮಿ ಆಫೀಸರ್ ಅವರ ಅಭಿಪ್ರಾಯವೂ ಅದೇ ಚೌಕಟ್ಟಿನೊಳಗೆ ಬರುತ್ತದೆ. ಅದನ್ನು ಚರ್ಚೆಯಿಂದ ಹೊರಗಿಡುವುದು ಸಂವಿಧಾನದ ಆತ್ಮವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲವೇ?

ವಿರೋಧ ಪಕ್ಷದ ಮುಖ್ಯ ಜವಾಬ್ದಾರಿಯೇ ಆಡಳಿತ ಸರ್ಕಾರವನ್ನು ಪ್ರತೀ ಹೆಜ್ಜೆ ಹೆಜ್ಜೆಗೂ ಎಚ್ಚರಿಸುವುದು. ಸಂವಿಧಾನ ರಚನೆ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಂತೆ, ಪ್ರಜಾಸತ್ತಾತ್ಮಕ ವ್ಯವಸ್ಥೆ ಕೇವಲ ಸಂವಿಧಾನದಲ್ಲಿಲ್ಲ, ಅದನ್ನು ಅನುಷ್ಠಾನಗೊಳಿಸುವವರ ಮನಸ್ಸಿನಲ್ಲಿ ಇರಬೇಕು. ವಿರೋಧದ ಧ್ವನಿಯನ್ನು ದಮನಿಸುವುದು ಆಡಳಿತದ ಶಕ್ತಿಯ ಸಂಕೇತವಲ್ಲ, ಅದು ಸಂವಿಧಾನಾತ್ಮಕ ಅಸುರಕ್ಷತೆಯ ಸೂಚನೆ.

ಮೋದಿ ಆಡಳಿತ ಬಿಜೆಪಿ ಸರ್ಕಾರ ಇಂದು ಅನುಸರಿಸುತ್ತಿರುವ ಈ ‘ಪಲಾಯನ ರಾಜಕಾರಣ’ ಸಂಸತ್ತಿನ ಶಿಸ್ತನ್ನು ಹಾಳುಗೆಡವುದರ ಜೊತೆಗೆ ಅದು ಸಂಸತ್ತಿನ ಅಸ್ತಿತ್ವವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ. ಇತಿಹಾಸವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಳಸುವ ಇಂಥಹ ಮೌನವನ್ನು ಎಂದಿಗೂ ಕ್ಷಮಿಸಿಲ್ಲ ಅದಕ್ಕೆ ಅನೇಕ ಉದಾಹರಣೆಗಳಿವೆ. ಈಗ ವಿರೋಧ ಪಕ್ಷದ ಪ್ರಶ್ನೆಗಳಿಗೆ ಉತ್ತರಿಸದೇ ತಪ್ಪಿಸಿಕೊಳ್ಳುವ ಸರ್ಕಾರಗಳು ಮುಂದಿನ ಚುನಾವಣೆಯಲ್ಲಿ ಮತ ಕೇಳಿಕೊಂಡು ಜನರ ಬಳಿ ಬಂದಾಗ, ಆಗ ಜನರ ಮುಂದೆ ಉತ್ತರಿಸಲೇಬೇಕಾಗುತ್ತದೆ. ಜನರು ಈಗ ಬುದ್ಧಿವಂತರಾಗಿದ್ದಾರೆ ಅನ್ನೋದನ್ನು ಮರೆಯಕೂಡದು.

ಸಂಸತ್ತಿನಲ್ಲಿರುವ ಪ್ರಜಾಪ್ರತಿನಿಧಿಗಳು ಮೌನವಾದಾಗ, ಸಂವಿಧಾನವು ತನ್ನ ಮೌಲ್ಯಗಳ ಮೂಲಕ ಮಾತಾಡುತ್ತದೆ.
ಆದರೆ ಸಂವಿಧಾನವನ್ನೇ ಮಾತಾಡಲು ಬಿಡದೇ ಹೋದರೆ, ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯಕ್ಕೆ ಸಿಲುಕುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯಕ್ಕೆ ಸಿಲುಕಿದರೆ ಸರ್ವಾಧಿಕಾರಿ ಆಡಳಿತ ಶುರುವಾಗಿದೆ ಎಂದರ್ಥ.
ಎಚ್ಚರವಾಗಿರೋಣ.

ಬರಹ: ರುದ್ರು ಪುನೀತ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ ಹೊಸ ತಂತ್ರಜ್ಞಾನ?

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು...