ತಮಿಳುನಾಡಿನ ಕಟ್ಟಡಗಳ ಮೇಲೆ ಕಪ್ಪು ಬಾವುಟ ಪ್ರದರ್ಶನ; ಕ್ಷೇತ್ರ ಪುನರ್‌ವಿಂಗಡಣೆಗೆ ತಮಿಳುನಾಡು ವಿರೋಧವೇಕೆ?

Date:

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿ ಮಾಡಲು ಹೊರಟಿರುವ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಇವತ್ತಿನಿಂದ (ಏ.16) ಮೂರು ದಿನಗಳ ಕಾಲ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿತ ಕ್ಷೇತ್ರ ಪುನರ್ವಿಂಗಡಣಾ ಮಸೂದೆಯನ್ನು ವಿರೋಧಿಸಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನಾಮಕ್ಕಲ್‌ನಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ, ಕ್ಷೇತ್ರ ಪುನರ್ವಿಂಗಡಣಾ ಮಸೂದೆಯ ಪ್ರತಿಯನ್ನು ಸುಟ್ಟು ಪ್ರತಿಭಟನೆ ನಡೆಸಿದರು. ಇದರ ಮೂಲಕ ಇಡೀ ತಮಿಳುನಾಡು ರಾಜ್ಯದಲ್ಲಿ ಪ್ರತಿಮನೆಯ ಮೇಲೂ ಕಪ್ಪು ಬಾವುಟವನ್ನು ಹಾರಿಸಲು ಕರೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

ಲೋಕಸಭಾ ಕೇತ್ರಗಳ ಪುನರ್‌ ವಿಂಗಡಣೆ ಆದರೆ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯ ತೀವ್ರವಾಗಿ ಕಡಿಮೆಯಾಗಲಿದೆ. ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರವು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವ ಸಲುವಾಗಿ ಕರೆದ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಪುನರ್‌ವಿಂಗಡಣಾ ಮಸೂದೆಯನ್ನು ಜಾರಿ ಮಾಡಲು ನಿರ್ಧರಿಸಿದೆ. ಮಹಿಳಾ ಮೀಸಲಾತಿಗೆ ಎಲ್ಲಾ ಪಕ್ಷಗಳು ಬೆಂಬಲವನ್ನು ಸೂಚಿಸಿದ್ದರೂ, ಕ್ಷೇತ್ರ ಪುನರ್‌ವಿಂಗಡಣೆಗೆ ಮಾತ್ರ ಭಾರಿ ವಿರೋಧವನ್ನು ವ್ಯಕ್ತಪಡಿಸುತ್ತಿವೆ.

ಇದನ್ನೂ ಓದಿ : ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೊಂದು ನ್ಯಾಯ, ಮುಸ್ಲಿಮರಿಗೊಂದು ನ್ಯಾಯವೇ?

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಮಾಜಿ ಸಿಎಂ ಎಂ ಕರುಣಾನಿಧಿ ಅವರ ಗೋಪಾಲಪುರಂ ನಿವಾಸದಲ್ಲಿನ ಧ್ವಜಸ್ತಂಭದಲ್ಲಿ ಕಪ್ಪು ಬಾವುಟವನ್ನು ಹಾರಿಸಿ ಪ್ರತಿರೋಧವನ್ನು ತೋರಿದರು. ತಮಿಳುನಾಡಿದ ಪ್ರತಿ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಮೂರು ದಿನಗಳ ಕಾಲ ಕಪ್ಪು ಬಾವುಟಗಳನ್ನು ಹಾರಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುವಂತೆ ಒತ್ತಾಯಿಸಲಾಯಿತು. ಈ ವೇಳೆ ಕೇಂದ್ರ ಸರ್ಕಾರಕ್ಕೆ “ಮುಂದೊಂದು ದಿನ ನೀವು(ಕೇಂದ್ರ ಸರ್ಕಾರ) ಭಾರೀ ಪ್ರಮಾಣದಲ್ಲಿ ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಪ್ರತಿಭಟನೆಯ ವೇಗ ಚೆನ್ನೈ ಮೀರಿ ಇಡೀ ರಾಜ್ಯಾದ್ಯಂತ ಹಬ್ಬಿದೆ. ತಮಿಳುನಾಡಿನ ಪ್ರತಿ ಜಿಲ್ಲೆಗಳಲ್ಲಿಯೂ ಡಿಎಂಕೆ ಕಾರ್ಯಕರ್ತರು ಕಪ್ಪು ಬಾವುಟವನ್ನು ಪ್ರದರ್ಶಿಸಿ ಪ್ರತಿಭಟಿಸುತ್ತಿದ್ದಾರೆ. ತಿರುಚಿರಾಪಳ್ಳಿಯ ತೆನ್ನೂರಿನಲ್ಲಿ, ರಾಜ್ಯ ಸಚಿವ ಮತ್ತು ಡಿಎಂಕೆ ನಾಯಕ ಅನ್ಬಿಲ್ ಮಹೇಶ್ ಪೊಯ್ಯಮೋಳಿ ಅವರ ನಿವಾಸದಲ್ಲಿ ಕಪ್ಪು ಬಾವುಟಗಳನ್ನು ಹಾರಿಸಲಾಯಿತು.

