ಕೋಲ್ಕತ್ತಾದಲ್ಲಿ 2025ರ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ಇಂದು (ಮಾರ್ಚ್ 22) ನಡೆಯಲಿದೆ. ಈ ಬಾರಿಯ ಭಾರತೀಯ ಕ್ರಿಕೆಟಿಗರು ಹೆಚ್ಚಿನ ಸಾಧನೆ ಮಾಡುವ ನಿರೀಕ್ಷೆಗಳಿವೆ. ಜೊತೆಗೆ, ಟೂರ್ನಿಯಲ್ಲಿರುವ ಆಡುತ್ತಿರುವ ಕನ್ನಡಿಗರ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಸದ್ಯ, ಟೂರ್ನಿಯ ಅಖಾಡದಲ್ಲಿ 13 ಕನ್ನಡಿಗರಿದ್ದಾರೆ. ಅವರಲ್ಲಿ, ಇಬ್ಬರು ಆರ್‌ಸಿಬಿ ತಂಡದಲ್ಲಿದ್ದಾರೆ.
13 ಕನ್ನಡಿಗ ಕ್ರಿಕೆಟಿಗರ ಪಟ್ಟಿ ಇಲ್ಲಿದೆ:
- ಕೆಎಲ್ ರಾಹುಲ್: ಭಾರತೀಯ ತಂಡದಲ್ಲಿರುವ ಏಕೈಕ ಕನ್ನಡಿಗ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಹರಾಜಿನಲ್ಲಿ ಅವರನ್ನು 14 ಕೋಟಿ ರೂ.ಗೆ ಡೆಲ್ಲಿ ಪ್ರಾಂಚೈಸಿ ಖರೀದಿಸಿತ್ತು.
- ಪ್ರಸಿದ್ಧ್ ಕೃಷ್ಣ: ವೇಗಿ ಬೌಲರ್ – ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಅವರು 9.50 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ.
- ಅಭಿನವ್ ಮನೋಹರ್: ಬ್ಯಾಟರ್. ಸನ್‌ರೈಸರ್ಸ್ ಹೈದ್ರಾಬಾದ್ ತಂಡದಲ್ಲಿ ಆಡುತ್ತಿದ್ದಾರೆ. 3.20 ಕೋಟಿ ರೂ.ಗೆ ತಂಡದ ಪಾಲಾಗಿದ್ದಾರೆ.
- ದೇವದತ್ ಪಡಿಕ್ಕಲ್: ಆರ್‌ಸಿಬಿ ತಂಡದಲ್ಲಿದ್ದಾರೆ. 2 ಕೋಟಿ ರೂ. ಮೂಲ ಬೆಲೆಗೆ ಅವರನ್ನು ತಂಡ ಖರೀದಿಸಿದೆ.
- ವೈಶಾಕ್ ವಿಜಯಕುಮಾರ್: ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಅವರನ್ನು 1.80 ಕೋಟಿ ರೂ.ಗೆ ತಂಡ ಖರೀದಿಸಿದೆ.
- ಮನೀಶ್ ಪಾಂಡೆ: ಕೆಕೆಆರ್ ತಂಡದಲ್ಲಿ ಆಡುತ್ತಿದ್ದಾರೆ. 75 ಲಕ್ಷ ರೂ.ಗೆ ತಂಡ ಸೇರಿದ್ದಾರೆ.
- ಕರುಣ್ ನಾಯರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. 50 ಲಕ್ಷ ರೂ. ಸಂಭಾವನೆಗೆ ತಂಡ ಸೇರಿದ್ದಾರೆ.
- ಮನೋಜ್ ಭಾಂಡಗೆ: ಕಳೆದ ಎರಡು ಸೀಸನ್ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ. ಅವರನ್ನು ಈ ಬಾರಿ 30 ಲಕ್ಷ ರೂ. ಮೂಲ ಬೆಲೆಗೆ ತಂಡ ಖರೀದಿಸಿದೆ.
- ಪ್ರವೀಣ್ ದುಬೆ: ಸ್ಪಿನ್ನರ್ – ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಅವರನ್ನು 30 ಲಕ್ಷ ರೂ.ಗೆ ಪಂಜಾಬ್ ತಂಡ ಖರೀದಿಸಿದೆ.
- ಲವ್ನೀತ್ ಸಿಸೋಡಿಯಾ: ವಿಕೆಟ್ ಕೀಪರ್ + ಬ್ಯಾಟರ್. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ತಂಡ ಸೇರಿಸಿಕೊಂಡಿದೆ.
- ಮನ್ವಂತ್ ಕುಮಾರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. 30 ಲಕ್ಷ ರೂ. ಪಡೆದು ತಂಡಕ್ಕೆ ಸೇರಿದ್ದಾರೆ.
- ಶ್ರೇಯಸ್ ಗೋಪಾಲ್: ಸ್ಪಿನ್ನರ್. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಗೆ ಅವರನ್ನು ತಂಡ ಖರೀದಿಸಿದೆ.
- ಶ್ರೀಜಿತ್ ಕೃಷ್ಣನ್: ವಿಕೆಟ್ ಕೀಪರ್ + ಬ್ಯಾಟರ್. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಗೆ ತಂಡ ಸೇರಿದ್ದಾರೆ.