ಪ್ರತಿಭಟನೆಗೆ ಒಮ್ಮತದ ತೀರ್ಮಾನ

ಚುನಾವಣಾ ಪ್ರಚಾರದ ಹಾದಿಯಲ್ಲಿರುವ ಸ್ಟಾಲಿನ್‌, ಡಿಎಂಕೆ ಸಂಸದರೊಂದಿಗೆ ವರ್ಚುವಲ್‌ ಸಭೆಯ ಮೂಲಕ ಪ್ರತಿಭಟನೆಯ ತೀರ್ಮಾನವನ್ನು ಕೈಗೊಂಡಿದ್ದಾರೆ. ʼಇದು ಕೇವಲ ಒಂದು ಪಕ್ಷದ ಪ್ರತಿಭಟನೆಯಲ್ಲ, ತಮಿಳುನಾಡಿನ ಮತ್ತು ತಮಿಳರ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟʼ ಎಂದು ಹೇಳಿದ್ದಾರೆ. ʼನಾಗರಿಕರು ತಮ್ಮ ಹಕ್ಕಿಗಾಗಿ ಧ್ವನಿ ಎತ್ತಬೇಕು. ಈಗ ಧ್ವನಿ ಎತ್ತಲು ವಿಫಲರಾದರೆ ಸಂಸತ್ತಿನಲ್ಲಿ ರಾಜ್ಯದ ಪ್ರಾತಿನಿಧ್ಯತೆಯ ಧ್ವನಿ ಕ್ಷೀಣಿಸಬಹುದುʼ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಮುಖ್ಯವಾಗಿ ಈ ಪ್ರತಿಭಟನೆಯೂ ಚುನಾವಣೆಯ ಸೂಕ್ಷ್ಮ ಸಂದರ್ಭದಲ್ಲಿ ಬಂದಿದೆ. ಇದೇ ಏಪ್ರಿಲ್‌ 23ರಂದು ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಕೇಂದ್ರದ ವಿರುದ್ಧ ʼಡಿಎಂಕೆʼಯ ಈ ಪರಿ ಪ್ರತಿಭಟನೆ ಕೈಗೊಂಡಿರುವುದು ಡಿಎಂಕೆಗೆ ಇನ್ನಷ್ಟು ಬಲವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.

ಈ ಪ್ರತಿಭಟನೆಯನ್ನು ಸ್ಟ್ಯಾಲಿನ್‌ 1950 ಮತ್ತು 1960ರ ದಶಕದ ಹಿಂದಿ ವಿರೋಧಿ ಆಂದೋಲನಕ್ಕೆ ಹೋಲಿಸಿದ್ದಾರೆ. “ತಮಿಳುನಾಡಿನಿಂದ ಎದ್ದ ಹಿಂದಿ ಹೇರಿಕೆಯ ವಿರುದ್ಧದ ಪ್ರತಿರೋಧದ ಬೆಂಕಿ ದೆಹಲಿಯನ್ನು ಸುಟ್ಟು ಹಾಕಿತು. ದೆಹಲಿಯನ್ನು ಬಲವಂತವಾಗಿ ಮಣಿಸಿದ ನಂತರವೇ ಅದು ಶಾಂತವಾಯಿತು. ಇಂದು, ನಮ್ಮ ಸ್ವಂತ ನೆಲದಲ್ಲಿ ತಮಿಳರನ್ನು ನಿರಾಶ್ರಿತರನ್ನಾಗಿ ಮಾಡಲು ಪ್ರಯತ್ನಿಸುವ ಈ ಕರಾಳ ಕಾನೂನಿನ ಪ್ರತಿಯನ್ನು ಸುಟ್ಟುಹಾಕುವ ಮೂಲಕ ನಾನು ಆ ಬೆಂಕಿಯನ್ನು ಮತ್ತೆ ಹೊತ್ತಿಸಿದ್ದೇನೆ” ಎಂದು ಸ್ಟ್ಯಾಲಿನ್ ಹೇಳಿದ್ದಾರೆ. ಬೆಂಕಿ ಇಡೀ ದ್ರಾವಿಡ ನೆಲದಲ್ಲಿ ಹರಡುತ್ತದೆ ಮತ್ತು “ಬಿಜೆಪಿಯ ದುರಹಂಕಾರ”ವನ್ನು ಮಂಡಿಯೂರಿ ಕೂರುವಂತೆ ಮಾಡುತ್ತದೆ ಎಂದು ಆಕ್ರೋಶವಾಗಿ ಮಾತನಾಡಿದ್ದಾರೆ.

ಕ್ಷೇತ್ರ ಪುನರ್‌ವಿಂಗಡಣೆ ಹೇಗೆ?

ಮುಂಬರುವ ಚುನಾವಣೆಗಳಿಗೆ ಮುಂಚಿತವಾಗಿ ಕೇತ್ರಪುನರ್‌ ವಿಂಗಡಣೆ ನಿರ್ಣಯವು ಕೇಂದ್ರದ ವಿಷಯವಾಗಿ ಹೊರಹೊಮ್ಮುತ್ತಿರುವುದರಿಂದ, ಆಡಳಿತಾರೂಢ ಡಿಎಂಕೆ ಕೇಂದ್ರದ ಬಿಜೆಪಿಯೊಂದಿಗೆ ನಿರಂತರ ರಾಜಕೀಯ ಯುದ್ಧಕ್ಕೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಮುಖ್ಯಮಂತ್ರಿ ಸ್ಟ್ಯಾಲಿನ್ ಈ ಪ್ರಸ್ತಾವನೆಯ ವಿರುದ್ಧ ಆರಂಭಿಕವಾಗಿ ಗಟ್ಟಿ ನಿಲುವನ್ನು ತೆಗೆದುಕೊಂಡಿದ್ದಾರೆ. ಈ ಕ್ರಮದ ವಿರುದ್ಧ ದಕ್ಷಿಣದ ರಾಜ್ಯಗಳ ಎಲ್ಲಾ ನಾಯಕರನ್ನು ತಲುಪುವ ಯೋಜನೆ ಹಾಕಿಕೊಂಡಿದ್ದಾರೆ.

ಈ ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯನ್ನು ಸಂವಿಧಾನದ 131ನೇ ತಿದ್ದುಪಡಿ ಮಸೂದೆ, 2026 ರ ಅಡಿಯಲ್ಲಿ ಕೇಂದ್ರದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಡಿಸಲಿದ್ದಾರೆ. ಇದರ ಪ್ರಕಾರ ಲೋಕಸಭೆ ಸ್ಥಾನಗಳನ್ನು 543 ರಿಂದ ಸಂಭಾವ್ಯ 850ಕ್ಕೆ ವಿಸ್ತರಿಸುವ ಪ್ರಸ್ತಾವನೆಯಾಗಿದೆ.

ಕ್ಷೇತ್ರ ಪುನರ್‌ವಿಂಗಡಣೆ (ಡಿಲಿಮಿಟೇಷನ್) ವ್ಯವಸ್ಥೆ ಜಾರಿಗೆ ಬಂದದ್ದೇ ಒಬ್ಬ ವ್ಯಕ್ತಿಗೆ ಒಂದು ಓಟು. ಒಂದು ಓಟಿಗೆ ಒಂದೇ ಮೌಲ್ಯದ ತತ್ವದ ಅನುಸಾರವಾಗಿ. ಇದರಂತೆ ಪ್ರತಿ ಶಾಸನಸಭಾ ಅಥವಾ ಲೋಕಸಭಾ ಕ್ಷೇತ್ರದ ಪ್ರತಿನಿಧಿ ದೇಶದ್ಯಂತ ಹೆಚ್ಚೂ ಕಡಿಮೆ ಒಂದೇ ಪ್ರಮಾಣದ ಮತದಾರರನ್ನು ಪ್ರತಿನಿಧಿಸುವಂತಾಗಬೇಕು. ಅದನ್ನು ಆಧರಿಸಿ ಪ್ರತಿ ರಾಜ್ಯಗಳ ಶಾಸನ ಸಭಾ ಮತ್ತು ಲೋಕಸಭಾ ಸ್ಥಾನಗಳನ್ನು ನಿಗದಿ ಪಡಿಸುವುದು ಡಿಲಿಮಿಟೇಷನ್ ಹಿಂದಿನ ಪ್ರಜಾತಾಂತ್ರಿಕ ಉದ್ದೇಶ.

ಈಗ ಉದಾಹರಣೆಗೆ 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 15.44 ಕೋಟಿ ಮತದಾರರಿದ್ದರು. ಉತ್ತರ ಪ್ರದೇಶಕ್ಕೆ ನೀಡಿರುವ ಒಟ್ಟು ಲೋಕಸಭಾ ಸ್ಥಾನ 80. ಅಂದರೆ ಉತ್ತರ ಪ್ರದೇಶದಲ್ಲಿ ಒಬ್ಬ ಲೋಕಸಭಾ ಪ್ರತಿನಿಧಿ ಸರಾಸರಿ 19.30 ಲಕ್ಷ ಜನರನ್ನು ಪ್ರತಿನಿಧಿಸುತ್ತಾರೆ. ಅದೇ ರೀತಿ 2024 ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ 6.24 ಕೋಟಿ ಮತದಾರರಿದ್ದರು. ತಮಿಳುನಾಡಿಗೆ ನೀಡಿರುವ ಒಟ್ಟು ಲೋಕಸಭಾ ಸ್ಥಾನ 39. ಅಂದರೆ ತಮಿಳುನಾಡಿನಲ್ಲಿ ಒಬ್ಬ ಲೋಕಸಭಾ ಪ್ರತಿನಿಧಿ ಸರಾಸರಿ 16 ಲಕ್ಷ ಜನರನ್ನು ಪ್ರತಿನಿಧಿಸುತ್ತಾರೆ. ಇದರಿಂದ ತಾರ್ಕಿಕವಾಗಿ ಉತ್ತರ ಪ್ರದೇಶದ ಮತದಾರರ ಮತದಾನದ ಮೌಲ್ಯ, ತಮಿಳುನಾಡಿನ ಮತದಾರರ ಮೌಲ್ಯಕ್ಕಿಂತ ಕಡಿಮೆಯಾಗಿ ಬಿಡುತ್ತದೆ.

ಡಿಲಿಮಿಟೇಷನ್‌ ಆದರೆ, ಉತ್ತರ ಪ್ರದೇಶದಲ್ಲಿ ತಲಾ 9.36 ಲಕ್ಷ ಮತದಾರರಿಗೆ ಒಂದು ಸ್ಥಾನದಂತೆ 143 ಕ್ಷೇತ್ರಗಳು ಸಿಗುತ್ತವೆ. ಅದೇ ತಮಿಳುನಾಡಿನಲ್ಲಿ ಸರಾಸರಿ 11.57 ಲಕ್ಷ ಜನರಿಗೆ ಒಬ್ಬರು ಲೋಕಸಭಾ ಸದಸ್ಯರು ಪ್ರತಿನಿಧಿಸುತ್ತಾರೆ. ಅಂದರೆ ತಮಿಳುನಾಡಿನ ಲೋಕಸಭಾ ಕ್ಷೇತ್ರಗಳು 49 ಆಗುತ್ತವೆ. ಒಟ್ಟಾರೆಯಾಗಿ, ಹಿಂದಿ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚೂ ಕಡಿಮೆ ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಕೇವಲ ಲೋಕಸಭಾ ಸ್ಥಾನಗಳ ಅನುಪಾತ ಮಾತ್ರವಲ್ಲ ತಲಾವಾರು ಮತದ ಮೌಲ್ಯವೂ ಕಡಿಮೆಯಾಗುತ್ತದೆ.

ತುರ್ತು ಅಧಿವೇಶನ

ಕೇಂದ್ರವು ಏಪ್ರಿಲ್ 16ರಿಂದ 18ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದು, ಈ ಸಮಯದಲ್ಲಿ ನಾರಿ ಶಕ್ತಿ ವಂದನ ಮಸೂದೆಗೆ ಸಂಬಂಧಿಸಿದ ತಿದ್ದುಪಡಿಗಳು ಸೇರಿದಂತೆ ಪ್ರಮುಖ ಶಾಸಕಾಂಗ ಬದಲಾವಣೆಗಳನ್ನು ತರಲು ಯೋಜಿಸಿದೆ. ಸುಧಾರಣೆಗಳು 2029ರ ಸಾರ್ವತ್ರಿಕ ಚುನಾವಣೆಗೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಯನ್ನು ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿವೆ.

ಇದರ ಜೊತೆಗೆ, ಕ್ಷೇತ್ರಗಳನ್ನು ಮರುವಿಂಗಡಿಸುವ ಮಾನದಂಡಗಳು ಮತ್ತು ಸಂಸದೀಯ ಸ್ಥಾನಗಳನ್ನು ಹೆಚ್ಚಿಸುವ ಸಂಭಾವ್ಯ ರಾಜಕೀಯ ಪರಿಣಾಮಗಳ ಬಗ್ಗೆಯೂ ಚರ್ಚಿಸುವ ತೀರ್ಮಾನ ಕೈಗೊಂಡಿದೆ. ಆದರೆ, ಕ್ಷೇತ್ರ ಪುನರ್‌ವಿಂಗಡಣೆಯ ಕುರಿತು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.

ಈ ಹಿನ್ನೆಲೆಯಲ್ಲಿ, ಸ್ಟ್ಯಾಲಿನ್ ಅವರ ಕಪ್ಪು ಬಾವುಟ ಪ್ರದರ್ಶನವು ಪ್ರಾದೇಶಿಕ ಅಸ್ಮಿತೆಯ ಪ್ರತಿಪಾದನೆಯನ್ನು ಗಟ್ಟಿಯಾಗಿ ಧ್ವನಿಸುತ್ತಿದೆ. ಇದು ಕೇಂದ್ರದ ಯೋಜನೆಗಳಿಗೆ ಹೆಚ್ಚುತ್ತಿರುವ ಪ್ರತಿರೋಧವನ್ನು ಎತ್ತಿ ತೋರಿಸುತ್ತದೆ ಮತ್ತು ಭಾರತದ ಚುನಾವಣಾ ರಾಜಕಾರಣದ ಸಮಸ್ಯೆಯನ್ನು ಚರ್ಚಿಸಲು ವಿಶಾಲವಾದ ಸಮಾಲೋಚನೆಗೆ ಕರೆ ನೀಡುತ್ತದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಲೆಹರಾ ದೋ ತಿರಂಗಾ’ ಮಾರ್ಚ್‌ಗೆ ಮುನ್ನ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ದೆಹಲಿ ಪೊಲೀಸರಿಂದ ವಶಕ್ಕೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಶುಕ್ರವಾರ...

ಶಿವಮೊಗ್ಗ | ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ; ಜಾಗೃತಿ ಘೋಷಣೆಗಳೊಂದಿಗೆ ಜಾಥಾ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಶಿವಮೊಗ್ಗದ ಮೆಗ್ಗಾನ್ ಬೋಧನಾ ಜಿಲ್ಲಾ...

ಸಿಎಂಆರ್‌ಎಲ್ ಲಂಚ ಪ್ರಕರಣ: ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್‌ಗೆ ಇ.ಡಿ ಸಮನ್ಸ್

ಬಹುಚರ್ಚಿತ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಅಕ್ರಮ ಹಣ...

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...